ನಮಗಿಂತ ಬೇರೆಯವರೇ ಹೆಚ್ಚು ಉಪಯೋಗಿಸುವನ್ತದ್ದು ಇದ್ದರೆ ಅದು ನಮ್ಮ ಹೆಸರು ಮಾತ್ರ ಅಂತ ಅನಿಸುತ್ತದೆ. ಹೆಸರುಗಳು ಹೆಚ್ಚಾಗಿ ಸೈನ್ಸ್ ನಲ್ಲಿ ಬರುವಂತೆ binomial nomenclature ಅಥವ ದ್ವಿನಾಮ ಸಿದ್ದಾಂತಕ್ಕೆ ಜೋತು ಬಿದ್ದಂಗೆ ಎರಡು ಹೆಸರು ಇರುತ್ತದೆ. ಅದಕ್ಕೆ ಕೇರಳಿಯರು ಮಾತ್ರ ಅಪವಾದ. ಅವರದ್ದು ಎರಡಕ್ಷರದ ಸಿದ್ದಾನ್ತವಿರಬಹುದು! ಶಾಜು, ಬಿಜು, ಅನು ,ಬಿನು ಇತ್ಯಾದಿ .ಮತ್ತೆ ಅವರ ಭಾಷೆಯಲ್ಲಿ ಅಪಭ್ರಂಶವಾಗಿ ಕೇಳಲು ಒಂಥರ ವಿಚಿತ್ರವಾಗಿರುತ್ತದೆ. ರೆಮ್ಯ ,ಸದೀಶ,ಇನ್ನು ಸಿಲ್ಕ್ ಸ್ಮಿತ ಅಂತು ಅವರ ಬಾಯಲ್ಲಿ ಸಿಲ್ಗ್ ಸ್ಮಿದ ವಾಗುತ್ತದೆ ...!ಅದು ಅವರ ಸ್ಪೆಷಾಲಿಟಿ !
ಇನ್ನು ನಮ್ಮ ಹೆಸರಿಗೆ ಬಂದರೆ , ಸಾಮಾನ್ಯವಾಗಿ ಎರಡು ಪದ ಇರುವ ಹೆಸರುಗಳು. ಕೆಲವರಿಗೆ ಮಾತ್ರ ಅವರ ಅಜ್ಜನ, ಸರ್ ನೆಮ್ ಸೇರಿ ಒಂದೂವರೆ ಲೈನ್ ಆಗುವ ಸಾಧ್ಯತೆ ಇರುತ್ತದೆ .ನನ್ನ ಗೆಳೆಯನೊಬ್ಬ ಯಾವುದೇ ಅಪ್ಲಿಕೇಶನ್ ತುಂಬಿಸುವಾಗ ಅವನ ಹೆಸರು ಬರೆಯುವಾಗ ಪಡುವ ಪಾಡು ಬೇರೆಯೇ!! ಏಕೆಂದರೆ
ಅವ್ನ ಹೆಸರು ಕೃಷ್ಣ ಕುಮಾರ್ ಲಕ್ಷ್ಮಿ ನಾರಾಯಣ ಮತ್ತೂ ಒಂದು ಸರ್ ನೇಮ್ ಬೇರೆ!!!
ಅಂದ ಹಾಗೆ ನನ್ನ ಹೆಸರೇನು ಕೇರಳೀಯರ ಹಾಗೆ ಸಣ್ಣದಲ್ಲದಿದ್ದರೂ, ಗೆಳೆಯನ ಷ್ಟೂ ಉದ್ದವಿಲ್ಲ. ಆದ್ರೆ ಪ್ರಾಬ್ಲಂ ಇದ್ದದ್ದು ಅದರ ಅಕ್ಷರಗಳಲ್ಲಿ !! ಏಕೆಂದರೆ ನನ್ನ ಮೊದಲನೆಯ ಹೆಸರಿನ ಆರಂಭದ ಅಕ್ಷರಗಳು ಇಂಗ್ಲಿಶ್ ವರ್ಣಮಾಲೆಯ ಮೊದಲಿನ ಮೂರೂ ಅಕ್ಷರವನ್ನು ಒಳಗೊಂಡಿದೆ. ಎ ಬಿ ಡಿ .!! ಇದರಿಂದಾಗಿ ಇದುವರೆಗೆ ನನಗಿಂತ ಮೊದಲು,rank ನಲ್ಲಿ ಅಲ್ಲದಿದ್ದರೂ ರೂಲ್ ನಂಬರಿನಲ್ಲಿ ಯಾರು ಬರಲಿಲ್ಲ !! first ನಂಬರ್ ಯಾವಾಗಲೂ ನಂಗೆ resarved!! ಇದರಲ್ಲಿ ನನಗೆ ಅನುಕೂಲಕ್ಕಿಂತ ಕಷ್ಟವೇ ಜಾಸ್ತಿ ಯಾಗಿತ್ತು .
ಶಾಲೆಯಲ್ಲಿರುವಾಗ ಎಕ್ಸಾಮ್ ಹಾಲಲ್ಲಿ ಮೊದಲೆನೆಯ ವ್ಯಕ್ತಿ ನಾನೇ ಆಗಿದ್ದೆ! ಅದು ನನ್ನ ಸ್ನಾತಕೋತ್ತರ ತರಗತಿಯವರೆಗೆ ಮುಂದುವರೆದಿತ್ತು.. ಆಚೀಚೆ ನೋಡಿದರೆ ನಾನೇನು ಮಾಲ್ ಪ್ರಾಕ್ಟೀಸ್ ಮಾಡುತಿದ್ದೇನೆ ಅಂತ ಚೆಕ್ ಮಾಡುತಿದ್ದರು. ಇನ್ನು ಇನ್ವಿಜಿಲೆಟಾರ್ ನ ಮುಖ ನೋಡಿದರೆ ಅಡಿಶನಲ್ ಶೀಟ್ ಬೇಕಾ, ಅಥವಾ ನೀರು ಬೇಕಾ ಅಂತಾ ಕೇಳುತಿದ್ದರು.
ಇನ್ನು ಪೇಪರ್ ಕೊಡುವಾಗ ನಮಗಂತೂ ಲೇಟ್ ಆದರೂ ಹಿಂತಿರುಗಿಸುವಾಗ exact ಟೈಮಿಗೆ ಕೊಡಬೇಕು ಅನ್ನುವುದು ನಮಗೆ ಮಾತ್ರ ವಿಧಿಸಿದ ನಿಯಮ! ನಮ್ಮ ನಂತರದವರಿಗೆ ಬೇಕಾದರೆ ವಾಕ್ಯ ಬಿಡಿ ಉತ್ತರವನ್ನೇ ಮುಗಿಸುವಷ್ಟು ಟೈಮ್ ಕೊಟ್ಟು ಬಿಡುತಿದ್ದರು.
ಎಕ್ಸಾಮ್ ಮುಗಿದು ವ್ಯಾಲುವೇಶನ ಆದ ಪೇಪರನ್ನು ನಮಗೆ ಹಿಂತಿರುಗಿಸಿ ಕೊಡುವಾಗ ಮೊದಲು ನನ್ನ ಪೇಪರ್ ಕೊಡುತಿದ್ದರಿಂದ ಮಾರ್ಕ್ ಹೇಳಲಿ ಬಿಡಲಿ ನನ್ನ ಮಾರ್ಕ್ ಅಂತು ಎಲ್ಲರಿಗು ಗೊತ್ತಾಗಿ ಬಿಡುತಿತ್ತು.
ಇನ್ನು ಪಿಯು ಕಾಲಿಟ್ಟಾಗ ಹೆಚ್ಚಿನವರು ನನಗೆ absent ಹಾಕ್ತ ಇದ್ದರು.ಯಾಕಂದ್ರೆ ಲೆಕ್ಚರ ಅಟೆ0ಡಸ್ ಹಾಕುವುದು ಬಿಡಿ ಅವರು ಕ್ಲಾಸಿಗೆ ಬರ್ತಾ ಇದ್ದದು ಗೊತ್ತಾಗ್ತಾ ಇರಲಿಲ್ಲ...!ಅಷ್ಟು ಹರಟೆ!!
ಇನ್ನು ಲ್ಯಾಬಿಗೆ ಹೋಗುವಾಗಲು ಅಷ್ಟೇ. ಸೈನ್ಸ್ ನಲ್ಲಿ ಹುಡುಗಿಯರ ಸಂಖ್ಯೆ ನಮಗಿಂತ ಜಾಸ್ತಿಯಾಗಿರುವುದರಿಂದಲೋ ಏನೋ ಅವರದ್ದೇ ಪಾರುಪತ್ಯ. ಅವರಿಡೀ ಲ್ಯಾ ಬಿನ ಬಾಗಿಲಿಗೆ ಅಡ್ಡವಾಗಿ ನಿಂತು ನಾವು ಅವ್ರ ಹಿಂದೆ ನಿಲ್ಲುವ ಹಾಗೆ ಮಾಡ್ತಾ ಇದ್ದರು. ಇದರಿಂದ ಅಟೆ0ಡಸ ಕರೆದಾಗ ಒಳ ಹೋಗಲಾಗದೆ ಎಲ್ಲರ ಮುಂದೆ ಸದಾ ಮೇಡಂ ನವರಿಂದ ಮಂಗಳಾರತಿ ಯನ್ನು ಸ್ವೀಕರಿಸುತ್ತಿದ್ದೆ!!
ಅದೆಲ್ಲವನ್ನು ನಾವು ಇರಲಿ ಅಂತ ಬಿಡಬಹುದೇನು .. ಆದರೆ Viva, interview ನಲ್ಲಿ ನನ್ನಂತವರ ಅಂದರೆ ಮೊದಲ ನಂಬರಿನವರ ಸ್ಥಿತಿ ನೀವು ನೋಡಿದ್ರೆ ಅಯ್ಯೋ ಪಾಪ ಅನ್ನಬಹುದೇನು ?! External ಆಗಿ ಬಂದವರಿಗೆ ನಮ್ಮನ್ನು ಏನು ಪ್ರಶ್ನಿಸಬೇಕೆಂದು ತೊಚದೆ ನಮ್ಮನ್ನೇ ಗಲಿಬಿಲಿಗೊಳಿಸಿಬಿಡುತ್ತಾರೆ. ಮಾತ್ರವಲ್ಲದೇ ಅರ್ಧ ಗಂಟೆಗಿಂತಲೂ ಹೆಚ್ಚು ಸಮಯ ತೆಗೆದು ಮೊದಲೇ ಟೆನ್ಶನ್ ನಲ್ಲಿ ಇರುವ ನಮ್ಮ ಇಡಿ ಪ್ರಾಕ್ಟಿಕಲ್ ಎಕ್ಸಾಮ್ ತೋಪೆದ್ದು ಹೋಗುತ್ತೆ!
ನಮ್ಮ ನಂತರದವರಿಗೆ ಐದೋ ಹತ್ತೋ ನಿಮಿಷದಲ್ಲಿ ಒಳ್ಳೊಳ್ಳೆಯ ಪ್ರಶ್ನೆಯನ್ನು ಕೇಳಿ ಕಳುಹಿಸಿಬಿಡುತ್ತಾರೆ. ಏಕೆಂದರೆ ಸಮಯದ ಅಭಾವ !!
ಇವಿಷ್ಟು ನನ್ನ ಹೆಸರಿನ ಸಮಯಾದ್ರೆ , ಇನ್ನು ನನ್ನ ಹೆಸರಿನ ಮೊದಲಾರ್ಧದಿಂದ ಯಾರಾದ್ರು ನನ್ನನು ಕರೆದರೆ ನನಗೆ ನನ್ನದಲ್ಲ ಅನ್ನುವ ಭಾವನೆ! ಇನ್ನು ಅವರನ್ನು ಕಂಡು ಹೆಸರಿನ ಎರಡನೆ ಭಾಗವನ್ನು ಕರೆಯಿರಿ ಅನ್ನುವ ಬೇಡಿಕೆ ಯನ್ನು ಸಲ್ಲಿಸಬೇಕಿತ್ತು !! ಕೆಲವೊಮ್ಮೆ ನಾನೇ ಹೆಸರನ್ನು ತಿರುಗ ಮುರುಗಾ ಬರೆದದ್ದು ಇದೆ!(ಬ್ಲಾಗಲ್ಲಿ ಬರೆದ ಹಾಗೆ)
ಒಟ್ಟಿನಲ್ಲಿ ಅರೇಬಿಕ್ ಮೂಲದಿಂದ ಬಂದ ನನ್ನ ಹೆಸರಿನ ಮೊದಲಾರ್ದ ದೇವನ ದಾಸ ಅನ್ನೋ ಅರ್ಥ
ಇದ್ದರೆ, ಎರಡನೆಯ ಭಾಗ ಮಂತ್ರಿ ಅಥವಾ ಉನ್ನತ ಅಧಿಕಾರಿ ಅಂತ ಅರ್ಥ ವಿರುವ ಶಬ್ದ ಮಾತ್ರ ಪರ್ಷಿಯನ್ ಮೂಲದ್ದು!!
1 comment:
Aasaf your writing is superb. Keep it up!My ID is sagrihayavadana@gmail.com.Try to cotact me.
Post a Comment