Monday, 20 February 2012

ಭದ್ರಾ ದಂಡೆಯತ್ತ...!

ಸಹ್ಯಾದ್ರಿ ಶ್ರೇಣಿಯ ಮೇಲೆ ಹಚ್ಹ ಹಸುರಿನಿಂದ ಕಂಗೊಳಿಸುರೇ ಶಿವಮೊಗ್ಗ.. ಈ ಊರನ್ನು ಮರೆತರೆ ಮಲೆನಾಡಿನಸೌಂದರ್ಯ ಸಂಪೂರ್ಣವಾಗಲಿಕ್ಕಿಲ್ಲ.! ಮಳೆಗಾಲದಲ್ಲಿ ದಾ ಜಿಟಿಜಿಟಿಯೆನ್ನುವ ಮಳೆ , ನೋಡಲು ತುಂಬಾ ಆಹ್ಲಾದಕರ.! ಪಾಪ ಅದನ್ನು ಸದಾ ಅನುಭವಿಸುವ ಅಲ್ಲಿಯವರ ಸ್ಥಿತಿ?! ಆ ಮಳೆಗೆ ಹಿಮ್ಮೇಳದಂತಿರುವ ಚಳಿ, ಬಿಸಿ ಕಾಫಿಯನ್ನು ನೆನಪಿಸುತ್ತದೆ. ಹಾಗೆಆ ಮಲೆನಾಡಿಗೆ ಹೋದಾಗಲೆಲ್ಲಾ ಅಲ್ಲಿಯ ಪ್ರಕೃತಿ ಯ ಸೊಬಗು ಕಂಡು ಕುವೆಂಪು ಕವನ, ಕಾದಂಬರಿಗಳ ಸಾಲುಗಳು ಒಂದರಮೇಲೊಂದರಂತೆ ಬರುತ್ತದೆ. ತೇಜಸ್ವಿಯ ಸಾಹಸ ಕಥೆಗಳ ವರ್ಣನೆ ಕಣ್ಣಿಗೆ ಕಟ್ಟುತದೆ.

ಹಲವು ಬಾರಿ ಈ ಊರಿಗೆ ಹೋಗಿರುವೆನಾದರೂ,MSc ದಿವಸದಲ್ಲಿ presentation ಗೆ ಅಂತ ಕುವೆಂಪು ಯುನಿವೆರ್ಸಿಟಿ ಗೆಭೇಟಿಗೊಟ್ಟ ಕ್ಷಣ ಮರೆಯಲಾಗದ್ದು!!

ನಾವು ಹದಿನಾರು ಜನ ಗೆಳೆಯ, ಗೆಳತಿಯರು ಮೂರೂ ದಿವಸದ ವಿಜ್ಞಾನ ಸಮಾವೇಶಕ್ಕೆ ಹೊರಡಲು ತಿರ್ಮಾನಿಸಿದ್ದೆವು.

ಹಾಗೆ ಸಮಾವೇಶದ ಮುನ್ನಾ ದಿನ ಮಧ್ಯಾಹ್ನದ ಹೊತ್ತಿಗೆ ಹೊರಡುವುದು ಅಂದುಕೊಂಡು ಬಸ್ ಸ್ಟಾಂಡಿಗೆ ಬಂದಾಗ, ನಾಲ್ಕು ಜನಹುಡುಗಿಯರು ಕಾಣಲಿಲ್ಲ. ಅವರಲ್ಲೊಬ್ಬಳಂತೂ ಸಮಯ ಪ್ರಜ್ಞೆ ಗೆ ಹೆಸರಾದವಳು ಬೇರೆ! ಇಲ್ಲಿ ಉಳಿದ ಹುಡುಗಿಯರುಅಸಮಾದಾನಗೊಂಡು ಕಿರಿಕ್ ಮಾಡಲಾರಂಬಿಸಿದರು. ಕಾಲ್ ಮಾಡಿದಾಗ ಅವರು shimoga ಬಸ್ಸಲ್ಲಿ ಪ್ರಯಾಣಆರಂಭಿಸಿಯಾಗಿತ್ತು! ಅದು ಕೇಳಿದ ನಾರಿಮಣಿಗಳಿಗೆ ಸಿಟ್ಟೋ ಸಿಟ್ಟು! ಮತ್ತೆ ವಿಚಾರಿಸಿದಾಗ ಗೊತ್ತಾಗಿದ್ದು, ಅವರು ತಮ್ಮಹೊರಲಾಗದ ಲಗೇಜ್ ನೊಂದಿಗೆ ಬಸ್ ಸ್ಟಾಂಡಿಗೆ ಬಂದಾಗ, ಕಂಡಕ್ಟರ್ ನವರು ಎಲ್ಲಿಗೆ ಅಂತ ಕೇಳಿ, ಅವರ ಲಗೇಜನ್ನು ಬಸ್ಸಲ್ಲಿಇಟ್ಟುಬಿಟ್ಟಿದ್ದರು! ಬಸ್ ಬೇರೆ moove ಆಗಲು ಪ್ರಾರಂಬಿಸಿದಾಗ, ಏನು ತೋಚದೆ ಹತ್ತಿಬಿಟ್ಟರು! ಇದನ್ನು ಕೇಳಿದ ಉಳಿದ ನಮ್ಮಗೆಳತಿಯರ ಸಿಟ್ಟೆಲ್ಲ ಕ್ಷಣ ಮಾತ್ರದಲ್ಲಿ ಕರಗಿ, ಅನುಕಂಪದಿಂದ ಮರುಗಿದರು! ಪಾಪ ಅವರಿಗೆ ಬೋರಾಗಬಹುದೆಂದು!!

ಹಾಗೆ ನಾವೆಲ್ಲಾ ಬಸ್ ಹತ್ತಿ, ಸೀಟಿನಲ್ಲಿ ಕೂತಾಗ ಆ ಬಸ್ ಅರ್ಧ ತುಂಬಿಯಾಗಿತ್ತು! ಅಷ್ಟು ಸಣ್ಣ ಬಸ್!

ಹೀಗೆ ನಮ್ಮ ಬಸ್ಸು ಒಂದೊಂದೇ ಊರನ್ನು ಹಿಂದಿಕ್ಕಿ ಮತ್ತೊಂದು ಊರಿಗೆ ದಾಪು ಗಾಲಿಡುತಿತ್ತು.. ಹಾಗೆ ಉಡುಪಿ, ಮಣಿಪಾಲ್ ಎಲ್ಲ ದಾಟಿ, ಹೆಬ್ರಿಯನ್ನೂ ದಾಟಿ, ಆಗುಂಬೆ ಘಾಟಿ ಹತ್ತಲು ಆರಂಬಿಸಿತ್ತು! ಅದರಲ್ಲಿದ್ದ ತುಂಬಾ ಜನರಿಗೆ shimoga ಕಡೆ ಅದು ಪ್ರಥಮ ಪ್ರಯಾಣವಾಗಿತ್ತು! ಹಾಗೆ ಅಲ್ಲಿಯ ಪ್ರಕೃತಿ ರಮಣೀಯ ದೃಶ್ಯಕ್ಕೆ ಮಾರು ಹೋಗಿದ್ದರು! ಕೆಲವರಂತೂ ಬಸ್ಸು ಸಪೂರದ ದಾರಿಯಲ್ಲಿ ಹತ್ತುತಿರಬೇಕಾದರೆ, ಕೆಳಗೆ ತಲೆಯ ಬೈತಲೆಯಂತೆ ಕಾಣುತಿದ್ದ ಹೆಬ್ರಿಯ ರಸ್ತೆಯನ್ನು ನೋಡಿ ಕೌತುಕಗೊಂಡಿದ್ದರು. ಕೊನೆಯ ಸೀಟಲ್ಲಿ ಕೂತ ಕೆಲವರು ಬಸ್ಸಿನ ಕಿಟಕಿಯಿಂದ ಕೆಳಗೆ ನೋಡಿ, ಹೆದರಿಬಿಟ್ಟಿದ್ದರು! ಏಕೆಂದರೆ ಆಳವಾದ ಪ್ರಪಾತವನ್ನು ಕಂಡ ಅವರಿಗೆ ಜೀವ ಹೋದಂತಾಗಿತ್ತು.! ಹಸಿರು ತಳಿರಿನಿಂದ ಆವೃತವಾದ ಪ್ರಕೃತಿಯ ಮಧ್ಯ ಹಾದು ಹೋಗುವಾಗ ಒಂಥರಾ ಚಳಿಯ ಅನುಭವ ವಾಗಲು ಪ್ರಾರಂಭಿಸಿತ್ತು. ಹೀಗೆ ಬೆಂಕಿಪೊಟ್ಟಣ ದಂತಿದ್ದ ನಮ್ಮ ಬಸ್ಸು ಅಂತು ಶಿವಮೊಗ್ಗ ತಲುಪಿತು..!

ನಾವೆಲ್ಲಾ ಲಗೇಜನ್ನು ಹೊತ್ತು ಬಸಿನಿಂದಿಳಿಯುವಾಗ ನಮ್ಮನ್ನು ಅಲ್ಲಿಯ ಜನ ಹೊಸ ಗ್ರಹದಿಂದ ಬಂದ ಜೀವಿಗಳ ಹಾಗೆ ನೋಡಲುಆರಂಭಿಸಿದರು.. ಅಂದ ಹಾಗೆ ಅವರು ನೋಡುತಿದ್ದದು ನಮ್ಮನ್ನಲ್ಲ, ಹುಡುಗಿಯರನ್ನು! ಅವರ ನೋಟ ಕಂಡ ನಮ್ಮ ಗೆಳತಿಯರುಕಕ್ಕಾಬಿಕ್ಕಿ, ಕೆಲವರಿಗಂತೂ ಸಿಟ್ಟೇ ಸಿಟ್ಟು.!! ಹಾಗೂ ಹೀಗೂ ಅವರ ನೋಟವನ್ನು ತಪ್ಪಿಸಿ, ನಮಗಿಂತ ಬೇಗ ಮುಟ್ಟಿದ ನಮ್ಮಗೆಳತಿಯರನ್ನು ಹುಡುಕಿದಾಗ ಅವರ ಸ್ಥಿತಿ ಭಯಂಕರ! ತಮ್ಮ ಬ್ಯಾಗುಗಳನ್ನು ಇಡಲು ಆಗದೆ ಹೊರಳು ಆಗದೆ ಒಂದು ಕಡೆಚಡಪಡಿಸುತಿದ್ದರೆ, ಇನ್ನೊಂದು ಕಡೆ ಜನ ಅವರನ್ನು ನುಂಗುವಂತೆ ನೋಡುತಿದ್ದರು. ಅವರಿಗೆ ನಮ್ಮನ್ನು ಕಂಡ ಕೂಡಲೇ, ಹೋದಜೀವ ಬಂದಂತೆ ಭಾಸವಾಯಿತೇನೋ! ಏಕೆಂದರೆ ಚಿಂತಕ್ರಾಂತರಾಗಿದ್ದ ಅವರ ಮುಖ ಅರಳಿದಂತೆ ಕಂಡಿತು ! ಹಾಗೆ ಅವರನ್ನೂಕೂಡಿ ಹಂದಿ, ಕತ್ತೆಗಳ ಗುಂಪನ್ನು, ಮತ್ತೆ ನಮ್ಮನ್ನೇ ತಿನ್ನುವಂತೆ ನೋಡುತಿದ್ದ ಜನರನ್ನೂ ದಾಟಿ ಮುಂದೆ ಹೋಗುವಾಗ, ಜನಫುಲ್ ತುಂಬಿರುವ ಬಸ್ಸೊಂದು ರೊಯ್ಯನೆ ಬಂದು ತಿರುಗಿಸಿ ನಿಂತಾಗ ಗೊತ್ತಾಗಿದ್ದು ಅದೇ ಬಸ್ಸು ನಮ್ಮನ್ನು ಕುವೆಂಪುಯುನಿವೆರ್ಸಿಟಿಗೆ ಕೊಂಡೊಯ್ಯುದು ಅಂತಾ! ಅದನ್ನು ನೋಡಿದಾಗಲೇ ನಮ್ಮ ಗುಂಪಿಗೆ ತಲೆ ತಿರುಗಿದಂತಾಯಿತು!

ಅಂತು ಹೇಗಾದರೂ ಮಾಡಿ ಬಸ್ಸಲ್ಲಿ ಹತ್ತಿದೆವು!!!

(ಮುಂದೇನಾಯಿತು ಅಂತ ಮುಂದಿನ ವಾರದ ಬ್ಲಾಗಲ್ಲಿ ಬರೆಯುತ್ತೇನೆ! ಅಲ್ಲಿಯ ವರೆಗೂ take care!!! )



1 comment:

Appu said...

Memories reloaded!:)not to forget the 20ml tea/coffee served during the conference,the khara-sihi bath for breakfast, the spoilt puffs (it was slimy and yak!), the beautiful lush green campus, everything is still afresh in the mind...:)