Wednesday, 27 June 2012

¥ÀjuÁªÀÄ
ಇತ್ತೀಚಿಗೆ ಲಂಕೇಶ್ ನಲ್ಲಿ ಪ್ರಕಟವಾದ ನಾನು ಬರೆದ ಕತೆ 

vÀ£Àß PÉÊUÀ½UÉ ºÀZÀÄÑwÛgÀĪÀ ªÉĺÀA¢AiÀÄ avÁÛgÀzÉÆA¢UÉ, UɼÀwAiÀÄgÀ ªÀiÁvÀÄUÀ¼ÀÄ  £À£Àß PÀ£À¸ÀÄUÀ½UÉ E£ÀßµÀÄÖ ªÉÄgÀÄUÀÄ ¤ÃqÀÄwÛzÀÝ D PÀët. £ÀªÀÄä ªÀÄ£ÉAiÀÄ°è £ÀqÉAiÀÄÄwÛgÀĪÀ ªÉÆzÀ® ªÀÄzÀĪÉAiÀiÁzÀÄzÀjAzÀ¯ÉÆÃ K£ÉÆÃ ªÀÄ£ÉAiÀĪÀjUɯÁè ¸ÀA¨sÀæªÀĪÉÇà ¸ÀA¨sÀæªÀÄ. ªÀÄ£ÉUÉ §AzÀ »j-QjAiÀÄjUÀÆ ªÀÄzÀĪÉAiÀÄ RĶ MAzÉqÉAiÀiÁzÀgÉ, £Á£Éà EµÀÖ¥ÀlÖ AiÀÄĪÀPÀ£À£ÀÄß ªÀÄzÀĪÉAiÀiÁUÀÄwÛgÀĪÀÅzÀjAzÀ PÀÄvÀƺÀ® E£ÉÆßAzÉqÉ !'
C§â! JµÀÄÖ PÀµÀÖ¥ÀmÉÖ EµÀÖ¥ÀlÖªÀ£À£ÀÄß vÀ£ÀߪÀ£À£ÁßV¸À®Ä! £Á£ÁUÀ ¦AiÀÄÄ PÀ°AiÀÄ®Ä PÁ¯ÉÃfUÉ ºÉÆÃUÀÄwzÁÝUÀ aUÀÄgÀÄ «ÄøÉAiÀÄ CªÀ£ÀÄ £À£Àß »AzÉAiÉÄà ¸ÀÄvÀÄÛvÀ¯Éà EzÀÝ. £À£ÀUÉ CªÀ£À£ÀÄß PÀAqÀgÉ DUÀ EzÀÝzÀÄÝ vÁvÁìgÀªÁzÀgÀÆ, zÉéõÀ«gÀ°®è.  £ÀAvÀgÀzÀ°è PÀÄvÀƺÀ®PÉÌAzÀÄ CªÀ£À §UÉ w½AiÀĨÉÃPÉAzÀÄ C¤ß¹, £À£ÀUÀj«®èzÉà CªÀ£À°è C£ÀÄgÀPÀÛ¼ÁV ©nÖzÉÝ ! ªÀÄvÀÛ ºÉÃUÉÆÃ ªÀÄ£ÉAiÀĪÀjUÉ w½zÀÄ gÀA¥ÁlªÉÇà gÀA¥Ál! ¹nÖ£À ¨sÀgÀzÀ°è £À£ÀUÉ ¨ÉÃgÉ ªÀÄzÀÄªÉ ªÀiÁqÀ®Ä ºÉÆgÀnzÀÝgÀÄ. EªÀ£ÀAvÀÄ ©qÀ¨ÉÃPÉ CzÉíÃUÉ ¸Á¢ü¹zÀ£ÉÆÃ?! CªÀ£ÀÄ £ÀªÀÄä ªÀģɪÀÄA¢AiÀÄ ªÀÄ£À UÉ¢ÝzÀÝ®èzÉ, £À£ÀVAvÀ®Æ CªÀgÉ®èjUÀÆ EµÀÖªÁV ©nÖzÀÝ'
EzÉ®èªÀÇ ªÉÆ£Éß ªÉÆ£Éß £ÀqÉzÀ ºÁUÉ C¤ß¸ÀÄvÀÛzÉ. PÁ® JµÀÄÖ ¨ÉÃUÀ NqÉÆÃr ªÀiÁAiÀĪÁVzÉ. CzɵÀÄÖ ¸ÀÄAzÀgÀªÁzÀ ¸ÀªÀÄAiÀÄ. PÀ£À¸ÀÄUÀ¼ÀÄ gÉPÉÌ ©aÑ ºÁgÁrzÀ ¢ªÀ¸ÀUÀ¼ÀÄ, £À®è£À ¥ÉæÃªÀÄzÀ ©¹AiÀÄ¥ÀÄàUÉAiÀÄ°è ªÉÄʪÀÄgÉvÀ ¢£ÀUÀ¼ÀªÀÅ. ªÀÄzÀĪÉAiÀiÁV J¯Éè®Æè £Á PÉüÀjAiÀÄzÀ HjUÉ ¸ÀÄvÁÛr¹zÀ.ªÀÄvÉÛ £Á PÉüÀzÉÃ£É £À£Àß EµÀÖUÀ¼À£ÀÄß ¥ÀÆgÉʹzÀ. £À£Àß ªÁgÀUÉAiÀÄ UɼÀwAiÀÄgÀ ªÀÄ£ÀzÀ°è DzÀ±Àð ºÀÄqÀÄUÀ£ÁVzÀݪÀ, ¥Á¥À FUÀ CzɵÀÄÖ PÀµÀÖzÀ fêÀ£ÀªÀ£ÀÄß ¸ÀªÉ¸ÀÄvÁÛ EzÁÝ£ÉÆÃ K£ÉÆ CAvÀ AiÉÆÃa¸ÀĪÁUÀ PÀgÀļÀÄ ZÀÄgÀÄPï CAvÀ C¤ß¸ÀÄvÀÛzÉ'
ªÀÄ£ÉAiÀÄ ªÀgÁAqÀzÀ°è PÀÆvÀÄ vÀ£Àß UÀAqÀ£À §UÉ aAw¸ÀÄwÛzÀÝ ¸À«ÄÃgÀ¼À PÀtÚAa£À°è ¤ÃgÀÄ f£ÀÄVvÀÄÛ.GQÌ §gÀĪÀ PÀtÂÚÃgÀ£ÀÄß MgɸÀÄvÁÛ " ºËzÀÄ PÀtÂÚÃgÀÄ ºÁPÀ¨ÁgÀzÀÄ. CzÀÄ CªÀ¤UÉ EµÀÖªÁUÀ®è. PÀtÂÚÃjVAvÀ ±Á¥À ºÉtÂÚ£À fêÀ£ÀzÀ°è E£ÉÆßA¢®è CAvÀ ºÉüÀÄvÀÛ¯Éà EzÀÝ, PÀµÀÖ, ¸ÀÄR JgÀqÀ£ÀÆß MnÖUÉ d¬Ä¸ÀĪÀ ªÀģɯÃzsÉÊgÀå £ÀªÀÄä°è ¨É¼É¸À¨ÉÃPÀÄ C£ÀÄßwzÀÝ CªÀ£À ªÀiÁw£À CxÀð FUÀ CxÀðªÁUÀÄwÛzÉ."
ºÉÆgÀUÉ DPÁ±ÀzÉvÀÛgÀPÉÌ £ÉÆÃqÀÄvÁÛ, ±ÀÆ£ÀåzÀvÀÛ ªÀÄÄR £ÉnÖzÀÝ£ÀÄß £ÉÆÃr" ªÀÄUÀÆ... CzÉãÀÄ CAvÀ C°è PÀÆvÀÄ AiÉÆÃZÀ£É ªÀiÁqÀÄwÛ¢ÝÃAiÀÄ? aAw¹zÀݵÀÄÖ £ÉÆÃªÉ C®èªÉÃ" JAzÀÄ CvÉÛ ºÉýzÁUÀ ¸À«ÄÃgÀ JZÉÑvÀÛ¼ÀÄ. ¹ÜvÀ¥ÀædмÀAvÉ CvÉÛ PÀĽwzÀÝ eÁUÀPÉÌ ºÉÆÃV PÀÆvÀ¼ÀÄ. ¸ÁgÀªÀÄä vÀ£Àß ¸ÉƸÉAiÀÄ ªÀÄÄRª£ÉÆßªÉÄä ¢nÖ¹, "CzɵÀÄÖ ªÀÄ£À¸ÀÄì PÀ®Äè ªÀiÁqÀÄwÛÃAiÀĪÀÄä, CvÀÄÛ ©qÀÄ. ¸Àé®à ¤gÁ¼ÀªÁUÀÄvÀÛzÉ" CAvÀ  vÀ£Àß ¸ÉgÀV£À vÀÄ¢¬ÄAzÀ PÀtÂÃgÀ£ÀÄß MgɸÀÄvÁÛ ºÉýzÀgÀÄ.
"zÉêÀgÀÄ ¸ÀÄR PÉÆqÀĪÁUÀ ªÀiÁvÀæªÀ®èªÀiÁä, PÀµÀÖ PÉÆqÀĪÁUÀ®Æ  CzÀ£ÀÄß ¹éÃPÀj¸ÀĪÀµÀÄÖ ªÀÄ£À¸ÀÄ UÀnÖ ªÀiÁrPÉÆ¼Àî¨ÉÃPÀÄ. J®èªÀÇ ¸ÀȶÖPÀvÀð£À °Ã¯É CµÉÖ, §AzÀzÀÝ£ÀÄß JzÀÄj¸À¯ÉèÉÃPÀÄ".
“AiÀiÁgÀÄ K£ÀÄ ºÉýzÀÝgÀÆ £À£ÀUÉ CªÀ¤gÀĪÁV£À  zsÉÊgÀå FUÀ E®è. £À£ÀUÉ ©qÀÄ, HgÀªÀjUÉ J®èzÀPÀÆ ¨ÉÃPÁVzÀݪÀ. FUÀ CªÀ£ÀÄ eÉÊ®°èzÀÝgÉ CªÀ£ÀÄ ©qÀÄ, CªÀ£À ªÀÄ£ÉAiÀĪÀgÀÆ AiÀiÁjUÀÆ ¨ÉÃqÀªÁVzÁÝgÉ. ¥Á¥À CªÀgÉãÀÄ ªÀiÁqÀÄvÁÛgÉ C®èªÉÃ? CªÀ£À UɼÉAiÀÄgÀÄ CAvÀ CªÀgÀ£ÀÆß ¥ÉÆÃ°¸ÀgÀÄ JwÛPÉÆAqÀÄ ºÉÆÃzÀgÉ?! CzÀÆ ºËzÀÄ, £ÀªÀÄä ¹Üw CªÀjUÀÆ §gÀ¨ÁgÀzÀÄ. CªÀgÁzÀgÀÆ HgÀªÀjUÉ, CªÀgÀ ¸ÀA§A¢PÀjUÉ ªÀÄÄR vÉÆÃj¸À°" JAzÀÄ ºÉüÀÄvÁÛ ¸Àr®UÉÆArzÀÝ vÀ¯ÉAiÀÄ gÀĪÀiÁ®£ÀÄß ¸Àj¥Àr¹ ªÀÄvÉÆÛªÉÄä ©aÑ PÀnÖzÀgÀÄ.
DzÀgÉ CzÁåªÀÅzÀPÀÆÌ GvÀÛj¸ÀzÉ CzÉãÀ£ÉÆßà AiÉÆÃa¸ÀÄvÁÛ " ºËzÀÄ £Á£ÀAvÀÆ AiÀiÁgÀ ªÀÄ£ÉUÀÆ ºÉÆÃUÀzÉ JµÀÄÖ ¢ªÀ¸ÀªÁ¬ÄvÀÄ. ªÀÄzÀĪÉ, ªÉĺÀA¢ AiÀiÁªÀÅzÀPÀÆÌ ºÉÆÃUÀ®Ä ªÀÄ£À¸ÀÄì §gÀÄwÛ®è. d£ÀgÀ C£ÀÄPÀA¥ÀzÀ £ÀÄrUÉ, £ÉÆÃlPÉÌ ºÉzÀgÀÄvÉÛãÉ.. ¤±Àê§ÞªÁVgÀĪÀ ªÀÄ£ÀzÀ°è gÁr J©â¸ÀĪÀÅzÁzÀgÀÆ KvÀPÉÌ?! ªÀÄÄA¢£À wæð£À  ªÉüÉAiÀiÁzÀgÀÆ zÉêÀgÀÄ £À£Àß ªÉÄÃ¯É PÀgÀÄuÉ vÉÆÃj¸À§ºÀÄzÀÄ." CAvÀ ªÀÄ£ÀzÀ°è CAzÀÄPÉÆ¼ÀÄîwÛgÀĪÁUÀ¯Éà ªÀĹâ¬ÄAzÀ ªÀÄzsÁåºÀßzÀ ¨ÁAUï £À PÀgÉ PÉüÀ¯ÁgÀA©ü¹vÀÄ. C°èAzÀ JzÀÄÝ ¸À«ÄÃgÀ CqÀÄUÉ ªÀÄ£ÉAiÀÄvÀÛ £ÀqÉzÀ¼ÀÄ. UÁå¹£À ªÉÄÃ¯É EnÖzÀÝ C£ÀßzÀ ¥ÁvÉæAiÀÄ ªÀÄÄZÀѼÀªÀ£ÀÄß ¸Àj¹, ¸ËlÄ ºÁQ CzÀjAzÀ JgÀqÀÄ C£ÀßzÀ CUÀļÀ£ÀÄß PÉÊAiÀÄ ¨ÉgÀ½¤AzÀ CªÀÄÄQ  ¨ÉA¢zÉAiÀiÁ CAvÀ £ÉÆÃrzÀ¼ÀÄ."E®è E£ÀÄß ¸Àé®à ¨ÉÃAiÀĨÉÃPÀÄ" CAvÀ  C°èAzÀ ¥ÀÄ£ÀB CvÉÛ PÀĽvÀ°èUÉ §AzÀÄ PÀĽvÀ¼ÀÄ
ªÀÄvÉÛ vÀ£Àß avÀÛªÀ£ÀÄß ±ÀÆ£ÀåzÀvÀÛ £ÉlÄÖ " CªÀgÀ°è ºÉýzÉÝ £ÀªÀÄUÉ ¨ÉÃqÀ F jAiÀįï J¸ÉÖÃmï G¢ÝªÉÄ, ¨ÉÃgÉAiÉÄãÁzÀgÀÄ   ¸ÀtÚ ªÁå¥ÁgÀªÁzÀgÀÆ ¸ÁPÀÄ. d£ÀgÀ zÉéõÀ, zÀ馅 PÀnÖPÉÆ¼ÀÄîªÀÅzÀÄ ¨ÉÃqÀ CAv. DzÀgÉ EªÀgÀÄ PÉüÀ¨ÉÃPÉ? CzÉà EªÀvÀÄÛ £ÀªÀÄUÉ ªÀÄļÀĪÁ¬ÄvÀÄ. eÁUÀ ªÀiÁjzÀ ªÉÄÃ®Æ CzÀgÀ ¨sÀÆvÀ £ÀªÀÄä£ÀÄß »rAiÀĨÉÃPÉ?!" »ÃUÉ CªÀ¼À AiÉÆÃZÀ£ÉAiÀÄ ¸ÀgÀªÀiÁ¯ÉUÉ ªÀÄÆgÀĪÀgÉ ªÀgÀĵÀzÀ CªÀ¼À ªÀÄUÀÄ«£À C¼ÀÄ ¨ÉæÃPï ºÁQvÀÄ. ¨Éqï gÀƫģÀ ªÀÄAZÀzÀ°è ªÀÄ®VzÀÝ ªÀÄUÀĪÀ£ÀÄß JwÛPÉÆAqÀÄ §ZÀÑ® ªÀÄ£ÉAiÀÄ PÀqÉUÉ ºÉÆgÀl¼ÀÄ. CªÀ¼À F ªÀÄÄzÀÄrzÀ §zÀÄQ£À°è fêÀ£ÉÆÃvÁìºÀPÉÌ ªÀÄUÀĪÉÇAzÉà PÁgÀt.
********
PÁ® AiÀiÁgÀ ¸ÀÄRPÀÆÌ , zÀÄBRPÀÆÌ PÁAiÀÄÄvÁÛ ¤®ÄèªÀÅ¢®è. ºÁUÉAiÉÄà wæð£À ¢£À §AzÉénÖvÀÄ. zÀt¢zÀÝ ªÀÄ£À¸ÀÄìUÀ½UɯÁè CAvÀÆ ¤gÁ¼ÀªÉ¤¹vÀÄ.¸ÀĪÀiÁgÀÄ ªÀÄÆgÀÄ ªÀµÀðzÀ ªÀ£ÀªÁ¸À PÉÆ£ÉUÉÆArvÀÄ. ¸ÉÆàÃl ¥ÀæPÀgÀtzÀ wæð£À°è ªÀÄAzÀºÁ¸À ©ÃjvÀÄÛ. eÁUÀªÀ£ÀÄß ªÀiÁjAiÀiÁzÀ £ÀAvÀgÀ D eÁUÀzÀ°è ¸ÉÆàÃl ¥ÀæPÀgÀtzÀ°è ¨ÁVAiÀiÁVgÀĪÀªÀgÉA§ ±ÀAQvÀgÀÄ §AzÀÄ £É¯É¹zÀÝjAzÀ, EªÀ¤UÀÆ ¸ÉÆàÃlPÀÆÌ AiÀiÁªÀÅzÉà ¸ÀA§AzsÀ «®èªÉAzÀÄ PÉÆÃmïð ¤zÀÆð¶AiÉÄAzÀÄ ©qÀÄUÀqÉ ªÀiÁrvÀÄ.
ºÁUÉ ¢£ÀUÀ¼ÀÄgÀĽzÀªÀÅ. UÀAqÀ£À ©qÀÄUÀqÉAiÀÄ £ÀAvÀgÀ ºÉƸÀ DvÀä «±Áé¸ÀUÀ½¹, ¸ÀÄR ¸ÀA¸ÁgÀPÉÌ ªÀÄgÀ¼ÀĪÀ AiÀÄvÀßzÀ°è ¸À«ÄÃgÀ EzÀݼÀÄ. vÀ£Àß ªÀÄUÀÄ«£À ¨sÀ«µÀåzÀ PÀ£À¸À£ÀÄß ºÉÆvÀÄÛ ±Á¯ÉUÉ ¸ÉÃj¸ÀĪÀ GvÁìºÀzÀ°èzÀݼÀÄ. ±Á¯ÉUÉ ¸ÉÃj¸ÀĪÀ ¸ÀªÀÄAiÀĪÀÇ ºÀwÛgÀ §AvÀÄ.ªÀÄUÀ£À£ÀÄß ºÀ®ªÁgÀÄ ±Á¯ÉUÉ ¸ÉÃj¸À¯ÉAzÀÄ C¯ÉzÀgÀÄ. PÉ®ªÀÅ ±Á¯ÉUÀ¼ÀÄ £Á£Á PÁgÀt ºÉý £ÀÄtÄaPÀAqÀgÀÄ.ªÀÄvÉÛ PÉ®ªÀgÀÄ ªÀÄÄRPÉÌ ºÉÆqÉzÀ ºÁUÉ wgÀ¸ÀÌj¹zÀgÀÄ. MnÖ£À°è CªÀ¼À ªÀÄUÀ J®ègÀ ¥Á°UÉ FUÀ ¨sÀAiÉÆÃvÁàzÀPÀ£À ªÀÄUÀ£ÁVzÀÝ!
********

Sunday, 13 May 2012

ಬಲ್ಲಿರೇನಯ್ಯ ನನ್ನ ಹೆಸರಿನ ಮಹಾತ್ಮೆ !!

ನಮಗಿಂತ ಬೇರೆಯವರೇ ಹೆಚ್ಚು ಉಪಯೋಗಿಸುವನ್ತದ್ದು ಇದ್ದರೆ ಅದು ನಮ್ಮ  ಹೆಸರು  ಮಾತ್ರ ಅಂತ ಅನಿಸುತ್ತದೆ.  ಹೆಸರುಗಳು ಹೆಚ್ಚಾಗಿ ಸೈನ್ಸ್ ನಲ್ಲಿ ಬರುವಂತೆ binomial nomenclature ಅಥವ ದ್ವಿನಾಮ ಸಿದ್ದಾಂತಕ್ಕೆ ಜೋತು ಬಿದ್ದಂಗೆ ಎರಡು ಹೆಸರು ಇರುತ್ತದೆ. ಅದಕ್ಕೆ ಕೇರಳಿಯರು ಮಾತ್ರ ಅಪವಾದ. ಅವರದ್ದು ಎರಡಕ್ಷರದ ಸಿದ್ದಾನ್ತವಿರಬಹುದು! ಶಾಜು, ಬಿಜು, ಅನು ,ಬಿನು ಇತ್ಯಾದಿ .ಮತ್ತೆ ಅವರ ಭಾಷೆಯಲ್ಲಿ ಅಪಭ್ರಂಶವಾಗಿ ಕೇಳಲು ಒಂಥರ ವಿಚಿತ್ರವಾಗಿರುತ್ತದೆ. ರೆಮ್ಯ ,ಸದೀಶ,ಇನ್ನು ಸಿಲ್ಕ್ ಸ್ಮಿತ ಅಂತು ಅವರ ಬಾಯಲ್ಲಿ ಸಿಲ್ಗ್ ಸ್ಮಿದ ವಾಗುತ್ತದೆ ...!ಅದು ಅವರ ಸ್ಪೆಷಾಲಿಟಿ !
ಇನ್ನು ನಮ್ಮ ಹೆಸರಿಗೆ ಬಂದರೆ , ಸಾಮಾನ್ಯವಾಗಿ ಎರಡು ಪದ ಇರುವ ಹೆಸರುಗಳು. ಕೆಲವರಿಗೆ ಮಾತ್ರ ಅವರ ಅಜ್ಜನ, ಸರ್ ನೆಮ್ ಸೇರಿ ಒಂದೂವರೆ ಲೈನ್ ಆಗುವ ಸಾಧ್ಯತೆ ಇರುತ್ತದೆ .ನನ್ನ ಗೆಳೆಯನೊಬ್ಬ ಯಾವುದೇ ಅಪ್ಲಿಕೇಶನ್ ತುಂಬಿಸುವಾಗ ಅವನ ಹೆಸರು ಬರೆಯುವಾಗ  ಪಡುವ ಪಾಡು ಬೇರೆಯೇ!! ಏಕೆಂದರೆ 
ಅವ್ನ ಹೆಸರು  ಕೃಷ್ಣ ಕುಮಾರ್ ಲಕ್ಷ್ಮಿ ನಾರಾಯಣ ಮತ್ತೂ  ಒಂದು ಸರ್ ನೇಮ್  ಬೇರೆ!!!

ಅಂದ ಹಾಗೆ ನನ್ನ ಹೆಸರೇನು ಕೇರಳೀಯರ ಹಾಗೆ ಸಣ್ಣದಲ್ಲದಿದ್ದರೂ, ಗೆಳೆಯನ ಷ್ಟೂ   ಉದ್ದವಿಲ್ಲ.  ಆದ್ರೆ ಪ್ರಾಬ್ಲಂ ಇದ್ದದ್ದು  ಅದರ ಅಕ್ಷರಗಳಲ್ಲಿ !! ಏಕೆಂದರೆ ನನ್ನ ಮೊದಲನೆಯ ಹೆಸರಿನ ಆರಂಭದ ಅಕ್ಷರಗಳು ಇಂಗ್ಲಿಶ್ ವರ್ಣಮಾಲೆಯ ಮೊದಲಿನ ಮೂರೂ ಅಕ್ಷರವನ್ನು ಒಳಗೊಂಡಿದೆ. ಎ ಬಿ ಡಿ .!! ಇದರಿಂದಾಗಿ  ಇದುವರೆಗೆ ನನಗಿಂತ ಮೊದಲು,rank ನಲ್ಲಿ   ಅಲ್ಲದಿದ್ದರೂ ರೂಲ್ ನಂಬರಿನಲ್ಲಿ ಯಾರು ಬರಲಿಲ್ಲ !!  first ನಂಬರ್ ಯಾವಾಗಲೂ ನಂಗೆ resarved!! ಇದರಲ್ಲಿ ನನಗೆ ಅನುಕೂಲಕ್ಕಿಂತ  ಕಷ್ಟವೇ ಜಾಸ್ತಿ ಯಾಗಿತ್ತು .

ಶಾಲೆಯಲ್ಲಿರುವಾಗ ಎಕ್ಸಾಮ್ ಹಾಲಲ್ಲಿ ಮೊದಲೆನೆಯ ವ್ಯಕ್ತಿ ನಾನೇ ಆಗಿದ್ದೆ! ಅದು ನನ್ನ ಸ್ನಾತಕೋತ್ತರ ತರಗತಿಯವರೆಗೆ ಮುಂದುವರೆದಿತ್ತು.. ಆಚೀಚೆ ನೋಡಿದರೆ ನಾನೇನು ಮಾಲ್ ಪ್ರಾಕ್ಟೀಸ್ ಮಾಡುತಿದ್ದೇನೆ ಅಂತ ಚೆಕ್ ಮಾಡುತಿದ್ದರು. ಇನ್ನು ಇನ್ವಿಜಿಲೆಟಾರ್ ನ ಮುಖ ನೋಡಿದರೆ ಅಡಿಶನಲ್ ಶೀಟ್ ಬೇಕಾ, ಅಥವಾ ನೀರು ಬೇಕಾ ಅಂತಾ ಕೇಳುತಿದ್ದರು.
ಇನ್ನು ಪೇಪರ್ ಕೊಡುವಾಗ ನಮಗಂತೂ ಲೇಟ್  ಆದರೂ ಹಿಂತಿರುಗಿಸುವಾಗ exact ಟೈಮಿಗೆ ಕೊಡಬೇಕು ಅನ್ನುವುದು ನಮಗೆ ಮಾತ್ರ ವಿಧಿಸಿದ ನಿಯಮ! ನಮ್ಮ  ನಂತರದವರಿಗೆ ಬೇಕಾದರೆ ವಾಕ್ಯ ಬಿಡಿ ಉತ್ತರವನ್ನೇ ಮುಗಿಸುವಷ್ಟು ಟೈಮ್ ಕೊಟ್ಟು ಬಿಡುತಿದ್ದರು.
ಎಕ್ಸಾಮ್ ಮುಗಿದು ವ್ಯಾಲುವೇಶನ ಆದ ಪೇಪರನ್ನು ನಮಗೆ ಹಿಂತಿರುಗಿಸಿ  ಕೊಡುವಾಗ  ಮೊದಲು ನನ್ನ ಪೇಪರ್ ಕೊಡುತಿದ್ದರಿಂದ ಮಾರ್ಕ್ ಹೇಳಲಿ ಬಿಡಲಿ ನನ್ನ ಮಾರ್ಕ್ ಅಂತು ಎಲ್ಲರಿಗು ಗೊತ್ತಾಗಿ ಬಿಡುತಿತ್ತು.

ಇನ್ನು  ಪಿಯು ಕಾಲಿಟ್ಟಾಗ ಹೆಚ್ಚಿನವರು  ನನಗೆ absent ಹಾಕ್ತ ಇದ್ದರು.ಯಾಕಂದ್ರೆ ಲೆಕ್ಚರ  ಅಟೆ0ಡಸ್ ಹಾಕುವುದು ಬಿಡಿ ಅವರು ಕ್ಲಾಸಿಗೆ ಬರ್ತಾ ಇದ್ದದು ಗೊತ್ತಾಗ್ತಾ ಇರಲಿಲ್ಲ...!ಅಷ್ಟು ಹರಟೆ!!
ಇನ್ನು ಲ್ಯಾಬಿಗೆ ಹೋಗುವಾಗಲು ಅಷ್ಟೇ. ಸೈನ್ಸ್ ನಲ್ಲಿ ಹುಡುಗಿಯರ ಸಂಖ್ಯೆ ನಮಗಿಂತ ಜಾಸ್ತಿಯಾಗಿರುವುದರಿಂದಲೋ ಏನೋ ಅವರದ್ದೇ ಪಾರುಪತ್ಯ. ಅವರಿಡೀ  ಲ್ಯಾ ಬಿನ ಬಾಗಿಲಿಗೆ ಅಡ್ಡವಾಗಿ ನಿಂತು ನಾವು ಅವ್ರ ಹಿಂದೆ ನಿಲ್ಲುವ ಹಾಗೆ ಮಾಡ್ತಾ ಇದ್ದರು. ಇದರಿಂದ ಅಟೆ0ಡಸ ಕರೆದಾಗ ಒಳ ಹೋಗಲಾಗದೆ ಎಲ್ಲರ ಮುಂದೆ ಸದಾ ಮೇಡಂ ನವರಿಂದ ಮಂಗಳಾರತಿ ಯನ್ನು ಸ್ವೀಕರಿಸುತ್ತಿದ್ದೆ!!

ಅದೆಲ್ಲವನ್ನು ನಾವು ಇರಲಿ ಅಂತ ಬಿಡಬಹುದೇನು .. ಆದರೆ Viva, interview ನಲ್ಲಿ ನನ್ನಂತವರ ಅಂದರೆ ಮೊದಲ ನಂಬರಿನವರ   ಸ್ಥಿತಿ   ನೀವು ನೋಡಿದ್ರೆ  ಅಯ್ಯೋ ಪಾಪ ಅನ್ನಬಹುದೇನು ?! External ಆಗಿ ಬಂದವರಿಗೆ ನಮ್ಮನ್ನು ಏನು ಪ್ರಶ್ನಿಸಬೇಕೆಂದು  ತೊಚದೆ ನಮ್ಮನ್ನೇ ಗಲಿಬಿಲಿಗೊಳಿಸಿಬಿಡುತ್ತಾರೆ. ಮಾತ್ರವಲ್ಲದೇ ಅರ್ಧ ಗಂಟೆಗಿಂತಲೂ ಹೆಚ್ಚು ಸಮಯ ತೆಗೆದು ಮೊದಲೇ ಟೆನ್ಶನ್  ನಲ್ಲಿ ಇರುವ ನಮ್ಮ  ಇಡಿ ಪ್ರಾಕ್ಟಿಕಲ್  ಎಕ್ಸಾಮ್ ತೋಪೆದ್ದು ಹೋಗುತ್ತೆ!
ನಮ್ಮ ನಂತರದವರಿಗೆ ಐದೋ ಹತ್ತೋ ನಿಮಿಷದಲ್ಲಿ ಒಳ್ಳೊಳ್ಳೆಯ ಪ್ರಶ್ನೆಯನ್ನು ಕೇಳಿ ಕಳುಹಿಸಿಬಿಡುತ್ತಾರೆ.  ಏಕೆಂದರೆ ಸಮಯದ ಅಭಾವ !!
ಇವಿಷ್ಟು ನನ್ನ ಹೆಸರಿನ ಸಮಯಾದ್ರೆ , ಇನ್ನು ನನ್ನ ಹೆಸರಿನ ಮೊದಲಾರ್ಧದಿಂದ ಯಾರಾದ್ರು ನನ್ನನು  ಕರೆದರೆ ನನಗೆ ನನ್ನದಲ್ಲ ಅನ್ನುವ ಭಾವನೆ! ಇನ್ನು ಅವರನ್ನು ಕಂಡು ಹೆಸರಿನ ಎರಡನೆ ಭಾಗವನ್ನು ಕರೆಯಿರಿ ಅನ್ನುವ ಬೇಡಿಕೆ ಯನ್ನು ಸಲ್ಲಿಸಬೇಕಿತ್ತು !! ಕೆಲವೊಮ್ಮೆ ನಾನೇ ಹೆಸರನ್ನು ತಿರುಗ ಮುರುಗಾ ಬರೆದದ್ದು ಇದೆ!(ಬ್ಲಾಗಲ್ಲಿ ಬರೆದ ಹಾಗೆ)


ಒಟ್ಟಿನಲ್ಲಿ ಅರೇಬಿಕ್  ಮೂಲದಿಂದ ಬಂದ ನನ್ನ ಹೆಸರಿನ ಮೊದಲಾರ್ದ ದೇವನ  ದಾಸ ಅನ್ನೋ ಅರ್ಥ 
ಇದ್ದರೆ, ಎರಡನೆಯ ಭಾಗ    ಮಂತ್ರಿ  ಅಥವಾ ಉನ್ನತ ಅಧಿಕಾರಿ ಅಂತ ಅರ್ಥ ವಿರುವ  ಶಬ್ದ ಮಾತ್ರ ಪರ್ಷಿಯನ್ ಮೂಲದ್ದು!!



Wednesday, 14 March 2012

ಭದ್ರಾ ದಂಡೆಯಲ್ಲಿ!




ಮೊದಲ ದಿವಸ ಗೆಸ್ಟ್ ಹೌಸ ನಲ್ಲಿ ತಂಗಿದ್ದ ನಮಗೆ ಅವತ್ತು ಕುವೆಂಪು ಕ್ಯಾಂಪಸ್ ನಿಂದ 5 ಕಿಲೋ ಮೀಟರ್ ದೂರವಿರುವ ಹಾಸ್ಟೆಲ್ಗೆ ಕಾರಿನಲ್ಲಿ ಬಿಟ್ಟರು. ರಾತ್ರಿಯ ಗಾಢಾಂಧಕಾರದಲ್ಲಿ ನಮಗೆ ಏನು ಕಾಣುತಿರಲಿಲ್ಲ. ಹಳೆಯ ಕೋಟೆಯ ತರವಿರುವ ಬಾಗಿಲನ್ನುದಾಟಿ ನಮ್ಮ ರೂಮಿಗೆ ಬಂದೆವು . ಹೊಸ ಮಂಚ, ಬೆಡ್ಡುಗಳ ಹಳೆಯ ರೂಮು.! ಒಂದೇ ರೂಮಲ್ಲಿ ನಾಲ್ಕೈದು ಮಂಚಗಳಿದ್ದು, ನಾವು ಮೂರೇ ಜನವಿದ್ದರಿಂದ, ನಮ್ಮ ರೂಮಿಗೆ ಏಕಾಂಗಿಯಾಗಿ ಬೆಂಗಳೂರು ಯುನಿವರ್ಸಿಟಿಯಿಂದ ಬಂದ ಒಬ್ಬರು ಸೇರಿಕೊಂದರು. ಹಾಗೆ ಹೊರಗೆ ಕಣ್ಣು ಕುರುಡಾಗುವಷ್ಟು ಕತ್ತಾಲಾಗಿದ್ದರಿಂದ, ಬೆಡ್ ಮೇಲೆ ಬಿದ್ಕೊಂಡೆವು. ಮಾತಾಡುತ್ತ ಗೆಳೆಯರುಮಲಗಿಬಿಟ್ಟರು!

ಬೆಂಗಳೂರಿನ ವ್ಯಕ್ತಿ ಬಹಳ ದೈವ ಭಕ್ತಿಯುಳ್ಳ ವ್ಯಕ್ತಿ ಮಾತ್ರವಲ್ಲ ಅದನ್ನು ಪ್ರೀಚ್ ಮಾಡುವುದರಲ್ಲಿಯೂ ತುಂಬಾ ಆಸಕ್ತಿಯುಳ್ಳವನಾಗಿದ್ದ! ನನ್ನ ಕಣ್ಣುಗಳು ನಿದ್ದೆಗೆಳೆಯುತಿದ್ದರೂ, ಮನುಷ್ಯ ನನ್ನನ್ನು ಬಿಡುವಂತೆ ಕಾಣಲಿಲ್ಲ. ಮಧ್ಯ ರಾತ್ರಿಯ ಜೀರುಂಡೆಯ ಶಬ್ದ ಕಿವಿಗೆ ಸಂಗೀತದ ನಿನಾದಂತೆ ಕೇಳುತಿದ್ದರೆ, ಮನುಷ್ಯ ಸ್ವರ್ಗ ನರಕ ಅಂತ ನನ್ನನ್ನು ಭಯದಲ್ಲಿರಿಸುವಂತೆ ಕಂಡಿತು!! ಎಷ್ಟು ಮಾತನಾಡಿದರೂ ಅದು ಮುಗಿಯುವಂತೆ ಕಾಣಲಿಲ್ಲ ಮಾತ್ರವಲ್ಲ ಅಸಾಮಿಗೆ ನಿದ್ದೆ ಬರುತ್ತಲೂ ಇರಲಿಲ್ಲ!! ಹಾಗೂ ಹೀಗೂ ಮಧ್ಯ ರಾತ್ರಿ ಕಳೆದ ನಂತರ ನನಗೆ ನಿದ್ದೆ ಹತ್ತಿತು. ಬೆಳಗೆ ಅವನಿಗಿಂತ ಬೇಗನೆದ್ದು ತಣ್ಣೀರಲ್ಲಿ ಸ್ನಾನ ಮಾಡಿ, ಗೆಳೆಯರನ್ನು ಎಬ್ಬಿಸಿದೆ!!

ಮತ್ತೆ ನಾವು ಬೆಳಗಿನ ಸುಂದರ ಪ್ರಕೃತಿಯ ದೃಶ್ಯಗಳನ್ನು ಸವಿಯುತ್ತಾ ವಾಕಿಂಗ್ ಹೋಗಲು ಪ್ರಾರಂಬಿಸಿದೆವು.. ಪೂರ್ವದಲ್ಲಿಸೂರ್ಯ ಆಗಷ್ಟೇ ಮಂಜಿನ ಮುಸುಕಿನ ಮರೆಯಿಂದ ಕಣ್ಣು ಬಿಟ್ಟಂತೆ, ಮೇಲೇಳುತಿದ್ದ! ದೂರಕ್ಕೆ ಶಿಖರಗಳ ಮದ್ಯೆ!! ಕಣ್ಣುಹಾಯಿಸಿದಷ್ಟು ಬರೀ ಬಯಲಂತೆ ಕಾಣುವ ಗದ್ದೆಗಳು. ಬೆಳಗಿನ ಚಳಿಯನ್ನು ಲೆಕ್ಕಿಸದೆ, ದನಗಳನ್ನು ಮೇಯಿಸಲು ತಂದ ರೈತಾಪಿಜನ, ಮತ್ತು ಅವರ ಮಕ್ಕಳು!!

ಹಾಗೆ ಅಲ್ಲಿಂದ ನಮ್ಮ ರೂಮಿನ ಪಶ್ಚಿಮಕ್ಕೆ ಹೊರಟು ನಿಂತಾಗ ಭದ್ರ ಜಲಾಶಯ ವಿತ್ತು!! ರಾತ್ರಿಯಿಡಿ ಅಲ್ಲಿ ಇದ್ದ ನಮಗೆ ಅಲ್ಲೇ ಒಂದು ಡ್ಯಾಮ್ ಇದೆ ಅನ್ನುವುದೂ ಗೊತ್ತಿರಲಿಲ್ಲ! ಹಾಗೆ ಎಲ್ಲರೂ ಹುರುಪಿನಿಂದ ಆ ಕಡೆ ಹೊರಟೆವು.! ನಮಗೆ ನಾವೇ ಗೈಡ್ ಎಂಬಂತೆ, ತೋಚಿದ್ದೇ ದಾರಿಯೆಂಬಂತೆ ನಡೆದೆವು. ಗದ್ದೆಗಳನ್ನು ದಾಟಿ, ಗುಡ್ಢವನ್ನೇರಿ, ಅಂತೂ ಜಲಾಶಯದಲ್ಲಿಗೆ ಮುಟ್ಟಿದೆವು!! ಅಪಾರ ಜಲರಾಶಿ, ಅದರಾಚೆಗೆ ಅರ್ಧ ಮುಳುಗಿದಂತೆ ಕಾಣುತಿದ್ದ ಕಾಡು! ಅಂದ ಹಾಗೆ ಅದು ಭದ್ರ ರಿಸರ್ವ್ ಫಾರೆಸ್ಟ್! ಅದರ ಒಂದು ಬದಿಯಲ್ಲಿರುವುದು, ಅಂದರೆ ದಕ್ಷಿಣದ ತುದಿಯಲ್ಲಿರುವುದು ಕುವೆಂಪು ಯುನಿವರ್ಸಿಟಿ ಕ್ಯಾಂಪಸ್! ಕೆಲವೊಮ್ಮೆ ಕಾಡು ಪ್ರಾಣಿಗಳು ಈ ಹಿನ್ನಿರಲ್ಲಿ ಬಂದು ನೀರು ಕುಡಿದು, ಮಿಂದು ಹೋಗುತ್ತವೆ ಅಂತೆ!! ಒಮ್ಮೆಗೆ ಯೋಚಿಸುವಾಗ ಎದೆ ಡವಗುಟ್ಟಲು ಪ್ರಾರಂಭಿಸಿತು! ಈಗೆಲ್ಲಾದರೂ ನಮ್ಮ ಬೆನ್ನ ಹಿಂದೆ ಪ್ರಾಣಿಗಳು ಬಂದರೆ ಒಂದಾ ಕಣ್ಣೆದುರುವಿಗಿರುವ ನೀರು , ಇಲ್ಲದಿದ್ದರೆ ಪ್ರಾಣಿಗಳ ಬಾಯಿ. ಅದನ್ನು ನೆನೆದು ಏನೋ ಡ್ಯಾಮ್ ನ ಹತ್ತಿರವಿದ್ದ ನಾವೆಲ್ಲರೂ ರೂಮಿನ ಕಡೆ ಹೊರಟೆವು!

ಮತ್ತೆ ಯುನಿವರ್ಸಿಟಿಯ ಕಾರ್ಯಕ್ರಮವನ್ನು ಮುಗಿಸಿ, ನಮ್ಮೂರ ಕಡೆ ಹೊರಟಾಗ, ಮಲೆನಾಡ ದೃಶ್ಯ ಕಾವ್ಯವು ನಮ್ಮ ಎದೆಯನ್ನು ಭಾರದಲ್ಲಿರಿಸುವಂತೆ ಮಾಡಿತು ! ಆದರೂ ನಮ್ಮ ಊರು ನಮಗಾಗಿ ಕಾಯುತ್ತಿತ್ತು!!

Wednesday, 29 February 2012

ಕುವೆಂಪು ಕ್ಯಾಂಪಸ್ಸಲ್ಲಿ..!

ಅಬ್ಬ! ಬಸ್ಸು ಹತ್ತಿ ನಿಟ್ಟುಸಿರು ಬಿಡಬೇಕು ಅನ್ನುವಷ್ಟರಲ್ಲಿ, ಸ್ಸು ಸರಿಯಿಲ್ಲ ಎನ್ನುವ ಸುದ್ದಿ ನಮ್ಮನ್ನು ಒಂಥರಾ ಸಂದಿಗ್ದ ಸ್ಥಿತಿಗೆತಳ್ಳಿತು. ಅದಾಗಲೇ ಸಂಜೆ ಬೇರೆಯಾಗಿತ್ತು. ಅಲ್ಲಿ ನಮ್ಮ ರೂಮಿನ ವ್ಯವಸ್ಥೆ ಎನೊಂಥಾ ಗೊತ್ತಿರಲಿಲ್ಲ.. ಆಗ ದೇವರೇ ಕಳಿಸಿದಂತೆಮತ್ತೊಂದು ಬಸ್ಸು ಬಂತು.. ನಮ್ಮ ಗಂಟು ಮೂಟೆಯನ್ನು ಹೊತ್ತುಕೊಂಡು ಆ ಬಸ್ಸಿಗೆ ಹತ್ತಿದೆವು.. ಅಬ್ಬ ಎರಡು ಬಸ್ಸಿನ ಜನತುಂಬಿಯಾಗಿತ್ತು.. ನಾವೆಲ್ಲರೂ ಹತ್ತಿ ಡ್ರೈವರನ chamber ತರವಿರುವ ಸ್ಥಳದಲ್ಲಿ ನಿಂತೆವು..! ಇನ್ನೂ ಜನ ಹತ್ತುತಲೇ ಇದ್ದರು. ಅಂತೂ ಡ್ರೈವರ್ ಸೀಟಿನ ಡೋರ್ ಒಪನಾಗಿ ಅಲ್ಲಿಂದ ಒಬ್ಬ ಹತ್ತಿದಾ ಸ್ವಲ್ಪ ಸಮಾಧಾನವಾಯಿತು. ಡ್ರೈವರ್ ಹತ್ತಿಯಾಯಿತಲ್ಲ,ನ್ನು ಬಸ್ಸು ಹೊರಡಬಹುದೆಂದು.! ಆದರೆ ಹತ್ತಿದವ ಡ್ರೈವರ್ ಆಗಿರದೆ ಕಂಡಕ್ಟರಾಗಿದ್ದ! ಅವ ನಮ್ಮಿಂದ ಹಣ ತಗೊಂಡು, ಸ್ಥಳ ವಿಲ್ಲದ ಬಸ್ಸಲ್ಲಿ ಜಾಗ ಮಾಡುತ್ತಾ ಹೋದ.

ಬಸ್ಸಲ್ಲಿ ಎಲ್ಲರು ನಮ್ಮೊಟ್ಟಿಗೆ ಇದ್ದ ಗೆಳತಿಯರನ್ನೇ ಎವೆಯಿಕ್ಕದೆ ನೋಡುತಿದ್ದರು. ಅವರ ನೋಟ ನೋಡುವಾಗ, ಇವರೆಲ್ಲಿಂದಲೋಬೇರೆ ಗ್ರಹದಿಂದ ಬಂದವರೋ, ಅಥವಾ ಮನುಷ್ಯರ ಥರ ಕಾಣುತ್ತಿರಲಿಲ್ಲವೋ ಏನೋ ಅಂತ ಅನ್ನಿಸುವಂತಿತ್ತು!ಹಾಗೆ ಬಸ್ಸುಹೊರಡಿತು. ಮತ್ತೆ ತೂರಾಡುತ್ತ, ಅಲ್ಲಲ್ಲಿ ನಿಲ್ಲಿಸುತ್ತಾ ಸಾಗಿದ ಬಸ್ಸು ಶಂಕರ ಘಟ್ಟ ಮುಟ್ಟಿತು! ಅಲ್ಲಿಯೇ ನಾವಿಳಿಯಬೇಕಾದದ್ದು . ಅಲ್ಲಿಂದ ಮುಂದೆ ನಾವು, ನಮಗಾಗಿ ಬಂದಿದ್ದ ಇಬ್ಬರ ಎಸ್ಕಾರ್ಟ್ ನೊಂದಿಗೆ university ಕ್ಯಾಂಪಸ್ ಗೆ ಹೋದೆವು.. ಅಲ್ಲಿಲೇಡಿಸ್ ಹಾಸ್ಟೆಲಲ್ಲಿ ಹುಡುಗಿಯರನ್ನು ಬಿಟ್ಟು, ನಮ್ಮನ್ನು guest house ಗೆ ಕರ್ಕೊಂಡು ಹೋದರು.. ಅಲ್ಲಿ ನಾವು ಮೂರೂ ಜನಹುಡುಗರಿಗೆ ಒಂದು ರೂಮನ್ನು ಕೊಟ್ಟಾಗ, ರೂಮನ್ನು ಕಂಡ ನಮಗೆ ಕುಶಿಯೋ ಕುಶಿ..! ಸ್ವಲ್ಪ ನಂತರ ಗೊತ್ತಾಗಿದ್ದು ಈ ಒಂದುರಾತ್ರಿ ಮಾತ್ರ ಅಂತ..!

ಬೆಳಿಗೆದ್ದು ನಮ್ಮ ಬ್ಯಾಗನ್ನು ಪ್ಯಾಕ್ ಮಾಡಿ ಹುಡುಗಿಯರ ಹಾಸ್ಟೆಲಲ್ಲಿ ಇಟ್ಟು, ಕ್ಯಾಂಪಸ್ ಪಯಣ ಆರಂಬಿಸಿದೆವು!! ರಾತ್ರಿಯ ಭೀಕರಕತ್ತಲಲ್ಲಿ ಕಾಣದ ಪ್ರಕೃತಿಯ ಸೌಂದರ್ಯ, ಬೆಳಗಿನ ಮಂಜಿನಲ್ಲಿ ಮುಸುಕಿತ್ತು.. ಸೂರ್ಯ ಪೂರ್ವದಲ್ಲಿ ಮೇಲೇರುತಿದ್ದಂತೆ,ಪ್ರಿಯಕರನ ಸ್ಪರ್ಶಕ್ಕೆ ಎಂಬಂತೆ ತಣ್ಣನೆ ಹಿಮ ಕರಗುತ್ತಿತ್ತು. ಅಬ್ಬ!! ಆಗಲೇ ನಮಗರಿವಾದದ್ದು ರಾತ್ರಿ ನಾವಿದ್ದದ್ದು ಭದ್ರಅರಣ್ಯದಂಚಿನಲ್ಲಿ ಅಂತ!! ಪ್ರಕೃತಿಯ ಮಡಿಲಲ್ಲಿ ಮಲಗಿದಂತಿದ್ದ ಕ್ಯಾಂಪಸ್, ತನ್ನದೇ ಶಿಲ್ಪ ಕಲೆಗೆ ಮನ ಸೋಲುವಂತೆಮಾಡಿತ್ತು!! ಡೈನೋಸಾರ್, ಜಿರಾಫೆ, ಆನೆ, ಕುದುರೆಯ ಶಿಲ್ಪ ಗಳು ಹಸಿರು ಪ್ರಕೃತಿಯ ಮಧ್ಯೆ ನಿಜವಾದ ಪ್ರಾಣಿಗಳನ್ನೇಹೋಲುತಿತ್ತು..! ಹಾಗೆ ಕ್ಯಾಂಪಸ್ ಗೆ ಒಂದು ಸುತ್ತು ಬರುವಷ್ಟರಲ್ಲಿ ಬೆಳಗಿನ ಟೀ ಯ ಸಮಯವಾಯಿತು. ಮಲೆನಾಡಿನ ಕಾಫಿಅಂದರೆ ಅದು ಹತ್ತರಿಂದ ಇಪ್ಪತ್ತು ml ಇರಬಹುದು. ಕರಾವಳಿಯವರಾದ ನಮಗೆ ಅದು ಗಂಟಲಿಗೆ ತಾಕದಂತಿತ್ತು!!

ಹಾಗೆ ತಿಂಡಿ ತಿಂದು , inaugral ಪ್ರೊಗ್ರಾಮ್ ಆದ ಕೂಡಲೇ ನಮ್ಮ ಗೆಳತಿಯರಲ್ಲಿ ಕೆಲವರು ನಾಪತ್ತೆ! ಅವರಲ್ಲಿ ಹೆಚ್ಹಿನವರುರೂಮಲ್ಲಿ ಹೋಗಿ ಬೆಡ್ಡಲ್ಲಿ ಬಿದ್ಕೊಂಡಿದ್ದರು!!! ನಾವು ಬೇರೆ ದಾರಿ ಕಾಣದೆ ಅಲ್ಲೇ ಸೆಮಿನಾರ್ ಹಾಲಲ್ಲಿ ಸಂಜೆಯವರೆಗೂಕುಳಿತೆವು.. ಪೋಸ್ಟರು,ಡಾನ್ಸ್, ಹೀಗೆ ಸಂಜೆಯ ಪ್ರೋಗ್ರಾಮ್ ಕಳೆಯುವಷ್ಟರಲ್ಲಿ ಊಟಕ್ಕಾಗಿ ಕಾಯುವ ಸರದಿ. ಊಟದ ನಂತರಅವತ್ತಿನ ಕಾರ್ಯಕ್ರಮ ಮುಗಿದು ರೂಮಿನ ಕಡೆ ಹೆಜ್ಜೆ ಹಾಕಿದೆವು!!!

ಹಿಂದಿನ ರಾತ್ರಿ ಗೆಸ್ಟ್ ಹೌಸಲ್ಲಿ ಕಳೆದ ನಾವು ಮೂವರು ಹುಡುಗರು, ಈಗ ಅಲ್ಲಿಂದ ಐದಾರು ಕಿಲೋ ಮೀಟರ್ ದೂರವಿರುವಹಾಸ್ಟೆಲಿಗೆ ಹೋಗಬೇಕಾಗಿತ್ತು!!!

Monday, 20 February 2012

ಭದ್ರಾ ದಂಡೆಯತ್ತ...!

ಸಹ್ಯಾದ್ರಿ ಶ್ರೇಣಿಯ ಮೇಲೆ ಹಚ್ಹ ಹಸುರಿನಿಂದ ಕಂಗೊಳಿಸುರೇ ಶಿವಮೊಗ್ಗ.. ಈ ಊರನ್ನು ಮರೆತರೆ ಮಲೆನಾಡಿನಸೌಂದರ್ಯ ಸಂಪೂರ್ಣವಾಗಲಿಕ್ಕಿಲ್ಲ.! ಮಳೆಗಾಲದಲ್ಲಿ ದಾ ಜಿಟಿಜಿಟಿಯೆನ್ನುವ ಮಳೆ , ನೋಡಲು ತುಂಬಾ ಆಹ್ಲಾದಕರ.! ಪಾಪ ಅದನ್ನು ಸದಾ ಅನುಭವಿಸುವ ಅಲ್ಲಿಯವರ ಸ್ಥಿತಿ?! ಆ ಮಳೆಗೆ ಹಿಮ್ಮೇಳದಂತಿರುವ ಚಳಿ, ಬಿಸಿ ಕಾಫಿಯನ್ನು ನೆನಪಿಸುತ್ತದೆ. ಹಾಗೆಆ ಮಲೆನಾಡಿಗೆ ಹೋದಾಗಲೆಲ್ಲಾ ಅಲ್ಲಿಯ ಪ್ರಕೃತಿ ಯ ಸೊಬಗು ಕಂಡು ಕುವೆಂಪು ಕವನ, ಕಾದಂಬರಿಗಳ ಸಾಲುಗಳು ಒಂದರಮೇಲೊಂದರಂತೆ ಬರುತ್ತದೆ. ತೇಜಸ್ವಿಯ ಸಾಹಸ ಕಥೆಗಳ ವರ್ಣನೆ ಕಣ್ಣಿಗೆ ಕಟ್ಟುತದೆ.

ಹಲವು ಬಾರಿ ಈ ಊರಿಗೆ ಹೋಗಿರುವೆನಾದರೂ,MSc ದಿವಸದಲ್ಲಿ presentation ಗೆ ಅಂತ ಕುವೆಂಪು ಯುನಿವೆರ್ಸಿಟಿ ಗೆಭೇಟಿಗೊಟ್ಟ ಕ್ಷಣ ಮರೆಯಲಾಗದ್ದು!!

ನಾವು ಹದಿನಾರು ಜನ ಗೆಳೆಯ, ಗೆಳತಿಯರು ಮೂರೂ ದಿವಸದ ವಿಜ್ಞಾನ ಸಮಾವೇಶಕ್ಕೆ ಹೊರಡಲು ತಿರ್ಮಾನಿಸಿದ್ದೆವು.

ಹಾಗೆ ಸಮಾವೇಶದ ಮುನ್ನಾ ದಿನ ಮಧ್ಯಾಹ್ನದ ಹೊತ್ತಿಗೆ ಹೊರಡುವುದು ಅಂದುಕೊಂಡು ಬಸ್ ಸ್ಟಾಂಡಿಗೆ ಬಂದಾಗ, ನಾಲ್ಕು ಜನಹುಡುಗಿಯರು ಕಾಣಲಿಲ್ಲ. ಅವರಲ್ಲೊಬ್ಬಳಂತೂ ಸಮಯ ಪ್ರಜ್ಞೆ ಗೆ ಹೆಸರಾದವಳು ಬೇರೆ! ಇಲ್ಲಿ ಉಳಿದ ಹುಡುಗಿಯರುಅಸಮಾದಾನಗೊಂಡು ಕಿರಿಕ್ ಮಾಡಲಾರಂಬಿಸಿದರು. ಕಾಲ್ ಮಾಡಿದಾಗ ಅವರು shimoga ಬಸ್ಸಲ್ಲಿ ಪ್ರಯಾಣಆರಂಭಿಸಿಯಾಗಿತ್ತು! ಅದು ಕೇಳಿದ ನಾರಿಮಣಿಗಳಿಗೆ ಸಿಟ್ಟೋ ಸಿಟ್ಟು! ಮತ್ತೆ ವಿಚಾರಿಸಿದಾಗ ಗೊತ್ತಾಗಿದ್ದು, ಅವರು ತಮ್ಮಹೊರಲಾಗದ ಲಗೇಜ್ ನೊಂದಿಗೆ ಬಸ್ ಸ್ಟಾಂಡಿಗೆ ಬಂದಾಗ, ಕಂಡಕ್ಟರ್ ನವರು ಎಲ್ಲಿಗೆ ಅಂತ ಕೇಳಿ, ಅವರ ಲಗೇಜನ್ನು ಬಸ್ಸಲ್ಲಿಇಟ್ಟುಬಿಟ್ಟಿದ್ದರು! ಬಸ್ ಬೇರೆ moove ಆಗಲು ಪ್ರಾರಂಬಿಸಿದಾಗ, ಏನು ತೋಚದೆ ಹತ್ತಿಬಿಟ್ಟರು! ಇದನ್ನು ಕೇಳಿದ ಉಳಿದ ನಮ್ಮಗೆಳತಿಯರ ಸಿಟ್ಟೆಲ್ಲ ಕ್ಷಣ ಮಾತ್ರದಲ್ಲಿ ಕರಗಿ, ಅನುಕಂಪದಿಂದ ಮರುಗಿದರು! ಪಾಪ ಅವರಿಗೆ ಬೋರಾಗಬಹುದೆಂದು!!

ಹಾಗೆ ನಾವೆಲ್ಲಾ ಬಸ್ ಹತ್ತಿ, ಸೀಟಿನಲ್ಲಿ ಕೂತಾಗ ಆ ಬಸ್ ಅರ್ಧ ತುಂಬಿಯಾಗಿತ್ತು! ಅಷ್ಟು ಸಣ್ಣ ಬಸ್!

ಹೀಗೆ ನಮ್ಮ ಬಸ್ಸು ಒಂದೊಂದೇ ಊರನ್ನು ಹಿಂದಿಕ್ಕಿ ಮತ್ತೊಂದು ಊರಿಗೆ ದಾಪು ಗಾಲಿಡುತಿತ್ತು.. ಹಾಗೆ ಉಡುಪಿ, ಮಣಿಪಾಲ್ ಎಲ್ಲ ದಾಟಿ, ಹೆಬ್ರಿಯನ್ನೂ ದಾಟಿ, ಆಗುಂಬೆ ಘಾಟಿ ಹತ್ತಲು ಆರಂಬಿಸಿತ್ತು! ಅದರಲ್ಲಿದ್ದ ತುಂಬಾ ಜನರಿಗೆ shimoga ಕಡೆ ಅದು ಪ್ರಥಮ ಪ್ರಯಾಣವಾಗಿತ್ತು! ಹಾಗೆ ಅಲ್ಲಿಯ ಪ್ರಕೃತಿ ರಮಣೀಯ ದೃಶ್ಯಕ್ಕೆ ಮಾರು ಹೋಗಿದ್ದರು! ಕೆಲವರಂತೂ ಬಸ್ಸು ಸಪೂರದ ದಾರಿಯಲ್ಲಿ ಹತ್ತುತಿರಬೇಕಾದರೆ, ಕೆಳಗೆ ತಲೆಯ ಬೈತಲೆಯಂತೆ ಕಾಣುತಿದ್ದ ಹೆಬ್ರಿಯ ರಸ್ತೆಯನ್ನು ನೋಡಿ ಕೌತುಕಗೊಂಡಿದ್ದರು. ಕೊನೆಯ ಸೀಟಲ್ಲಿ ಕೂತ ಕೆಲವರು ಬಸ್ಸಿನ ಕಿಟಕಿಯಿಂದ ಕೆಳಗೆ ನೋಡಿ, ಹೆದರಿಬಿಟ್ಟಿದ್ದರು! ಏಕೆಂದರೆ ಆಳವಾದ ಪ್ರಪಾತವನ್ನು ಕಂಡ ಅವರಿಗೆ ಜೀವ ಹೋದಂತಾಗಿತ್ತು.! ಹಸಿರು ತಳಿರಿನಿಂದ ಆವೃತವಾದ ಪ್ರಕೃತಿಯ ಮಧ್ಯ ಹಾದು ಹೋಗುವಾಗ ಒಂಥರಾ ಚಳಿಯ ಅನುಭವ ವಾಗಲು ಪ್ರಾರಂಭಿಸಿತ್ತು. ಹೀಗೆ ಬೆಂಕಿಪೊಟ್ಟಣ ದಂತಿದ್ದ ನಮ್ಮ ಬಸ್ಸು ಅಂತು ಶಿವಮೊಗ್ಗ ತಲುಪಿತು..!

ನಾವೆಲ್ಲಾ ಲಗೇಜನ್ನು ಹೊತ್ತು ಬಸಿನಿಂದಿಳಿಯುವಾಗ ನಮ್ಮನ್ನು ಅಲ್ಲಿಯ ಜನ ಹೊಸ ಗ್ರಹದಿಂದ ಬಂದ ಜೀವಿಗಳ ಹಾಗೆ ನೋಡಲುಆರಂಭಿಸಿದರು.. ಅಂದ ಹಾಗೆ ಅವರು ನೋಡುತಿದ್ದದು ನಮ್ಮನ್ನಲ್ಲ, ಹುಡುಗಿಯರನ್ನು! ಅವರ ನೋಟ ಕಂಡ ನಮ್ಮ ಗೆಳತಿಯರುಕಕ್ಕಾಬಿಕ್ಕಿ, ಕೆಲವರಿಗಂತೂ ಸಿಟ್ಟೇ ಸಿಟ್ಟು.!! ಹಾಗೂ ಹೀಗೂ ಅವರ ನೋಟವನ್ನು ತಪ್ಪಿಸಿ, ನಮಗಿಂತ ಬೇಗ ಮುಟ್ಟಿದ ನಮ್ಮಗೆಳತಿಯರನ್ನು ಹುಡುಕಿದಾಗ ಅವರ ಸ್ಥಿತಿ ಭಯಂಕರ! ತಮ್ಮ ಬ್ಯಾಗುಗಳನ್ನು ಇಡಲು ಆಗದೆ ಹೊರಳು ಆಗದೆ ಒಂದು ಕಡೆಚಡಪಡಿಸುತಿದ್ದರೆ, ಇನ್ನೊಂದು ಕಡೆ ಜನ ಅವರನ್ನು ನುಂಗುವಂತೆ ನೋಡುತಿದ್ದರು. ಅವರಿಗೆ ನಮ್ಮನ್ನು ಕಂಡ ಕೂಡಲೇ, ಹೋದಜೀವ ಬಂದಂತೆ ಭಾಸವಾಯಿತೇನೋ! ಏಕೆಂದರೆ ಚಿಂತಕ್ರಾಂತರಾಗಿದ್ದ ಅವರ ಮುಖ ಅರಳಿದಂತೆ ಕಂಡಿತು ! ಹಾಗೆ ಅವರನ್ನೂಕೂಡಿ ಹಂದಿ, ಕತ್ತೆಗಳ ಗುಂಪನ್ನು, ಮತ್ತೆ ನಮ್ಮನ್ನೇ ತಿನ್ನುವಂತೆ ನೋಡುತಿದ್ದ ಜನರನ್ನೂ ದಾಟಿ ಮುಂದೆ ಹೋಗುವಾಗ, ಜನಫುಲ್ ತುಂಬಿರುವ ಬಸ್ಸೊಂದು ರೊಯ್ಯನೆ ಬಂದು ತಿರುಗಿಸಿ ನಿಂತಾಗ ಗೊತ್ತಾಗಿದ್ದು ಅದೇ ಬಸ್ಸು ನಮ್ಮನ್ನು ಕುವೆಂಪುಯುನಿವೆರ್ಸಿಟಿಗೆ ಕೊಂಡೊಯ್ಯುದು ಅಂತಾ! ಅದನ್ನು ನೋಡಿದಾಗಲೇ ನಮ್ಮ ಗುಂಪಿಗೆ ತಲೆ ತಿರುಗಿದಂತಾಯಿತು!

ಅಂತು ಹೇಗಾದರೂ ಮಾಡಿ ಬಸ್ಸಲ್ಲಿ ಹತ್ತಿದೆವು!!!

(ಮುಂದೇನಾಯಿತು ಅಂತ ಮುಂದಿನ ವಾರದ ಬ್ಲಾಗಲ್ಲಿ ಬರೆಯುತ್ತೇನೆ! ಅಲ್ಲಿಯ ವರೆಗೂ take care!!! )



Monday, 13 February 2012

ಪ್ರೀತಿ ಇಲ್ಲದ ಮೇಲೆ...!

ಪ್ರೀತಿ ಅನ್ನುವುದು ಒಂದು ವಿಶಿಷ್ಟವಾದ ವಸ್ತು. ಇದು ವರ್ಷದ ಮುನ್ನೂರೈವತ್ತೈದು ದಿವಸಾನು ಇರಲೇಬೇಕಾದದ್ದು. ಅದಿಲ್ಲದೇ ಹೋದರೆ ಯಾವೊಬ್ಬನೇ ವ್ಯಕ್ತಿ ಬದುಕಲು ಸಾಧ್ಯವಿಲ್ಲ.

ಅಂದ ಹಾಗೆ ಪ್ರೀತಿಗೆ ಹಲವು ಮುಖ ಇದೆ. ಅದರಲ್ಲಿ ತಾಯಿಯ ಪ್ರೀತಿ ವಾತ್ಸಲ್ಯದಿಂದ ಕೂಡಿದರೆ, ಸಹೋದರಿಯ ಪ್ರೀತಿ ವಿಶ್ವಾಸದಿಂದ ಕೂಡಿರುತ್ತೆ. ತಂದೆಯ ಪ್ರೀತಿ ಭರವಸೆಯ ಮೇಲೆ ನಿಂತಿರುತ್ತದೆ. ಹೀಗೆ ಹಲವು ರೀತಿ. ಗೆಳೆಯ/ಗೆಳತಿಯ ಪ್ರೀತಿ ಮಾತ್ರ ನಮ್ಮಲ್ಲಿ ಆತ್ಮವಿಶ್ವಾಸ, ನೆಮ್ಮದಿ ಎಲ್ಲವನ್ನೂ ಕೊಡುತದೆ!

ಕೆಲವೊಮ್ಮೆ ನಾವು ಭ್ರಾಮಕ ಜಗತ್ತಿನಲ್ಲಿ ನಿಷ್ಕಲ್ಮಶ ಪ್ರೀತಿಯನ್ನು ತಪ್ಪಾಗಿ ಅರ್ಥೈಸುವುದುಂಟು.. ಹುಡುಗಿಯೊಬ್ಬಳು ಹುಡುಗನೊಂದಿಗೆ ನಕ್ಕು, ಮಾತಾಡಿದರೆ ಕೆಲವೊಮ್ಮೆ ಅವ ಗ್ರಹಿಸುವುದೇ ಬೇರೆ, ಇನ್ನು ಅವ ಹಾಗೆ ತಿಳಿಯದಿದ್ದರೂ, ಬೇರೆಯವರು ಬಣ್ಣಕಟ್ಟಿ ಇಲ್ಲದ್ದನ್ನೆಲ್ಲ ಪ್ರಚಾರ ಮಾಡುತ್ತಾರೆ. ಮತ್ತೆ ಕೆಲವರಿಗೆ attraction, infatuation ನನ್ನೇ ಪ್ರೀತಿ ಎಂದು ಗ್ರಹಿಸಿಬಿಡುತ್ತಾರೆ.
ಒಟ್ಟಿನಲ್ಲಿ ಪ್ರೀತಿ ಅನ್ನುವುದು ಅನೂಹ್ಯವಾದ ಒಂದು ಭಾವನೆ. ಅದು
ಎರಡು ಹೃದಯಗಳ ಮಧ್ಯ ಗಾಡವಾಗಿ ಬಂಧಿಸಲ್ಪಡುವಂತದ್ದು. ಅದು ಕೆಲವೊಮ್ಮೆ ಪ್ರೇಮವಾಗಿ ಮಾರ್ಪಾಡಾಗುತ್ತದೆ. ಆದರೆ ಪ್ರೀತಿಯೊಂದು ಸದಾ ಬೆನ್ನಿಗಿದ್ದರೆ ನಮಗೆ ಯಾವುದೇ ಮಾನಸಿಕ ಕ್ಲೇಶ ಇರಲು ಸಾಧ್ಯವಿಲ್ಲ.. ಪ್ರೀತಿಯು ಕೈ ತಪ್ಪಿದಾಗ ಅದೆಷ್ಟೋ ಜನ ಜೀವನವನ್ನೇ ಕೊನೆಯಾಗಿಸಿದ್ದುಂಟು. ಮತ್ತೆ ಕೆಲವಾರು ಜನರು ಪ್ರೇಮ ಕೈತಪ್ಪಿದ ದುಃಖವನ್ನು ಮರೆಯಲು positive ಆಗಿ ಕೆಲಸ ಮಾಡಿ, ಅದರಲ್ಲಿ ಯಶಸ್ಸು ಕಂಡವರಿದ್ದಾರೆ. ರಾಜಕಪೂರ್ ನ mera naam joker, ಪುಟ್ಟಣ್ಣ ಕಣಗಾಲ್ ನವರ ಮಾನಸ ಸರೋವರ ಸಿನಿಮಾ ಇದಕ್ಕೆ ತಕ್ಕ ಉದಾಹರಣೆ.

ಸಲ್ಮಾನ್, ರೇಖಾ ಹೀಗೆ ಬರೆದರೆ ಮುಗಿಯದಷ್ಟು ಜನ ಪ್ರೇಮವನ್ನು ಉಳಿಸಿಕೊಳ್ಳಲಾಗದವರಿದ್ದಾರೆ. ಮತ್ತೆ ಕೆಲವರು ಪ್ರೇಮ ವನ್ನು ನಿವೇದಿಸಿ ಕೊಳ್ಳಲಾಗದೆ ಕವಿ ಕೀಟ್ಸ ನಂತೆ ಸತ್ತವರಿದ್ದಾರೆ.. ಅದೆಲ್ಲಕಿಂತ ಹೆಚ್ಹಾಗಿ ಕಾಡುವ ಒಂದು ಕತೆ ಅಮೃತಾ ಪ್ರೀತಂ ನದ್ದು ಪಂಜಾಬಿನ ಕವಯತ್ರಿ ತನ್ನ ಪ್ರೇಮಿಯನ್ನು ಅರಸುತ್ತಾ ಮುಂಬೈ ತಲುಪಿ ಅವನಲ್ಲಿ ಪ್ರೇಮ ನಿವೇದಿಸಿದಾಗ, ಅದನ್ನು ಆತ ತಿರಸ್ಕರಿಸುತ್ತಾನೆ. ಬಾಲ್ಯದಿಂದಲೂ ಅವನ ಕವನ ಗಳನ್ನು ಓದಿ ಮನಸೋತು, ಕವಿಯಲ್ಲೇ ಅನುರಕ್ತಳಾದ ಈಕೆ, ಬಂದ ದಾರಿಗೆ ಸುಂಕವಿಲ್ಲವೆಂದು ಬಗೆದು ಹಿಂತಿರುಗಿದಳು. ಆತ ಬೇರ್ಯಾರು ಅಲ್ಲ. ಕಭಿ ಕಭಿಯಂತ ಹಾಡು ಬರೆದ ಖ್ಯಾತ ಕವಿ ಸಾಹಿರ್ ಲೂಧಿಯಾನ್ವೀ. ಇವಳು ಅದೇ ನೋವಿನಲ್ಲಿ ಹಿಂತಿರುಗಿದಾಗ ಸಿಕ್ಕಿದ್ದು ಅವಳನ್ನೇ ಪ್ರೀತಿಸುತಿದ್ದ ಕಲಾಕಾರ ಇಮ್ರೋಜ್.!! ಪ್ರೀತಿ ಅನ್ನುವುದು ಹಾಗೆ ನಾವಂದು ಕೊಂಡಂತೆ ಇರಲ್ಲ.

ಶುದ್ದ ಪ್ರೀತಿ ಅನ್ನುವುದು 'ಮಾರ್ಕೆಟ್' ಪ್ರಪಂಚದ ಬುಸ್ಸಿನೆಸ್ಸ್ ಅಲ್ಲ. ಸಂತ ವೆಲೆಂಟೈನನ ನಿಜವಾದ ಧ್ಯೇಯಕ್ಕೆ ಅಪಚಾರ ಎಸಗುವಂತದಲ್ಲ. ಷೇಕ್ಸಪಿಯರ್ ಹೇಳಿದ ಹಾಗೆ ಅದು ಕಾಲಕ್ಕೆ ತಕ್ಕಂತೆ ಬದಲಾಗದೆ ಶಾಶ್ವತ ವಾಗಿರುವಂತದ್ದು(fixed mark). 'Love is not time's fool'.

ನಾವಾದರೋ, 'ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲ್ಲಿ' ಎನ್ನುವ ಕವಿವಾಣಿ ಯಂತೆ ' ನಮ್ಮೊಳಗೇ ಇರುವ ಪ್ರೀತಿ ಸ್ನೇಹಗಳನ್ನು ಗುರುತಿಸಲಾರೆವು '. ಹೀಗೆ ಪ್ರೀತಿ ಅನ್ನುವುದು ಮರುಭೂಮಿಯಲ್ಲಿನ ಓಯಸಿಸ್ ನಂತೆ!

'ಪ್ರಿತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ?,ಮೋಡ ಕಟ್ಟಿತು ಹೇಗೆ? ಹನಿಯೊಡೆದು ಮಳೆಯ ಸುರಿಸಿತು ಹೇಗೆ?'

ಪ್ರೀತಿಯಿಲ್ಲದ ಮೇಲೆ ಬ್ಲಾಗನ್ನು ಬರೆಯುವುದು ಹೇಗೆ, ಮತ್ತೆ ನೀವು ಓದುವುದು ಹೇಗೆ!?

ಅಂದ ಹಾಗೆ ಮತ್ತೊಬ್ಬ ಕವಿ 'ಪ್ರೀತಿಯಿಲ್ಲದ ಮೇಲೆ ನಾವೇನು ಮಾಡಲಾರೆವು, ದ್ವೇಷವನ್ನೂ ಸಹ' ಅಂದಿದ್ದಾನೆ.

Monday, 6 February 2012

ಕಾವೇರಿಯ ನಾಡಲ್ಲಿ...


ಒಂದು ಕಾಲದಲ್ಲಿ ಅದು ನನ್ನ ಬೇಸಗೆಯ ಊರಾಗಿತ್ತು.. ಅದು ನಾನು ಇಷ್ಟಪಡುವ ಎರಡನೆಯ ಊರು. ಅಲ್ಲಿಯ ಚಳಿಗೆತತ್ತರಿಸಿದ್ದೇನೆ! ಕಾಫಿಯ ಕಂಪಿಗೆ ಮನಸೋತಿದ್ದೇನೆ! ಅಲ್ಲಲ್ಲಿ ಹರಿಯುವ ನೀರಿನ ಝರಿಗಳನ್ನು ಕಂಡುಬೆರಗುಗೊಂಡಿದ್ದೇನೆ! ಹೀಗೆ ನನಗು ಈ ಕಿತ್ತಳೆ ನಾಡಿನ ಸಂಬಂದ ಈಗಲೂ ಮುಂದುವರಿದಿದೆ. ಪುಷ್ಪಗಿರಿ ಬೆಟ್ಟದತುದಿಯಲ್ಲಿರುವ ಮರಗಳ ರಾಶಿ, ಮುಂಗಾರಿನ ಮಳೆಗೆ ಹೇಗೆ ಕಂಗೊಳಿಸುತ್ತದೆಂದರೆ ಸ್ವತಹ ಯೋಗರಾಜ್ ಭಟ್ಅದೇ ಹೆಸರಿನ ಫಿಲಂ ತೆಗೆದಿದ್ದಾರೆ.. ಹೀಗೆ ಪ್ರಕೃತಿಯ ಮಡಿಲಲ್ಲಿನ ಸೌಂದರ್ಯಕ್ಕೆ ಮಾರು ಹೋಗದವರುಯಾರಿದ್ದಾರೆ.?

ಕೊಡಗು ಅಂದಾಗ ಅಬ್ಬಿಯ ಭೋರ್ಗರೆತ ಕಣ್ಣಿನ ಮುಂದೆ ಬಂದು ನಿಲ್ಲುವುದು ಸಹಜ. ಅದೆಷ್ಟು ಬಾರಿ ಹೋದರೂ, ಆಜಲಪಾತ ನಮಗೆ ಬೋರೆನಿಸುವುದೇ ಇಲ್ಲ. ಮಾತ್ರವಲ್ಲ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ. ಒಮ್ಮೆ ನಾನು ನನ್ನಗೆಳೆಯರೊಟ್ಟಿಗೆ ಮಡಿಕೇರಿಯಿಂದ ನಡಕೊಂಡೆ 9 km ಹೋಗಿ ಅಲ್ಲಿಯ ಗುಡ್ಡ ಹತ್ತಿ, ನೀರಿನಲ್ಲಿ ಈಜಾಡಿ, ನಲಿದು ಪುನಃನಡಕೊಂಡೆ ಹಿಂತಿರುಗಿ ಬಂದಿದ್ದೆವು. ಆ ದಾರಿಯಾಗಿ ಹೋಗುವಾಗ ಮತ್ತು ಬರುವಾ ವಿಧ ವಿಧದ ಮರಗಳು, ಅದರಬಣ್ಣ ಬಣ್ಣದ ಹೂವುಗಳು, ಆ ಹೂವುಗಳತ್ತ ಆಕರ್ಷಣೆಗೊಂಡು ಮುತ್ತಿಕುವ ತರ ತರದ ಪತಂಗಗಳು, ಮತ್ತೆನೊಣಗಳನ್ನು ಬೆನ್ನಟ್ಟಿ ತಿನ್ನುವ ವಿಧ ವಿಧದ ಹಕ್ಕಿಗಳು ಈಗಲೂ ಸ್ಮೃತಿ ಪಟದಲ್ಲಿ ಹಚ್ಹ ಹಸಿರಾಗಿದೆ.

ಮತ್ತೊಮ್ಮೆ ಹೋದಾಗ ನವೋದಯ high school ವಿದ್ಯಾರ್ಥಿ ನೀರಿನಲ್ಲಿ ಬಿದ್ದು ನೀರು ಪಾಲಾಗಿದ್ದ. ಒಂದು ಕಡೆಅಬ್ಬಿಯನ್ನು ನೋಡಲಾಗದ ಬೇಸರ, ಮತ್ತೊಂದು ಕಡೆ ಅರಳಬೇಕಾದ ಮೊಗ್ಗು ನೀರಲ್ಲಿ ಮುರುಟಿ ಹೋಯಿತಲ್ಲಅನ್ನೋ ನೋವು..

ಮತ್ತೆ ಮಡಿಕೇರಿಯ ರಾಜ ಸೀಟಿನ ಸೂರ್ಯಾಸ್ತಮಾನ ನೋಡದೆ ಹಿಂತಿರುಗಿ ಬರುವುದಾದರೂ ಹೇಗೆ..?! ಗುಡ್ಡಗಳನಡುವೆ ಜಾರಿ ಹೋಗುವ ಸೂರ್ಯನನ್ನು, ಹುಲ್ಲಿನ ರಾಶಿಯ ಮೇಲೆ ಕೂತು ನೋಡುವುದೇ ಒಂಥ ಕುಷಿ. ಬಹುಶಅದಕ್ಕಾಗಿಯೇ, ರಾಜ ರಾಣಿಯರು ಸಹ ಇದೇ ಜಾಗದಲ್ಲಿ ಕೂತು ಸಂಜೆಯ ಸವಿಯನ್ನು ಸವಿದಿರಬಹುದು.. ಆದರೆಅಲ್ಲಿಯೆ ಹೊರಗೆ ಸಿಗುವ ಉಪ್ಪು ನೀರಲ್ಲಿ ಹಾಕಿದ ನೆಲ್ಲಿಯ ಸವಿಯನ್ನು ಅವರು ಸವಿದಿರಲಿಕ್ಕಿಲ್ಲ. ಆ ನಿಟ್ಟಿನಲ್ಲಿ ನಾವುಪುಣ್ಯವಂತರು.

ಇನ್ನು ಕಾಫಿ ತೋಟದ ಮಧ್ಯ ಕಂಗೊಳಿಸುವ ಸೋಮವಾರಪೇಟೆ ಮಡಿಕೇರಿಯ ಉತ್ತರಕ್ಕೆ ಇದೇ. ಅದರ ಹೆಸರೇ ಹೇಳುವ ಹಾಗೆ ಸೋಮವಾರ ಸಂತೆ ನಡೆಯುವ ಊರು. ಅವತ್ತು ಊರು ತುಂಬ ಜನರೇ ಜನರು. ವಿವಿಧ ವಸ್ತುಗಳನ್ನು ಕೊಳ್ಳಲು ಬರುವ ಕೂಲಿ ಕಾರ್ಮಿಕರು ಒಂದೆಡೆಯಾದರೆ, ತಮ್ಮದೇ ಗತ್ತಿನಲ್ಲಿ ಬಂದು ತಮಗೆ ಬೇಕಾದದ್ದನ್ನು ತಗೊಂಡು ಜೀಪಲ್ಲಿ ಹಾಕೊಂಡು ಹೋಗುವ ಎಸ್ಟೇಟ್ owner ನವರು ಮತ್ತೊಂದೆಡೆ.ಹೀಗೆ 6 ದಿವಸ ಮಲಗಿ ಕೊಂಡು ಇರುವ ಊರು ಅವತ್ತು ತುಂಬಿ ತುಳುಕುತಿರುತದೆ. ಒಂದು ಟೇಬಲ್ಲಿನಲ್ಲಿ 4 ಜನರು ಕುಳಿತು ತಿನ್ನುವ ಮಲಯಾಳಿಗರ, ಉಡುಪಿ ಭಟ್ಟರ ಹೋಟೆಲ್ ನಲ್ಲಿ ಅವತ್ತು 6 ಜನ ಕೂತು ತಿನ್ನುತ್ತಾರೆ.

Summer vacation ಮಾತ್ರ ಈ ಊರಿನಲ್ಲಿ ಖುಷಿಯೋ ಖುಷಿ! ಊರಿನ ಬಿಸಿಲಿನ ಝಲಕ ಇಲ್ಲ. ಎಲ್ಲೋ ದೂರದಬೆಂಗಳೂರಿನಲ್ಲೋ , ಮೈಸೂರಲ್ಲೋ ಅಥವಾ ಮಂಗಳೂರಲ್ಲೋ ಕಲಿಯುತಿರುವ ಅಲ್ಲಿಯ ಮಕ್ಕಳು ತಮ್ಮೂರಿಗೆಬಂದು, ಅವರ ಸಂಬಂದಿಕರ ಮದುವೆ ಮತ್ತಿತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಪೂರ್ಣ ಖುಷಿ ಪಡುತ್ತಾರೆ.

ಒಟ್ಟಿನಲ್ಲಿ ಹಲವು ನೆನಪುಗಳನ್ನು ತೆರೆದಿಡುವ ಈ ಊರು ಡಿಸೆಂಬರ್-ಜನವರಿಯಲ್ಲಿ ಚಳಿಯ ಉಗ್ರ ರೂಪವನ್ನು ತೋರಿಸುತ್ತದೆ. ಅದೆಷ್ಟು ಚಳಿ ಅಂದರೆ, ಬೆಳಗಿನ ಕಾಫಿಗೆ ಹುಡಿಯೋ, ಸಕ್ಕರೆಯೋ ಹಾಕುವ ಅವಶ್ಯಕತೆಯಿಲ್ಲ. ಸ್ಪೂನಲ್ಲಿ ತೆಗೆಯುವಾಗಲೇ ಕೈ ನಡುಗಿ ತಾನಾಗಿಯೇ ಬೀಳುತ್ತದೆ.. ತೆಂಗಿನೆಣ್ಣೆ ಗಟ್ಟಿಯಾಗಿ ಮೇಣದ ತರಕಾಣುತಿರುತ್ತದೆ.

ಹಾಗೆ ಕುಶಾಲನಗರದ ಆನೆಯ ಸಫಾರಿ, ಮತ್ತೆ ಕಾವೇರಿ ನದಿಯ ತವರೂರು ತಲಕಾವೇರಿ!

ಎಲ್ಲವು ಹೋದಷ್ಟು ಬಾರಿ ಹೊಸ ಉಲ್ಲಾಸ ಮೂಡಿಸುತ್ತದೆ..