ಮುಂಜಾನೆಯ ಮಸೀದಿಯ ಆದಾನ್ (ಬಾಂಗ್) ಕರೆಗೆ ಎಚ್ಹೆತ್ತ ಪುಟ್ಟ ಮಗು ಆ ಶಬ್ದ ಬಂದ ಕಡೆಗೆ ನೋಡಿದಾಗಮಸೀದಿಯ ಮಿನಾರದ ಕಡೆಯಿಂದ ಆ ಶಬ್ದ ಕೇಳಿಸುತಿದೆ.. ದೇವಸ್ಮರಣೆಯ ಪದಗಳು! ಅಲ್ಲೇ ಸುತ್ತ ಮುತ್ತ ಬೆಳಗಿನಮುಸುಕು ಬೆಳಕಿನಲ್ಲಿ, ಚಿಲಿಪಿಲಿಗುಟ್ಟುತಿರುವ ಹಕ್ಕಿಗಳೇ ಆ ದೇವಸ್ಮರಣೆ ಮಾಡುತಿರಬೇಕೆಂದು ತಿಳಿಯುವ ಮುಗ್ದಮಗು, ಆ ಹಕ್ಕಿಯನ್ನು ಕರೆದು '',ಹೇಯ್ ದೇವ ಸ್ಮರಣೆಯಲ್ಲಿರುವ ಗಿಳಿಯೇ ನೀ ಸ್ವಲ್ಪ ನಿಲ್ಲು!! ಮಿನಾರದಎತ್ತರದಲ್ಲೀದ್ದೀಯಲ್ಲ, ಆಕಾಶದ ಆ ಕಡೆ ಇರುವ ಸ್ವರ್ಗ ದಲ್ಲಿನ ಅದ್ಭುತಗಳು ನಿನಗೆ ಕಾಣಿಸುತಿದೆಯ? ಎಂದುಕೇಳುತ್ತದೆ..
ಈ ಮಗುವಿಗೆ ಸ್ವರ್ಗದ ಬಗೆ ಕುತೂಹಲ ಯಾಕಿರಬಹುದು ಅಂತ ಯೋಚಿಸುವಾಗಲೇ, ಆ ಮಗು ಗಿಳಿಯೋಟ್ಟಿಗೆಇನ್ನೊಂದು ಪ್ರಶ್ನೆ ಕೇಳುತ್ತದೆ. ಆ ಸ್ವರ್ಗದಲ್ಲಿ ಯಾರೆಲ್ಲ ಇದ್ದಾರೆ ಅಂತ ಸ್ವಲ್ಪ ನೋಡುತ್ತೀಯ? ನನ್ನತಂದೆಯನ್ನೆಲ್ಲಾದರು ಕಾಣುತ್ತೀದ್ದೀಯ? ಹಾಗಾದರೆ ಅವರ ಹತ್ತಿರ ನನ್ನ ತಾಯಿ ಇರಬೇಕಲ್ಲ? ನನ್ನ ಅಕ್ಕ ಹೇಳಿದ್ದಾರೆಅವೆರೆಲ್ಲ ಅಲ್ಲೇ ಇದ್ದಾರೆ ಅಂತ, ಮದರಸದ ಗುರುಗಳೂ ಅದನ್ನೇ ಹೇಳಿದ್ದಾರೆ ಅಂತ ಆ ಮಗು ಗಿಳಿಯಲ್ಲಿಹೇಳಿಕೊಳ್ಳುತ್ತದೆ.. ಮತ್ತೆ ಹೇಳುತ್ತೆ, ಎಲ್ಲಿದೆ ಆ ಸ್ವರ್ಗ? ನನಗೂ ನನ್ನ ತಂದೆ ತಾಯಿರುವ ಸ್ವರ್ಗ ಕ್ಕೆ ಹೋಗಬೇಕು.
ಇದು ನಾನು ಸಣ್ಣ ಇರುವಾಗ ಕೇಳಿದ ಒಂದು ಮಲಯಾಳಂ ಹಾಡಿನ ಭಾವಾರ್ಥ. ತಬ್ಬಲಿ ಮಗುವಿನ ಮೂಕ ವೇದನೆಯನ್ನು ಕವಿಯು ಹಾಡಿನ ಮುಖಾಂತರ ಹೇಳಿದ್ದಾರೆ. ಇಲ್ಲಿ ಸ್ವತಃ ಕವಿ, ಮಗುವಾಗಿ ವಿವಿಧ ರೂಪಕಗಳನ್ನು ಬಳಸಿಪರಿಣಾಮಕಾರಿಯಾಗಿ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.. ಅನಾಥ ಪ್ರಜ್ಞೆಯ ಅಗಾಧತೆ ಈ ಸಣ್ಣ ಹಾಡಿನಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.
ಅದೇನೇ ಇರಲಿ ನನ್ನ ಚಿಕ್ಕಪ್ಪನ ಮಗಳು ಅಂದರೆ ನನ್ನ ಸೋದರಿಯ ಗಂಡ ಮೊನ್ನೆ ಅಕಾಲ ಮೃತ್ಯುವಿಗೆ ತುತ್ತಾದಾಗ, ಆ ಪುಟ್ಟ ಮಕ್ಕಳು ಅದೇನನ್ನು ತಿಳಿಯದೆ, 'ನನ್ನ ತಂದೆಯನ್ನು ಎಲ್ಲಿ ಕರ್ಕೊಂಡು ಹೋದದ್ದು' ಅಂತ ಕೇಳಿದ ಮುಗ್ದಪ್ರಶ್ನೆಗೆ ನಮ್ಮಲ್ಲಿ ಕಣ್ನೀರಲ್ಲದೆ ಬೇರೆ ಉತ್ತರವಿರಲಿಲ್ಲ.
ಎಲ್ಲವೂ ವಿಧಿಯಾಟ!