ಸುಮ್ನೆ ಸೀತಣ್ಣ ಕಡೆ ಒಂದು ರೌಂಡ್!
ಸಂಜೆ ಯಾರಾದರೂ "ಸೀತಣ್ಣ ಕಡೆ ಹೋಗುತ್ತೇವೆ, ಬರುವವರು ಬನ್ನಿ" ಅಂದ ಕೂಡಲೇ ನಾವು ಪ್ಯಾಕ್ ಅಪ್ ಮಾಡಿ ರೆಡಿ! ಅಂತು M.Sc ದಿವಸಗಳಲ್ಲಿ ನಮಗೆ ಇಷ್ಟವಾದ ಸ್ಥಳ ಅದೊಂದೇ ಹಾಗಿತ್ತೋ ಏನೋ ಎಂಬಂತೆ! ಸೀತಣ್ಣ ಅಂದರೆ ಅಲೋಸಿಯಸ್ ಕಾಲೇಜಿನ ಎದುರಿಗೆ, ಮಸೀದಿಯ ಪಕ್ಕ ನಿಂತಿದ್ದ ಎರಡು ಮೊಬೈಲ್ ಕ್ಯಾಂಟೀನ್ ಗಳಲ್ಲಿ ಒಂದು, ಮತ್ತೊಂದು ದಾಮಣ್ಣ.. ವಿಶೇಷ ಅಂದರೆ ನಾವು ಹೇಳುವುದು ಸೀತಣ್ಣ ಅಂತ ಆದರು ಹೋಗ್ತಾ ಇದ್ದದು ದಾಮಣ್ಣನ ಕ್ಯಾಟೀನ ಗೆ!
ನಮ್ಮ ವಾನರ ಸೈನ್ಯ ಅಲ್ಲಿಗೆ ಹೋಗುವಾಗಲೇ ಅಲ್ಲಿಯ ಹುಡುಗರು ಹರಡಿ ಹಂಚಿ ಹೋಗಿದ್ದ ಸ್ಟೂಲ್ ಗಳನ್ನೂ ತಂದು ವೃತ್ತಾಕಾರವಾಗಿ ಜೋಡಿಸಿಡುತಿದ್ದರು. ನಾವೆಲ್ಲರೂ ಅದರಲ್ಲಿ ಕೂತು ಮಾತನಾಡಲು ಪ್ರಾರಂಬಿಸುತಿದ್ದೆವು! Round table conference ನ ಹಾಗೆ!ಮುವತ್ತಕೆ ಇಪ್ಪತೈದು ಜನರೂ ಅಲ್ಲಿ ಇರುತಿದ್ದೆವು.. ನಮಗೆ ದಿನದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಅಂದ್ರೆ ಅಲ್ಲಿಯೇನೆ! ಯಾರು ಯಾವಾಗ ಬೇಕಾದರೂ ಬರಬಹುದು ಮತ್ತು ಹೋಗಬಹುದು,
ಅಲ್ಲಿಯೇ ಮಾತುಗಳಿಗೆ ಟಾಪಿಕ್ ಬೇಕೆಂದೇನು ಇಲ್ಲ.. ಯಾರಾದರು ಪೀಠಿಕೆ ಹಾಕಿ ಆರಂಭಿಸುತ್ತಾರೆ.. ಆರಂಭಿಸಿದವರು ಅಲ್ಲಿದ್ದಾರೋ ಇಲ್ಲವೋ ಮಾತುಗಳ ನಾಗಲೋಟವಂತು ಎಲ್ಲೆಲ್ಲೋ ಸಾಗುತಿತ್ತು! ಒಮ್ಮೊಮ್ಮೆ ಕ್ಲಾಸಿನ ಬಗೆಯಾದರೆ, ಇನ್ನೊಮ್ಮೆ ಫಿಲ್ಮಿನ ಬಗೆ, ಮತ್ತೊಮ್ಮೆ ಕ್ರಿಕೆಟ್.. ಇನ್ನು ಕೆಲವೊಮ್ಮೆ ಸೀನಿಯರ್ಸ್, ಜೂನಿಯರ್ಸ್ ಬಗ್ಗೆ.. ಹೀಗೆ ಗಾಸಿಪ್, ಕಾಮಿಡಿ, jelousy, attitude ಎಲ್ಲವೂ ಬಂದು ಹೋಗುತಿತ್ತು.!
ಇನ್ನು ಅಲ್ಲಿಯ ತಿಂಡಿ ಚರ್ಮುರಿ, ಮಸಾಲ ಪುರಿ, ಸೇವ್, ಬೇಲ್ ಹೀಗೆ ಸಾಗುತ್ತದೆ ಮತ್ತು ಜ್ಯೂಸ್ ಅಂದ್ರೆ ಕಬ್ಬಿನದ್ದು! ಅಲ್ಲಿ ಮೊಟ್ಟೆಯನ್ನು ಹದಿನಾರು ಪೀಸ್ ಮಾಡಿ ಅದನ್ನು ಈರುಳ್ಳಿ ಮತ್ತು ಮೆಣಸಿನ ಪುಡಿಯೊಟ್ಟಿಗೆ ತಿನ್ನುವಾಗಿನ ಒಂದು ಸಂತೋಷ ಬೇರೆಲ್ಲೂ ಸಿಗಲಿಕಿಲ್ಲವೇನೋ! ಬಹುಶ ಮೊಟ್ಟೆಯನ್ನು ಅಷ್ಟು ಸಣ್ಣ ಪೀಸ್ ಮಾಡಬಹುದೆಂದು ನಮಗೆ ಅಲ್ಲಿಯೇ ಗೊತ್ತಾಗಿದೇನೋ! ಮತ್ತೆ ಕೆಲವರಿಗಂತೂ ಕಡ್ಲೆ ಜಾಸ್ತಿ ಹಾಕಿದ ಚರ್ಮುರಿ, ಮತ್ತೆ ಕೆಲವರಿಗೆ ಬೇಲಪುರಿ ಇನ್ನು ಕೆಲವರಿಗೆ ಮಸಾಲೆ ಪುರಿ ನನ್ನಂತವರಿಗೆ BC-boiled egg mixed with charmuri ಯೇ ಸರ್ವ ಶ್ರೇಷ್ಠ.. ಹೀಗೆ ಸಾಗುತ್ತದೆ ತಿಂಡಿಯಲ್ಲಿನ ವೈವಿಧ್ಯತೆ! ಯಾರು ಏನೇ ಆರ್ಡರ್ ಮಾಡಿದರು ಎಲ್ಲರಿಗು ಟೇಸ್ಟ್ ಮಾಡೋ ಅವಕಾಶ ನಮ್ಮಲ್ಲಿತ್ತು! ಕೆಲವರಂತೂ ಮಾವಿನ ಕಾಯಿಗೆ ಕಾರ ಮತ್ತು ಉಪ್ಪನ್ನು ಹಾಕಿದ ಪಚೋಡಿಯನ್ನು ತಿನ್ನುವಾಗ ಮುಖವನ್ನು ಹಿಂಡಿ ಹಿಪ್ಪೆಯಾಗುವಂತೆ ಮಾಡುತಿದ್ದರು..
ಹೀಗೆ ತಿನ್ನುತ್ತಾ ತಮಾಷೆಯಾಡುತ್ತಾ ಕಾಲ ಕಳೆಯುತಿದ್ದ 'ಸೀತಣ್ಣ' ಹತ್ತಿರದಿಂದ ಹಾದು ಹೋಗುವಾಗ ಬರೀ ನೆನಪುಗಳು ಕಾಡುತ್ತದೆ.. ಸೀತಣ್ಣ ಮತ್ತು ದಾಮಣ್ಣ ಹೊಸ ವಿಧ್ಯಾರ್ಥಿಗಳೊಂದಿಗೆ ಸುತ್ತುವರೆದು ನಾನೇನು ಬದಲಾಗಿಲ್ಲ ಅನ್ನುತಿದೆಯೇನೋ! ಆದರೆ ಗೆಳೆಯರಿಲ್ಲದೆ ಅಲ್ಲಿಗೆ ಹೋಗುವುದಾದರೂ ಹೇಗೆ!?.. ಮತ್ತೆ ನಾವು ಆ ಕಾಲಕ್ಕೆ ಹಾತೊರೆಯುತ್ತೇವೆ. ಅವು ಇನ್ನು ಸವಿ ನೆನಪುಗಳಷ್ಟೆ!!!