ಪುಟ್ಟ ಗೆಳತಿಯ ಕುರಿತು...
ನಾನು ಕಾಲೇಜಿನಲ್ಲಿ ಸ್ವಯಂ ಘೋಷಿತ ಕವಿ ಯಾಗಿದ್ದೆ. ಅದಕ್ಕೆ ತಕ್ಕಂತೆ ಕೆಲವಾರು ಲೈನ್ ಗಳನ್ನೂ ಬರೆದು ಕವಿತೆ ಅಂತ ಕವಿಗೋಷ್ಠಿಯಲ್ಲಿ ಓದ್ತಾ ಇದ್ದೆ. ಯಾರಿಗೆ ಗೊತ್ತು ಅದು ಪದ್ಯಯೋ(poem), ಅಥವಾ ಗಧ್ಯವೋ(prose) ಅಂತ. ಹೀಗೆ ನಾವು ಗೀಚಿದ್ದನ್ನು ಓದುವಾಗ ಕೇಳಲು ಜನ ಬೇಕಲ್ವಾ,ಅದಕ್ಕಾಗಿ auditorium ಹೊರಗೆ ನಿಂತು ಗೆಳೆಯರನ್ನು ಕರೆಯುತಿದ್ದೆವು. ಒಂದು ಸಲ ಹೀಗೆ ಹೊರಗೆ ನಿಂತು ಕರೆಯುವಾಗ pu student ಹೋಗ್ತಾ ಇದ್ರೂ. ಅವರನ್ನು ಕರೆದಾಗ, ಪಾಪ! ನನ್ನ ಮುಲಾಜಿಗೆ ಬಿದ್ದು ಇಬ್ಬರು ಹುಡುಗಿಯರು ಬಂದ್ರು. ಅದರಲ್ಲಿ ಒಬ್ಬಳಂತೂ ಇನ್ನು primary ಸ್ಕೂಲ್ ನವರ ಹಾಗೆ ಕಂಡ್ರೆ, ಮತ್ತೊಬ್ಬಳು high ಸ್ಕೂಲ್ ಗೆ ಹೋಗುವವರ ಹಾಗೆ ಕಾಣುತಿದ್ದಳು.
ಇರಲಿ, ಫುಲ್ ಕ್ಲೋಸ್ ಅಪ್ ಸ್ಮೈಲ್ ನೊಂದಿಗೆ ಎಂಟ್ರಿ ಕೊಟ್ರು.. ಹಾಗೆ ಕರೆದು ಸ್ವಲ್ಪ ಜನ ಆದಾಗ, ಪ್ರೊಗ್ರಾಮ್ ಸ್ಟಾರ್ಟ್ ಆಯಿತು. ಪ್ರೊಗ್ರಾಮ್ ಮುಗಿಯುವಾಗ ಅರ್ಧಕ್ಕಿಂತ ಜಾಸ್ತಿ ಜನ ಖಾಲಿಯಾಗಿದ್ದರೂ, ಈ ಪುಟ್ಟ ಪುಟಾಣಿಗಳು ಮಾತ್ರ ಹೋಗಿರಲಿಲ್ಲ. ಮತ್ತೆ refreshment ಗೆ ಅವರನ್ನು ಕರೆದ್ವಿ.. ಆನಂತರ ಅವರು ನಮ್ಮ ಯಾವುದೇ function ಗೆ permnent member ಆಗಿ ಬಿಟ್ಟರು. ,ಅಂದ ಹಾಗೆ ನಾನಂದು ಕೊಂಡದ್ದು, ಈ ಇಬ್ಬರು ಹಾಸ್ಟೆಲ್ ಹುಡುಗಿಯರು ಅಲ್ಲಿ ಬೋರಾಗುವುದಕ್ಕೆ ಇಲ್ಲಿ ಬರ್ತಾ ಇದ್ರೂ ಅಂತ.!
ಹೀಗೆ ಇರುವಾಗ ಒಂದು ಸಲ, ನನ್ನ ಹುಟ್ಟಿದ ಹಬ್ಬಕ್ಕೆ wish ಮಾಡಲು ಒಂದು ಕಾಲ್ ಬಂತು.. ಆ ಕಡೆ ಹುಡುಗಿಯ ಶಬ್ದ! ಅವಳು ಅದ್ಯಾವುದೋ? ಹೆಸರು ಹೇಳಿದಳು. ಯಾರಪ್ಪ ಅಂತ ನೆನಪಿಸಿದರೂ ತಲೆಗೆ ಹೊಳೆಯಲೇ ಇಲ್ಲ.. ಆದರೂ ಅವಳಲ್ಲಿ ಗೊತ್ತಿದ್ದವರ ಹಾಗೆ ನಟಿಸಿದ್ದೆ..
ಕೆಲವು ದಿವಸ ಬಿಟ್ಟು ಆ ಇಬ್ಬರು ಹುಡುಗಿಯರಲ್ಲಿ ಒಬ್ಬಳು ಸಿಕ್ಕಿದಾಗ, ಮಾತಾಡ್ತಾ ಗೊತ್ತಾಯಿತು ಇವಳೇ ಆ wish ಮಾಡಿದ ಹುಡುಗಿ. ಆಗಲೂ ಅವಳ ಹೆಸರು ಗೊತ್ತೇ ಇರಲಿಲ್ಲ..! ಮತ್ತೆ ಆ ಹೆಸರು ಮರೆತು ಹೋಗಲು ಇಲ್ಲ..! ಹೀಗೆ ನಮ್ಮ ಗೆಳೆತನ ಆರಂಭ.. ಈಗ ಅವಳನ್ನು ನೋಡದೆ ತುಂಬಾ ವರ್ಷಗಳಾದರೂ ಅವಳ ಹೆಸರು ನೆನಪಿಗೆ ಬಂದ ಕೂಡಲೇ, ಅದೇ ಪುಟ್ಟ ಮುಗ್ದ ಮುಖ ನೆನಪಾಗುವುದು. ನನ್ನ ಆಗಿನ ಗೆಳೆಯರನೇಕರು ಈಗ ಎಲ್ಲಿದ್ದಾರೋ ಗೊತ್ತಿಲ್ಲ. ಆದರೆ ನನ್ನ ಸಹಪಾಟಿಯಲ್ಲದ, ನನಗಿಂತ ಚಿಕ್ಕವಳಾದ ಅವಳು , ಈಗಲೂ ನನ್ನ ತಂಗಿಯಂತೆ ಸದಾ ಕಾಲೆಳೆಯುತ್ತ ಮಾತಾಡುತ್ತ ಇರುತ್ತಾಳೆ..
ಮೊನ್ನೆ ಒಮ್ಮೆ ಅವಳು ಹೇಳಿದಳು ಅವಳಿಗೆ ಒಂದು ಪ್ರೊಪೋಸಲ್ ಬಂದಿದೆ ಅಂತ. ಇಬ್ಬರ ತಂದೆ ತಾಯಿಗೆ ಒಪ್ಪಿಗೆಯಾಗಿದೆಯಂತೆ. ಅದಕ್ಕೆ ನಾ ಕೇಳಿದೆ ನಿನಗೆ ಹೇಗೆ ಅನಿಸುತದೆ? ಅಂತ. ಅವಳು ನಾಚಿಕೆಯಲ್ಲಿ ''ಅವನಿಗೆ ನಾ ಇಷ್ಟವಾಗಿದೇನೆ, ಹಾಗೆ ನನಗೂ..!'
ಹೀಗೆ ಅವಳ ಹುಡುಗನ ಬಗೆ ನನ್ನಲ್ಲಿ ಹೇಳುತ್ತಾ ಇರುವಾಗ, ಅರೆ! ಇವನ ಹೆಸರು ಎಲ್ಲೋ ಕೇಳಿದ್ದೇನೆ ಅಲ್ವ ಅಂತ ಅನಿಸಿತು. ಮತ್ತೆ ನೆನಪಿಸುವಾಗ ನನ್ನ M.Sc ಗೆಳೆಯರ ಸಹಪಾಠಿಯಾಗಿದ್ದ , ಮಾತ್ರವಲ್ಲ ಪರಿಚಯವಿರುವ ವ್ಯಕ್ತಿಯಾಗಿದ್ದ ! ಒಟ್ಟಿನಲ್ಲಿ ಅವರಿಬ್ಬರೂ ಪರಸ್ಪರ ಹೇಳಿ ಮಾಡಿಸಿದ ಜೋಡಿಯ ಹಾಗೆ ಇದ್ದಾರೆ .
ಅವರ ಮುಂದಿನ ಬಾಳು ಇನ್ನಷ್ಟು ಸುಖಕರವಾಗಿರಲೆಂದು ಹಾರೈಸುತ್ತಾ...
7 comments:
I got tears while reading this, because of happiness..More than this I cant tell anything dear.
I got tears while reading this, because of happiness..More than this I cant tell anything dear.
hi asaf nice to hear this from u........those were the best days which will never return......i think even i know that girl........thanks for sharing and pls do wright more abt college life it feels good when i hear or discuss abt our college days...good luck andtake care
hi asaf nice to hear this from u........those were the best days which will never return......i think even i know that girl........thanks for sharing and pls do wright more abt college life it feels good when i hear or discuss abt our college days...good luck andtake care
hey buddy, it is good to reflect upon old memories but my buddy deserves the best and someday he will get the best :-)
It is very thoughtful and nice of you to remember your good friend who also happens to be a well wisher!:)Long live your friendship...
Post a Comment