ಮತ್ತೆ ಮತ್ತೆ ಗಾಂಧೀ...
ಅಕ್ಟೋಬರ್ ತಿಂಗಳು ಬರುವಾಗಲೆಲ್ಲ ನೆನಪಾಗುವ ವ್ಯಕ್ತಿತ್ವ ಗಾಂಧಿಯದ್ದು.ಗಾಂಧಿ ಭಾರತದಲ್ಲಿ ಅತಿ ಹೆಚ್ಚು ಚರ್ಚೆಗೊಳಪಟ್ಟ ವ್ಯಕ್ತಿ.. ಕೆಲವರಿಗೆ ಅವರು ಮಹಾತ್ಮ ಆದರೆ ಇನ್ನು ಕೆಲವರಿಗೆ ಅವರೇನು ಅಲ್ಲ, ಮತ್ತೆ ಕೆಲವರಿಗೆ ಭಾರತವನ್ನು ವಿಭಜಿಸಲು ಕಾರಣಿಭೂತ.. ಹೀಗೆ ಮುಂದುವರಿಯುತ್ತದೆ ಅವರ ಬಗೆಗಿನ ದೃಷ್ಟಿಕೋನ...
ಮಕ್ಕಳಿರುವಾಗ ನಮಗೆ 'ತಾತ' ಎನಿಸಿಕೊಂಡಿದ್ದು ಮಾತ್ರವಲ್ಲದೆ 'ತಟ್ಟು ಚಪ್ಪಾಳೆ ಪುಟ್ಟ ಮಗು ತಕೋ ಕೈ ಇಕೋ ಕೈ, ಗಾಂಧಿಗಿಂದು ಜನುಮದಿನ' ಎಂದು ಹಾಡಿ ಸಂಭ್ರಮಿಸಿದ್ದ ದಿನ..
ಮತ್ತೆ ಕೆಲಸಮಯದ ನಂತರ ಗಾಂಧಿಯ ಹೆಸರು ಜೊತೆ ಮಹಾತ್ಮ ಅಂತ ಯಾಕೆ ಸೇರಿತು ಅನ್ನೋದು ಸೋಜಿಗವಾಯಿತು! ಯಾಕೆಂದ್ರೆ ಅವರ ನಿಜನಾಮ ಮೋಹನದಾಸ ಕರಮ್ ಚಂದ ಗಾಂಧೀ ಎಂದು.
ನಂತರದಲ್ಲಿ ತಿಳಿಯಿತು ಕವಿ ರವಿಂದ್ರನಾಥ್ ಟಾಗೂರ ಗಾಂಧಿಯನ್ನು 'ಮಹಾತ್ಮ' ಅಂತ ಕರೆದದ್ದು.. ರವಿಂದ್ರರಿಗೆ ಗಾಂಧಿಯ ಸರಳತೆ, ನಾಯಕತ್ವ ಗುಣ ಎಲ್ಲವು ಮಿಳಿಥಗೊಂಡ ಒಂದು ಸಮೂಹ ಪ್ರಜ್ಞೆಯ ವ್ಯಕ್ತಿತ್ವ ಅಂತ ಅನಿಸಿ ಮಹಾತ್ಮನೆಂದು ಕರೆದಿರಬೇಕು..
ಮತ್ತೆ ಗಾಂಧೀ ನೆನಪಾಗುವುದು ಭಗತ್ ಸಿಂಗ್'ರ ಗಲ್ಲಿಗೇರಿಸುವ ಸಂದರ್ಭ.. ತಾನು ಅಹಿಂಸವಾದಿಯಾಗಿರುದರಿಂದ, ಹಿಂಸೆ-ಅಹಿಂಸೆ ಗಳ ಬಗೆ ತಲೆ ಕೆಡಿಸಿಕೊಳ್ಳದೆ ಹೋರಾಡುತಿದ್ದ ಭಗತ್ ಬೆಂಬಲಕ್ಕೆ ನಿಂತರೆ ತಾನು ನಂಬಿದ್ದ ತತ್ವಕ್ಕೆ ದ್ರೋಹ ಬಗೆಯುತ್ತೇನೆ ಎಂದೋ? ಅಥವ ಭಗತ್ ನಾಸ್ತಿಕನಾಗಿರುವುದರಿಂದ ಸಮೂಹ ನಾಯಕನಾದ ತಾನು, ಹೋರಾಟಕ್ಕೆ ಬೆಂಬಲ ಕಳೆದು ಕೊಳ್ಳುತೇನೋ ಎಂಬ ಭಯವೋ.. ಒಟ್ಟಿನಲ್ಲಿ ಇದುವರೆಗೆ ನನ್ನನು ದ್ವಂದ್ವದಲ್ಲಿ ಇರಿಸಿದ ಗಾಂಧಿಯ ಈ ಒಂದು ಮುಖ.. ಏಕೆಂದರೆ ಸತ್ಯ ಮತ್ತು ಅಹಿಂಸೆ ಇವೆರಡರ ಮಧ್ಯ ಆಯ್ಕೆ ಮಾಡುವ ಸಂದರ್ಭ ನಾನು 'ಸತ್ಯ' ವನ್ನು ಆಯ್ಕೆ ಮಾಡುತ್ತೇನೆ ಎಂದಿದ್ದಾರೆ...
ಮತ್ತೆ ಗಾಂಧೀ ನೆನಪಾಗುವುದು ವಿಭಜನೆಯ ಸಂದರ್ಭ.. ಶ್ರೇಷ್ಠತೆ ಮತ್ತು ಪೂರ್ವಾಗ್ರಹಗಳ ಮಧ್ಯ ಸಂಕುಚಿತಗೊಂಡಿರುವ ನಮ್ಮ ಮನಸ್ಸು ಭಾರತ-ವಿಭಜನೆಗೆ ಏಕವ್ಯಕ್ತಿಯನ್ನು ಹೊಣೆ ಮಾಡುತೇವೆ.. ಅಲ್ಲಿ ಎಲ್ಲರ ಪಾಲು ಇತ್ತು ಎನ್ನುವ ಸತ್ಯವನ್ನು ಮರೆಯುತೇವೆ.. ನಾಯಕನಾದವನು ತೆಗೆದು ಕೊಳ್ಳುವ ತೀರ್ಮಾನ, ಅದು ಆಗಿನ ಸತ್ಯವನ್ನು ಅವಲಂಬಿಸಿರುತ್ತದೆ ಮತ್ತು ಒಂದು ಸಮೂಹದ ತೀರ್ಮಾನ ಆಗಿರುತ್ತದೆ..ಒಟ್ಟಿನಲ್ಲಿ ಚಿತ್ರಕಾರನ ಚಿತ್ರಕ್ಕೆ, ಲೇಖಕನ ಲೇಖನಕ್ಕೆ, ನಿರ್ದೇಶಕನ ಸಿನಿಮಾಕೆ, ಕಥೆಗಾರನ ಕಥೆಗೆ, ಹೋರಾಟಗಾರನ ಹೋರಾಟಕ್ಕೆ ಸ್ಪೂರ್ತಿಯಾಗಿದ್ದಾರೆ ...
ಮತ್ತೆ ಕೆಲವು ವಿದ್ಯಾರ್ಥಿಗಳಿಗೆ ಗಾಂಧಿ ಅನ್ನುವುದು ಸಹ ವಿದ್ಯಾರ್ಥಿಗಳನ್ನು ಛೇಡಿಸುವ ವಸ್ತು.. ಕೆಲವರಿಗೆ ಅವರಿಂದ ಒಂದು ರಜೆ ಸಿಕ್ಕುತದಲ್ಲ ಎನ್ನುವ ಖುಷಿ.
ಆದರೆ ನಮ್ಮೊಡನೆ ಗಾಂಧೀ ಇಲ್ಲದಿದ್ದರೂ ಅವರು ಬಿಟ್ಟು ಹೋದ ಆದರ್ಶ, ದ್ವಂದ್ವ ಮಾತ್ರ ಕಾಡುತ್ತಲೇ ಇರುತ್ತದೆ.. ಹಾಗೆ ಗಾಂಧೀ ಎನ್ನುವ ಏಕ ವ್ಯಕ್ತಿ ಇಂದು ಜಗತಿನಾದ್ಯಂತ ಚರ್ಚಿಸಲ್ಪಡುತ್ತಿರುವ ವ್ಯಕ್ತಿತ್ವ ಅಂದರೆ ಅದು ಅವರಿಗೆ ಸಲ್ಲುತಿರುವ ನಿಜವಾದ ಗೌರವವೇ ಸರಿ..
ಕೊನೆಯಲ್ಲಿ.. ಗಾಂಧಿ ಜಯಂತಿ ಅಂದರೆ ನನಗಿಂತ ನನ್ನ ತಂಗಿಗೆ ತುಂಬಾನೇ ಖುಶಿ! ಏಕೆಂದರೆ ನಮ್ಮ ಹುಟ್ಟು ಹಬ್ಬಕ್ಕೆ ಇಲ್ಲದ ರಜೆ ಅವಳ bday ಗೆ ಸಿಗುತದಲ್ಲ!!
2 comments:
Hey,nice thoughts again!I like the last part of the write up because its very rare to get a public holiday on one's b'day!:)
cool work..i wish to add to it recently popularization of Gandhi caps by Anna Hazare!
Post a Comment