Tuesday, 6 December 2011

ಪುಟ್ಟ ಗುಬ್ಬಚಿಯ ದುರಂತ ಕತೆ..

ಆಕೆಯ ಹೆಸರು svetlana.. ಅವಳು ಒಂದು ದೊಡ್ಡ ಮರದ ಅಡಿಯಲ್ಲಿ ಹುಟ್ಟಿದ ಸಸಿಯಂತೆ.. ದೊಡ್ಡ ಮರ ತನ್ನ ರೆಂಬೆ ಕೊಂಬೆಗಳನ್ನು ಆಗಸದಗಲ ಹರಡಿ ಅದರಡಿಯಿರುವ ಗಿಡಕ್ಕೆ ಬಿಸಿಲಿನಿಂದ ವಂಚಿತಗೊಳಿಸುತ್ತದೆ.. ಅಂದರೆ ಅದು ಗಿಡಕ್ಕೆ ಒಂದು ಥರ ಹಿಂಸೆಯಾಗಿಬಿಡುತ್ತದೆ.. ಅದೇ ಥರ ಇವಳು..ಒಂದು ಕಾಲದಲ್ಲಿ ಪ್ರಪಂಚದ ಎರಡು ದೈತ್ಯ ಶಕ್ತಿಯಲ್ಲಿ ಒಂದಾಗಿದ್ದ ರಷಿಯಾದ ಅನಭಿಷಕ್ತ ದೊರೆ, ಸರ್ವಾಧಿಕಾರಿ ಸ್ಟಾಲಿನ್ ನ ಏಕ ಮಾತ್ರ ಪುತ್ರಿ..

ಸ್ಟಾಲಿನ್ ನ ಎರಡನೇ ಹೆಂಡತಿಯ ಮಗಳಾದ ಈಕೆ, ಅವನೇ ಹೇಳಿದಂತೆ ಅವಳು ಅವನ 'ಪುಟ್ಟ ಗುಬ್ಬಚಿ' ಮತ್ತು 'ಲಿಟಲ್ ಪ್ರಿನ್ಸೆಸ್ಸ್..' ಆದರೆ ಅವಳ ಬದುಕಿನಲ್ಲಿ ಅವಳೆಂದು ರಾಣಿಯಾಗಿ ಬಾಳಲೇ ಇಲ್ಲ..

ಒಮ್ಮೊಮ್ಮೆ ಜೀವನ ಅನ್ನುವುದು ಚಂಡಮಾರುತಕ್ಕೆ ಸಿಕ್ಕಿದ ದೋಣಿಯಂತಾಗುತ್ತದೆ ನಿಜ. ಆದರೆ ಇವಳ ಬದುಕು ಅದಕ್ಕಿಂತ ಶೋಚನಿಯ. ಆರು ವರ್ಷ ತುಂಬುವಾಗಲೇ ಅವಳ ತಾಯಿ ಆತ್ಮಹತ್ಯ ಮಾಡುತ್ತಾಳೆ.ಅದರಿಂದಾಗಿ ಅವಳು ತಂದೆಯ ಪ್ರೀತಿಯ ಸಂಕೋಲೆಯಲ್ಲಿ ಬೆಳೆಯುತ್ತಾಳೆ.. ತಾನು ಇಷ್ಟಪಟ್ಟದ್ದು ತನ್ನ ತಂದೆಗೆ ಇಷ್ಟವಾಗದೆ ಅವಳು ಒಂಥರಾ ತ್ರಿಶಂಕು ಸ್ವರ್ಗದಲ್ಲಿದ್ದಳು.ಬಯಸಿದ್ದು ಸಾಹಿತ್ಯ ಓದಲು, ತಂದೆಯ ಹಟಕ್ಕೆ ಸೋತು history ಓದಿದಳು.

ಮಹಾಯುದ್ದ ಸಂದರ್ಭ ಅವಳ ಸಹೋದರನನ್ನು ಜರ್ಮನ್ನರು ಒತ್ತೆಯಾಳಾಗಿಟ್ಟು, ರಷ್ಯ ದಲ್ಲಿ ಕೈದಿಯಾಗಿದ್ದ ಜನರಲ್ ನನ್ನು ಬಿಡಲು ಒತ್ತಾಯಿಸಿದಾಗ ಸ್ಟಾಲಿನ್ ಒಪ್ಪಲಿಲ್ಲವಾದ್ದರಿಂದ ಅವರು ಕೊಂದು ಬಿಟ್ಟರು.

ಮತ್ತೆ ಒಬ್ಬ film maker ನನ್ನು ಇಷ್ಟಪಟ್ಟಳಾದರು ತಂದೆ ಅವನನ್ನು ಜೈಲಿನಲ್ಲಿ ಕೊಳೆಯಿಸಿದ. ಮತ್ತೊಬ್ಬನನ್ನು ಪ್ರೀತಿಸಿದಾಗ ತಂದೆಯಿಂದ ಕೆನ್ನೆಗೆ ಹೊಡೆಸಿಕೊಂಡಳಾದರೂ, ಈ ಸಲ ತನ್ನ ಪ್ರೀತಿಯನ್ನು ಜಯಿಸಿ, ಮದುವೆಯಾಗಿ ಒಂದು ಮಗುವನ್ನು(iosif) ಪಡೆದು, ಮತ್ತೆ divorce ಕೊಟ್ಟಳಾದರೂ ಅವನ ಗೆಳೆತಿಯಾಗಿಯೇ ಇದ್ದಳು..

ಸ್ವಲ್ಪ ಕಾಲದ ನಂತರ ತಂದೆಯ ಬಲಗೈ ಬಂಟನ ಮಗನನ್ನೇ ಇಷ್ಟಪಟ್ಟಳು, ತಂದೆ ಈ ಸಲ ಮಾತ್ರ ಖುಷಿಯಾಗಿ ಒಪ್ಪಿಗೆ ಕೊಟ್ಟ.. ಒಂದು ಮಗುವಾದ ನಂತರ ಅವನಿಂದಲೂ ಬೇರೆಯಾದಳು..

ನಡುವೆ ಅವಳ ತಂದೆ ಸತ್ತ.. ಅಲ್ಲಿಯವರೆಗೆ ಬಾಣಲೆಯಲ್ಲಿದ್ದ ಅವಳಿಗೆ ಬೆಂಕಿಯಲ್ಲಿ ಬಿದ್ದ ಅನುಭವ.. ಸರ್ಕಾರದ ಗೂಢಚಾರಿಗಳು ಸದಾ ಅವಳ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತಿದ್ದರು.. ಹೀಗೆ ಮರುಭೂಮಿಯಂತೆ ಬರಡಾದ ಬದುಕಿಗೆ ದೇವೇಂದ್ರ ಅನ್ನೋ ಭಾರತೀಯ ಕಮ್ಯುನಿಸ್ಟ್ ಎಂಟ್ರಿ ಕೊಟ್ಟ.. ಆದರೇನಂತೆ ಸರ್ಕಾರ ಅವರಿಬ್ಬರನ್ನು ಜತೆಯಾಗಲು ಬಿಡಬೇಕಲ್ಲವೇ..? ಅದೇ ವ್ಯಥೆಯಲ್ಲಿ ಅನಾರೋಗ್ಯ ಪೀಡಿತನಾಗಿ ಅವನು ಅಲ್ಲೇ ತನ್ನ ಅಂತಿಮ ಉಸಿರೆಳೆದ. ಅವನ ಅಸ್ಠಿಯನ್ನು ತರುವ ನೆಪದಲ್ಲಿ ಅವಳು ಭಾರತಕ್ಕೆ ಬಂದಳು.ರಶಿಯನ್ government ನಿಂದ ತಪ್ಪಿಸಲು ಇದೇ ಸುಸಂದರ್ಭ ಅಂತ ಅಮೇರಿಕ ಕಡೆಗೆ ಹೊರಟಳು..

ಹೀಗೆ ಕಮ್ಯುನಿಸ್ಟ್ ನಾದ ಸ್ಟಾಲಿನ್ ಪುತ್ರಿ ಮಾತ್ರ ಮಾನಸಿಕ ನೆಮ್ಮದಿಗಾಗಿ ಹಪಹಪಿಸುತಿದ್ದಳು.. Hinduisam, christinisam ಅಂತ ಧರ್ಮದ ಹಿಂದೆ ಹೋದರು ಅಲ್ಲೂ ನೆಲೆಯೂರಲೇ ಇಲ್ಲ .ಇಂಡಿಯ, ಯುರೋಪ್, ಅಮೇರಿಕ ಅಂತ ಅಲೆದಳು. ಆರ್ಥಿಕ ಮುಗ್ಗಟ್ಟಿನಿಂದಾಗಿ ಬಸವಳಿದಳು. ತಂದೆಯನ್ನೇ ದ್ವೇಷಿಸಿದಳು.. ಅದರ ಬಗ್ಗೆ ಪುಸ್ತಕ ಬರೆದು ಸ್ವಲ್ಪ ಮಟ್ಟಿಗೆ ಚೇತರಿಸಿದಳು.. ಬದುಕಿನುದ್ದಕ್ಕೂ ಹಲವು ಬಾರಿ ತನ್ನ ಹೆಸರನ್ನು ಬದಲಾಯಿಸಿದಳು.. ಏಕೆಂದರೆ ತಂದೆಯ ಜತೆ ಗುರುತಿಸಲು ಅವಳಿಗೆ ಇಷ್ಟವಿರಲಿಲ್ಲ.. ಮತ್ತೆ ಅಮೇರಿಕಾದಲ್ಲಿ ಮತ್ತೊಬ್ಬನನ್ನು ಮದುವೆಯಾಗಿ Ms lana peter ಅಂತ ಬದಲಾಗಿ ಸಂಸಾರ ಸಾಗಿಸುತಿದ್ದಳು..ಅಂತಿಮ ದಿನಗಳಲ್ಲಿ ಅಜ್ಞಾತಳಾಗಿಯೇ ಜೀವನ ಸವೆಸಿದ ಅವಳು ಬದುಕಿನದುದ್ದಕ್ಕು ಅಸ್ತಿತ್ವಕ್ಕಾಗಿ ಹೆಣಗಾಡಿದಳು. ಕೊನೆಯಲ್ಲಿ ಕ್ಯಾನ್ಸರ ನೊಂದಿಗೆ ಹೋರಾಡಲಾಗದೆ , ತನ್ನ 82 ನೆ ವರ್ಷದಲ್ಲಿ, ನವಂಬರ್ 20 ರಂದು ಲೋಕದಿಂದ ನಿರ್ಗಮಿಸಿದಳು ..

ಅಂತೂ ತಂದೆ ಎಷ್ಟೇ ದೊಡ್ಡ ಅಧಿಕಾರದಲ್ಲಿದ್ದರೂ ಮಗಳ ಜೀವನ ನರಕ ಸದೃಶ ವಾಗಿತ್ತು. . ಇದು ವಿಧಿಯಾಟವೋ, ಸ್ಟಾಲಿನ್ ಬದುಕಿನ ಬೆನ್ನುಡಿಯೋ?

1 comment:

Appu said...

Its an interesting true life story!:)I am really very happy that you are throwing light on stories which are not in the limelight...thank u!