ಮರೆಯಲಾಗದ ಹಾಡು ರಫಿ...
ಹಳೆಯ ಕಾಲದ ಹಾಡುಗಳಿಗೆ ಮರುಳಾದವರು ನೀವಾಗಿದ್ದರೆ ರಫಿ,ಕಿಶೋರ್ ಮುಕೇಶ್ ರನ್ನು ಹೇಗೆ ತಾನೇ ಮರೆಯುವುದು.. ಅಷ್ಟಕ್ಕೂ ನಮ್ಮ ಮನವನ್ನು ಆವರಿಸಿ ಬಿಟ್ಟಿದ್ದಾರೆ. ಹಾಗೆ ಕೇಳುತ್ತಾ ಕೂತರೆ ಬೋರು ಅಂತ ಅನ್ನಿಸಲು ಸಾಧ್ಯವೇ ಇಲ್ಲವೇನೋ..? ಇದು ಯಾಕೆ ನೆನಪಾಯಿತೆಂದರೆ, ಕಳೆದ ವಾರ ರಫಿ ಇದ್ದಿದ್ದರೆ 87 ನೆ ವಸಂತ ಕ್ಕೆ ಕಾಲಿಡುತಿದ್ದಲ್ಲದೆ, ಅದೆಷ್ಟೋ ಹಾಡುಗಳನ್ನು ಕೊಡುತಿದ್ದನೇನೋ!
4 ದಶಕಗಳ ಕಾಲ ಹತ್ತಿರ ಹತ್ತಿರ 8 ಸಾವಿರ ಹಿಂದಿ ಹಾಡುಗಳನ್ನು ಹಾಡಿದ.. O p ನಯ್ಯರ್, ಶಂಕರ್ ಜೈಕಿಶನ್, ನೌಷಾದ, ಲಕ್ಸ್ಮಿಕಾಂತ ಪ್ಯಾರಿಲಾಲ್ ರಂತಹ ಅತಿರಥ ಮಹಾರಥರಾದ ಸಂಗೀತ ನಿರ್ದೇಶಕರೊಟ್ಟಿಗೆ ಕೆಲಸ ಮಾಡಿದ್ದಲ್ಲದೆ, ಶಾಸ್ತ್ರಿಯ,ಭಕ್ತಿ, ವಿರಹ ಗೀತೆ, ಪ್ರೇಮ ಗೀತೆ,ಕವ್ವಾಲಿ, ಗಜಲ್, ಭಜನೆ ಹೀಗೆ ಎಲ್ಲ ರೀತಿಯ ಹಾಡುಗಳನ್ನು ಹಾಡಿದ..
ರಫಿ ಎಷ್ಟು ಶ್ರೇಷ್ಠ ಹಾಡುಗಾರನೋ ಅಷ್ಟೇ ವಿನಯವಂತ! ಒಮ್ಮೆ O.p. ನಯ್ಯರ್ ಗೆ ಕೊಟ್ಟ ಟೈಮ್ ಗಿಂತ ಸ್ವಲ್ಪ ಲೇಟ್ ಆಗಿ ಬಂದಾಗ ಸಿಟ್ಟಾದ ನಯ್ಯರ್ ಕಾರಣ ಕೇಳಿದಾಗ, ಜೈಕಿಶನ್ ಸೆಟ್ ಅಲ್ಲಿ ಸ್ವಲ್ಪ ಲೇಟ್ ಆಯಿತು ಅನ್ನುವಾಗ, ನಿಮ್ಮಲ್ಲಿ ಜೈಕಿಶನ್ ಗೆ ಇರೋ ಟೈಮ್ ಈ ನಯ್ಯರ್ ಗೆ ಇಲ್ವಲ್ಲ ಅಂತ ಕೂಗಾಡಿ ಸಿಟ್ಟಲ್ಲಿ ಆ ಅಡಿಶನನ್ನೇ ಕ್ಯಾನ್ಸಲ ಮಾಡಿದ್ರು. ಆದರೆ ರಫಿ ಯಾವುದನ್ನೂ ಮನಸಿಗೆ ಹಚಿಕೊಳ್ಳದೆ ಕೆಲ ದಿವಸದ ನಂತರ ನಯ್ಯರನ್ನು ಭೇಟಿಯಾದ.. ಆಗ ಸ್ವತಹ ನಯ್ಯರೆ ರಫಿಯ ಈ ಗುಣದ ಬಗೆ ಬೆರಗಾಗಿದ್ರು!
ಇನ್ನು ರಫಿ ಹಾಡಿದ ಯಾವ ಹಾಡುಗಳ ಬಗೆ ಹೇಳುವುದು!
ಸೃಷ್ಟಿಕರ್ತನ ಬಗ್ಗೆ ಹಾಡಿದ 'ಯಾ ಇಲಾಹಿ, ಯಾ ಇಲಾಹಿ' ನಮ್ಮನ್ನು ಆಧ್ಯಾತ್ಮ ಲೋಕಕ್ಕೆ ಕೊಂಡೊಯ್ದರೆ, ದಿಲೀಪ್ ಸಿನಿಮಾ ಕ್ಕೆ ಹಾಡಿದ ಮಧುವನ್ ಕಿ ರಾಧಿಕ ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ.ಇನ್ನು hum kise se kum nahi ಫಿಲಂ ನಲ್ಲಿ 'ಚಾಂದ್ ಮೇರ ದಿಲ್' ಹಾಡು ರೊಮಾಂಟಿಕ ಮೋಡ್ ನತ್ತ ಹೊರಳಿಸುತ್ತದೆ.. Hum Kaala hai to ಎನ್ನೋ ಹಾಡು ಪ್ರೇಮಕ್ಕೆ ಸೌಂದರ್ಯ ಮುಖ್ಯವಲ್ಲ ಅಂತ ಸಾರಿ ಹೇಳುತ್ತದೆ.badan pe, Baharon phool ಪ್ರೇಮಿಯ ಸಡಗರಕ್ಕೆ ಕಾರಣವಾದರೆ, pattar ki sanam,kya huva tera vada, ಮುಂತಾದ ಹಾಡುಗಳು ಭಗ್ನ ಪ್ರೇಮಿಯ ನೋವನ್ನು ತೋಡುತ್ತದೆ.. ಇದೆಲ್ಲಕಿಂತ ಹೆಚ್ಹಾಗಿ babul ki dua ಹಾಡು ಯಾವೊಂದು ಭಾವ ಜೀವಿಯ ಮನವನ್ನು ಕಲಕುವಂತೆ ಮಾಡುತ್ತದೆ.ತಂದೆ ಮಗಳ ಅಗಲುವಿಕೆಯ ಹಿನ್ನೆಲೆಯಲ್ಲಿ ಬರುವ ಹಾಡು ತಂದೆಯ ಕನಸು ಮತ್ತು ಪ್ರೀತಿಯ ಅಭಿವ್ಯಕ್ತಿಯಾಗಿದೆ.ಈ ಹಾಡು ಹಾಡುವಾಗ ಸ್ವತ ರಫಿಯ ಕಣ್ಣು ತುಂಬಿತ್ತಂತೆ. ಮತ್ತೆ ಬಡವರ ಬಗೆ ಹಾಡಿದ garibo ki suno wo tumhare sunega ಅನ್ನೋ ಹಾಡು ನಮ್ಮ ಜವಾಬ್ದಾರಿಯನ್ನು ನೆನಪಿಸುತ್ತದೆ. ಇನ್ನು ಶಮ್ಮಿ ಕಪೂರ್ ಗೆ ಹಾಡಿದ 'yahoo, koi mera jungli kahe' ಅನ್ನೋ ಹಾಡು ನನ್ನನು ಯಾರು ಬೇಕಾದರೂ ಒರಟ ಅನ್ನಿ, ಆದರೆ ನಾನೂ ಒಬ್ಬ ಪ್ರೇಮಿ ಅಂತ ನಿವೇದಿಸುತ್ತದೆ.
ಹೀಗೆ ರಫಿ ಶಮ್ಮಿ, ಗುರುದತ್ , ರಿಷಿ, ದೇವಾನಂದ್, ಅಮಿತಾಬ್ ಹೀಗೆ ಮೇರು ನಟರಿಗೆ ಹಾಡಿನಲ್ಲಿ ದ್ವನಿಯಾಗಿದ್ದ. humko tumse hogaya hai pyaar ಅನ್ನೋ ಹಾಡು ರಫಿ, ಕಿಶೋರ್, ಮುಕೇಶ್ ಮತ್ತು ಲತಾ ಮಂಗೆಷ್ಕರ್ ಎಲ್ಲರು ಒಟ್ಟಿಗೆ ಸೇರಿ ಹಾಡಿದ್ದು, ಇದೊಂದು ಶ್ರೇಷ್ಠ ಜುಗಲ್ಬಂದಿ ಅನ್ನಬಹುದೇನೋ! ಒಂದು ತಲೆಮಾರಿನ ಶ್ರೇಷ್ಠ ಗಾಯಕ ಮತ್ತೊಂದು ತಲೆಮಾರನ್ನು ತಲುಪಿ, ಅವರ ಮನಸ್ಸಿನಲ್ಲಿ ಅಚಳಿಯದೆ ಉಳಿದರೆ ಗಾಯಕನಿಗೆ ಅದಕ್ಕಿಂತ ದೊಡ್ಡ ಪ್ರಶಸ್ತಿ ಏನಿದೆ? ಒಟ್ಟಿನಲ್ಲಿ ರಫಿ ಎಲ್ಲರ ಮನಸಿನಲ್ಲಿ ಅವನ ಹಾಡಿನಂತೆ ಚಿರಾಯು ಆಗಿದ್ದಾನೆ..! ಅದಿನ್ನು ಎಷ್ಟು ಕಾಲ ಕಳೆದರು...!
1 comment:
The old classics are unbeatable.The singers who sang the numbers were enthusiastic and dedicated bunch of people.The present remix songs literally cause headache and moreover, they spoil the originality of the old songs. The saying "Old is gold" holds good in this case.
Post a Comment