Monday, 24 October 2011

ನೊಬೆಲ್ ಸಿಗದೇ ಇರುತ್ತಿದ್ದರೆ..?!

ಸೆಪ್ಟೆಂಬರ್ 30 ರಂದು ಜೀವ ವಿಜ್ಞಾನಿ 'ಸ್ಟೈನಮನ' ಇಹಲೋಕ ತ್ಯಜಿಸಿದ... ಅದು ಹೊರ ಜಗತ್ತಿಗೆ ಮಾತ್ರವಲ್ಲ ನೊಬೆಲ್ ಕಮಿಟಿಯವರಿಗೆ ಗೊತ್ತಾಗಿರಲಿಲ್ಲ! ನೊಬೆಲ್ ಕಮಿಟಿಯವರು ಫೋನ್ ಮೂಲಕ 'ಸ್ಟೈನಮನ' ಗೆ ಪ್ರಶಸ್ತಿ ಸಿಕ್ಕಿದ ವಿಷಯ ತಿಳಿಸಿದಾಗ ಮನೆಯವರ ಸ್ಥಿತಿ ಸಂದಿಗ್ದ.! ಅವರಿನ್ನು ಸ್ಟೈನಮನ ಸಾವಿನ ಆಘಾತದಿಂದ ಹೊರಬಂದಿರಲಿಲ್ಲ..

ಮಾನವನ ರೋಗಕ್ಕೆ ಮತ್ತು ಅದರ ಚಿಕಿತ್ಸೆಗೆ ರಕ್ತವೇ ಕಾರಣ ಅಂತ ನಂಬಿದ್ದ ವಿಜ್ಞಾನ ನಂಬಿಕೆಗೆ ವಿರುದ್ದವೆಂಬಂತೆ ಹೊಸಲೋಕವನ್ನು ತೆರೆದಿಟ್ಟ ಬ್ರಾಂಚ್ immunology. ವಿಭಾಗದಲ್ಲಿ ಅಪೂರ್ವ ಸಾಧನೆ ಮಾಡಿದ ಮೂವರಿಗೆ ವರ್ಷದ ನೊಬೆಲ್ ಸಿಕ್ಕಿದೆ.. ಸ್ಟೈನಮನ adoptive immune system ನಲ್ಲಿ ಅತಿ ಅವಶ್ಯಕ ವಾಹಕವಾದ dendritic cells ಅನ್ನು ಮತ್ತು ಅದರ ಕಾರ್ಯಕ್ಷೇತ್ರದ ಬಗೆ ಸಂಶೋಧಿಸಿದರೆ, ಹಾಫ್ಫ್ಮನ್ ಮತ್ತು ಬಟ್ಲರ್ innate immune system ಮತ್ತು receptor protien ಬಗ್ಗೆ ಮಾಡಿದ ಸಂಶೋಧನೆಗೆ. ಒಟ್ಟಿನಲ್ಲಿ ಮೂವರ ಸಂಶೋಧನೆ ವಿಜ್ಞಾನ ಲೋಕದಲ್ಲಿ ಮಾತ್ರವಲ್ಲ ವೈದ್ಯ ಲೋಕದಲ್ಲಿ ಹೊಸ ಆಲೋಚನೆಯನ್ನು ತೆರೆದಿಟ್ಟದ್ದಲ್ಲದೆ, immunotherapy ಯಂತಹ advanced ಚಿಕತ್ಸ ಕ್ರಮದ ಕಡೆಗೆ ನೋಟವನ್ನು ಹೊರಳುವಂತೆ ಮಾಡಿದೆ.. ಅಲ್ಲಿಂದೀಚೆಗೆ ಹಲವಾರು ಸಂಶೋಧನೆಗಳು ಕ್ಷೇತ್ರದಲ್ಲಿ ಸಾಗುತ್ತಲೇ ಬಂದಿದೆ ಮತ್ತು ಹೊಸ ಪಲಿತಾಂಶಗಳು ಸಿಕ್ಕಿವೆ.

ಈ ಕ್ಷೇತ್ರ ಅಮೂರ್ತವಾಗಿದ್ದ ಕಾಲದಲ್ಲಿ ಈ ವಿಜ್ಞಾನಿ ಗಳು ಬೇರೆ ಬೇರೆಯಾಗಿ ಸಂಶೋಧನೆಯಲ್ಲಿ ನಿರತರಾಗಿದ್ದಲ್ಲದೆ ಸಫಲರಾದರು.. ಆದರೂ ಅವರು ತಮ್ಮ ಸಂಶೋಧನೆಯಿಂದ ವಿರಮಿಸಿರಲಿಲ್ಲ.. ಸ್ಟೈನಮನ ಸ್ವತ ಕ್ಯಾನ್ಸರ್ ರೋಗದಿಂದ ಬಳಲುತಿದ್ದರು, ತನ್ನ ದೇಹವನ್ನೇ ತಾನು ಸಂಶೋಧಿಸಿದ ಸಂಶೋದನೆಗಳಿಗೆ ಒಡ್ಡಿದ.. ಅಷ್ಟು ತಾದತ್ಮತೆ.. pancreatic ಕ್ಯಾನ್ಸರ್ ನಿಂದಾಗಿ ಡಾಕ್ಟರ್ ಕೆಲವು ತಿಂಗಳು ಬದುಕಬಹುದೆಂದು ಹೇಳಿದರು, ಅವ ತನ್ನದೇ ಆದ immunotherapy ಮಾದರಿ ಚಿಕಿತ್ಸೆಯನ್ನು ಪಡೆದು ನಾಲ್ಕು ವರ್ಷ ಬದುಕಿದ್ದಲ್ಲದೆ 'ಇಮ್ಮುನೋ ಥೆರಪಿ' ಯ ಬಗೆ ಭರವಸೆಯನ್ನು ಹೆಚ್ಹಿಸಿದ.
ಆದರೆ ಇಷ್ಟೆಲ್ಲಾ ಸಾಧನೆ ಮಾಡಿದ ಸ್ಟೈನಮನ ಮರಣಿಸಿದ್ದು ಹೊರ ಜಗತ್ತಿಗೆ ಗೊತ್ತಾಗಲೇ ಇಲ್ಲ.. ಅಷ್ಟಕ್ಕೂ ಜೀವ ವಿಜ್ಞಾನ ಅನ್ನುವುದು ಬೇರೆ ವಿಜ್ಞಾನದಷ್ಟು ಮಹತ್ವ ಅಲ್ಲ ಅಂತ ಜನ ಮತ್ತು ಮಾಧ್ಯಮ ಭಾವಿಸಿದ್ದಾರೋ ಏನೋ?! ಆದರೆ ಸ್ಟೈನಮನ ನೊಬೆಲ್ ಗಾಚೆಗೆ ಚರ್ಚಿಸಲ್ಪಟ್ಟ.. ಯಾಕೆಂದರೆ ಅವನ ನಿಧನದ ನಂತರ ನೊಬೆಲ್ ಘೋಷಣೆಯಾದದ್ದು ನೊಬೆಲ್ ಇತಿಹಾಸದಲ್ಲಿ 3 ನೇ ಘಟನೆ ಯಾಗಿದ್ದಲ್ಲದೆ ಚರ್ಚೆಗೂ ಒಳಪಟ್ಟಿತು . ಸಾಮಾನ್ಯವಾಗಿ ನೊಬೆಲ್ ಮರಣೋತ್ತರವಾಗಿ ಕೊಡಲ್ಪಡುವುದಿಲ್ಲ.

ಒಟ್ಟಿನಲ್ಲಿ ಅವನ ಸಾದನೆ ವೈದ್ಯಲೋಕದಲ್ಲಿ ಅಪೂರ್ವಾದದ್ದು. ಅದೊಂದು ಉತ್ತಮ ಭರವಸೆಯ ಕ್ಷೇತ್ರ. ಕ್ಯಾನ್ಸರ ನಂತಹ ಭೀಕರ ಕಾಯಿಲೆಗೆ immunotherapy ಯಿಂದ ಪರಿಹಾರ ಸಾಧ್ಯ ಎಂದು ತೋರಿಸಿ ಅವನು ಲೋಕದಿಂದ ನಿರ್ಗಮಿಸಿದ.. ಸ್ಟೈನಮನ ಗೆ ನೊಬೆಲ್ ಸಿಗಬಹುದೆಂದು ಅವನ ಮಗಳು ಕನಸು ಕಂಡಿದ್ದಳು. ಆದರೆ ಅದು ಘೋಷನೆಯಾಗುವ ಮುನ್ನವೇ ಹೊರಟು ಬಿಟ್ಟಿದ್ದ.. ಒಂದು ವೇಳೆ ಅವನಿಗೆ ನೊಬೆಲ್ ಸಿಗದಿರುತಿದ್ದರೆ ಸ್ಟೈನಮನ ಕೇವಲ್ ಜೀವ-ವಿಜ್ಞಾನ ವಿಧ್ಯಾರ್ಥಿಗಳಿಗೆ ಮಾತ್ರ ಗೊತ್ತಾಗಿ ಮಿಕ್ಕವರಿಗೆ ಅಜ್ಞಾತನಾಗಿಯೇ ಇರುತಿದ್ದನೋ ಏನೋ?! ವಿಧಿವಿಚಿತ್ರವೆಂಬಂತೆ ನೊಬೆಲ್ ತನ್ನ ಘನತೆಯನ್ನು ಎತ್ತಿ ಹಿಡಿಯಿತು..!

1 comment:

Appu said...

The news about Stainman's death was seriously shocking!His guts should be appreciated..In spite of being in a diseased condition,he took up a challenge and to add to it,did some breakthrough research which is a great contribution to the cancer field...may his soul rest in peace!