ಕುವೆಂಪು ಕ್ಯಾಂಪಸ್ಸಲ್ಲಿ..!
ಅಬ್ಬ! ಬಸ್ಸು ಹತ್ತಿ ನಿಟ್ಟುಸಿರು ಬಿಡಬೇಕು ಅನ್ನುವಷ್ಟರಲ್ಲಿ, ಬಸ್ಸು ಸರಿಯಿಲ್ಲ ಎನ್ನುವ ಸುದ್ದಿ ನಮ್ಮನ್ನು ಒಂಥರಾ ಸಂದಿಗ್ದ ಸ್ಥಿತಿಗೆತಳ್ಳಿತು. ಅದಾಗಲೇ ಸಂಜೆ ಬೇರೆಯಾಗಿತ್ತು. ಅಲ್ಲಿ ನಮ್ಮ ರೂಮಿನ ವ್ಯವಸ್ಥೆ ಎನೊಂಥಾ ಗೊತ್ತಿರಲಿಲ್ಲ.. ಆಗ ದೇವರೇ ಕಳಿಸಿದಂತೆಮತ್ತೊಂದು ಬಸ್ಸು ಬಂತು.. ನಮ್ಮ ಗಂಟು ಮೂಟೆಯನ್ನು ಹೊತ್ತುಕೊಂಡು ಆ ಬಸ್ಸಿಗೆ ಹತ್ತಿದೆವು.. ಅಬ್ಬ ಎರಡು ಬಸ್ಸಿನ ಜನತುಂಬಿಯಾಗಿತ್ತು.. ನಾವೆಲ್ಲರೂ ಹತ್ತಿ ಡ್ರೈವರನ chamber ತರವಿರುವ ಸ್ಥಳದಲ್ಲಿ ನಿಂತೆವು..! ಇನ್ನೂ ಜನ ಹತ್ತುತಲೇ ಇದ್ದರು. ಅಂತೂ ಡ್ರೈವರ್ ಸೀಟಿನ ಡೋರ್ ಒಪನಾಗಿ ಅಲ್ಲಿಂದ ಒಬ್ಬ ಹತ್ತಿದಾಗ ಸ್ವಲ್ಪ ಸಮಾಧಾನವಾಯಿತು. ಡ್ರೈವರ್ ಹತ್ತಿಯಾಯಿತಲ್ಲ,ಇನ್ನು ಬಸ್ಸು ಹೊರಡಬಹುದೆಂದು.! ಆದರೆ ಹತ್ತಿದವ ಡ್ರೈವರ್ ಆಗಿರದೆ ಕಂಡಕ್ಟರಾಗಿದ್ದ! ಅವ ನಮ್ಮಿಂದ ಹಣ ತಗೊಂಡು, ಸ್ಥಳ ವಿಲ್ಲದ ಬಸ್ಸಲ್ಲಿ ಜಾಗ ಮಾಡುತ್ತಾ ಹೋದ.
ಬಸ್ಸಲ್ಲಿ ಎಲ್ಲರು ನಮ್ಮೊಟ್ಟಿಗೆ ಇದ್ದ ಗೆಳತಿಯರನ್ನೇ ಎವೆಯಿಕ್ಕದೆ ನೋಡುತಿದ್ದರು. ಅವರ ನೋಟ ನೋಡುವಾಗ, ಇವರೆಲ್ಲಿಂದಲೋಬೇರೆ ಗ್ರಹದಿಂದ ಬಂದವರೋ, ಅಥವಾ ಮನುಷ್ಯರ ಥರ ಕಾಣುತ್ತಿರಲಿಲ್ಲವೋ ಏನೋ ಅಂತ ಅನ್ನಿಸುವಂತಿತ್ತು!ಹಾಗೆ ಬಸ್ಸುಹೊರಡಿತು. ಮತ್ತೆ ತೂರಾಡುತ್ತ, ಅಲ್ಲಲ್ಲಿ ನಿಲ್ಲಿಸುತ್ತಾ ಸಾಗಿದ ಬಸ್ಸು ಶಂಕರ ಘಟ್ಟ ಮುಟ್ಟಿತು! ಅಲ್ಲಿಯೇ ನಾವಿಳಿಯಬೇಕಾದದ್ದು . ಅಲ್ಲಿಂದ ಮುಂದೆ ನಾವು, ನಮಗಾಗಿ ಬಂದಿದ್ದ ಇಬ್ಬರ ಎಸ್ಕಾರ್ಟ್ ನೊಂದಿಗೆ university ಕ್ಯಾಂಪಸ್ ಗೆ ಹೋದೆವು.. ಅಲ್ಲಿಲೇಡಿಸ್ ಹಾಸ್ಟೆಲಲ್ಲಿ ಹುಡುಗಿಯರನ್ನು ಬಿಟ್ಟು, ನಮ್ಮನ್ನು guest house ಗೆ ಕರ್ಕೊಂಡು ಹೋದರು.. ಅಲ್ಲಿ ನಾವು ಮೂರೂ ಜನಹುಡುಗರಿಗೆ ಒಂದು ರೂಮನ್ನು ಕೊಟ್ಟಾಗ, ರೂಮನ್ನು ಕಂಡ ನಮಗೆ ಕುಶಿಯೋ ಕುಶಿ..! ಸ್ವಲ್ಪ ನಂತರ ಗೊತ್ತಾಗಿದ್ದು ಈ ಒಂದುರಾತ್ರಿ ಮಾತ್ರ ಅಂತ..!
ಬೆಳಿಗೆದ್ದು ನಮ್ಮ ಬ್ಯಾಗನ್ನು ಪ್ಯಾಕ್ ಮಾಡಿ ಹುಡುಗಿಯರ ಹಾಸ್ಟೆಲಲ್ಲಿ ಇಟ್ಟು, ಕ್ಯಾಂಪಸ್ ಪಯಣ ಆರಂಬಿಸಿದೆವು!! ರಾತ್ರಿಯ ಭೀಕರಕತ್ತಲಲ್ಲಿ ಕಾಣದ ಪ್ರಕೃತಿಯ ಸೌಂದರ್ಯ, ಬೆಳಗಿನ ಮಂಜಿನಲ್ಲಿ ಮುಸುಕಿತ್ತು.. ಸೂರ್ಯ ಪೂರ್ವದಲ್ಲಿ ಮೇಲೇರುತಿದ್ದಂತೆ,ಪ್ರಿಯಕರನ ಸ್ಪರ್ಶಕ್ಕೆ ಎಂಬಂತೆ ತಣ್ಣನೆ ಹಿಮ ಕರಗುತ್ತಿತ್ತು. ಅಬ್ಬ!! ಆಗಲೇ ನಮಗರಿವಾದದ್ದು ರಾತ್ರಿ ನಾವಿದ್ದದ್ದು ಭದ್ರಅರಣ್ಯದಂಚಿನಲ್ಲಿ ಅಂತ!! ಪ್ರಕೃತಿಯ ಮಡಿಲಲ್ಲಿ ಮಲಗಿದಂತಿದ್ದ ಕ್ಯಾಂಪಸ್, ತನ್ನದೇ ಶಿಲ್ಪ ಕಲೆಗೆ ಮನ ಸೋಲುವಂತೆಮಾಡಿತ್ತು!! ಡೈನೋಸಾರ್, ಜಿರಾಫೆ, ಆನೆ, ಕುದುರೆಯ ಶಿಲ್ಪ ಗಳು ಹಸಿರು ಪ್ರಕೃತಿಯ ಮಧ್ಯೆ ನಿಜವಾದ ಪ್ರಾಣಿಗಳನ್ನೇಹೋಲುತಿತ್ತು..! ಹಾಗೆ ಕ್ಯಾಂಪಸ್ ಗೆ ಒಂದು ಸುತ್ತು ಬರುವಷ್ಟರಲ್ಲಿ ಬೆಳಗಿನ ಟೀ ಯ ಸಮಯವಾಯಿತು. ಮಲೆನಾಡಿನ ಕಾಫಿಅಂದರೆ ಅದು ಹತ್ತರಿಂದ ಇಪ್ಪತ್ತು ml ಇರಬಹುದು. ಕರಾವಳಿಯವರಾದ ನಮಗೆ ಅದು ಗಂಟಲಿಗೆ ತಾಕದಂತಿತ್ತು!!
ಹಾಗೆ ತಿಂಡಿ ತಿಂದು , inaugral ಪ್ರೊಗ್ರಾಮ್ ಆದ ಕೂಡಲೇ ನಮ್ಮ ಗೆಳತಿಯರಲ್ಲಿ ಕೆಲವರು ನಾಪತ್ತೆ! ಅವರಲ್ಲಿ ಹೆಚ್ಹಿನವರುರೂಮಲ್ಲಿ ಹೋಗಿ ಬೆಡ್ಡಲ್ಲಿ ಬಿದ್ಕೊಂಡಿದ್ದರು!!! ನಾವು ಬೇರೆ ದಾರಿ ಕಾಣದೆ ಅಲ್ಲೇ ಸೆಮಿನಾರ್ ಹಾಲಲ್ಲಿ ಸಂಜೆಯವರೆಗೂಕುಳಿತೆವು.. ಪೋಸ್ಟರು,ಡಾನ್ಸ್, ಹೀಗೆ ಸಂಜೆಯ ಪ್ರೋಗ್ರಾಮ್ ಕಳೆಯುವಷ್ಟರಲ್ಲಿ ಊಟಕ್ಕಾಗಿ ಕಾಯುವ ಸರದಿ. ಊಟದ ನಂತರಅವತ್ತಿನ ಕಾರ್ಯಕ್ರಮ ಮುಗಿದು ರೂಮಿನ ಕಡೆ ಹೆಜ್ಜೆ ಹಾಕಿದೆವು!!!
ಹಿಂದಿನ ರಾತ್ರಿ ಗೆಸ್ಟ್ ಹೌಸಲ್ಲಿ ಕಳೆದ ನಾವು ಮೂವರು ಹುಡುಗರು, ಈಗ ಅಲ್ಲಿಂದ ಐದಾರು ಕಿಲೋ ಮೀಟರ್ ದೂರವಿರುವಹಾಸ್ಟೆಲಿಗೆ ಹೋಗಬೇಕಾಗಿತ್ತು!!!