Tuesday, 17 January 2012

ಇದು ಹುಚ್ಹು ಕೋಡಿ ಮನಸು...


ಆಗ ನಾನು ಪಿ ಯು ಕ್ಲಾಸಲ್ಲಿದ್ದೆ..! ಹೃತಿಕ್ ರೋಶನ್ ಫಿಲಂ ಇಂಡಸ್ಟ್ರಿ ಗೆ ಎಂಟ್ರಿ ಕೊಟ್ಟ ಸಮಯ.. ಪಿ ಯು ಕ್ಲಾಸಿನ ಮೂರು ಜನ ಹುಡುಗರು "ಕಹೋ ನ ಪ್ಯಾರ್ ಹೈ ಫಿಲ್ಮ್" ನ songs fusion ಮಾಡಿ, ಅದಕ್ಕೆ ಡಾನ್ಸ್ ಮಾಡಿ, ಎಲ್ಲರ ಮನ ಗೆದ್ದಿದರು.. ಅದೆಷ್ಟು ಫೇಮಸ್ಸಾಯಿತೆಂದರೆ, ಅದರಲ್ಲೋಬ್ಬನಿಗೆ ಹೃತಿಕ್ ಎಂದು ಅಡ್ಡ ಹೆಸರು ಬಿತ್ತು.. ಅವನು ಹಾಗೇ, ಎಲ್ಲರ ನಾಡಿಮಿಡಿತ ಅರಿತವರಂತೆ ಮತ್ತೆ ಹೃತಿಕ್ ನದೇ ಹಾಡಿಗೆ ಡಾನ್ಸ್ ಮಾಡುತಿದ್ದ.. ಏಕೆಂದರೆ ಆಗ ಹೃತಿಕ್ ಎಷ್ಟೋ ಹುಡುಗಿಯರ ಮನ ಕದ್ದು 'ಚಿತ್ತ ಚೋರ' ನಾಗಿದ್ದ. ಹಾಗೆಯೇ ಇವನ ಅಭಿಮಾನಿಗಳಲ್ಲಿ ಹುಡುಗಿಯರ ಸಂಖ್ಯೆಯೇ ಜಾಸ್ತಿ ಇತ್ತು.. ಕೆಲವು ಹುಡುಗರಿಗೆ ಹೃತಿಕ್ ನಂತೆ ಇವನಲ್ಲೂ ಸ್ವಲ್ಪ 'ಈರ್ಷ್ಯೇ' ಇತ್ತು. ಏಕೆಂದರೆ ಅವರ 'ಹುಡುಗಿ' ಯಾರು ಯಾವಾಗಲು ಹೃತಿಕ್ ನನ್ನು ಮಾತ್ರವಲ್ಲ ಇವನನ್ನೂ ಸ್ವಲ್ಪ ಜಾಸ್ತಿಯೇ ಹೊಗಳುತಿದ್ದರು..!

ಮತ್ತೆ ಡಿಗ್ರೀ ಯಲ್ಲಿರುವಾಗಲೂ ಅದೇ ಕಥೆ.. ಯಾವ ಹುಡುಗಿಯೇ ಇರಲಿ ಅವಳ ಬಾಯಲ್ಲಿ ದಿನಕ್ಕೆರಡು ಬಾರಿಯಾದರೂ ಇವನ ಹೆಸರು ಹೇಳದಿದ್ದರೆ ನಿದ್ದೆ ಬರುತಿರಲಿಲ್ಲವೇನೋ..? ಹೃತಿಕ್ ನ ಹೆಸರು ಹೇಳುವಾಗ ಅವನ ಹೆಸರು ಮತ್ತು ಅವನ ಹೆಸರು ಹೇಳುವಾಗ ಹೃತಿಕ್ ನ ಹೆಸರು, ಹೀಗೆ ಕಲಸುಮೆಲೋರಗವಾಗಿ ಬರುತಿತ್ತು.ಒಟ್ಟಿನಲ್ಲಿ ಕ್ಯಾಂಪಸ್ ಇಡಿ ಅವನದೇ ಧ್ಯಾನ!


ಆದರೆ ಯಾವಾಗ ಹೃತಿಕ್ ನನ್ನು suzana ಮದುವೆಯಾದಳೋ, ಆಗ ಅದೆಷ್ಟೋ ಹುಡುಗಿಯರು ಮನ ನೊಂದು ಸುಝಾನನ್ನು ಶಪಿಸಿ ಕಣ್ಣೀರಿಟ್ಟಿದ್ದಾರೋ, ಅದೇ ತರದ ಘಟನೆ ಇಲ್ಲಿಯೂ ನಡೆಯಿತು.ಅವ ಫೈನಲ್ ಇಯರ್ ಅಲ್ಲಿ ಇದ್ದ. ಆಗ ತಾನೇ ಫಸ್ಟ್ ಇಯರ್ ಗೆ ಸೇರಿದ ಹುಡುಗಿ ಅವನಿಗೆ clean ಬೌಲ್ಡ. ಹೀಗೆ ಅವ ಲೈಬ್ರರಿ ಯಲ್ಲಿದ್ದರೆ,ಅವಳು ಅಲ್ಲಿಯೇ ಇರುತಿದ್ದಳು. ಮೊದಮೊದಲು ಕಣ್ಣಿನಲ್ಲೇ ಮಾತಾಡ್ತಾ ಇದ್ದ ಇವರು, ಬರುಬರುತ್ತಾ ಸ್ವಲ್ಪ ದೈರ್ಯ ತಂದುಕೊಂಡು ಮಾತಾಡಲು ಪ್ರಾರಂಭಿಸಿದರು. ಅವನ ಪ್ರಕಾರ ಅವಳು, ಅವಳ ಪ್ರಕಾರ ಅವ propose ಮಾಡಿದ್ದಂತೆ. ಅದು ಯಾರೇ ಆದರೂ ಹುಡುಗಿಯರ ಮನ ನೊಂದದ್ದಂತು ಹೌದು.. ಅಬ್ಬಬ್ಬ ಅದುವರೆಗೂ ಹೊಗಳ್ತಾ ಇದ್ದ ನಾರಿಮಣಿಗಳಿಗೆ ಸಂಕಟ. ಅವಳ ಮೇಲೆ ಸಿಟ್ಟೇ ಸಿಟ್ಟು. ದಿನಾ ಅವಳನ್ನು ದೂರುವುದೇ ಕೆಲಸ. 'ಹೋಗ್ಲಿ, ಅವಳಾದರು ಮಿಟುಕಲಾಡಿ, ಛೆ ಇವನಿಗೆ ಅರ್ಥವಾಗುವುದು ಬೇಡವಾ? ಅವನ ಹೆಸರು ಅವನಾಗಿಯೇ ಕೆಡಿಸ್ಕೊಳ್ತಾನಲ್ಲ' ಅಂತ ಉವಾಚ ಬೇರೆ.. ಒಟ್ಟಿನಲ್ಲಿ ಕಾಲೇಜಿನ ಹೆಚ್ಹಿನ ಹುಡುಗಿಯರಿಗೆ ಅವನ ಮೇಲೆ ಇದ್ದ ಇಷ್ಟ ಸಿಟ್ಟಾಗಿ ಬದಲಾಗಿತ್ತು.

ಅದರ ನಂತರ, ಕ್ಯಾಂಪಸಲ್ಲಿ, ಹಾಸ್ಟೆಲಲ್ಲಿ ಅವರಿಬ್ಬರ ಬಗೆಯೇ ಚರ್ಚೆ.. ಹೀಗೆ ಹುಡುಗಿಯರ ಪ್ರೀತಿ ಪಾತ್ರನಾದ ಹುಡುಗನೊಬ್ಬ ಅವರ ಸಿಟ್ಟಿಗೆ,ಬೇಸರಕ್ಕೆ ವಸ್ತುವಾದ ವಿಷಯವನ್ನು ನೆನಪಿಸುವಾಗ ಈ ಮನಸು ಅನ್ನುವುದು ಎಷ್ಟು ವಿಚಿತ್ರ ಅಂತ ಅನ್ನಿಸುತ್ತದೆ ಅಲ್ಲವೇ..?

1 comment:

Akshatha K said...

Hmmm story chennagide kano.:-)