Monday, 19 December 2011

ಗೆಳೆಯನೊಬ್ಬನ ಕಥೆ..!

ಶರದೃತುವಿನ ರಾತ್ರಿ.. ಆಕಾಶ ಶುಭ್ರವಾಗಿ ಕಾಣುತಿತ್ತು.. ಬೆಳದಿಂಗಳು ಇಡೀ ಪರಿಸರವನ್ನು ಬೆಳಗಿತ್ತು.. ಬೆಳಕಿನಲ್ಲಿ ಮಂಜು ತಣ್ಣನೆ ಹರಡಿತ್ತು. ಚುಮು ಚುಮು ಚಳಿ ಆಗಷ್ಟೇ ಆರಂಭವಾಗಿತ್ತು. ನಾನು ಮತ್ತು ಗೆಳೆಯ ಕಾಲೇಜಿನ stone ಬೆಂಚಲ್ಲಿ ಅಂಗಾತ ಮಲಗಿ ಆಕಾಶವನ್ನೇ ತದೇಕಚಿತ್ತದಿಂದ ನೋಡಿ ಅನಂದಿಸುತಿದ್ದೆವು. ನಮ್ಮದೇ ಪ್ರಪಂಚದಲ್ಲಿ ಮುಳುಗಿ ಹೋಗಿದ್ದೆವು. ಆಗ ನಮ್ಮ ಸುತ್ತಲೂ ಇದ್ದ ಬೇರೆ ಗೆಳೆಯರು ನಮನ್ನು 'ಮೆಂಟಲ್' ಅಂತ ತಮಾಷೆ ಮಾಡುತ್ತಾ ಇದ್ದರು.. ಅಷ್ಟಕ್ಕೂ ಮಧ್ಯ ರಾತ್ರಿಯಲ್ಲಿ ಕಾಲೇಜಿನ ಕ್ಯಾಂಪಸ್ ನಲ್ಲಿರಲು ಕಾರಣವೇನಪ್ಪ ಅಂದ್ರೆ ನಮ್ಮ ಪ್ರೊಫೆಸರ ಒಬ್ಬರಿಗೆ ಯಾವುದೋ ಪ್ರಶಸ್ತಿ ಬಂದು, ಅವತ್ತು ರಾತ್ರಿ ಕಾಲೇಜು ಗ್ರೌಂಡಿನಲ್ಲಿ ಪಾರ್ಟಿ ಇಟ್ಟಿದ್ದರು. ಅವರ ಆತ್ಮೀಯ ವಿದ್ಯಾರ್ಥಿಗಳಾದ ನಮ್ಮನ್ನು ಅಂದರೆ ಹತ್ತು ಜನರನ್ನು ಆಹ್ವಾನಿಸಿದಕ್ಕೆ ನಾವು ಹೋಗಿದ್ದು.. ಪಾರ್ಟಿಯಲ್ಲಿ ನಾವು ನಮ್ಮ ಪ್ರೊಫೆ ಸರಿಗೆ ಬೇಕಾದ ಹೆಲ್ಪ್ ಮಾಡಿ ಊಟ ಮಾಡುವಾಗ ಬರೋಬ್ಬರಿ ಹನ್ನೊಂದು ಗಂಟೆ.. ನಮ್ಮೆಲ್ಲರ ಮನೆ ಸ್ವಲ್ಪ ರಿಮೋಟ್ ಏರಿಯ ಆದುದರಿಂದ ರಾತ್ರಿ ಅಲ್ಲೇ ಕಾಲೇಜಿನಲ್ಲಿ ಉಳ್ಕೊಂಡೆವು. ಅಲ್ಲಿ ಎಲ್ಲರೂ ಹೋದ ನಂತರ, ಗೆಳೆಯರು ಸ್ವಲ್ಪ 'ಪಾರ್ಟಿ' ಅನ್ನು ಮಾಡಿದ್ರು!

ಆಕಾಶವನ್ನೇ ದಿಟ್ಟಿಸುತಿದ್ದ ಗೆಳೆಯ, ಸಡನ್ನಾಗಿ ಸುತ್ತಲೂ ಯಾರು ಇಲ್ಲದ್ದನ್ನು ನೋಡಿ 'ಹೇಯ್ ಅವರೆಲ್ಲರೆಲ್ಲಿದ್ದಾರೆ?' ಅಂತ ಅವರನ್ನು ಹುಡುಕಲು ಹೊರಟ. ಅವನನ್ನೂ ನಾನು ಹಿಂಬಾಲಿಸಿದೆ.. ಹೀಗೆ ಕ್ಯಾಂಪಸ್ ರಸ್ತೆ ಹೋಗಿ ಅಡ್ಡ ರಸ್ತೆಗೆ ಕೂಡುವಲ್ಲಿ ಅಂದರೆ ಗೇಟ್ ಹತ್ರ ನಿಂತು ಎರಡು ಬದಿ ನೋಡಿದಾಗ ದೂರದಲ್ಲಿ ladies ಹಾಸ್ಟೆಲ್ ಹತ್ರ, ಗೆಳೆಯರ ಗುಂಪೇ ರಸ್ತೆಯಲ್ಲಿ ಏನೋ ಬರೆಯುತಿದ್ದರು. ನಾನು ಗೆಳೆಯನ ಜತೆ ಮಾತಾಡುತ್ತ ಕಾಲೇಜಿನ ಗೇಟ್ ಹಾಕಿ ಅವರ ಕಡೆ ನಡೆದೆವು.. ಅಷ್ಟರಲ್ಲಿ ಎದುರಿನಿಂದ ಒಂದು ಜೀಪ್ ಬಂತು.. ಎಲ್ಲರೂ ಓಡಿ ಅಂತ ಕಿರುಚುತ್ತಾ ನಮ್ಮ ಕಡೆ ಓಡಿ ಬಂದರು.. ಅವರ್ಯಾಕೆ ಓಡುತಿದ್ದಾರೆ ಅಂತ ನಮಗೆ ತಿಳಿಯದು. ಆದರೂ ನಾವು ಹಿಂತಿರುಗಿ ಅವರ ಹಿಂದೆ ಕಾಲೇಜಿನತ್ತ ಓಡಿದೆವು.. ಗೇಟ್ ಮುಚ್ಹಿದುದರಿಂದ ನಮ್ಮಲ್ಲೊಬ್ಬ ಗೇಟ್ ಅನ್ನು ಹತ್ತಲು ಪ್ರಾರಂಬಿಸಿದ್ದ.. ಅವನು ಗೇಟ್ ಮೇಲೆ ಹತ್ತಿದಾಗ ನಾನಲ್ಲಿ ಮುಟ್ಟಿ, ಗೇಟ್ ಅನ್ನು ತೆರೆದೆ.. ಅವ ಗೇಟ್ ಲ್ಲೇ ಬಾಕಿ..! ಅವನು ಅಲ್ಲಿಂದ jump ಮಾಡಿ ನಮ್ಮನ್ನು ಅನುಸರಿಸಿದ.. ಅವತ್ತಿನ ಓಟ ನಾವೆಲ್ಲಾದರು athletic ಮೀಟ್ ಅಲ್ಲಿ odiddare ಹೊಸ ರೆಕಾರ್ಡ್ ಆಗುತಿತ್ತೇನೋ? ಏಕೆಂದರೆ ನಮ್ಮ ಹಿಂದೆ follow ಮಾಡ್ತಾ ಇದ್ದದು ಪೋಲಿಸ್ ಜೀಪ್..! ಇನ್ನೇನು ಜೀಪ್ ಹತ್ತಿರ ಮುಟ್ಟುತೆ ಅನ್ನುವಾಗ ನಾವು ಕ್ಯಾಂಟೀನ್ ಹತ್ರ ಮುಟ್ಟಿದ್ದೆವು. ಸಡನ್ನಾಗಿ ಬಲ ಬದಿಗೆ ತಿರುಗಿ, ಪಕ್ಕದ ತೋಟಕ್ಕೆ jump ಮಾಡಿ, open air stage ಹಿಂಬದಿಯಿಂದಾಗಿ ಬಂದು ನಿಂತೆವು.. ಆಗ ಪೋಲಿಸ್ ಜೀಪ್ ಕ್ಯಾಂಪಸ ಇಡೀ ತಿರುಗಿ ವಾಪಸ್ ಹೋಯಿತು.. ಅಬ್ಬ ಅಂತ ತಿರುಗಿ ನೋಡ್ತೇವೆ ಓಡುವಾಗ 5-6 ಜನ ಇದ್ದ ನಾವು ಈಗ ಇದ್ದದ್ದು ಮೂರೂ ಜನ.. ಹಾಗಾದರೆ ಹತ್ತರಲ್ಲಿ ಇನ್ನುಳಿದವರೆಲ್ಲಿ?

ಹಾಗೆ ನಾನು ಗೆಳೆಯರ ಜತೆಗುಡಿ ಅವರನ್ನು ಹುಡುಕಲು ಹೊರಟೆವು.. ಅಲ್ಲೊಂದು ಬಾವಿ ಇತ್ತು. ಅದರ ಸ್ಟೆಪ್ ಹತ್ತಿ ಮೇಲೆ ಗ್ರೌಂಡ್ ಕಡೆ ಹೋಗಬೇಕು.. ಹಾಗೆ ಹತ್ತಿ ಮೇಲೆ ಹೋಗಿ ಹಿಂತಿರುಗಿ ನೋಡಿದಾಗ, ನಮೊಂದಿಗಿದ್ದ 'ಹರಿ' ಕಾಣುತ್ತಿಲ್ಲ.. ಅವ ಕಾಲು ಜಾರಿ ಸ್ಟೆಪಿಂದ ಕೆಳಗೆ ಬಿದ್ದಿದ್ದ.. snake n ladder ಆಟದ ಹಾಗೆ.! ಅಲ್ಲಿಂದ್ ಗ್ರೌಂಡಿಗೆ ಬಂದಾಗ ನಮ್ಮನ್ನು ಹುಡುಕುತ್ತಾ ಇಬ್ಬರು ಬರುತ್ತಿದ್ದರು. ಅಲ್ಲಿಂದ್ ಒಟ್ಟಿಗೆ ನಾವೆಲ್ಲರೂ ಕ್ಯಾಂಪಸ್ ಕಡೆಗೆ ಹೋದೆವು.. ಆಗ ಗೊತ್ತಾಗಿದ್ದು ನಮ್ಮಲ್ಲಿ ಒಬ್ಬರನ್ನೂ, ಇಬ್ಬರನ್ನೂ ಪೊಲೀಸರು ಹಿಡಿದಿದ್ದಾರೆ ಅಂತ.. ಅವರ್ಯಾರಪ್ಪ ಅಂತ ನಮ್ಮಷ್ಟಕ್ಕೆ ಊಹಿಸಲು ಪ್ರಾರಂಬಿಸಿದೆವು.. ಅದು 'ಸುಬ್ಬು' ಹಾಗಿರಬಹುದೆಂದು ನಮ್ಮೆಲ್ಲರ ಊಹೆ ಆಗಿತ್ತು. ಏಕೆಂದರೆ ಓಡುವಾಗ ನಮ್ಮಲ್ಲಿದ್ದ ಐದು ಜನ ಕೆಲವರನ್ನು ನೋಡಿದ್ದಾರೆ.. ಸುಬ್ಬು ಮಾತ್ರ ಕಾಣಲಿಲ್ಲ.. ಹಾಗೆ pu ಕಾಲೇಜಿನ ಕ್ಯಾಂಪಸ್ ಮುಟ್ಟಿದಾಗ,ಅಲ್ಲೇ ಗೇಟ್ ಹೊರಗಡೆ ಕೆಲವು ಜನ ನಿಂತಿದ್ದರು.. ಆಹ್! ಅದರಲ್ಲಿ ಸುಬ್ಬು ಇದ್ದಾನೆ.. ಅವ ಪೋಲಿಸ್ ಜೀಪ್ ಬರುತಿದ್ದ ಕಡೆಗೆ ಓಡಿ ಬಚಾವಾಗಿದ್ದ! ಅಲ್ಲಿ ಮುಟ್ಟಿದಾಗ ನನ್ನನ್ನು ನೋಡಿದ ಅವರು 'ಒಹ್ ನೀನು ಇಲ್ಲಿದ್ದೀಯ?' ಅಂತ ಉದ್ಗರಿಸಿದರು. ಅವರ ಅಂದಾಜು ಪೊಲೀಸರು ನನ್ನನು ಹಿಡಿದಿದ್ದರೆಂದು.!

ಎಲ್ಲರೂ ಇದ್ದರೆಂದ ಮೇಲೆ ಪೋಲಿಸ್ ಹಿಡಿದದ್ದು ಯಾರನ್ನು? ಅನ್ನುವುದು ಕಗ್ಗಂಟಾಗಿತ್ತು. ತಲೆ ಎನಿಸಿದಾಗ ಒಬ್ಬ ಮಿಸ್ಸಿಂಗ್..! ಕೊನೆಗೂ ಒಬ್ಬನಿಗೆ ಗೊತ್ತಾಯಿತು ಅವ 'ಕುಮಾರ್' ಅಂತ..

ಎಲ್ಲರೂ ಕುಡಿದಿರುವ ಕಾರಣ ಪೋಲಿಸ್ ಸ್ಟೇಷನ್ ಗೆ ಹೋಗಲು ಹೆದರಿಕೆ.. ಅವರೆಲ್ಲರೂ ಸೇರಿ ಕುಡಿಯದೆ ಇದ್ದ ನನ್ನನು ಸ್ಟೇಷನ್ ಗೆ ಹೋಗಲು ಹೇಳಿದಾಗ, 'ಛೆ! ನಾನ್ಯಾಕೆ ಕುಡಿಯಲಿಲ್ಲ' ಅಂತ ಅನ್ನಿಸಿತು..! ಮತ್ತೆ ಏನಾದರಾಗಲಿ ಅಂತ ನಮ್ಮ ಪ್ರೊಫೆಸರ್ ಗೆ ಕಾಲ್ ಮಾಡಿ ಹೇಳಿದ್ವಿ.. ಅಲ್ಲಿಗೆ ಕಾರ್ಯ ಇತ್ಯರ್ಥವಾಯಿತು.

ಈಗ ನಮ್ಮ ಮುಂದೆ ಇದ್ದ ಪ್ರಶ್ನೆ ನಮ್ಮೊಟ್ಟಿಗೆ ಇದ್ದ ಗೆಳೆಯರು ಯಾಕೆ ಹಾಸ್ಟೆಲ್ ಹತ್ರ ಹೋದದ್ದು? ಅಂತ..

ಕಾರಣ ಇಷ್ಟೇ ನಮ್ಮಲ್ಲೊಬ್ಬ ನಾಲ್ಕುವರೆ ಫೀಟ್ ನವನೊಬ್ಬನಿದ್ದ. ಅವನಿಗೆ ಒಂದು ಹಾಸ್ಟೆಲ್ ಹುಡುಗಿಯೊಟ್ಟಿಗೆ ಲವ್ ಇತ್ತು.. ಇವರಿಬ್ಬರು ಮೊಬೈಲ್ ನಲ್ಲಿ ಮಾತಾಡ್ತಾ ಇದ್ರು. ಅವಳು ಹಾಸ್ಟೆಲ್ ಹೊರಗೆ ಬರಲು ಹೇಳಿದಾಗ, ಇವನು ಹೋಗಿದ್ದ. ಅವನೊಂದಿಗೆ ಗೆಳೆಯರ ಬಳಗವೇ ಹೋಗಿದ್ದು.. ಆಗ ನೈಟ್ ಬೀಟ್ ಪೋಲೀಸರ ಆಗಮನ.. ಮತ್ತೆ ಇದೆಲ್ಲ ಅವಾಂತರ..

ಒಮ್ಮೊಮ್ಮೆ ಘಟನೆ ನೆನಪಿಸುವಾಗ ನಗುವಿನೊಂದಿಗೆ ಮೈ ಜುಮ್ಮೆನಿಸುತ್ತದೆ..! ಅಷ್ಟಕ್ಕೂ ನಾವೆಲ್ಲರೂ innocent ಅನ್ನುವುದು ಹೌದಾದರೂ, ಅವತ್ತು ಏರಿಯ ದಲ್ಲಿ ಏನಾದರು crime ನಡೆದಿದ್ದರೆ..?! ಅಬ್ಬಬ್ಬ ಊಹಿಸಲು ಸಾಧ್ಯವಿಲ್ಲ!!!

3 comments:

Akshatha K said...

hey yava college story kano?

Ammu said...

till the end i was thinking why was the police chasing!!!i really liked the part when you say that people looked into the well and didnt find hari a good metaphorical use...keep up the good work buddy :-)

Appu said...

Ammu, I am soooo happy to see your comment!:)nice post Asafu!!!its filled with so much of nostalgia...All of you present there during this incident would've been very tensed when it happened, but now when you think about it, you all might just laugh at it!life is full of memorable memories...:)