Monday, 26 September 2011

ಮತ್ತೆ ಮತ್ತೆ ಗಾಂಧೀ...

ಅಕ್ಟೋಬರ್ ತಿಂಗಳು ಬರುವಾಗಲೆಲ್ಲ ನೆನಪಾಗುವ ವ್ಯಕ್ತಿತ್ವ ಗಾಂಧಿಯದ್ದು.ಗಾಂಧಿ ಭಾರತದಲ್ಲಿ ಅತಿ ಹೆಚ್ಚು ಚರ್ಚೆಗೊಳಪಟ್ಟ ವ್ಯಕ್ತಿ.. ಕೆಲವರಿಗೆ ಅವರು ಮಹಾತ್ಮ ಆದರೆ ಇನ್ನು ಕೆಲವರಿಗೆ ಅವರೇನು ಅಲ್ಲ, ಮತ್ತೆ ಕೆಲವರಿಗೆ ಭಾರತವನ್ನು ವಿಭಜಿಸಲು ಕಾರಣಿಭೂತ.. ಹೀಗೆ ಮುಂದುವರಿಯುತ್ತದೆ ಅವರ ಬಗೆಗಿನ ದೃಷ್ಟಿಕೋನ...

ಮಕ್ಕಳಿರುವಾಗ ನಮಗೆ 'ತಾತ' ಎನಿಸಿಕೊಂಡಿದ್ದು ಮಾತ್ರವಲ್ಲದೆ 'ತಟ್ಟು ಚಪ್ಪಾಳೆ ಪುಟ್ಟ ಮಗು ತಕೋ ಕೈ ಇಕೋ ಕೈ, ಗಾಂಧಿಗಿಂದು ಜನುಮದಿನ' ಎಂದು ಹಾಡಿ ಸಂಭ್ರಮಿಸಿದ್ದ ದಿನ..

ಮತ್ತೆ ಕೆಲಸಮಯದ ನಂತರ ಗಾಂಧಿಯ ಹೆಸರು ಜೊತೆ ಮಹಾತ್ಮ ಅಂತ ಯಾಕೆ ಸೇರಿತು ಅನ್ನೋದು ಸೋಜಿಗವಾಯಿತು! ಯಾಕೆಂದ್ರೆ ಅವರ ನಿಜನಾಮ ಮೋಹನದಾಸ ಕರಮ್ ಚಂದ ಗಾಂಧೀ ಎಂದು.

ನಂತರದಲ್ಲಿ ತಿಳಿಯಿತು ಕವಿ ರವಿಂದ್ರನಾಥ್ ಟಾಗೂರ ಗಾಂಧಿಯನ್ನು 'ಮಹಾತ್ಮ' ಅಂತ ಕರೆದದ್ದು.. ರವಿಂದ್ರರಿಗೆ ಗಾಂಧಿಯ ಸರಳತೆ, ನಾಯಕತ್ವ ಗುಣ ಎಲ್ಲವು ಮಿಳಿಥಗೊಂಡ ಒಂದು ಸಮೂಹ ಪ್ರಜ್ಞೆಯ ವ್ಯಕ್ತಿತ್ವ ಅಂತ ಅನಿಸಿ ಮಹಾತ್ಮನೆಂದು ಕರೆದಿರಬೇಕು..

ಮತ್ತೆ ಗಾಂಧೀ ನೆನಪಾಗುವುದು ಭಗತ್ ಸಿಂಗ್'ರ ಗಲ್ಲಿಗೇರಿಸುವ ಸಂದರ್ಭ.. ತಾನು ಅಹಿಂಸವಾದಿಯಾಗಿರುದರಿಂದ, ಹಿಂಸೆ-ಅಹಿಂಸೆ ಗಳ ಬಗೆ ತಲೆ ಕೆಡಿಸಿಕೊಳ್ಳದೆ ಹೋರಾಡುತಿದ್ದ ಭಗತ್ ಬೆಂಬಲಕ್ಕೆ ನಿಂತರೆ ತಾನು ನಂಬಿದ್ದ ತತ್ವಕ್ಕೆ ದ್ರೋಹ ಬಗೆಯುತ್ತೇನೆ ಎಂದೋ? ಅಥವ ಭಗತ್ ನಾಸ್ತಿಕನಾಗಿರುವುದರಿಂದ ಸಮೂಹ ನಾಯಕನಾದ ತಾನು, ಹೋರಾಟಕ್ಕೆ ಬೆಂಬಲ ಕಳೆದು ಕೊಳ್ಳುತೇನೋ ಎಂಬ ಭಯವೋ.. ಒಟ್ಟಿನಲ್ಲಿ ಇದುವರೆಗೆ ನನ್ನನು ದ್ವಂದ್ವದಲ್ಲಿ ಇರಿಸಿದ ಗಾಂಧಿಯ ಈ ಒಂದು ಮುಖ.. ಏಕೆಂದರೆ ಸತ್ಯ ಮತ್ತು ಅಹಿಂಸೆ ಇವೆರಡರ ಮಧ್ಯ ಆಯ್ಕೆ ಮಾಡುವ ಸಂದರ್ಭ ನಾನು 'ಸತ್ಯ' ವನ್ನು ಆಯ್ಕೆ ಮಾಡುತ್ತೇನೆ ಎಂದಿದ್ದಾರೆ...

ಮತ್ತೆ ಗಾಂಧೀ ನೆನಪಾಗುವುದು ವಿಭಜನೆಯ ಸಂದರ್ಭ.. ಶ್ರೇಷ್ಠತೆ ಮತ್ತು ಪೂರ್ವಾಗ್ರಹಗಳ ಮಧ್ಯ ಸಂಕುಚಿತಗೊಂಡಿರುವ ನಮ್ಮ ಮನಸ್ಸು ಭಾರತ-ವಿಭಜನೆಗೆ ಏಕವ್ಯಕ್ತಿಯನ್ನು ಹೊಣೆ ಮಾಡುತೇವೆ.. ಅಲ್ಲಿ ಎಲ್ಲರ ಪಾಲು ಇತ್ತು ಎನ್ನುವ ಸತ್ಯವನ್ನು ಮರೆಯುತೇವೆ.. ನಾಯಕನಾದವನು ತೆಗೆದು ಕೊಳ್ಳುವ ತೀರ್ಮಾನ, ಅದು ಆಗಿನ ಸತ್ಯವನ್ನು ಅವಲಂಬಿಸಿರುತ್ತದೆ ಮತ್ತು ಒಂದು ಸಮೂಹದ ತೀರ್ಮಾನ ಆಗಿರುತ್ತದೆ..
ಒಟ್ಟಿನಲ್ಲಿ ಚಿತ್ರಕಾರನ ಚಿತ್ರಕ್ಕೆ, ಲೇಖಕನ ಲೇಖನಕ್ಕೆ, ನಿರ್ದೇಶಕನ ಸಿನಿಮಾಕೆ, ಕಥೆಗಾರನ ಕಥೆಗೆ, ಹೋರಾಟಗಾರನ ಹೋರಾಟಕ್ಕೆ ಸ್ಪೂರ್ತಿಯಾಗಿದ್ದಾರೆ ...

ಮತ್ತೆ ಕೆಲವು ವಿದ್ಯಾರ್ಥಿಗಳಿಗೆ ಗಾಂಧಿ ಅನ್ನುವುದು ಸಹ ವಿದ್ಯಾರ್ಥಿಗಳನ್ನು ಛೇಡಿಸುವ ವಸ್ತು.. ಕೆಲವರಿಗೆ ಅವರಿಂದ ಒಂದು ರಜೆ ಸಿಕ್ಕುತದಲ್ಲ ಎನ್ನುವ ಖುಷಿ.

ಆದರೆ ನಮ್ಮೊಡನೆ ಗಾಂಧೀ ಇಲ್ಲದಿದ್ದರೂ ಅವರು ಬಿಟ್ಟು ಹೋದ ಆದರ್ಶ, ದ್ವಂದ್ವ ಮಾತ್ರ ಕಾಡುತ್ತಲೇ ಇರುತ್ತದೆ.. ಹಾಗೆ ಗಾಂಧೀ ಎನ್ನುವ ಏಕ ವ್ಯಕ್ತಿ ಇಂದು ಜಗತಿನಾದ್ಯಂತ ಚರ್ಚಿಸಲ್ಪಡುತ್ತಿರುವ ವ್ಯಕ್ತಿತ್ವ ಅಂದರೆ ಅದು ಅವರಿಗೆ ಸಲ್ಲುತಿರುವ ನಿಜವಾದ ಗೌರವವೇ ಸರಿ..

ಕೊನೆಯಲ್ಲಿ.. ಗಾಂಧಿ ಜಯಂತಿ ಅಂದರೆ ನನಗಿಂತ ನನ್ನ ತಂಗಿಗೆ ತುಂಬಾನೇ ಖುಶಿ! ಏಕೆಂದರೆ ನಮ್ಮ ಹುಟ್ಟು ಹಬ್ಬಕ್ಕೆ ಇಲ್ಲದ ರಜೆ ಅವಳ bday ಗೆ ಸಿಗುತದಲ್ಲ!!


Monday, 19 September 2011

ಡ್ರೈವಿಂಗ್ ಸೀಟಲ್ಲಿ ಕೂತಾಗ...

ಇದೊಂಥರ ಹಾಟ್ ಸೀಟ್...! ಇಲ್ಲಿ ಕೂತಾಗ, ಸಂದರ್ಭಕ್ಕೆ ತಕ್ಕ ಹಾಗೆ ಏನಾದರು ಮಾಡುತ್ಹಿರಬೇಕು.. ಅದು ನಮಗೆ ಅನಿಸಿದ ಹಾಗೆ... ಅದೆಲ್ಲವೂ ನಮಗೆ ಸರಿಯೇ.,

ಒಮ್ಮೊಮ್ಮೆ ನಾವು ಡ್ರೈವಿಂಗ್ ಸೀಟಲ್ಲಿ ಕೂತು ಹೋಗುತ್ತಿರಬೇಕಾದರೆ ನಮ್ಮನ್ನು ಯಾರಾದರು over take ಮಾಡ್ಕೊಂಡು ಸ್ಪೀಡಲ್ಲಿ ಹೋದರೆ ನಮ್ಮ ಮನಸ್ಸಲ್ಲೇ ಅಂದುಕೊಳ್ಳುತೇವೆ... "ಅಬ್ಬ...! ಓವರ್ ಸ್ಪೀಡಲ್ಲಿ ಹೋಗ್ತಾ ಇದ್ದಾನಲ್ಲ ಇವನಿಗೇನು ಇಷ್ಟು ಅವಸರ" ಅಂತ... ಇನ್ನು ಒಬ್ಬ ನಿಧಾನವಾಗಿ ಹೊಗುತಿದ್ದರೆ 'ಅರೆ...! ಇವನು ಇವತ್ತು ಸಂಜೆ ಹೋಗಿ ಮುಟ್ಟಬಹುದು' ಅಂತ .. ಹೀಗೆ ನಾವು ಮಾಡಿದ್ದು ಮಾತ್ರ ಸರಿ.. ಒಂದು ಥರ ನಮಗೆ ನಾವೇ ' judge..' ಆದರೆ judgement ಮಾತ್ರ ಯಾವಾಗಲು ನಮ್ ಪರವೇ ಅಥವಾ ನಮ್ ವಿಷಯದಲ್ಲಿ ನಾವು 'ಲಾಯರ್ಸ್'!

ಅಂದಹಾಗೆ.. ನಮ್ಮ ಲೈಫ್ ಒಂದು ವಾಹನ ಅಂದು ಕೊಂಡರೆ, ನಾವು ಈಗ ಡ್ರೈವಿಂಗ್ ಸೀಟಲ್ಲಿ ಕೂತಿದ್ದೇವೆ..! ಇದಕ್ಕೂ ಮೊದಲು ಅಂದರೆ ನಾವು ಸಣ್ಣದಿರುವಾಗ ನಮಗೇನು ಗೊತ್ತಿರಲಿಲ್ಲ.. ಆಟವಾಡುತಿದ್ದ ಪ್ರಾಯದಲ್ಲಿ ನಮ್ಮನು parents ತಂದು ಸ್ಕೂಲ್ ಗೆ ಸೇರಿಸಿದರು... ಅದೊಂಥರ ಬಸ್ಸು ಹತ್ತಿದ ಹಾಗೆ... ನಾವು ಹೋಗಿ ಕೂತೆವು.. ಪ್ರತಿ ಸ್ಟಾಪ್ ನಲ್ಲಿ ಬಸ್ ಚೇಂಜ್ ಮಾಡ್ಕೊಂಡು ಮುಂದೆ ಬಂದು ಬಂದು, ಕೊನೆಗೂ ಒಂದು ವಾಹನ ಹತ್ತಿದೆವು.. ಅಲ್ಲಿ ಡ್ರೈವರ್ ಇಲ್ಲ.! ಇಲ್ಲಿ ನಾವು ಮುಂದೆ ಹೋಗಬೇಕಾದರೆ ನಾವೇ ಡ್ರೈವ್ ಮಾಡ್ಬೇಕು.. ಗುರಿ ದಾರಿ ಎರಡನ್ನು ಗಮನದಲ್ಲಿಟ್ಟು ಮುನ್ನಡಯಬೇಕು ..

ಅದರಲ್ಲೂ ಕೆಲವರ vehicle ಬೇಗನೆ start ಆಗಿರುತ್ತೆ.. ಮತ್ತೆ ಕೆಲವರದ್ದು ಕಿರಿಕ್..! Slow..! ಅಂತೂ ಕೆಲವರಿಗೆ ಒಳ್ಳೆ ರೋಡು ಗಳು, ಮತ್ತೆ ಕೆಲವರಿಗೆ ತಿರುವುಗಳಿಂದ ಕೂಡಿದ ಕಡಿದಾದ ರಸ್ತೆಗಳು.. ಅಬ್ಬ ಏದುಸಿರು ಬಿಡುತ್ತಾ ಹೋಗಬೇಕಾಗುತ್ತೆ! ಹಾಗಂತ ನಿಲ್ಲಿಸುವ ಹಾಗಿಲ್ಲ! gear ಅಲ್ಲಾದರೆ gear ಅಲ್ಲಿ ಹೋಗ್ತಾ ಇರಬೇಕು, ಯಾಕೆಂದ್ರೆ ಮತೊಂದು ಗ್ರೂಪ್ ಟಾಪ್ ನ ಟಾಪ್ ಅಲ್ಲಿ ಇರುತ್ತಾರೆ..

ಆಗ ನೆನಪಾಗುವುದು ನಾವು ಪ್ರಯಾಣಿಕರಾಗಿದ್ದ ಕಾಲ.. ಅಬ್ಬ ಎಷ್ಟೊಂದು ಸುಂದರವಾಗಿತ್ತು..! Student life is golden life ಅಂತ ಹೇಳಿರುವುದು ಸುಳ್ಳಲ್ಲ.. ಅಲ್ಲಿ ನಮಗೆ ಗುರಿ ಇದ್ದರೂ ಇಲ್ಲದಿದ್ದರೂ ಹೋಗುವ ದಾರಿಯ ಬಗೆ ತಲೆ ಕೆಡಿಸುತ್ತಿರಲಿಲ್ಲ .. ಸಹ ಪ್ರಯಾಣಿಕರ ಜತೆ ಆಟ, ಹರಟೆ ಹೀಗೆ time pass..

ಒಮ್ಮೊಮ್ಮೆ ಬಸ್ ಚೇಂಜ್ ಮಾಡುವ ಭರದಲ್ಲಿ ಒತ್ತಡ(exam-result)... ಸಹ ಪ್ರಯಾಣಿಕರಿಗೆ ಒಳ್ಳೆ ಸೀಟು ಸಿಕ್ಕು ನಮಗೆ ಸಿಗದಿದ್ದರೆ.. ಇಲ್ಲದಿದ್ದರೆ ಬಸ್ಸೇ ಮಿಸ್ಸಾದರೆ... ಅಂತ.. ಅದಾದ ನಂತರ enjoyment..!

ಆ ಪ್ರಯಾಣದ ಅವಧಿ ಮುಗಿದಿದೆ. ಇನ್ನೇನಿದ್ದರೂ ನಮ್ಮ ವಾಹನವನ್ನು ನಾವೇ ಚಲಾಯಿಸಬೇಕು... ಇದೊಂತರ ಹಾಟ್ ಸೀಟ್! ಕೆಲವರನ್ನು ಬೆಚ್ಚಗಿಡುತ್ತದೆ(ಸಂತೋಷ ) .. ಮತ್ತೆ ಕೆಲವರನ್ನು ಬಿಸಿಯಾಗಿರಿಸುತ್ತೆ(tension).. ಒಂಥರ ನಮಗೆ ಇಷ್ಟವಾಗದಿದ್ದರೂ ರೂಟ್ ಚೇಂಜ್ ಮಾಡಿ ಡ್ರೈವ್ ಮಾಡ್ತಾ ಇರಬೇಕು ಅಷ್ಟೇ...!