Monday, 10 October 2011

ಕುಡುಕರೊಂದಿಗೆ ಒಂದಷ್ಟು ಹೊತ್ತು..


ಯಾವುದೊ ಸಿನಿಮಾದಲ್ಲಿ ಕಾಮಿಡಿ actor ಕುಡುಕನ ಪಾತ್ರದಲ್ಲಿ ಆಡಿದ ಡೈಲಾಗ್ ಹೀಗಿತ್ತು ''ಗುರು, ನನ್ ಬ್ರೈನಿಗು, ಟಂಗಿಗೂ ಕನೆಕ್ಷನ್ ಕಟ್ ಆಗೈತೆ!'' ಹೌದು ಕುಡುಕರು ಕುಡಿದಾಗ ಆಡುವುದೇ ವಿಶಿಷ್ಟ! ಅದರಲ್ಲಿ ಅವರ ಮಾತುಗಳು ಯಾವುದೇ ಮಾತುಗಾರನನ್ನು ತಲೆತಗ್ಗಿಸಬೇಕು... ಅವನ ಇಂಗ್ಲಿಷೋ ಓತಪ್ರೋತ ವಾಗಿ, ಸರಾಗವಾಗಿ ಅವನ ಬಾಯಲ್ಲಿ ಹರಿಯುತ್ತೆ. ನಟನೆಯಲ್ಲಿ ಅವನನ್ನು ಮೀರಿಸುವವರು ಬಿಡಿ, ಅವನ ನಟನೆಯನ್ನೇ ಫಿಲಂ ಅಲ್ಲಿ ಅಳವಡಿಸುತ್ತಾರೆಂದರೆ!! ಇನ್ನು ಅವ ಹಾಡಿದರೆ ಯಾವ ಸಂಗೀತ ರಸ ಸಂಜೆ ಗೆ ಸಾಟಿ?!.. ಭಾವಗಳು ಅದಲುಬದಲಾಗಿ, ಪದಗಳು ಪಲ್ಲಟವಾಗಿ, ಅದೊಂಥರ mixed emotions!! ಇನ್ನು ಅವ ಡಾನ್ಸ್ ಮಾಡಿದರೆ, ಅಬ್ಬಬ್ಬ ಎಷ್ಟು ಜನಸಾಗರ ಅದನ್ನು ನೋಡಲು! ಅವನ ಸ್ಟೆಪ್ ಗೆ ಮೆಲ್ಲನೆ ಮೈ ಕುಣಿಸುವವರು ಇದ್ದಾರೆ. ಅಷ್ಟು ಖುಷಿ ಕೊಡುತ್ತದೇನೋ?!

ನಾನು ಬೆಂಗಳುರಲ್ಲಿದ್ದಾಗ ನನ್ ರೂಮ್ ಮೆಟ್ ಯಾವಾಗಲು ಫುಲ್ ಟೈಟ್..! ಅವರು ಎಷ್ಟು ಕುಡಿದರೂ ಯಾರಿಗೂ ಉಪದ್ರವ ಕೊಡುವವರಲ್ಲ.. ಏನೋ ಕುಡಿಯದೆ ಇದ್ದಾಗ ಬಹಳ ಮಾತಾಡುವ ಅವರು ಕುಡಿದರೆ ತುಟಿಪಿಟಿಕೆನ್ನದೆ ನಿರ್ಲಿಪ್ತರಾಗಿರುತ್ತಾರೆ! ಆದ್ರೆ ಒಂದು ರಾತ್ರಿ ಅವರ ಗೆಳೆಯನೊಬ್ಬ ಕುಡಿದು ನಮ್ ರೂಮಲ್ಲಿ ರಂಪಾಟವೋ ರಂಪಾಟ! ಹೋಗಿ luv failure ಕೇಸ್.. ಅವಳಿಗೆ ಬೈದದ್ದೇ ಬೈದದ್ದು! ಕೆಟ್ಟ ಕೆಟ್ಟ ಪದಗಳು.. ರಾತ್ರಿ ಇಡಿ ನನ್ನ ನಿದ್ದೆಯೆಲ್ಲ ಹಾಳು ಮಾಡಿಬಿಟ್ಟ! ಅವನ ಇಂಗ್ಲಿಷ ಮಿಶ್ರಿತ ಕನ್ನಡ ಡೈಲಾಗ್ ಗಳು ಯಾವ ನಾಟಕ ದಲ್ಲೂ ಸಿಗಲಿಕ್ಕಿಲ್ಲ.! ಇನ್ನು ಒಂದು ವಿಷಯವೆಂದರೆ ಅವ ಅಸಿಸ್ಟಂಟ್ ಪ್ರೊಫೆಸರ್ ಆಗಿ ನೇಮಕವಾಗಿದ್ದ.! ತನ್ನ ಒರಟು ತನದಿಂದ ಹುಡುಗಿಯನ್ನು ಕಳಕೊಂಡಿದ್ದ.!

UG ಯಲ್ಲಿರುವಾಗ ಗೆಳೆಯರೊಡಗೂಡಿ ಮಡಿಕೇರಿಗೆ ಹೋಗಿದ್ದೆವು.. ಮಡಿಕೇರಿ ಸುತ್ತಾಡಿ ಅಂದು ರಾತ್ರಿ ರೂಮಲ್ಲೇ ಫ್ರೆಂಡ್ಸ ಪಾರ್ಟಿ.. ಕೆಲವರು bear, ಮತ್ತೆ ಕೆಲವರು vodka, ಇನ್ನು ಕೆಲವು ನನ್ನಂತವರು ಕೂಲ್ ಡ್ರಿಂಕ್ಸ್.. ಹೀಗೆ ಎಲ್ಲರು ಜತೆಗುಡಿ ಒಂದೇ ರೂಮಲ್ಲಿ ಕುಡಿಯುತ್ತ, ಹರಟೆ ಹೊಡೆಯುತ್ತ, ಪಾರ್ಟಿ ಮುಗಿಸಿ ನಮ್ಮ ನಮ್ಮ ರೂಮ್ ಕಡೆ ಹೊರಟೆವು.. ನನ್ನ ರೂಮ್ ಮೇಟ್ ಕುಡಿದಕ್ಕಿಂತ ಜಾಸ್ತಿಯಾಗಿ ತೂರಾಡುತ್ತ ಇದ್ದ.. ಅಷ್ಟು imbalance ಆಗಿದ್ದ.. ಅಂತು ರೂಮಿಗೆ ಬಂದು ಬೆಡ್ ಮೇಲೆ ಬಿದ್ದ ಕೂಡಲೇ ಅವನ luv ಸ್ಟೋರಿ ಆರಂಬಿಸಿದ.. ಅವನ luv ಸ್ಟೋರಿ ಗಿಂತ ಅವ ಮಾತಿನ ಮದ್ಯ ಹೇಳುವ '' ಹೇಯ್ ನಾನು ಕುಡಿದು ಮಾತಾಡುವುದಲ್ಲ!'' ಎನ್ನುವುದು ನಗು ತರಿಸುತಿತ್ತು.. ಅಂದ್ರೆ ಅವನು ಹೇಳ್ತಾ ಇದ್ದದು ಇಷ್ಟೇ ನಾನು ಸತ್ಯ ಹೇಳುತಿದ್ದೇನೆ ಎಂದು!

ಇನ್ನು high society ಕುಡುಕರನ್ನು ನೋಡಲು ಸಿಟಿಯಲ್ಲಿರುವ pub ಅಥವಾ ಪಾರ್ಟಿ ಗೆ ಹೋಗಬೇಕು.! ಸಂಗೀತ ಅನ್ನುವುದು rock ಮಾತ್ರ.! ಬೆಳಕು ತಿಯೇಟರ್ ಗಿಂತ ಕಡಿಮೆಯಾಗಿರುತ್ತದೆ.. ಆಗಾಗ ನಿಯಾನ್ ಲೈಟ್ ಗಳ ಕಲರವ.. ಕುಡಿದು ಮತ್ತೇರುವಾಗ ಒಬ್ಬಬ್ಬರದ್ದೇ dance.. ಸುಸ್ತಾದಾಗ ಕುಳಿತು ಒಂದೆರಡು ಸಿಪ್.. ಮತ್ತೆ dance... ಅಲ್ಲಿಂದ ತೂರಾಡುತ್ತ ಅವರ ವೆಹಿಕಲ್ ಕಡೆ ಹೋಗ್ತಾರೆ.. ಕೆಲವರನ್ನು ವೆಹಿಕಲ್ ಗೆ ಹತ್ತಿಸುವುದೇ ಹರಸಾಹಸ..!

ಹೀಗೆ ಕುಡಿಯುವುದೆಂದರೆ ಕೆಲವರಿಗೆ enjoyment., ಮತ್ತೆ ಕೆಲವರಿಗೆ hobby, ಕೆಲವರಿಗಂತೂ ಅನಿವಾರ್ಯತೆ- ನೋವು ಮರೆಸುತ್ತಂತೆ!ಕುಡಿಯುವುದನ್ನು ಬಿಡಲು ಅವರಿಗೂ ಮನಸಿರುತ್ತಂತೆ! ರಾತ್ರಿ ಕುಡಿದು ಬಂದಾಗ ನಾಳೆ ಕುಡಿಯುವುದಿಲ್ಲವೆಂದು ಅಂದು ಕೊಳ್ಳುತ್ತಾರಂತೆ..! ಬೆಳಿಗ್ಗೆಯಾದಾಗ ಏನೋ guilty.! ಎಲ್ಲರಿಗೂ ಉಪದ್ರ ಕೊಟ್ಟೆ ಅಂತ ಬೇಜಾರಾಗಿ ತಲೆನೋವು ಪ್ರಾರಂಬಿಸುತ್ತದೆ.. ತಲೆನೋವನ್ನು ಮರೆಸಲು ಪುನ ಕುಡಿಯುತ್ತಾ ಬೇರೆಯವರಿಗೆ ತಲೆನೋವಾಗಿ ಪರಿಣಮಿಸುತ್ತಾರೆ..!

No comments: