Tuesday, 22 November 2011

ಗೋಡೆಯಾಚೆಗಿನ ನೋಟ

ಒಂದು ಕ್ರಿಯೆಗೆ ಅದರದೇ ಆದ ನೇರ ಅಥವಾ ವಿರುದ್ದವಾದ ಪ್ರತಿಕ್ರಿಯೆ ಇರುತ್ತದೆ. ಇದು ನ್ಯೂಟನ ಸಿದ್ದಾಂತ... ಈ ಸಿದ್ದಾಂತವನ್ನು ಹುಸಿ ಮಾಡಿದವನಿದ್ದರೆ ಅದು ರಾಹುಲ್ ದ್ರಾವಿಡ್ ಮಾತ್ರ ಅಂತ ಅನಿಸುತ್ತದೆ. ಅಕ್ತರ್, ಲೀ ಯಂತ ಘಟಾನುಘಟಿ ಗಳು ಗಳು ಮೈದಾನದ ಒಂದಂಚಿನಿಂದ ಏದುಸಿರು ಬಿಡುತ್ತಾ ಬಂದು ಚೆಂಡನ್ನು ಎಸೆದಾಗ, ಅದರ ವೇಗ ಗಂಟೆಗೆ ಸುಮಾರು 125 ರಿಂದ 145 ರಷ್ಟು ಇರುತ್ತದೆ.. ಆದರೆ ಅದನ್ನು ಕಲಾತ್ಮಕ ಶೈಲಿಯಲ್ಲಿ ಅಲ್ಲೇ ನಿಲ್ಲಿಸುವ ತಾಕತ್ತು ದ್ರಾವಿಡ್ ಗಲ್ಲದೆ ಇನ್ನ್ಯಾರಿಗೆ ಸಾದ್ಯ? ಪಾಪ! ಆ ಬೌಲರಿಗೆ ಇದೊಂತರ ಅವಮಾನ ಮಾಡಿದ ಹಾಗೆ!

ಬ್ಯಾಟಿಂಗ್ ಶೈಲಿ ನಿಧಾನವಾದರೂ ಸುಂದರವಾಗಿರುತ್ತದೆ.. ಕೆಲವೊಮ್ಮೆ ಬೋರಾಗಿ ಒಮ್ಮೆ ಔಟಾಗಬಾರದೆ ಅಂತ ಅನಿಸುವುದುಂಟು! ಎದುರಾಳಿಗಳ ಪ್ರಖರ ದಾಳಿಗೆ high profile ಬ್ಯಾಟ್ಸಮನ್ ಗಳು ಸಾಲಾಗಿ ಪೆವಿಲಿಯನ್ ನತ್ತ ಮುಖ ಮಾಡಿದಾಗ, ಒಂದು ಕಡೆ ದ್ರಾವಿಡ್ ಮಹಾ ಗೋಡೆಯಂತೆ ನಿಂತು partnership ಬಿಲ್ಡ್ ಅಪ್ ಮಾಡುವಾಗ ಅವನಿಗೆ ಪರ್ಯಾಯವೇ ಇಲ್ಲ ಅಂತ ಅನಿಸುತ್ತದೆ.. ಹಾಗೆ ಆಡಿ ಅದೆಷ್ಟೋ ಸಲ ಭಾರತವನ್ನು ಸೋಲಿನಿಂದ ಪಾರು ಮಾಡಿದ್ದಾನೆ! ಅವನ ಆಟದ ಅಂಕಿ ಅಂಶ ನೋಡಿದರೆ ಹೆಚ್ಹಿನವು ಭಾರತವನ್ನು ಹೀನಾಯ ಸೋಲಿನಿಂದ ತಪ್ಪಿಸಿದಂತವು.. ಯಾವತ್ತು ತಾನು ಸ್ವಾರ್ಥಕ್ಕೆ ಆಡದೆ, ತಂಡಕ್ಕಾಗಿಯೇ ಆಡಿದ ದ್ರಾವಿಡ್ ಅನಿವಾರ್ಯ ಸಂದರ್ಭದಲ್ಲಿ ವಿಕೆಟ್ ಕೀಪಿಂಗ್ ಸಹ ಮಾಡಿದ್ದರಲ್ಲದೆ ಒಟ್ಟಾರೆ 200 ಕ್ಕಿಂತ ಅಧಿಕ ಕ್ಯಾಚ್ ಹಿಡಿದ ದಾಖಲೆಯನ್ನು ತನ್ನದಾಗಿಸಿದ್ದಾರೆ. ಸಚಿನ್ ನಷ್ಟು ಶತಕ ಹೊಡೆಯದಿದ್ದರೂ ODI ಮತ್ತು ಟೆಸ್ಟ್ ಎರಡರಲ್ಲೂ 10 ಸಾವಿರ ರನ್ ಮಾಡಿದ ಸಾಧನೆಯನ್ನು ತನ್ನ ಮುಡಿಗೇರಿಸಿ ಕೊಂಡಿದ್ದಾನೆ!

ತನ್ನ ಹದಿನೈದು ವರ್ಷದ ಕ್ರೀಡಾ ಜೀವನದಲ್ಲಿ ಕ್ರಿಟಿಕ್ಸ್ ದ್ರಾವಿಡ್ ನನ್ನೂ ಬಿಟ್ಟಿಲ್ಲ.. ಹಲವು ಸಲ ಬ್ಯಾಟಿಂಗ್ ಶೈಲಿಯ ಬಗೆ ಮಾಜಿ ಆಟಗಾರರಿಂದ ಟೀಕೆಯ ಸರಮಾಲೆಯನ್ನೇ ಅನುಭವಿಸಿದ್ದಿದೆ.. ಅವನ ಸಾಧನೆಯೆದುರು ಅದೆಲ್ಲವೂ ಗೌಣವಾಗಿದೆ. ಆದರೆ ಎರಡು ಸಲ ದ್ರಾವಿಡ್ ನಡೆ ತೀವ್ರ ಚರ್ಚೆಗೊಳಪಟ್ಟಿದೆ.. ಒಂದು ಸಚಿನ್ 196 ರನ್ ಮಡಿ ಕ್ರಿಸ್ ನಲ್ಲಿದ್ದಾಗ ಡಿಕ್ಲೇರ್ ಮಾಡಿದ್ದೂ, ಮತ್ತೊಂದು ಆಕಸ್ಮಿಕವಾಗಿ ಬಾಲ್ ಗೆ chewing gum ತಾಗಿ ವಿರೂಪಗೊಳಿಸಿದ ಆರೋಪ..

ಹೀಗೆ ODI ಟೆಸ್ಟ್ ಎರಡರಲ್ಲೂ ಉತ್ತಮ ಸಾಧನೆ ಮಾಡಿದ ದ್ರಾವಿಡ್ ಇತ್ತೀಚಿಗೆ ಆಡಿದ ಏಕೈಕ T20 ಯಲ್ಲಿ 3 ಸಿಕ್ಸರ್ ಬಾರಿಸಿ ಎಲ್ಲರ ಹುಬ್ಬು ಮೇಲೇರುವಂತೆ ಮಾಡಿದ..

ಸಚಿನ್ ಸೆಹ್ವಾಗ್ ನಂತಹ ಬ್ಯಾಟ್ಸಮನ್ ಆಡುವಾಗ ಇನ್ನೊಂದು ಬದಿಯಲ್ಲಿ ವಿಕೆಟ್ ಕಾಪಿಡುತ್ತಿದ್ದದು ದ್ರಾವಿಡ್. ಹೀಗೆಯೇ 80 ಸಲ 100 ಕ್ಕಿಂತ ಅಧಿಕ partnership ನಲ್ಲಿ ಭಾಗಿಯಾದ ದ್ರಾವಿಡ್, ಸಚಿನ್ ನೊಂದಿಗೆ 18 ಸಲ ಈ ಸಾಧನೆ ಮಾಡಿದ್ದಾನೆ.

ಹೀಗೆ 'slow n steady' ದ್ರಾವಿಡ್ ಮಾಡಿದ ಸಾಧನೆಗಳು ಕ್ರಿಕೆಟ್ ಲೋಕದಲ್ಲಿ ಗಮನಾರ್ಹವಾದರೂ , ಸಚಿನ್ ಯುಗದಲ್ಲಿ ಎಲೆಮರೆಯ ಕಾಯಿಯಾಗಿ ಹೋಗಿದ್ದಾನೇನೋ ಅಂತ ಅನಿಸುತ್ತದೆ!

2 comments:

Appu said...

Dravid is a classic player...Though he has gained less popularity than other vital players in the team, he has stood as "the wall" of our cricket team..he has been a versatile player,be a batsman displaying his classic shots or keeping the wickets in difficult times, when India was desperately in search of a wicket keeper...During his captaincy, he maintained his calm composure..He has always been a dedicated player, its very rare to find such players these days!Long live Dravid and may he inspire the youngsters in future..:)

Akshatha K said...

Yes dravid is one of the greatest player. But many ppl would not think like that.He is like Tortoise("slow n steady wins the race")