Monday, 13 February 2012

ಪ್ರೀತಿ ಇಲ್ಲದ ಮೇಲೆ...!

ಪ್ರೀತಿ ಅನ್ನುವುದು ಒಂದು ವಿಶಿಷ್ಟವಾದ ವಸ್ತು. ಇದು ವರ್ಷದ ಮುನ್ನೂರೈವತ್ತೈದು ದಿವಸಾನು ಇರಲೇಬೇಕಾದದ್ದು. ಅದಿಲ್ಲದೇ ಹೋದರೆ ಯಾವೊಬ್ಬನೇ ವ್ಯಕ್ತಿ ಬದುಕಲು ಸಾಧ್ಯವಿಲ್ಲ.

ಅಂದ ಹಾಗೆ ಪ್ರೀತಿಗೆ ಹಲವು ಮುಖ ಇದೆ. ಅದರಲ್ಲಿ ತಾಯಿಯ ಪ್ರೀತಿ ವಾತ್ಸಲ್ಯದಿಂದ ಕೂಡಿದರೆ, ಸಹೋದರಿಯ ಪ್ರೀತಿ ವಿಶ್ವಾಸದಿಂದ ಕೂಡಿರುತ್ತೆ. ತಂದೆಯ ಪ್ರೀತಿ ಭರವಸೆಯ ಮೇಲೆ ನಿಂತಿರುತ್ತದೆ. ಹೀಗೆ ಹಲವು ರೀತಿ. ಗೆಳೆಯ/ಗೆಳತಿಯ ಪ್ರೀತಿ ಮಾತ್ರ ನಮ್ಮಲ್ಲಿ ಆತ್ಮವಿಶ್ವಾಸ, ನೆಮ್ಮದಿ ಎಲ್ಲವನ್ನೂ ಕೊಡುತದೆ!

ಕೆಲವೊಮ್ಮೆ ನಾವು ಭ್ರಾಮಕ ಜಗತ್ತಿನಲ್ಲಿ ನಿಷ್ಕಲ್ಮಶ ಪ್ರೀತಿಯನ್ನು ತಪ್ಪಾಗಿ ಅರ್ಥೈಸುವುದುಂಟು.. ಹುಡುಗಿಯೊಬ್ಬಳು ಹುಡುಗನೊಂದಿಗೆ ನಕ್ಕು, ಮಾತಾಡಿದರೆ ಕೆಲವೊಮ್ಮೆ ಅವ ಗ್ರಹಿಸುವುದೇ ಬೇರೆ, ಇನ್ನು ಅವ ಹಾಗೆ ತಿಳಿಯದಿದ್ದರೂ, ಬೇರೆಯವರು ಬಣ್ಣಕಟ್ಟಿ ಇಲ್ಲದ್ದನ್ನೆಲ್ಲ ಪ್ರಚಾರ ಮಾಡುತ್ತಾರೆ. ಮತ್ತೆ ಕೆಲವರಿಗೆ attraction, infatuation ನನ್ನೇ ಪ್ರೀತಿ ಎಂದು ಗ್ರಹಿಸಿಬಿಡುತ್ತಾರೆ.
ಒಟ್ಟಿನಲ್ಲಿ ಪ್ರೀತಿ ಅನ್ನುವುದು ಅನೂಹ್ಯವಾದ ಒಂದು ಭಾವನೆ. ಅದು
ಎರಡು ಹೃದಯಗಳ ಮಧ್ಯ ಗಾಡವಾಗಿ ಬಂಧಿಸಲ್ಪಡುವಂತದ್ದು. ಅದು ಕೆಲವೊಮ್ಮೆ ಪ್ರೇಮವಾಗಿ ಮಾರ್ಪಾಡಾಗುತ್ತದೆ. ಆದರೆ ಪ್ರೀತಿಯೊಂದು ಸದಾ ಬೆನ್ನಿಗಿದ್ದರೆ ನಮಗೆ ಯಾವುದೇ ಮಾನಸಿಕ ಕ್ಲೇಶ ಇರಲು ಸಾಧ್ಯವಿಲ್ಲ.. ಪ್ರೀತಿಯು ಕೈ ತಪ್ಪಿದಾಗ ಅದೆಷ್ಟೋ ಜನ ಜೀವನವನ್ನೇ ಕೊನೆಯಾಗಿಸಿದ್ದುಂಟು. ಮತ್ತೆ ಕೆಲವಾರು ಜನರು ಪ್ರೇಮ ಕೈತಪ್ಪಿದ ದುಃಖವನ್ನು ಮರೆಯಲು positive ಆಗಿ ಕೆಲಸ ಮಾಡಿ, ಅದರಲ್ಲಿ ಯಶಸ್ಸು ಕಂಡವರಿದ್ದಾರೆ. ರಾಜಕಪೂರ್ ನ mera naam joker, ಪುಟ್ಟಣ್ಣ ಕಣಗಾಲ್ ನವರ ಮಾನಸ ಸರೋವರ ಸಿನಿಮಾ ಇದಕ್ಕೆ ತಕ್ಕ ಉದಾಹರಣೆ.

ಸಲ್ಮಾನ್, ರೇಖಾ ಹೀಗೆ ಬರೆದರೆ ಮುಗಿಯದಷ್ಟು ಜನ ಪ್ರೇಮವನ್ನು ಉಳಿಸಿಕೊಳ್ಳಲಾಗದವರಿದ್ದಾರೆ. ಮತ್ತೆ ಕೆಲವರು ಪ್ರೇಮ ವನ್ನು ನಿವೇದಿಸಿ ಕೊಳ್ಳಲಾಗದೆ ಕವಿ ಕೀಟ್ಸ ನಂತೆ ಸತ್ತವರಿದ್ದಾರೆ.. ಅದೆಲ್ಲಕಿಂತ ಹೆಚ್ಹಾಗಿ ಕಾಡುವ ಒಂದು ಕತೆ ಅಮೃತಾ ಪ್ರೀತಂ ನದ್ದು ಪಂಜಾಬಿನ ಕವಯತ್ರಿ ತನ್ನ ಪ್ರೇಮಿಯನ್ನು ಅರಸುತ್ತಾ ಮುಂಬೈ ತಲುಪಿ ಅವನಲ್ಲಿ ಪ್ರೇಮ ನಿವೇದಿಸಿದಾಗ, ಅದನ್ನು ಆತ ತಿರಸ್ಕರಿಸುತ್ತಾನೆ. ಬಾಲ್ಯದಿಂದಲೂ ಅವನ ಕವನ ಗಳನ್ನು ಓದಿ ಮನಸೋತು, ಕವಿಯಲ್ಲೇ ಅನುರಕ್ತಳಾದ ಈಕೆ, ಬಂದ ದಾರಿಗೆ ಸುಂಕವಿಲ್ಲವೆಂದು ಬಗೆದು ಹಿಂತಿರುಗಿದಳು. ಆತ ಬೇರ್ಯಾರು ಅಲ್ಲ. ಕಭಿ ಕಭಿಯಂತ ಹಾಡು ಬರೆದ ಖ್ಯಾತ ಕವಿ ಸಾಹಿರ್ ಲೂಧಿಯಾನ್ವೀ. ಇವಳು ಅದೇ ನೋವಿನಲ್ಲಿ ಹಿಂತಿರುಗಿದಾಗ ಸಿಕ್ಕಿದ್ದು ಅವಳನ್ನೇ ಪ್ರೀತಿಸುತಿದ್ದ ಕಲಾಕಾರ ಇಮ್ರೋಜ್.!! ಪ್ರೀತಿ ಅನ್ನುವುದು ಹಾಗೆ ನಾವಂದು ಕೊಂಡಂತೆ ಇರಲ್ಲ.

ಶುದ್ದ ಪ್ರೀತಿ ಅನ್ನುವುದು 'ಮಾರ್ಕೆಟ್' ಪ್ರಪಂಚದ ಬುಸ್ಸಿನೆಸ್ಸ್ ಅಲ್ಲ. ಸಂತ ವೆಲೆಂಟೈನನ ನಿಜವಾದ ಧ್ಯೇಯಕ್ಕೆ ಅಪಚಾರ ಎಸಗುವಂತದಲ್ಲ. ಷೇಕ್ಸಪಿಯರ್ ಹೇಳಿದ ಹಾಗೆ ಅದು ಕಾಲಕ್ಕೆ ತಕ್ಕಂತೆ ಬದಲಾಗದೆ ಶಾಶ್ವತ ವಾಗಿರುವಂತದ್ದು(fixed mark). 'Love is not time's fool'.

ನಾವಾದರೋ, 'ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲ್ಲಿ' ಎನ್ನುವ ಕವಿವಾಣಿ ಯಂತೆ ' ನಮ್ಮೊಳಗೇ ಇರುವ ಪ್ರೀತಿ ಸ್ನೇಹಗಳನ್ನು ಗುರುತಿಸಲಾರೆವು '. ಹೀಗೆ ಪ್ರೀತಿ ಅನ್ನುವುದು ಮರುಭೂಮಿಯಲ್ಲಿನ ಓಯಸಿಸ್ ನಂತೆ!

'ಪ್ರಿತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ?,ಮೋಡ ಕಟ್ಟಿತು ಹೇಗೆ? ಹನಿಯೊಡೆದು ಮಳೆಯ ಸುರಿಸಿತು ಹೇಗೆ?'

ಪ್ರೀತಿಯಿಲ್ಲದ ಮೇಲೆ ಬ್ಲಾಗನ್ನು ಬರೆಯುವುದು ಹೇಗೆ, ಮತ್ತೆ ನೀವು ಓದುವುದು ಹೇಗೆ!?

ಅಂದ ಹಾಗೆ ಮತ್ತೊಬ್ಬ ಕವಿ 'ಪ್ರೀತಿಯಿಲ್ಲದ ಮೇಲೆ ನಾವೇನು ಮಾಡಲಾರೆವು, ದ್ವೇಷವನ್ನೂ ಸಹ' ಅಂದಿದ್ದಾನೆ.

1 comment:

Appu said...

Nicely written!:)the love between siblings, parents and friends is unconditional...:)