Tuesday, 10 January 2012

ಊರೂರು ಸುತ್ತಿದ ಮೇಲೂ, ನಮ್ಮೂರೇ ನಮಗೆ ಮೇಲು!

ನಾವೆಲ್ಲಾದರು ಹೊರದೇಶಕ್ಕೆ ಹೋದರೆ, ಅಲ್ಲೊಬ್ಬ ಭಾರತೀಯ ಸಿಕ್ಕಿದರೆ ಅಬ್ಬ ಎಷ್ಟು ಖುಷಿಯಾಗ ಬಹುದು.. ಮತ್ತೆ ಅವ ಕರ್ನಾಟಕದವನಾದರೆ ನಮ್ಮ ರಾಜ್ಯದವನೆಂಬ ಆತ್ಮೀಯತೆ ಬರುತ್ತದೆ.. ಮತ್ತೆ ನಮ್ಮೂರಿನವನೇ ಸಿಕ್ಕಿದರೆ ಅಬ್ಬ ಖುಷಿಗೆ ಪಾರವೇ ಇರುವುದಿಲ್ಲ.. ಅಂತಹ ಬಂಧ ಬೆಸೆದಿರುತ್ತದೆ ನಮ್ಮೂರು!

ಎಲ್ಲರ ಹಾಗೆ ನನ್ನ ಊರಿನ ಬಗೆ ನನಗೆ ಪ್ರೀತಿ ಇದೆ,ಹೆಮ್ಮೆ ಇದೆ, ಭ್ರಮೆ ಇದೆ, ಇವೆಲ್ಲಕಿಂತ ಹೆಚ್ಹಾಗಿ ನೆಮ್ಮದಿ ಇದೆ. ನನ್ನೂರು ಅಂದ ಮೇಲೆ ಸದಾ ಎಚರದಲ್ಲಿದ್ದು, ಆರ್ಭಟಿಸುವ ಕಡಲು.. ಮತ್ತೆ ಕಡಲ ಕಡೆ ಹರಿಯುವ ಕೆಲವಾರು ನದಿ. ನದಿಯ ಎರಡೂ ಬದಿ ಹಸಿರು ಬಣ್ಣದಿಂದ ಆವೃತವಾಗಿರುವ ಬೆಟ್ಟ ಗುಡ್ಡಗಳು.

ನನ್ನೂರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅಥವಾ sweet n smart ಆಗಿ ಮಂಗಳೂರು.. ಇದೊಂದು ಪುಟ್ಟ ಭಾರತ! ಇಲ್ಲಿ ತುಳು, ಕೊಂಕಣಿ, ಬ್ಯಾರಿ, ದಕ್ಕನಿ, ಹೀಗೆ ಹಲವಾರು ಭಾಷೆ, , ವಿವಿಧ ಸಂಸ್ಕೃತಿ,ಬೇರೆ ಬೇರೆ ಧರ್ಮದ ಜನ. ಹಾಂ! ಸಂಸ್ಕೃತಿ ಅನ್ನುವಾಗ ನೆನಪಾಗುವುದು ಮದುವೆ.. ಅಬ್ಬ ಎಷ್ಟೊಂದು ವಿಭಿನ್ನ ರೀತಿ..!

ಅದನ್ನು ವಿವರಿಸಬೇಕಾದರೆ ಒಂದಿಡೀ ಬ್ಲಾಗ್ ಸಾಕಾಗಲಿಕ್ಕಿಲ್ಲವೇನೋ?

ಮತ್ತೆ ಮಂಗಳೂರು ಅನ್ನುವಾಗ ಕಲರ್- ಫುಲ್!! ಬಸ್ಸುಗಳು.. ಒಂದರ ಹಿಂದೆ ಮತ್ತೊಂದು.. ವೇಗದಲ್ಲಿ ಒಂದನ್ನು ಮತ್ತೊಂದು ಬಿಡಲಾರದು.

ಮತ್ತೆ ಮಂಗಳೂರು ಅಂದ ಮೇಲೆ ಮೀನು ಇರಲೇಬೇಕಲ್ಲವೇ..! ಅದೇ ಇಲ್ಲಿಯ ವಿಶೇಷ ಸಹ.. ಮೀನು ಇಷ್ಟಪಡ ಯಾವೊಬ್ಬ ಮಂಗಳೂರಿಗನೂ ಬಹುಶ (non vegterian)ಇರಲಾರನು ಅಂತ ಅನ್ನಿಸುತ್ತದೆ..

ಇನ್ನು ಮೀನು ಸಾಂಬಾರಿಗೆ, ಬಿಸಿ ಬಿಸಿ ನಿರ್ದೋಸೆ ಸಿಕ್ಕಿದರೆ ಕೇಳುವುದೇ ಬೇಡ!!

ಈ ಮೀನು ಎಷ್ಟು ಫೇಮಸ್ಸು ಅಂದ್ರೆ.. ಬೆಂಗಳೂರಲ್ಲಿ ನನ್ನ ಬ್ರಾಹ್ಮಿನ್ ಗೆಳೆಯರೊಬ್ಬರು ಇದ್ದಾಗ, ಗೆಳೆಯನೊಬ್ಬ ಸದಾ ಹೇಳುತಿದ್ದಂತೆ.. ''ನೀವು ಮಂಗಳೂರಿಗರು, ಮೀನು ತಿನ್ನುವವರು, ಅದರಿಂದ ಬಹಳ ಬುದ್ಧಿವಂತರು'' ಅಂತ.. ಇವರು ನಾನು veg, ಮೀನು ತಿನ್ನಲ್ಲ ಅಂತ ಎಷ್ಟೇ ಹೇಳಿದರು ಕೇಳ್ತಾ ಇರಲಿಲ್ವಂತೆ. 'ಮೀನು' ಅಷ್ಟಕ್ಕೂ ಕರಾವಳಿಯನ್ನು ಪ್ರಭಾವಿಸಿದೆ.

ಇನ್ನೊಂದು ಮಂಗಳೂರಿನ ವಿಶೇಷ ಅಂದ್ರೆ ಇಲ್ಲಿ ಎಷ್ಟು ಭಾಷೆಯಿದೆಯೋ ಅಷ್ಟು ಹೆಸರು ಈ ಊರಿಗಿದೆ.. ಮಂಗಳೂರು ಇಂಗ್ಲಿಷ್ ನಲ್ಲಿ mangalore ಆದರೆ ತುಳುವಿನಲ್ಲಿ ಕುಡ್ಲ, ಮತ್ತೆ ಕೊಂಕಣಿಯಲ್ಲಿ ಕೊಡಿಯಾಲ, ಇನ್ನು ಬ್ಯಾರಿಯಲ್ಲಿ ಮೈಕಾಲ. ಹೀಗೆ ಸಾಗುತ್ತದೆ.. ಇನ್ನು ಮಲಯಾಳಿಗಳ ಬಾಯಲ್ಲಿ ಮಂಗಲಾಪುರಂ..!

ಹಲವಾರು ಶಿಕ್ಷಣ ಸಂಸ್ಥೆಯಿರುವ ನನ್ನೂರು ಬುದ್ದಿವಂತರ ಜಿಲ್ಲೆ ಅಂತ ಫೇಮಸ್ಸು. ಆದರೆ ಕೆಲವಾರು ರಾಜಕೀಯದವರ ಅಧಿಕಾರದ ಹಪಹಪಿಕೆಗೆ ಬಲಿಯಾಗುವುದು ಮಾತ್ರ ದುರಂತ..! ಬೇರೆ ರಾಜ್ಯದ ಪೋರ್ಟ್ ಸಿಟಿ ಗೆ ಹೋಲಿಸಿದರೆ, ನನ್ನೂರು ಬೆಳೆದೇ ಇಲ್ಲ ಅಂತ ಅನಿಸುತ್ತದೆ!

ಆದರೆ

ರಾಜಕಿಯದವರೇನು ತಿಪ್ಪರಲಾಗ ಹಾಕಿದರೂ ನನ್ನೂರಿನ ಬಾಂಧವ್ಯಕ್ಕೇನು ಕೊರತೆಯಾಗಿಲ್ಲ. ಇಲ್ಲಿಯ ಜನ ಧರ್ಮ,ಭಾಷೆ ಮರೆತು ಮಾಡುವ ಸೇವೆ-ಸಹಾಯ ಬಹುಶ ಬೇರೆ ಊರಿಗೆ ಹೋಲಿಸಿದರೆ ಸ್ವಲ್ಪ ಜಾಸ್ತಿಯೇ ಅಂತ ಅನ್ನಿಸುತ್ತದೆ.. ಅದು ಅಕ್ಸಿಡೆಂಟ ಟೈಮಲ್ಲಿ ಇರಬಹುದು ಅಥವಾ ಬೇರೆ ಯಾವುದೇ ಸಂದರ್ಭ ಇರಬಹುದು..

ಹೀಗೆ ನನ್ನೂರನ್ನು ಬಿಟ್ಟು ದೂರ ಹೋದಾಗಲೆಲ್ಲ ತೀವ್ರವಾಗಿ ಕಾಡುವ ಊರು ನಾನು ಪ್ರೀತಿಸುವ ನನ್ನ ತವರೂರು..!

2 comments:

Appu said...

I personally liked this topic a lot because this is how every Mangalorean feels..:)This place has varied culture, variety of local mouth watering cuisines,down to earth people, serene beaches, old palatial houses, etc..Moreover, its an educational hub,which attracts students from different states and across the border...The transport facilities are excellent compared to any place in India..I only wish this place more job opportunities, so that the local people do not have to migrate elsewhere..:)I have traveled many places in South India..Among them, Mangalore is a paradise!

Akshatha K said...

superr!! I too love my home town:)