ಮರಳಿ ಬಾರದ ಬಾಲ್ಯದ ಕಡೆಗೆ...
ನನ್ನ ಆಸ್ತಿ,ಅಂತಸ್ತು ಮತ್ತೆ ನನ್ನ ಯೌವ್ವನವನ್ನೇ ಬೇಕಿದ್ದರೆ ತೆಗೆದುಕೋ.. ಆದರೆ ನನ್ನ ಬಾಲ್ಯವನ್ನು ನನಗೆ ಮರಳಿಸು.
ಇದು ಜಗಜಿತ್ ಹಾಡಿದ ಒಂದು gazal ನ ತುಣುಕು. ನಾವು ನಮ್ಮ ಬಾಲ್ಯ ವನ್ನು ನೆನಪಿಸುವಾಗಲೆಲ್ಲ ಈ ಹಾಡು ನಮ್ಮ ಆಸೆಯಾಗಿ ಬಿಡುತ್ತೆ. ಬಾಲ್ಯದ ದಿನಗಳು ಮತ್ತೆ ಮರಳಿ ಬರಲಾರವು..
ಮಳೆಗಾಲದ ಆ ಕಾಗದದ ದೋಣಿ. ಅದು ಹರಿದು ಹೋಗುತಿರುವ ನೀರಿನಲ್ಲಿ ಬಿಟ್ಟಾಗ ರಾಕೆಟ್ ಉಡ್ದಯಿಸಿದಷ್ಟು ಮನದಲ್ಲಿ ಸಂತೋಷ.. ಅದು ಕೊನೆ ತಲುಪುವ ತನಕ ಅದರ ಹಿಂದೆಯೇ ಓಟ. ಅದೆಲ್ಲಾದರೂ ನೀರಲ್ಲಿ ಮುಳುಗಿತೋ ಏನೋ ಒಂತರ ಬೇಜಾರು..ಮಳೆಯಲ್ಲಿ ನೆನೆದು ಹಾಕಿದ ಬಟ್ಟೆಯೆಲ್ಲ ಒದ್ದೆ.. ಮನೆಗೆ ಬಂದಾಗ ಬೈಗುಳವೋ ಬೈಗುಳ! ಅಷ್ಟೇ ನಮ್ಮ ಜಗತ್ತು! ಪುಟ್ಟ ಪ್ರಪಂಚ ಆದರೆ ಆಗಾಧ ಹುಮ್ಮಸ್ಸು.
ಮತ್ತೆ ಮುಂದಿನ ಆಟದತ್ತ ಚಿತ್ತ.ಅದೇನು ಮನೆ,ಮದುವೆ, ಶಾಲೆ,ಕಲ್ಲಾಟ, ಗೋಲಿ, ಲಗೋರಿ ಹೀಗೆ ಸಾಗುತ್ತದೆ ಆಟದ ಲಿಸ್ಟ್.. ಶಾಲೆಯಾಟವಾದರಂತೂ, ಇದ್ದಬಿದ್ದ ಗೋಡೆಗಳೆಲ್ಲ ಮಕ್ಕಳಾಗಿ,ನಾವೇ ಟೀಚರಾಗಿ, ಹೊಡೆಯುವುದೇ ಹೊಡೆಯುವುದು. ನಿಜವಾಗಿ ನಮ್ಮ ಮನಸಲ್ಲಿ ಆಗೆನಿತ್ತೋ ಏನೋ ಯಾರಿಗೆ ಗೊತ್ತು. ಇನ್ನು ಶಾಲೆಯಲ್ಲಿ ಕೊಡುವ homework ಒಂದೇ ನಮಗೆ ಶತ್ರು.. ಅದು ಮಾತ್ರ ನಮ್ಮ ಆಟದ ಸಮಯವನ್ನು ತಿನ್ನುತಿತ್ತು.. ಮತ್ತೆ ಬುಗುರಿಯ ಮರದ ಕೆಳಗೆ ಬುಗುರಿ ಹುಡುಕುವುದು.. ಹುಣಸೆ ಹುಳಿ, ನೇರಳೆ ಹೀಗೆ ಒಂದನ್ನು ಬಿಟ್ಟದಿಲ್ಲ. ಮಾವಿನ ಮರ ಹತ್ತಿ ಮಾವು ಕೊಯ್ದು, ಮನೆಯಿಂದ ಕದ್ದು ತಂದ ಉಪ್ಪು ಮತ್ತು ಕಾರ ಹುಡಿ ಹಾಕಿ ಚಪ್ಪರಿಸುವುದು. ಹುಡುಗಿಯರು ಯಾರಾದರು ಬಂದರೆ ಅವರನ್ನು ಅಲ್ಲಿಂದ ಓಡಿಸುವುದು.. ಅವರು ಮಾವು ಸಿಗದ ಸಿಟ್ಟಲ್ಲಿ,ಅಲ್ಲಿಂದ ನೇರ ನಮ್ಮ ಮನೆಗೆ ಹೋಗಿ ಚಾಡಿ ಹೇಳುವುದು.. ಆಗಲೇ ನಮಗೆ ಬೆತ್ತ ರೆಡಿ.. ಒಮ್ಮೊಮ್ಮೆ ನಾವಿದ್ದ spote ಗೆ ಬಂದರಂತೂ ನಮ್ಮ ಗತಿ ಅಯ್ಯಯೋ..!
ಶನಿವಾರ ಆದಿತ್ಯವಾರ ಬಂದರಂತೂ ಖುಷಿಯೋ ಖುಷಿ! ಮೂರೂ ಅಥವಾ ಎರಡು ಫಿಲಂ ಅಂತು ನೋಡಬಹುದು. ಅದು black n white ಇರಲಿ ಕಲರ್ ಇರಲಿ,ಹೀರೋ ಯಾರೇ ಇರಲಿ ಎಲ್ಲವು ಇಷ್ಟ. ಕನ್ನಡ, ಹಿಂದಿ, ಬೆಂಗಾಲಿ ಯಾವ ಭಾಷೆಯಾದರೂ ನಮಗೆ ತಲೆಬಿಸಿಯಿಲ್ಲ. ಫಿಲ್ಮಿನ ಮಧ್ಯ ಬರುವ ಅಡ್ವರ್ಟೈಸ ಮೆಂಟನ್ನೂ ನೋಡುವುದೇನೆ.. ಅದಲ್ಲದೆ ಚಾನೆಲ್ ಚೇಂಜ್ ಮಾಡುವ ಅಂದರೆ ಬೇರೆ ಚಾನಲ್ ಆಗ ಇರಬೇಕಲ್ಲ. ಅದಿನ್ನು ರಾಮಾಯಣ, ಟಿಪ್ಪು ಸುಲ್ತಾನ್, ಅಲಿಫ್ ಲೈಲ ಅದೆಲ್ಲವೂ ನೋಡದಿದ್ದರೆ ಮಾರನೇ ದಿನ ಗೆಳೆಯರ ಜತೆ ಸ್ಟೋರಿ ಕೇಳಬೇಕು ಅಷ್ಟೇ. ಮತ್ತೆ ರೇಡಿಯೋ ದಲ್ಲಾದರೆ ಹಳೆ ಹಾಡುಗಳು. ಅದೆಷ್ಟು ಸಲವಾದರೂ ಸರಿಯೇ.. ಮುಕೇಶ್, ರಫಿ, ಕಿಶೋರ್ ಕುಮಾರ್ ಹೀಗೆ ಯಾರು ಹಾಡಿದರು ನಮಗಿಲ್ಲ ಚಿಂತೆ. ಕೇಳುವುದಷ್ಟೇ ನಮ್ಮ ಕೆಲಸ.ಹೀಗೆ ನಮ್ಮ ಬಾಲ್ಯದ ನೆನಪುಗಳು ಆಗಾಗ ಬ್ಯುಸಿಯಾಗಿರುವ ಜೀವನದ ಮಧ್ಯ ಬಂದು ಖುಷಿ ಕೊಡುತ್ತೆ,ಕವಿ ಹೇಳಿದ ಹಾಗೆ 'aaja bachpan ek baar phir. Dede apne nirmal shanti' ಅಂತ ಒಮ್ಮೆಯಾದರೂ ಮರಳಿ ಬರಬಾರದೇ ಅಂತ ಅನ್ನಿಸುತ್ತದೆ. ಆದರೆ ಅದು ಇನ್ನು ಆಗಾಗ ಮರುಕಳಿಸುವ ಮಧುರ ನೆನಪು ಮಾತ್ರ. Baar baar aati hai mujko madhur yaad bachpan meri! ಅನ್ನುವ ಕವಿ ವಾಣಿ ಹಾಗೆ..!!!
2 comments:
Really nice:)When I was reading about mango, my mouth started watering.Even i used to enjoy like that with my brothers.Am plyaing cricket with them,they used play mane aata, teacher aata with me. but now they are also busy. Now talking like only professional way.ಮೊದಲಿನ ಬಾಂಧವ್ಯ ಈವಾಗ ಇಲ್ಲ.:( ಆದರೆ ಈಗ ಬಾಲ್ಯ ಬರಿ ನೆನಪು ಮಾತ್ರ.!!!
Childhood is the most precious part of one's life...those naughty acts, innocent thoughts, childish games, meaningless fights, etc, are something which all of us remember and cherish..:)climbing trees, playing lagori and cricket, doing homework after listening to shoutings,enjoying summer holidays at granny's place, etc, are just memories now...wish we had some magical power to go back to those beautiful and innocent days!:)
Post a Comment