Monday, 17 October 2011

ಕನಸಲ್ಲೂ ಬರದ, ಕವನವೂ ಆಗದ ಹುಡುಗಿ...

ಬೆಳಿಗ್ಗೆ ನಾನು ಮತ್ತು ಗೆಳೆಯ ಕಾಲೇಜಿನ ವಿಜ್ಞಾನ ಭವನದ 1st floor ನಲ್ಲಿ ನಿಂತು ಮಾತಾಡುತ್ತಿದ್ದೆವು.. ಆಗ ಪಿಂಕ್ ಸಲ್ವಾರ್ ಹಾಕಿದ ಹುಡುಗಿ ತನ್ನ ಗೆಳೆತಿಯರೊಡನೆ ಬರುತಿದ್ದಳು.. ಗೆಳೆಯ ಅವಳನ್ನು ತೋರಿಸಿ '' ನೋಡು ಆ ಹುಡುಗಿ ದಿನಾಲು ನಿನ್ನನೆ ನೋಡುತಿರುತ್ತಾಳೆ.. ನಂಗೆ ಗೊತಿಲ್ಲದೆ ನಿಮ್ಮ ಕಣ್ಣಲ್ಲಿ ಏನೋ something something...'' ಹೇಳಿ ಮುಗಿಸುವ ಮೊದಲೇ ವಕ್ಕರಿಸಿದ ನಮ್ ಕ್ಲಾಸಿನ ನಾರಿಮಣಿಗಳು ಸಿಕ್ಕಿದ ಚಾನ್ಸ ಅಂತ ಛೇಡಿಸಿದ್ದೇ ಛೇಡಿಸಿದ್ದು.. ಒಟ್ಟಿನಲ್ಲಿ ನನ್ನ ಅರಿವಿಗೆ ಬಾರದ ಒಂದು ವಿಷಯ ನನಗಿಂತ ಮೊದಲೇ ಗೆಳೆತಿಯರಿಗೆ ಗೊತ್ತಾಗಿತ್ತು...ಅಂದ ಹಾಗೆ ಆ ಹುಡುಗಿ ಮಲೆನಾಡಿನ, western ghat ತಪ್ಪಲಿನ ಕುದುರೆಮುಖಕ್ಕೆ ಹತ್ತಿರದವಳು.. ಆಗಸ್ಟೇ pu ಗೆ ನಮ್ ಕಾಲೇಜಿಗೆ ಸೇರಿದ್ದಳು..ಸದಾ ಹಸನ್ಮುಖಿಯಾಗಿ ಗೆಳತಿಯರೊಡಗೂಡಿ ಬರುತಿದ್ದಳು...ನಾನು ಕಾಲೇಜಿನಲ್ಲಿ ಸ್ವಲ್ಪ ಮಟ್ಟಿಗೆ ಜನಪ್ರಿಯನಾಗಿದ್ದೆ.. Student association seceretary, ಕವನ ಇವೆಲ್ಲವೂ ಸ್ವಲ್ಪ ನನ್ನ ವರ್ಚಸ್ಸನ್ನು ಹೆಚ್ಚಿಸಿತ್ತು...!

ಸೈನ್ಸ್ ಬ್ಲಾಕ್ ಒಂಥರ ನಮ್ಮ ಕಾಲೇಜಿನಲ್ಲಿ ಬಾಲ್ಕನಿ ಇದ್ದ ಹಾಗೆ.. ಕಾಂಪಸ ದರುಶನ ಪೂರ್ಣವಾಗಿ ಅಲ್ಲಿಗೆ ಆಗುತಿತ್ತು.. ಅದು ಬೇರೆ pu ಕಾಲೇಜಿಗೆ ಹತ್ತಿರದಲ್ಲೇ ಇತ್ತು.. ಹಕ್ಕಿಗಳು ಎಲೆಕ್ಟ್ರಿಕ್ ವಯರಿನ ಮೇಲೆ ಸಾಲಾಗಿ ಕೂತ ಹಾಗೆ ನಾವು 'ಗ್ಯಾಲರಿ'ಲ್ಲಿ ನಿಂತು comment ಹೊಡೆಯುವುದು.. ಕಾಲೆಳೆಯುವುದು ಮುಂತಾದ ಘನ ಕಾರ್ಯ ಮಾಡುತಿದ್ದೆವು!

ವಿಶೇಷವೆಂದರೆ ಆ ಹುಡುಗಿಯ ಬಗೆ ನನಗಿಂತಲೂ ವಿಶೇಷ ಆಸಕ್ತಿ ನನ್ನ ಗೆಳತಿಯರಿಗೆ! ದಿನಾಲು ಅವಳ ವಿಷಯವನ್ನು update ಮಾಡುತಿದ್ದರು...! ಆ ಹುಡುಗಿ ಹಾಸ್ಟೆಲನಲ್ಲಿ ನನ್ನ ಡ್ರೆಸ್ ಸ್ಟೈಲ್ ಬಗೆ ಅವಳ ರೂಮ್ ಮೆಟ್ ಲ್ಲಿ ಮಾತಾಡಿದರೆ ಮಾರನೆ ದಿವಸ ಮದ್ಯಾಹ್ನ ದೊಳಗೆ ನನ್ನ ಕಿವಿಗೆ ಬಂದು ತಲುಪಿಸುತಿದ್ದರು... ಅಬ್ಬಬ್ಬ! ''ಚತುರ ನಾರಿಯರು!'' ಇವರಿಗೆ ಯಾವ ಮೀಡಿಯಾ ತಾನೇ ಸಾಟಿ...

ಒಂದು ಮದ್ಯಾಹ್ನ ಲೈಬ್ರರಿ ಯಲ್ಲಿ ನಾ ಕೂತಿದ್ದೆ! ಅಷ್ಟರಲ್ಲಿ 'ಅವಳು' ಬಂದಳು.. ಅಲ್ಲೇ ರೆಫೆರೆನ್ಚೆ ಸೆಕ್ಷನ ಕೂತಳು.. ಸ್ವಲ್ಪ ಹೊತ್ತಲ್ಲೇ ನನ್ನ ಗೆಳೆತಿಯರ ಸವಾರಿ ಅಲ್ಲಿಗೆ ಬಂತು.. ಕೇಳಬೇಕೆ ಇನ್ನು..!

ಮತ್ತೊಂದು ದಿವಸ ಗೆಳತಿಯೊಬ್ಬಳು ಬಂದು, "ಸಾಕಪ್ಪಾ ನಿನ್ನ ಸಹವಾಸ! ಆ ಹುಡುಗಿ ನನ್ನನ್ನು ನೋಟದಲ್ಲಿ ಭಸ್ಮಾಸುರನಂತೆ ಲುಕ್ ಕೊಟ್ಟು ಹೆದರಿಸ್ತಾಳೆ" ಅಂತ ಹೇಳಿದಳು.. ಕಾರಣ ಇಷ್ಟೇ ಈ ನನ್ನ ಗೆಳತಿ ಎಲ್ಲರಿಗಿಂತ ನನ್ನಲ್ಲಿ ಆತ್ಮಿಯವಾಗಿದ್ದದ್ದು ಮಾತ್ರವಲ್ಲ ತುಂಬಾ ಸಲುಗೆಯಿಂದ ಇರುತಿದ್ದಳು.. ಇದನ್ನು ಕಂಡ ಅವಳಿಗೆ ಈರ್ಷೆಯೋ ಏನೋ..!?

ಮತ್ತೆ ಕೆಲವು ಗೆಳತಿಯರಿಂದ ಪ್ರಪೋಸ್ ಮಾಡಲು ಒತ್ತಾಯ.. ನಾನಂತೂ ಮೌನವಾಗಿಯೇ ಇದ್ದೆ.. ಅಷ್ಟಕ್ಕೂ ಕ್ಯಾಪಾಸಿಟಿ ಬೇಡವೇ..!! ಒಬ್ಬಳಂತು ಅವಳ ಹತ್ತಿರ ಮಾತಾಡಿಸಿ ಬಂದಳು.. ಇನ್ನು ನಮ್ಮ ಆತ್ಮೀಯ ಮೇಡಂ ಒಬ್ಬರಿಗೆ ಗೊತ್ತಾಗಿ ಅವರು ಈ ಗೆಳೆತಿಯರ ಜತೆಗೂಡಬೇಕೆ..!

ಇವರೆಷ್ಟೇ ತಮಾಷೆ ಮಾಡಿದರೂ, ಛೇಡಿಸಿದರೂ, ಆ ಹುಡುಗಿ ನನ್ನ ಕವನ ಬಿಡಿ ಒಂದು ಕವನಕ್ಕೂ ಸ್ಪೂರ್ತಿಯು ಆಗಲಿಲ್ಲ..! ಮಾತ್ರವಲ್ಲ ಒಂದೆರಡು ಸಲ ಬಿಟ್ಟರೆ ಮಾತಾಡಲೇ ಇಲ್ಲ.. ಕೇವಲ ನಗುವಿಗಷ್ಟೇ ಸೀಮಿತವಾಗಿತ್ತು ನಮ್ಮ ಒಡನಾಟ.. ಆದರೆ ನನಗೆ ಕಾಡದ ಹುಡುಗಿ ನನ್ನ ಗೆಳೆತಿಯರಿಗೆ ಕಾಡುತ್ತಲೇ ಇದ್ದಳು...

ಈಗ ಅವಳು ತನ್ನ ಶಿಕ್ಷಣವನ್ನು ಮುಂದುವರೆಸುತ್ತಾ ಎಲ್ಲಿದ್ದಾಳೋ, ಅವಳಿಗೆ ನಾನೆಲ್ಲಿದ್ದೇನೆ ಅಂತ ತಿಳಿಯದು..! ಒಟ್ಟಿನಲ್ಲಿ ಅವಳ ವಯೋ ಸಹಜ ಆಕರ್ಷಣೆ, infatuation ಸ್ನೇಹಿತರ ಮದ್ಯ ನನ್ನನ್ನು ಛೇಡಿಸುವ ವಸ್ತುವಾಗಿತ್ತು... ನನ್ನ ಗೆಳೆತಿಯೊಬ್ಬಳು ಆ ಹುಡುಗಿಯೊಂದಿಗೆ ಹಾಸ್ಟೆಲನಲ್ಲಿ ಇದ್ದವಳು, ಈ ವಿಷಯವನ್ನು ಪ್ರಸ್ತಾಪಿಸದೆ ಈಗಲೂ ಮಾತು ನಿಲ್ಲಿಸುವುದಿಲ್ಲ. ಅಷ್ಟಕ್ಕೇ ಅವಳು ಪ್ರಭಾವಿಸಿದ್ದಳು..!









5 comments:

Akshatha K said...

ನಂಗೆ ಆ ಹುಡುಗಿ ಯಾರು ಅಂತ ಗೊತ್ತು!!!:) ಅವಳ ಆಕರ್ಷಣೆ ಬ್ಲಾಗ್ ಬರೆಯೋ ತನಕ ಬಂತು ಅಲ್ವಾ??:) ಗ್ರೇಟ್!! ಯಾರ ಗೆಳತಿ ಆ ಹುಡುಗಿಯೊಂದಿಗೆ ಹಾಸ್ಟೆಲನಲ್ಲಿ ಇದ್ದವಳು?????;) ಆ ಹುಡುಗಿಯ ಆಕರ್ಷಣೆ ಎಷ್ಟೋ ಹುಡುಗರ ನಿದ್ದೆ ಕೆಡಿಸಿತ್ತು!!

Appu said...

:)all pass through this stage in life at one point or the other...i remembered one more story in GKVK campus..:)you know the details very well..:)

Akshatha K said...

All writings what you have written were awsome!! keep it up. I really like to read your writings, because one or the other speciality will be there.Good, continue the same ok:)

khader said...

good one ..

Zameer said...

Akshiiiii, whz dat gal yar???