ಕಾವೇರಿಯ ನಾಡಲ್ಲಿ...
ಒಂದು ಕಾಲದಲ್ಲಿ ಅದು ನನ್ನ ಬೇಸಗೆಯ ಊರಾಗಿತ್ತು.. ಅದು ನಾನು ಇಷ್ಟಪಡುವ ಎರಡನೆಯ ಊರು. ಅಲ್ಲಿಯ ಚಳಿಗೆತತ್ತರಿಸಿದ್ದೇನೆ! ಕಾಫಿಯ ಕಂಪಿಗೆ ಮನಸೋತಿದ್ದೇನೆ! ಅಲ್ಲಲ್ಲಿ ಹರಿಯುವ ನೀರಿನ ಝರಿಗಳನ್ನು ಕಂಡುಬೆರಗುಗೊಂಡಿದ್ದೇನೆ! ಹೀಗೆ ನನಗು ಈ ಕಿತ್ತಳೆ ನಾಡಿನ ಸಂಬಂದ ಈಗಲೂ ಮುಂದುವರಿದಿದೆ. ಪುಷ್ಪಗಿರಿ ಬೆಟ್ಟದತುದಿಯಲ್ಲಿರುವ ಮರಗಳ ರಾಶಿ, ಮುಂಗಾರಿನ ಮಳೆಗೆ ಹೇಗೆ ಕಂಗೊಳಿಸುತ್ತದೆಂದರೆ ಸ್ವತಹ ಯೋಗರಾಜ್ ಭಟ್ಅದೇ ಹೆಸರಿನ ಫಿಲಂ ತೆಗೆದಿದ್ದಾರೆ.. ಹೀಗೆ ಪ್ರಕೃತಿಯ ಮಡಿಲಲ್ಲಿನ ಸೌಂದರ್ಯಕ್ಕೆ ಮಾರು ಹೋಗದವರುಯಾರಿದ್ದಾರೆ.?
ಕೊಡಗು ಅಂದಾಗ ಅಬ್ಬಿಯ ಭೋರ್ಗರೆತ ಕಣ್ಣಿನ ಮುಂದೆ ಬಂದು ನಿಲ್ಲುವುದು ಸಹಜ. ಅದೆಷ್ಟು ಬಾರಿ ಹೋದರೂ, ಆಜಲಪಾತ ನಮಗೆ ಬೋರೆನಿಸುವುದೇ ಇಲ್ಲ. ಮಾತ್ರವಲ್ಲ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ. ಒಮ್ಮೆ ನಾನು ನನ್ನಗೆಳೆಯರೊಟ್ಟಿಗೆ ಮಡಿಕೇರಿಯಿಂದ ನಡಕೊಂಡೆ 9 km ಹೋಗಿ ಅಲ್ಲಿಯ ಗುಡ್ಡ ಹತ್ತಿ, ನೀರಿನಲ್ಲಿ ಈಜಾಡಿ, ನಲಿದು ಪುನಃನಡಕೊಂಡೆ ಹಿಂತಿರುಗಿ ಬಂದಿದ್ದೆವು. ಆ ದಾರಿಯಾಗಿ ಹೋಗುವಾಗ ಮತ್ತು ಬರುವಾಗ ವಿಧ ವಿಧದ ಮರಗಳು, ಅದರಬಣ್ಣ ಬಣ್ಣದ ಹೂವುಗಳು, ಆ ಹೂವುಗಳತ್ತ ಆಕರ್ಷಣೆಗೊಂಡು ಮುತ್ತಿಕುವ ತರ ತರದ ಪತಂಗಗಳು, ಮತ್ತೆನೊಣಗಳನ್ನು ಬೆನ್ನಟ್ಟಿ ತಿನ್ನುವ ವಿಧ ವಿಧದ ಹಕ್ಕಿಗಳು ಈಗಲೂ ಸ್ಮೃತಿ ಪಟದಲ್ಲಿ ಹಚ್ಹ ಹಸಿರಾಗಿದೆ.
ಮತ್ತೊಮ್ಮೆ ಹೋದಾಗ ನವೋದಯ high school ವಿದ್ಯಾರ್ಥಿ ನೀರಿನಲ್ಲಿ ಬಿದ್ದು ನೀರು ಪಾಲಾಗಿದ್ದ. ಒಂದು ಕಡೆಅಬ್ಬಿಯನ್ನು ನೋಡಲಾಗದ ಬೇಸರ, ಮತ್ತೊಂದು ಕಡೆ ಅರಳಬೇಕಾದ ಮೊಗ್ಗು ನೀರಲ್ಲಿ ಮುರುಟಿ ಹೋಯಿತಲ್ಲಅನ್ನೋ ನೋವು..
ಮತ್ತೆ ಮಡಿಕೇರಿಯ ರಾಜ ಸೀಟಿನ ಸೂರ್ಯಾಸ್ತಮಾನ ನೋಡದೆ ಹಿಂತಿರುಗಿ ಬರುವುದಾದರೂ ಹೇಗೆ..?! ಗುಡ್ಡಗಳನಡುವೆ ಜಾರಿ ಹೋಗುವ ಸೂರ್ಯನನ್ನು, ಹುಲ್ಲಿನ ರಾಶಿಯ ಮೇಲೆ ಕೂತು ನೋಡುವುದೇ ಒಂಥರ
ಕುಷಿ. ಬಹುಶಅದಕ್ಕಾಗಿಯೇ, ರಾಜ ರಾಣಿಯರು ಸಹ ಇದೇ ಜಾಗದಲ್ಲಿ ಕೂತು ಸಂಜೆಯ ಸವಿಯನ್ನು ಸವಿದಿರಬಹುದು.. ಆದರೆಅಲ್ಲಿಯೆ ಹೊರಗೆ ಸಿಗುವ ಉಪ್ಪು ನೀರಲ್ಲಿ ಹಾಕಿದ ನೆಲ್ಲಿಯ ಸವಿಯನ್ನು ಅವರು ಸವಿದಿರಲಿಕ್ಕಿಲ್ಲ. ಆ ನಿಟ್ಟಿನಲ್ಲಿ ನಾವುಪುಣ್ಯವಂತರು.
Summer vacation ಮಾತ್ರ ಈ ಊರಿನಲ್ಲಿ ಖುಷಿಯೋ ಖುಷಿ! ಊರಿನ ಬಿಸಿಲಿನ ಝಲಕ ಇಲ್ಲ. ಎಲ್ಲೋ ದೂರದಬೆಂಗಳೂರಿನಲ್ಲೋ , ಮೈಸೂರಲ್ಲೋ ಅಥವಾ ಮಂಗಳೂರಲ್ಲೋ ಕಲಿಯುತಿರುವ ಅಲ್ಲಿಯ ಮಕ್ಕಳು ತಮ್ಮೂರಿಗೆಬಂದು, ಅವರ ಸಂಬಂದಿಕರ ಮದುವೆ ಮತ್ತಿತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಪೂರ್ಣ ಖುಷಿ ಪಡುತ್ತಾರೆ.
ಒಟ್ಟಿನಲ್ಲಿ ಹಲವು ನೆನಪುಗಳನ್ನು ತೆರೆದಿಡುವ ಈ ಊರು ಡಿಸೆಂಬರ್-ಜನವರಿಯಲ್ಲಿ ಚಳಿಯ ಉಗ್ರ ರೂಪವನ್ನು ತೋರಿಸುತ್ತದೆ. ಅದೆಷ್ಟು ಚಳಿ ಅಂದರೆ, ಬೆಳಗಿನ ಕಾಫಿಗೆ ಹುಡಿಯೋ, ಸಕ್ಕರೆಯೋ ಹಾಕುವ ಅವಶ್ಯಕತೆಯಿಲ್ಲ. ಸ್ಪೂನಲ್ಲಿ ತೆಗೆಯುವಾಗಲೇ ಕೈ ನಡುಗಿ ತಾನಾಗಿಯೇ ಬೀಳುತ್ತದೆ.. ತೆಂಗಿನೆಣ್ಣೆ ಗಟ್ಟಿಯಾಗಿ ಮೇಣದ ತರಕಾಣುತಿರುತ್ತದೆ.
ಹಾಗೆ ಕುಶಾಲನಗರದ ಆನೆಯ ಸಫಾರಿ, ಮತ್ತೆ ಕಾವೇರಿ ನದಿಯ ತವರೂರು ತಲಕಾವೇರಿ!
ಎಲ್ಲವು ಹೋದಷ್ಟು ಬಾರಿ ಹೊಸ ಉಲ್ಲಾಸ ಮೂಡಿಸುತ್ತದೆ..
2 comments:
Madekeri is really an awesome place :-) nice description
Your childhood would've been just memorable because you spent it in Coorg..:)Lucky you!The beauty of the place is truly mesmerizing and the weather there is pleasant..
Post a Comment