®APÉñï
ಸಂವೇದನೆ
ವೇದನೆಯಿಲ್ಲದ ನೆನಪಿನಾಳದ Some ತಲೆ ಹರಟೆ!!!
Tuesday, 3 September 2013
®APÉñï
Wednesday, 27 June 2012
Sunday, 13 May 2012
ಬಲ್ಲಿರೇನಯ್ಯ ನನ್ನ ಹೆಸರಿನ ಮಹಾತ್ಮೆ !!
Wednesday, 14 March 2012
ಭದ್ರಾ ದಂಡೆಯಲ್ಲಿ!

ಮೊದಲ ದಿವಸ ಗೆಸ್ಟ್ ಹೌಸ ನಲ್ಲಿ ತಂಗಿದ್ದ ನಮಗೆ ಅವತ್ತು ಕುವೆಂಪು ಕ್ಯಾಂಪಸ್ ನಿಂದ 5 ಕಿಲೋ ಮೀಟರ್ ದೂರವಿರುವ ಹಾಸ್ಟೆಲ್ಗೆ ಕಾರಿನಲ್ಲಿ ಬಿಟ್ಟರು. ರಾತ್ರಿಯ ಗಾಢಾಂಧಕಾರದಲ್ಲಿ ನಮಗೆ ಏನು ಕಾಣುತಿರಲಿಲ್ಲ. ಹಳೆಯ ಕೋಟೆಯ ತರವಿರುವ ಬಾಗಿಲನ್ನುದಾಟಿ ನಮ್ಮ ರೂಮಿಗೆ ಬಂದೆವು . ಹೊಸ ಮಂಚ, ಬೆಡ್ಡುಗಳ ಹಳೆಯ ರೂಮು.! ಒಂದೇ ರೂಮಲ್ಲಿ ನಾಲ್ಕೈದು ಮಂಚಗಳಿದ್ದು, ನಾವು ಮೂರೇ ಜನವಿದ್ದರಿಂದ, ನಮ್ಮ ರೂಮಿಗೆ ಏಕಾಂಗಿಯಾಗಿ ಬೆಂಗಳೂರು ಯುನಿವರ್ಸಿಟಿಯಿಂದ ಬಂದ ಒಬ್ಬರು ಸೇರಿಕೊಂದರು. ಹಾಗೆ ಹೊರಗೆ ಕಣ್ಣು ಕುರುಡಾಗುವಷ್ಟು ಕತ್ತಾಲಾಗಿದ್ದರಿಂದ, ಬೆಡ್ ಮೇಲೆ ಬಿದ್ಕೊಂಡೆವು. ಮಾತಾಡುತ್ತ ಗೆಳೆಯರುಮಲಗಿಬಿಟ್ಟರು!
ಮತ್ತೆ ನಾವು ಬೆಳಗಿನ ಆ ಸುಂದರ ಪ್ರಕೃತಿಯ ದೃಶ್ಯಗಳನ್ನು ಸವಿಯುತ್ತಾ ವಾಕಿಂಗ್ ಹೋಗಲು ಪ್ರಾರಂಬಿಸಿದೆವು.. ಪೂರ್ವದಲ್ಲಿಸೂರ್ಯ ಆಗಷ್ಟೇ ಮಂಜಿನ ಮುಸುಕಿನ ಮರೆಯಿಂದ ಕಣ್ಣು ಬಿಟ್ಟಂತೆ, ಮೇಲೇಳುತಿದ್ದ! ದೂರಕ್ಕೆ ಶಿಖರಗಳ ಮದ್ಯೆ!! ಕಣ್ಣುಹಾಯಿಸಿದಷ್ಟು ಬರೀ ಬಯಲಂತೆ ಕಾಣುವ ಗದ್ದೆಗಳು. ಆ ಬೆಳಗಿನ ಚಳಿಯನ್ನು ಲೆಕ್ಕಿಸದೆ, ದನಗಳನ್ನು ಮೇಯಿಸಲು ತಂದ ರೈತಾಪಿಜನ, ಮತ್ತು ಅವರ ಮಕ್ಕಳು!!

ಹಾಗೆ ಅಲ್ಲಿಂದ ನಮ್ಮ ರೂಮಿನ ಪಶ್ಚಿಮಕ್ಕೆ ಹೊರಟು ನಿಂತಾಗ ಭದ್ರ ಜಲಾಶಯ ವಿತ್ತು!! ರಾತ್ರಿಯಿಡಿ ಅಲ್ಲಿ ಇದ್ದ ನಮಗೆ ಅಲ್ಲೇ ಒಂದು ಡ್ಯಾಮ್ ಇದೆ ಅನ್ನುವುದೂ ಗೊತ್ತಿರಲಿಲ್ಲ! ಹಾಗೆ ಎಲ್ಲರೂ ಹುರುಪಿನಿಂದ ಆ ಕಡೆ ಹೊರಟೆವು.! ನಮಗೆ ನಾವೇ ಗೈಡ್ ಎಂಬಂತೆ, ತೋಚಿದ್ದೇ ದಾರಿಯೆಂಬಂತೆ ನಡೆದೆವು. ಗದ್ದೆಗಳನ್ನು ದಾಟಿ, ಗುಡ್ಢವನ್ನೇರಿ, ಅಂತೂ ಜಲಾಶಯದಲ್ಲಿಗೆ ಮುಟ್ಟಿದೆವು!! ಅಪಾರ ಜಲರಾಶಿ, ಅದರಾಚೆಗೆ ಅರ್ಧ ಮುಳುಗಿದಂತೆ ಕಾಣುತಿದ್ದ ಕಾಡು! ಅಂದ ಹಾಗೆ ಅದು ಭದ್ರ ರಿಸರ್ವ್ ಫಾರೆಸ್ಟ್! ಅದರ ಒಂದು ಬದಿಯಲ್ಲಿರುವುದು, ಅಂದರೆ ದಕ್ಷಿಣದ ತುದಿಯಲ್ಲಿರುವುದು ಕುವೆಂಪು ಯುನಿವರ್ಸಿಟಿ ಕ್ಯಾಂಪಸ್! ಕೆಲವೊಮ್ಮೆ ಕಾಡು ಪ್ರಾಣಿಗಳು ಈ ಹಿನ್ನಿರಲ್ಲಿ ಬಂದು ನೀರು ಕುಡಿದು, ಮಿಂದು ಹೋಗುತ್ತವೆ ಅಂತೆ!! ಒಮ್ಮೆಗೆ ಯೋಚಿಸುವಾಗ ಎದೆ ಡವಗುಟ್ಟಲು ಪ್ರಾರಂಭಿಸಿತು! ಈಗೆಲ್ಲಾದರೂ ನಮ್ಮ ಬೆನ್ನ ಹಿಂದೆ ಪ್ರಾಣಿಗಳು ಬಂದರೆ ಒಂದಾ ಕಣ್ಣೆದುರುವಿಗಿರುವ ನೀರು , ಇಲ್ಲದಿದ್ದರೆ ಪ್ರಾಣಿಗಳ ಬಾಯಿ. ಅದನ್ನು ನೆನೆದು ಏನೋ ಡ್ಯಾಮ್ ನ ಹತ್ತಿರವಿದ್ದ ನಾವೆಲ್ಲರೂ ರೂಮಿನ ಕಡೆ ಹೊರಟೆವು!
ಮತ್ತೆ ಯುನಿವರ್ಸಿಟಿಯ ಕಾರ್ಯಕ್ರಮವನ್ನು ಮುಗಿಸಿ, ನಮ್ಮೂರ ಕಡೆ ಹೊರಟಾಗ, ಮಲೆನಾಡ ದೃಶ್ಯ ಕಾವ್ಯವು ನಮ್ಮ ಎದೆಯನ್ನು ಭಾರದಲ್ಲಿರಿಸುವಂತೆ ಮಾಡಿತು ! ಆದರೂ ನಮ್ಮ ಊರು ನಮಗಾಗಿ ಕಾಯುತ್ತಿತ್ತು!!
Wednesday, 29 February 2012
ಕುವೆಂಪು ಕ್ಯಾಂಪಸ್ಸಲ್ಲಿ..!
ಅಬ್ಬ! ಬಸ್ಸು ಹತ್ತಿ ನಿಟ್ಟುಸಿರು ಬಿಡಬೇಕು ಅನ್ನುವಷ್ಟರಲ್ಲಿ, ಬಸ್ಸು ಸರಿಯಿಲ್ಲ ಎನ್ನುವ ಸುದ್ದಿ ನಮ್ಮನ್ನು ಒಂಥರಾ ಸಂದಿಗ್ದ ಸ್ಥಿತಿಗೆತಳ್ಳಿತು. ಅದಾಗಲೇ ಸಂಜೆ ಬೇರೆಯಾಗಿತ್ತು. ಅಲ್ಲಿ ನಮ್ಮ ರೂಮಿನ ವ್ಯವಸ್ಥೆ ಎನೊಂಥಾ ಗೊತ್ತಿರಲಿಲ್ಲ.. ಆಗ ದೇವರೇ ಕಳಿಸಿದಂತೆಮತ್ತೊಂದು ಬಸ್ಸು ಬಂತು.. ನಮ್ಮ ಗಂಟು ಮೂಟೆಯನ್ನು ಹೊತ್ತುಕೊಂಡು ಆ ಬಸ್ಸಿಗೆ ಹತ್ತಿದೆವು.. ಅಬ್ಬ ಎರಡು ಬಸ್ಸಿನ ಜನತುಂಬಿಯಾಗಿತ್ತು.. ನಾವೆಲ್ಲರೂ ಹತ್ತಿ ಡ್ರೈವರನ chamber ತರವಿರುವ ಸ್ಥಳದಲ್ಲಿ ನಿಂತೆವು..! ಇನ್ನೂ ಜನ ಹತ್ತುತಲೇ ಇದ್ದರು. ಅಂತೂ ಡ್ರೈವರ್ ಸೀಟಿನ ಡೋರ್ ಒಪನಾಗಿ ಅಲ್ಲಿಂದ ಒಬ್ಬ ಹತ್ತಿದಾಗ ಸ್ವಲ್ಪ ಸಮಾಧಾನವಾಯಿತು. ಡ್ರೈವರ್ ಹತ್ತಿಯಾಯಿತಲ್ಲ,ಇನ್ನು ಬಸ್ಸು ಹೊರಡಬಹುದೆಂದು.! ಆದರೆ ಹತ್ತಿದವ ಡ್ರೈವರ್ ಆಗಿರದೆ ಕಂಡಕ್ಟರಾಗಿದ್ದ! ಅವ ನಮ್ಮಿಂದ ಹಣ ತಗೊಂಡು, ಸ್ಥಳ ವಿಲ್ಲದ ಬಸ್ಸಲ್ಲಿ ಜಾಗ ಮಾಡುತ್ತಾ ಹೋದ.
ಬಸ್ಸಲ್ಲಿ ಎಲ್ಲರು ನಮ್ಮೊಟ್ಟಿಗೆ ಇದ್ದ ಗೆಳತಿಯರನ್ನೇ ಎವೆಯಿಕ್ಕದೆ ನೋಡುತಿದ್ದರು. ಅವರ ನೋಟ ನೋಡುವಾಗ, ಇವರೆಲ್ಲಿಂದಲೋಬೇರೆ ಗ್ರಹದಿಂದ ಬಂದವರೋ, ಅಥವಾ ಮನುಷ್ಯರ ಥರ ಕಾಣುತ್ತಿರಲಿಲ್ಲವೋ ಏನೋ ಅಂತ ಅನ್ನಿಸುವಂತಿತ್ತು!ಹಾಗೆ ಬಸ್ಸುಹೊರಡಿತು. ಮತ್ತೆ ತೂರಾಡುತ್ತ, ಅಲ್ಲಲ್ಲಿ ನಿಲ್ಲಿಸುತ್ತಾ ಸಾಗಿದ ಬಸ್ಸು ಶಂಕರ ಘಟ್ಟ ಮುಟ್ಟಿತು! ಅಲ್ಲಿಯೇ ನಾವಿಳಿಯಬೇಕಾದದ್ದು . ಅಲ್ಲಿಂದ ಮುಂದೆ ನಾವು, ನಮಗಾಗಿ ಬಂದಿದ್ದ ಇಬ್ಬರ ಎಸ್ಕಾರ್ಟ್ ನೊಂದಿಗೆ university ಕ್ಯಾಂಪಸ್ ಗೆ ಹೋದೆವು.. ಅಲ್ಲಿಲೇಡಿಸ್ ಹಾಸ್ಟೆಲಲ್ಲಿ ಹುಡುಗಿಯರನ್ನು ಬಿಟ್ಟು, ನಮ್ಮನ್ನು guest house ಗೆ ಕರ್ಕೊಂಡು ಹೋದರು.. ಅಲ್ಲಿ ನಾವು ಮೂರೂ ಜನಹುಡುಗರಿಗೆ ಒಂದು ರೂಮನ್ನು ಕೊಟ್ಟಾಗ, ರೂಮನ್ನು ಕಂಡ ನಮಗೆ ಕುಶಿಯೋ ಕುಶಿ..! ಸ್ವಲ್ಪ ನಂತರ ಗೊತ್ತಾಗಿದ್ದು ಈ ಒಂದುರಾತ್ರಿ ಮಾತ್ರ ಅಂತ..!
ಬೆಳಿಗೆದ್ದು ನಮ್ಮ ಬ್ಯಾಗನ್ನು ಪ್ಯಾಕ್ ಮಾಡಿ ಹುಡುಗಿಯರ ಹಾಸ್ಟೆಲಲ್ಲಿ ಇಟ್ಟು, ಕ್ಯಾಂಪಸ್ ಪಯಣ ಆರಂಬಿಸಿದೆವು!! ರಾತ್ರಿಯ ಭೀಕರಕತ್ತಲಲ್ಲಿ ಕಾಣದ ಪ್ರಕೃತಿಯ ಸೌಂದರ್ಯ, ಬೆಳಗಿನ ಮಂಜಿನಲ್ಲಿ ಮುಸುಕಿತ್ತು.. ಸೂರ್ಯ ಪೂರ್ವದಲ್ಲಿ ಮೇಲೇರುತಿದ್ದಂತೆ,ಪ್ರಿಯಕರನ ಸ್ಪರ್ಶಕ್ಕೆ ಎಂಬಂತೆ ತಣ್ಣನೆ ಹಿಮ ಕರಗುತ್ತಿತ್ತು. ಅಬ್ಬ!! ಆಗಲೇ ನಮಗರಿವಾದದ್ದು ರಾತ್ರಿ ನಾವಿದ್ದದ್ದು ಭದ್ರಅರಣ್ಯದಂಚಿನಲ್ಲಿ ಅಂತ!! ಪ್ರಕೃತಿಯ ಮಡಿಲಲ್ಲಿ ಮಲಗಿದಂತಿದ್ದ ಕ್ಯಾಂಪಸ್, ತನ್ನದೇ ಶಿಲ್ಪ ಕಲೆಗೆ ಮನ ಸೋಲುವಂತೆಮಾಡಿತ್ತು!! ಡೈನೋಸಾರ್, ಜಿರಾಫೆ, ಆನೆ, ಕುದುರೆಯ ಶಿಲ್ಪ ಗಳು ಹಸಿರು ಪ್ರಕೃತಿಯ ಮಧ್ಯೆ ನಿಜವಾದ ಪ್ರಾಣಿಗಳನ್ನೇಹೋಲುತಿತ್ತು..! ಹಾಗೆ ಕ್ಯಾಂಪಸ್ ಗೆ ಒಂದು ಸುತ್ತು ಬರುವಷ್ಟರಲ್ಲಿ ಬೆಳಗಿನ ಟೀ ಯ ಸಮಯವಾಯಿತು. ಮಲೆನಾಡಿನ ಕಾಫಿಅಂದರೆ ಅದು ಹತ್ತರಿಂದ ಇಪ್ಪತ್ತು ml ಇರಬಹುದು. ಕರಾವಳಿಯವರಾದ ನಮಗೆ ಅದು ಗಂಟಲಿಗೆ ತಾಕದಂತಿತ್ತು!!
ಹಾಗೆ ತಿಂಡಿ ತಿಂದು , inaugral ಪ್ರೊಗ್ರಾಮ್ ಆದ ಕೂಡಲೇ ನಮ್ಮ ಗೆಳತಿಯರಲ್ಲಿ ಕೆಲವರು ನಾಪತ್ತೆ! ಅವರಲ್ಲಿ ಹೆಚ್ಹಿನವರುರೂಮಲ್ಲಿ ಹೋಗಿ ಬೆಡ್ಡಲ್ಲಿ ಬಿದ್ಕೊಂಡಿದ್ದರು!!! ನಾವು ಬೇರೆ ದಾರಿ ಕಾಣದೆ ಅಲ್ಲೇ ಸೆಮಿನಾರ್ ಹಾಲಲ್ಲಿ ಸಂಜೆಯವರೆಗೂಕುಳಿತೆವು.. ಪೋಸ್ಟರು,ಡಾನ್ಸ್, ಹೀಗೆ ಸಂಜೆಯ ಪ್ರೋಗ್ರಾಮ್ ಕಳೆಯುವಷ್ಟರಲ್ಲಿ ಊಟಕ್ಕಾಗಿ ಕಾಯುವ ಸರದಿ. ಊಟದ ನಂತರಅವತ್ತಿನ ಕಾರ್ಯಕ್ರಮ ಮುಗಿದು ರೂಮಿನ ಕಡೆ ಹೆಜ್ಜೆ ಹಾಕಿದೆವು!!!
ಹಿಂದಿನ ರಾತ್ರಿ ಗೆಸ್ಟ್ ಹೌಸಲ್ಲಿ ಕಳೆದ ನಾವು ಮೂವರು ಹುಡುಗರು, ಈಗ ಅಲ್ಲಿಂದ ಐದಾರು ಕಿಲೋ ಮೀಟರ್ ದೂರವಿರುವಹಾಸ್ಟೆಲಿಗೆ ಹೋಗಬೇಕಾಗಿತ್ತು!!!
Monday, 20 February 2012
ಭದ್ರಾ ದಂಡೆಯತ್ತ...!
ಸಹ್ಯಾದ್ರಿ ಶ್ರೇಣಿಯ ಮೇಲೆ ಹಚ್ಹ ಹಸುರಿನಿಂದ ಕಂಗೊಳಿಸುವ ಊರೇ ಶಿವಮೊಗ್ಗ.. ಈ ಊರನ್ನು ಮರೆತರೆ ಮಲೆನಾಡಿನಸೌಂದರ್ಯ ಸಂಪೂರ್ಣವಾಗಲಿಕ್ಕಿಲ್ಲ.! ಮಳೆಗಾಲದಲ್ಲಿ ಸದಾ ಜಿಟಿಜಿಟಿಯೆನ್ನುವ ಮಳೆ , ನೋಡಲು ತುಂಬಾ ಆಹ್ಲಾದಕರ.! ಪಾಪ ಅದನ್ನು ಸದಾ ಅನುಭವಿಸುವ ಅಲ್ಲಿಯವರ ಸ್ಥಿತಿ?! ಆ ಮಳೆಗೆ ಹಿಮ್ಮೇಳದಂತಿರುವ ಚಳಿ, ಬಿಸಿ ಕಾಫಿಯನ್ನು ನೆನಪಿಸುತ್ತದೆ. ಹಾಗೆಆ ಮಲೆನಾಡಿಗೆ ಹೋದಾಗಲೆಲ್ಲಾ ಅಲ್ಲಿಯ ಪ್ರಕೃತಿ ಯ ಸೊಬಗು ಕಂಡು ಕುವೆಂಪು ಕವನ, ಕಾದಂಬರಿಗಳ ಸಾಲುಗಳು ಒಂದರಮೇಲೊಂದರಂತೆ ಬರುತ್ತದೆ. ತೇಜಸ್ವಿಯ ಸಾಹಸ ಕಥೆಗಳ ವರ್ಣನೆ ಕಣ್ಣಿಗೆ ಕಟ್ಟುತದೆ.
ಹಲವು ಬಾರಿ ಈ ಊರಿಗೆ ಹೋಗಿರುವೆನಾದರೂ,MSc ದಿವಸದಲ್ಲಿ presentation ಗೆ ಅಂತ ಕುವೆಂಪು ಯುನಿವೆರ್ಸಿಟಿ ಗೆಭೇಟಿಗೊಟ್ಟ ಕ್ಷಣ ಮರೆಯಲಾಗದ್ದು!!
ನಾವು ಹದಿನಾರು ಜನ ಗೆಳೆಯ, ಗೆಳತಿಯರು ಮೂರೂ ದಿವಸದ ವಿಜ್ಞಾನ ಸಮಾವೇಶಕ್ಕೆ ಹೊರಡಲು ತಿರ್ಮಾನಿಸಿದ್ದೆವು.
ಹಾಗೆ ಸಮಾವೇಶದ ಮುನ್ನಾ ದಿನ ಮಧ್ಯಾಹ್ನದ ಹೊತ್ತಿಗೆ ಹೊರಡುವುದು ಅಂದುಕೊಂಡು ಬಸ್ ಸ್ಟಾಂಡಿಗೆ ಬಂದಾಗ, ನಾಲ್ಕು ಜನಹುಡುಗಿಯರು ಕಾಣಲಿಲ್ಲ. ಅವರಲ್ಲೊಬ್ಬಳಂತೂ ಸಮಯ ಪ್ರಜ್ಞೆ ಗೆ ಹೆಸರಾದವಳು ಬೇರೆ! ಇಲ್ಲಿ ಉಳಿದ ಹುಡುಗಿಯರುಅಸಮಾದಾನಗೊಂಡು ಕಿರಿಕ್ ಮಾಡಲಾರಂಬಿಸಿದರು. ಕಾಲ್ ಮಾಡಿದಾಗ ಅವರು shimoga ಬಸ್ಸಲ್ಲಿ ಪ್ರಯಾಣಆರಂಭಿಸಿಯಾಗಿತ್ತು! ಅದು ಕೇಳಿದ ನಾರಿಮಣಿಗಳಿಗೆ ಸಿಟ್ಟೋ ಸಿಟ್ಟು! ಮತ್ತೆ ವಿಚಾರಿಸಿದಾಗ ಗೊತ್ತಾಗಿದ್ದು, ಅವರು ತಮ್ಮಹೊರಲಾಗದ ಲಗೇಜ್ ನೊಂದಿಗೆ ಬಸ್ ಸ್ಟಾಂಡಿಗೆ ಬಂದಾಗ, ಕಂಡಕ್ಟರ್ ನವರು ಎಲ್ಲಿಗೆ ಅಂತ ಕೇಳಿ, ಅವರ ಲಗೇಜನ್ನು ಬಸ್ಸಲ್ಲಿಇಟ್ಟುಬಿಟ್ಟಿದ್ದರು! ಬಸ್ ಬೇರೆ moove ಆಗಲು ಪ್ರಾರಂಬಿಸಿದಾಗ, ಏನು ತೋಚದೆ ಹತ್ತಿಬಿಟ್ಟರು! ಇದನ್ನು ಕೇಳಿದ ಉಳಿದ ನಮ್ಮಗೆಳತಿಯರ ಸಿಟ್ಟೆಲ್ಲ ಕ್ಷಣ ಮಾತ್ರದಲ್ಲಿ ಕರಗಿ, ಅನುಕಂಪದಿಂದ ಮರುಗಿದರು! ಪಾಪ ಅವರಿಗೆ ಬೋರಾಗಬಹುದೆಂದು!!
ಹಾಗೆ ನಾವೆಲ್ಲಾ ಬಸ್ ಹತ್ತಿ, ಸೀಟಿನಲ್ಲಿ ಕೂತಾಗ ಆ ಬಸ್ ಅರ್ಧ ತುಂಬಿಯಾಗಿತ್ತು! ಅಷ್ಟು ಸಣ್ಣ ಬಸ್!
ಹೀಗೆ ನಮ್ಮ ಬಸ್ಸು ಒಂದೊಂದೇ ಊರನ್ನು ಹಿಂದಿಕ್ಕಿ ಮತ್ತೊಂದು ಊರಿಗೆ ದಾಪು ಗಾಲಿಡುತಿತ್ತು.. ಹಾಗೆ ಉಡುಪಿ, ಮಣಿಪಾಲ್ ಎಲ್ಲ ದಾಟಿ, ಹೆಬ್ರಿಯನ್ನೂ ದಾಟಿ, ಆಗುಂಬೆ ಘಾಟಿ ಹತ್ತಲು ಆರಂಬಿಸಿತ್ತು! ಅದರಲ್ಲಿದ್ದ ತುಂಬಾ ಜನರಿಗೆ shimoga ಕಡೆ ಅದು ಪ್ರಥಮ ಪ್ರಯಾಣವಾಗಿತ್ತು! ಹಾಗೆ ಅಲ್ಲಿಯ ಪ್ರಕೃತಿ ರಮಣೀಯ ದೃಶ್ಯಕ್ಕೆ ಮಾರು ಹೋಗಿದ್ದರು! ಕೆಲವರಂತೂ ಬಸ್ಸು ಸಪೂರದ ದಾರಿಯಲ್ಲಿ ಹತ್ತುತಿರಬೇಕಾದರೆ, ಕೆಳಗೆ ತಲೆಯ ಬೈತಲೆಯಂತೆ ಕಾಣುತಿದ್ದ ಹೆಬ್ರಿಯ ರಸ್ತೆಯನ್ನು ನೋಡಿ ಕೌತುಕಗೊಂಡಿದ್ದರು. ಕೊನೆಯ ಸೀಟಲ್ಲಿ ಕೂತ ಕೆಲವರು ಬಸ್ಸಿನ ಕಿಟಕಿಯಿಂದ ಕೆಳಗೆ ನೋಡಿ, ಹೆದರಿಬಿಟ್ಟಿದ್ದರು! ಏಕೆಂದರೆ ಆಳವಾದ ಪ್ರಪಾತವನ್ನು ಕಂಡ ಅವರಿಗೆ ಜೀವ ಹೋದಂತಾಗಿತ್ತು.! ಹಸಿರು ತಳಿರಿನಿಂದ ಆವೃತವಾದ ಪ್ರಕೃತಿಯ ಮಧ್ಯ ಹಾದು ಹೋಗುವಾಗ ಒಂಥರಾ ಚಳಿಯ ಅನುಭವ ವಾಗಲು ಪ್ರಾರಂಭಿಸಿತ್ತು. ಹೀಗೆ ಬೆಂಕಿಪೊಟ್ಟಣ ದಂತಿದ್ದ ನಮ್ಮ ಬಸ್ಸು ಅಂತು ಶಿವಮೊಗ್ಗ ತಲುಪಿತು..! ನಾವೆಲ್ಲಾ ಲಗೇಜನ್ನು ಹೊತ್ತು ಬಸಿನಿಂದಿಳಿಯುವಾಗ ನಮ್ಮನ್ನು ಅಲ್ಲಿಯ ಜನ ಹೊಸ ಗ್ರಹದಿಂದ ಬಂದ ಜೀವಿಗಳ ಹಾಗೆ ನೋಡಲುಆರಂಭಿಸಿದರು.. ಅಂದ ಹಾಗೆ ಅವರು ನೋಡುತಿದ್ದದು ನಮ್ಮನ್ನಲ್ಲ, ಹುಡುಗಿಯರನ್ನು! ಅವರ ನೋಟ ಕಂಡ ನಮ್ಮ ಗೆಳತಿಯರುಕಕ್ಕಾಬಿಕ್ಕಿ, ಕೆಲವರಿಗಂತೂ ಸಿಟ್ಟೇ ಸಿಟ್ಟು.!! ಹಾಗೂ ಹೀಗೂ ಅವರ ನೋಟವನ್ನು ತಪ್ಪಿಸಿ, ನಮಗಿಂತ ಬೇಗ ಮುಟ್ಟಿದ ನಮ್ಮಗೆಳತಿಯರನ್ನು ಹುಡುಕಿದಾಗ ಅವರ ಸ್ಥಿತಿ ಭಯಂಕರ! ತಮ್ಮ ಬ್ಯಾಗುಗಳನ್ನು ಇಡಲು ಆಗದೆ ಹೊರಳು ಆಗದೆ ಒಂದು ಕಡೆಚಡಪಡಿಸುತಿದ್ದರೆ, ಇನ್ನೊಂದು ಕಡೆ ಜನ ಅವರನ್ನು ನುಂಗುವಂತೆ ನೋಡುತಿದ್ದರು. ಅವರಿಗೆ ನಮ್ಮನ್ನು ಕಂಡ ಕೂಡಲೇ, ಹೋದಜೀವ ಬಂದಂತೆ ಭಾಸವಾಯಿತೇನೋ! ಏಕೆಂದರೆ ಚಿಂತಕ್ರಾಂತರಾಗಿದ್ದ ಅವರ ಮುಖ ಅರಳಿದಂತೆ ಕಂಡಿತು ! ಹಾಗೆ ಅವರನ್ನೂಕೂಡಿ ಹಂದಿ, ಕತ್ತೆಗಳ ಗುಂಪನ್ನು, ಮತ್ತೆ ನಮ್ಮನ್ನೇ ತಿನ್ನುವಂತೆ ನೋಡುತಿದ್ದ ಜನರನ್ನೂ ದಾಟಿ ಮುಂದೆ ಹೋಗುವಾಗ, ಜನಫುಲ್ ತುಂಬಿರುವ ಬಸ್ಸೊಂದು ರೊಯ್ಯನೆ ಬಂದು ತಿರುಗಿಸಿ ನಿಂತಾಗ ಗೊತ್ತಾಗಿದ್ದು ಅದೇ ಬಸ್ಸು ನಮ್ಮನ್ನು ಕುವೆಂಪುಯುನಿವೆರ್ಸಿಟಿಗೆ ಕೊಂಡೊಯ್ಯುದು ಅಂತಾ! ಅದನ್ನು ನೋಡಿದಾಗಲೇ ನಮ್ಮ ಗುಂಪಿಗೆ ತಲೆ ತಿರುಗಿದಂತಾಯಿತು!
(ಮುಂದೇನಾಯಿತು ಅಂತ ಮುಂದಿನ ವಾರದ ಬ್ಲಾಗಲ್ಲಿ ಬರೆಯುತ್ತೇನೆ! ಅಲ್ಲಿಯ ವರೆಗೂ take care!!! )