
ಮೊದಲ ದಿವಸ ಗೆಸ್ಟ್ ಹೌಸ ನಲ್ಲಿ ತಂಗಿದ್ದ ನಮಗೆ ಅವತ್ತು ಕುವೆಂಪು ಕ್ಯಾಂಪಸ್ ನಿಂದ 5 ಕಿಲೋ ಮೀಟರ್ ದೂರವಿರುವ ಹಾಸ್ಟೆಲ್ಗೆ ಕಾರಿನಲ್ಲಿ ಬಿಟ್ಟರು. ರಾತ್ರಿಯ ಗಾಢಾಂಧಕಾರದಲ್ಲಿ ನಮಗೆ ಏನು ಕಾಣುತಿರಲಿಲ್ಲ. ಹಳೆಯ ಕೋಟೆಯ ತರವಿರುವ ಬಾಗಿಲನ್ನುದಾಟಿ ನಮ್ಮ ರೂಮಿಗೆ ಬಂದೆವು . ಹೊಸ ಮಂಚ, ಬೆಡ್ಡುಗಳ ಹಳೆಯ ರೂಮು.! ಒಂದೇ ರೂಮಲ್ಲಿ ನಾಲ್ಕೈದು ಮಂಚಗಳಿದ್ದು, ನಾವು ಮೂರೇ ಜನವಿದ್ದರಿಂದ, ನಮ್ಮ ರೂಮಿಗೆ ಏಕಾಂಗಿಯಾಗಿ ಬೆಂಗಳೂರು ಯುನಿವರ್ಸಿಟಿಯಿಂದ ಬಂದ ಒಬ್ಬರು ಸೇರಿಕೊಂದರು. ಹಾಗೆ ಹೊರಗೆ ಕಣ್ಣು ಕುರುಡಾಗುವಷ್ಟು ಕತ್ತಾಲಾಗಿದ್ದರಿಂದ, ಬೆಡ್ ಮೇಲೆ ಬಿದ್ಕೊಂಡೆವು. ಮಾತಾಡುತ್ತ ಗೆಳೆಯರುಮಲಗಿಬಿಟ್ಟರು!
ಮತ್ತೆ ನಾವು ಬೆಳಗಿನ ಆ ಸುಂದರ ಪ್ರಕೃತಿಯ ದೃಶ್ಯಗಳನ್ನು ಸವಿಯುತ್ತಾ ವಾಕಿಂಗ್ ಹೋಗಲು ಪ್ರಾರಂಬಿಸಿದೆವು.. ಪೂರ್ವದಲ್ಲಿಸೂರ್ಯ ಆಗಷ್ಟೇ ಮಂಜಿನ ಮುಸುಕಿನ ಮರೆಯಿಂದ ಕಣ್ಣು ಬಿಟ್ಟಂತೆ, ಮೇಲೇಳುತಿದ್ದ! ದೂರಕ್ಕೆ ಶಿಖರಗಳ ಮದ್ಯೆ!! ಕಣ್ಣುಹಾಯಿಸಿದಷ್ಟು ಬರೀ ಬಯಲಂತೆ ಕಾಣುವ ಗದ್ದೆಗಳು. ಆ ಬೆಳಗಿನ ಚಳಿಯನ್ನು ಲೆಕ್ಕಿಸದೆ, ದನಗಳನ್ನು ಮೇಯಿಸಲು ತಂದ ರೈತಾಪಿಜನ, ಮತ್ತು ಅವರ ಮಕ್ಕಳು!!

ಹಾಗೆ ಅಲ್ಲಿಂದ ನಮ್ಮ ರೂಮಿನ ಪಶ್ಚಿಮಕ್ಕೆ ಹೊರಟು ನಿಂತಾಗ ಭದ್ರ ಜಲಾಶಯ ವಿತ್ತು!! ರಾತ್ರಿಯಿಡಿ ಅಲ್ಲಿ ಇದ್ದ ನಮಗೆ ಅಲ್ಲೇ ಒಂದು ಡ್ಯಾಮ್ ಇದೆ ಅನ್ನುವುದೂ ಗೊತ್ತಿರಲಿಲ್ಲ! ಹಾಗೆ ಎಲ್ಲರೂ ಹುರುಪಿನಿಂದ ಆ ಕಡೆ ಹೊರಟೆವು.! ನಮಗೆ ನಾವೇ ಗೈಡ್ ಎಂಬಂತೆ, ತೋಚಿದ್ದೇ ದಾರಿಯೆಂಬಂತೆ ನಡೆದೆವು. ಗದ್ದೆಗಳನ್ನು ದಾಟಿ, ಗುಡ್ಢವನ್ನೇರಿ, ಅಂತೂ ಜಲಾಶಯದಲ್ಲಿಗೆ ಮುಟ್ಟಿದೆವು!! ಅಪಾರ ಜಲರಾಶಿ, ಅದರಾಚೆಗೆ ಅರ್ಧ ಮುಳುಗಿದಂತೆ ಕಾಣುತಿದ್ದ ಕಾಡು! ಅಂದ ಹಾಗೆ ಅದು ಭದ್ರ ರಿಸರ್ವ್ ಫಾರೆಸ್ಟ್! ಅದರ ಒಂದು ಬದಿಯಲ್ಲಿರುವುದು, ಅಂದರೆ ದಕ್ಷಿಣದ ತುದಿಯಲ್ಲಿರುವುದು ಕುವೆಂಪು ಯುನಿವರ್ಸಿಟಿ ಕ್ಯಾಂಪಸ್! ಕೆಲವೊಮ್ಮೆ ಕಾಡು ಪ್ರಾಣಿಗಳು ಈ ಹಿನ್ನಿರಲ್ಲಿ ಬಂದು ನೀರು ಕುಡಿದು, ಮಿಂದು ಹೋಗುತ್ತವೆ ಅಂತೆ!! ಒಮ್ಮೆಗೆ ಯೋಚಿಸುವಾಗ ಎದೆ ಡವಗುಟ್ಟಲು ಪ್ರಾರಂಭಿಸಿತು! ಈಗೆಲ್ಲಾದರೂ ನಮ್ಮ ಬೆನ್ನ ಹಿಂದೆ ಪ್ರಾಣಿಗಳು ಬಂದರೆ ಒಂದಾ ಕಣ್ಣೆದುರುವಿಗಿರುವ ನೀರು , ಇಲ್ಲದಿದ್ದರೆ ಪ್ರಾಣಿಗಳ ಬಾಯಿ. ಅದನ್ನು ನೆನೆದು ಏನೋ ಡ್ಯಾಮ್ ನ ಹತ್ತಿರವಿದ್ದ ನಾವೆಲ್ಲರೂ ರೂಮಿನ ಕಡೆ ಹೊರಟೆವು!
ಮತ್ತೆ ಯುನಿವರ್ಸಿಟಿಯ ಕಾರ್ಯಕ್ರಮವನ್ನು ಮುಗಿಸಿ, ನಮ್ಮೂರ ಕಡೆ ಹೊರಟಾಗ, ಮಲೆನಾಡ ದೃಶ್ಯ ಕಾವ್ಯವು ನಮ್ಮ ಎದೆಯನ್ನು ಭಾರದಲ್ಲಿರಿಸುವಂತೆ ಮಾಡಿತು ! ಆದರೂ ನಮ್ಮ ಊರು ನಮಗಾಗಿ ಕಾಯುತ್ತಿತ್ತು!!
No comments:
Post a Comment