ಆಗ ಅವನ ಈ ಮಾತು ನನ್ನನು ಬಾಲ್ಯ ಕಾಲಕ್ಕೆ ಅಂದ್ರೆ ಪೆನ್ನಿಗಿಂತ ಮೊದಲ ಯುಗಕ್ಕೆ ಕೊಂಡೊಯ್ಯಿತು. ಪೆನ್ಸಿಲಲ್ಲಿ ಬರೆಯುವ ಟೈಮ್.. ''Unheard melodies sweeter dan heard melodies'' ಎನ್ನುವ ಕವಿವಾಣಿಯಂತೆ ಆಗೆಲ್ಲ ನಮಗೆ ಪೆನ್ನಲ್ಲಿ ಬರೆಯುವ ತವಕ... ಅಂತೋ ದೊಡ್ಡ ತರಗತಿಗೆ ಬಂದಾಗ ಪೆನ್ನಲ್ಲಿ ಬರೆಯುವ ಅವಕಾಶ ಸಿಕ್ಕಿದರೂ, ಇಂಗ್ಲಿಷ್ ಮತ್ತು ಹಿಂದಿ ಟೀಚರ್ ನವರಿಗೆ ಬಾಲ್ ಪೆನ್ನಲ್ಲಿ ಬರೆಯಲೇಬಾರದು. ಬರೆದರೆ ಅದೇನೋ ಮಹಾ ಅಪರಾಧ ಮಾಡಿದ ಹಾಗೆ.! ಪುಣ್ಯಕ್ಕೆ ಉಳಿದ ಟೀಚರ್ ನವರು ನಾವು ಇಷ್ಟಪಟ್ಟ ಪೆನ್ನಲ್ಲಿ ಬರೆಯುವ ಸ್ವಾತಂತ್ರ್ಯ ಕೊಟ್ಟಿದ್ದರು.. ಹಾಗೆ ನಮ್ಮ ಬಾಲ್ಯಕಾಲ ಕಳೆದದ್ದು ಎರಡು ಪೆನ್ನಿನೊಟ್ಟಿಗೆ! ಹೆಣ್ಣಿನೊಟ್ಟಿಗೆ ಅಲ್ಲ...!
Ink ಪೆನ್ ಒಂಥರಾ ಮಜಾ.. ಅದರಲ್ಲಿ ಬರೆಯುವುದೆಂದರೆ ತುಂಬಾ ನಾಜುಕಾಗಿರಬೇಕು! ಸ್ವಲ್ಪ ಒತ್ತಿ ಬರೆದರೆ, ಪೇಪರ್ ಹರಿಯುತ್ತೆ..! So ಯಾವಾಗಲು ಒಂದು ಹದವಾಗಿ (balance) ಬರೆಯುತಿರಬೇಕು. ನಡುವೆ ಕೈ ಕೊಟ್ಟರೆ ರಪ್ಪನೆ ಕೈ ಕೊಡವೆಬೇಕು.. ಒಮ್ಮೊಮ್ಮೆ ಹಾಗೆ ಕೊಡವಿಕೊಳ್ಳುವಾಗ ಎದುರಿನವರ ಶರ್ಟಿನಲ್ಲಿ ಇಂಕಿನ ಚಿತ್ತಾರ moodutiruttade.. ಕ್ಲಾಸ್ ಆದ ಕೂಡಲೇ ಜಗಳವೋ ಜಗಳ..! ಪುಣ್ಯಕ್ಕೆ ನಮ್ಮ ಶರ್ಟ್ ಯಾವಾಗಲು ಸೇಫ್.. ಯಾಕೆಂದರೆ ನಾವು ಯಾವಾಗಲು ಲಾಸ್ಟ್ ಬೆಂಚ್!
ಮತ್ತೊಂದು ಈ Ink ಪೆನ್ನಿನ ಹೊಟ್ಟೆ ತುಂಬಿಸಲು ನಮ್ಮಲ್ಲಿ ಸದಾ Ink bottle ಇರಲೇಬೇಕು.. ನಮ್ Ink bottle ಯಾವಾಗಲು ಖಾಲಿಯಾಗುತ್ತ ಇರಲಿಲ್ಲ.. ನನ್ನ ಗೆಳೆಯರು ಬೇರೆಯವರ bottle ನಿಂದ ತುಂಬಿಸಿಕೊಡುತಿದ್ದರು..! ಈ Ink ಪೆನ್ನಿನ ಪ್ರಾಬ್ಲಮ್ ಅಂದ್ರೆ ಕೈಯಲ್ಲಿ ಸದಾ Ink ಆಗುವುದು.. ಆದರೆ ನಂದು ಹೀರೋ ಪೆನ್ ಆಗಿದ್ದರಿಂದ ಆ ಸಮಸ್ಯೆ ಇರುತಿರಲಿಲ್ಲ.. ನಂ ಪೆನ್ ನೋಡಲು ತುಂಬಾ ಚಂದ ಇದ್ದರಿಂದ ಎಲ್ಲರಿಗು ಆದರೆ ಮೇಲೆ ಕಣ್ಣು.. ಅದು ನನಗೆ ತಂದೆ ಗಲ್ಫ್ ನಿಂದ ತಂದ ಪೆನ್ನಾಗಿತ್ತು.. ಆ ಪೆನ್ನು ಕಾಣೆಯಾಗಿದ್ದೇ ಇಲ್ಲ..! ಯಾರಾದರು ತೆಗೆದರೆ ಅದು ನನ್ ಪೆನ್ನು ಅಂತ ಎಲ್ಲರಿಗು ಗೊತ್ತಾಗಿಬಿಡುತ್ತಿತ್ತು..!
ಹಾಗಂತ ಆ ಪೆನ್ನಿನ ಮೇಲೆ ನನಗೇನು ವ್ಯಾಮೋಹ ಇರಲಿಲ್ಲ.. ನನಗೆ ಇಷ್ಟವಾದ ಪೆನ್ನು reynolds ಕಂಪನಿ ಯ white n blue ಕಲರ್ ನ reynolds 045 bold ಅಂಥ ಬರೆದಿದ್ದ ಪೆನ್ನು... ಆಗ ಆ ಪೆನ್ನಿ ಗೆ ಇದ್ದದ್ದು 4-50 ರುಪಾಯಿ.. ಆದರೆ ಅದರ ರೆಫಿಲ್ ಗೆ 3 ರುಪಾಯಿ! 3 ರುಪಾಯಿಗೆ ಒಳ್ಳೊಳ್ಳೆಯ ಪೆನ್ನು ಸಿಗುತಿದ್ದದ್ದಲ್ಲದೆ ಅದರ ರಿಫಿಲಿಗೆ ಒಂದು ರುಪಾಯಿಯಾಗಿದ್ದರಿಂದ ನನಗೆ ಮನೆಯಲ್ಲಿ ಬಯ್ಯುತಿದ್ದರು..!
ನಮ್ ಕ್ಲಾಸಲ್ಲಿ ಕೆಲವು ಚತುರರೂ ಇದ್ದರು.. ನಮ್ ಪೆನ್ನೆಲ್ಲಾದರು ಡೆಸ್ಕ್ ಮೇಲೆ ಬಾಕಿಯಾದರೆ, ಹಿಂತಿರುಗಿ ಬಂದು ನೋಡಿದಾಗ ರಿಫಿಲ್ ಇರುತಿರಲಿಲ್ಲ...!
ಅದೇನೇ ಇರಲಿ ನನ್ ಟೀಚರ್ ನಂಗೆ ಯಾವಾಗಲು ಬಯ್ಯುತಿದ್ದದು ಹೀಗೆ ''ನೀ ಯಾವುದೇ ಪೆನ್ನಲ್ಲಿ ಬರೆದರೂ hand writing improve ಇಲ್ವಲ್ಲ..!'' M.Sc ಯವರೆಗೆ ಸಾಗಿತ್ತು ಈ ಮಾತು!
ಟೀಚರ್ ಬೇರೆಯಾದರೇನು ಬಯ್ಗುಳ ಒಂದೇ...! ಪೆನ್ನು ಯಾವುದಾದರೇನು ಅಕ್ಷರ ಅದೇ ತಾನೇ..!
2 comments:
I am so glad to read this topic..:)Due to advancement of technology,we have got habituated to writing on PC's or lap tops..We have almost given up writing with ball pen/ink pen in everyday life except for signing every morning on the attendance register or writing in the observation book!!!:)I've the habit of collecting old pens...Off late,when I was cleaning my cupboard,I realized that there are no new additions from last 3 years...In the years to come,I don't think that the future generations will get a chance to scribble with pens as we did,since everything these days is dependent on e-technology!
Nice one!.. good style of writing.
Post a Comment