Friday, 30 December 2011

ಮರೆಯಲಾಗದ ಹಾಡು ರಫಿ...

ಹಳೆಯ ಕಾಲದ ಹಾಡುಗಳಿಗೆ ಮರುಳಾದವರು ನೀವಾಗಿದ್ದರೆ ರಫಿ,ಕಿಶೋರ್ ಮುಕೇಶ್ ರನ್ನು ಹೇಗೆ ತಾನೇ ಮರೆಯುವುದು.. ಅಷ್ಟಕ್ಕೂ ನಮ್ಮ ಮನವನ್ನು ಆವರಿಸಿ ಬಿಟ್ಟಿದ್ದಾರೆ. ಹಾಗೆ ಕೇಳುತ್ತಾ ಕೂತರೆ ಬೋರು ಅಂತ ಅನ್ನಿಸಲು ಸಾಧ್ಯವೇ ಇಲ್ಲವೇನೋ..? ಇದು ಯಾಕೆ ನೆನಪಾಯಿತೆಂದರೆ, ಕಳೆದ ವಾರ ರಫಿ ಇದ್ದಿದ್ದರೆ 87 ನೆ ವಸಂತ ಕ್ಕೆ ಕಾಲಿಡುತಿದ್ದಲ್ಲದೆ, ಅದೆಷ್ಟೋ ಹಾಡುಗಳನ್ನು ಕೊಡುತಿದ್ದನೇನೋ!

4 ದಶಕಗಳ ಕಾಲ ಹತ್ತಿರ ಹತ್ತಿರ 8 ಸಾವಿರ ಹಿಂದಿ ಹಾಡುಗಳನ್ನು ಹಾಡಿದ.. O p ನಯ್ಯರ್, ಶಂಕರ್ ಜೈಕಿಶನ್, ನೌಷಾದ, ಲಕ್ಸ್ಮಿಕಾಂತ ಪ್ಯಾರಿಲಾಲ್ ರಂತಹ ಅತಿರಥ ಮಹಾರಥರಾದ ಸಂಗೀತ ನಿರ್ದೇಶಕರೊಟ್ಟಿಗೆ ಕೆಲಸ ಮಾಡಿದ್ದಲ್ಲದೆ, ಶಾಸ್ತ್ರಿಯ,ಭಕ್ತಿ, ವಿರಹ ಗೀತೆ, ಪ್ರೇಮ ಗೀತೆ,ಕವ್ವಾಲಿ, ಗಜಲ್, ಭಜನೆ ಹೀಗೆ ಎಲ್ಲ ರೀತಿಯ ಹಾಡುಗಳನ್ನು ಹಾಡಿದ..

ರಫಿ ಎಷ್ಟು ಶ್ರೇಷ್ಠ ಹಾಡುಗಾರನೋ ಅಷ್ಟೇ ವಿನಯವಂತ! ಒಮ್ಮೆ O.p. ನಯ್ಯರ್ ಗೆ ಕೊಟ್ಟ ಟೈಮ್ ಗಿಂತ ಸ್ವಲ್ಪ ಲೇಟ್ ಆಗಿ ಬಂದಾಗ ಸಿಟ್ಟಾದ ನಯ್ಯರ್ ಕಾರಣ ಕೇಳಿದಾಗ, ಜೈಕಿಶನ್ ಸೆಟ್ ಅಲ್ಲಿ ಸ್ವಲ್ಪ ಲೇಟ್ ಆಯಿತು ಅನ್ನುವಾಗ, ನಿಮ್ಮಲ್ಲಿ ಜೈಕಿಶನ್ ಗೆ ಇರೋ ಟೈಮ್ ಈ ನಯ್ಯರ್ ಗೆ ಇಲ್ವಲ್ಲ ಅಂತ ಕೂಗಾಡಿ ಸಿಟ್ಟಲ್ಲಿ ಆ ಅಡಿಶನನ್ನೇ ಕ್ಯಾನ್ಸಲ ಮಾಡಿದ್ರು. ಆದರೆ ರಫಿ ಯಾವುದನ್ನೂ ಮನಸಿಗೆ ಹಚಿಕೊಳ್ಳದೆ ಕೆಲ ದಿವಸದ ನಂತರ ನಯ್ಯರನ್ನು ಭೇಟಿಯಾದ.. ಆಗ ಸ್ವತಹ ನಯ್ಯರೆ ರಫಿಯ ಈ ಗುಣದ ಬಗೆ ಬೆರಗಾಗಿದ್ರು!

ಇನ್ನು ರಫಿ ಹಾಡಿದ ಯಾವ ಹಾಡುಗಳ ಬಗೆ ಹೇಳುವುದು!

ಸೃಷ್ಟಿಕರ್ತನ ಬಗ್ಗೆ ಹಾಡಿದ 'ಯಾ ಇಲಾಹಿ, ಯಾ ಇಲಾಹಿ' ನಮ್ಮನ್ನು ಆಧ್ಯಾತ್ಮ ಲೋಕಕ್ಕೆ ಕೊಂಡೊಯ್ದರೆ, ದಿಲೀಪ್ ಸಿನಿಮಾ ಕ್ಕೆ ಹಾಡಿದ ಮಧುವನ್ ಕಿ ರಾಧಿಕ ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ.ಇನ್ನು hum kise se kum nahi ಫಿಲಂ ನಲ್ಲಿ 'ಚಾಂದ್ ಮೇರ ದಿಲ್' ಹಾಡು ರೊಮಾಂಟಿಕ ಮೋಡ್ ನತ್ತ ಹೊರಳಿಸುತ್ತದೆ.. Hum Kaala hai to ಎನ್ನೋ ಹಾಡು ಪ್ರೇಮಕ್ಕೆ ಸೌಂದರ್ಯ ಮುಖ್ಯವಲ್ಲ ಅಂತ ಸಾರಿ ಹೇಳುತ್ತದೆ.badan pe, Baharon phool ಪ್ರೇಮಿಯ ಸಡಗರಕ್ಕೆ ಕಾರಣವಾದರೆ, pattar ki sanam,kya huva tera vada, ಮುಂತಾದ ಹಾಡುಗಳು ಭಗ್ನ ಪ್ರೇಮಿಯ ನೋವನ್ನು ತೋಡುತ್ತದೆ.. ಇದೆಲ್ಲಕಿಂತ ಹೆಚ್ಹಾಗಿ babul ki dua ಹಾಡು ಯಾವೊಂದು ಭಾವ ಜೀವಿಯ ಮನವನ್ನು ಕಲಕುವಂತೆ ಮಾಡುತ್ತದೆ.ತಂದೆ ಮಗಳ ಅಗಲುವಿಕೆಯ ಹಿನ್ನೆಲೆಯಲ್ಲಿ ಬರುವ ಹಾಡು ತಂದೆಯ ಕನಸು ಮತ್ತು ಪ್ರೀತಿಯ ಅಭಿವ್ಯಕ್ತಿಯಾಗಿದೆ. ಹಾಡು ಹಾಡುವಾಗ ಸ್ವತ ರಫಿಯ ಕಣ್ಣು ತುಂಬಿತ್ತಂತೆ. ಮತ್ತೆ ಬಡವರ ಬಗೆ ಹಾಡಿದ garibo ki suno wo tumhare sunega ಅನ್ನೋ ಹಾಡು ನಮ್ಮ ಜವಾಬ್ದಾರಿಯನ್ನು ನೆನಪಿಸುತ್ತದೆ. ಇನ್ನು ಶಮ್ಮಿ ಕಪೂರ್ ಗೆ ಹಾಡಿದ 'yahoo, koi mera jungli kahe' ಅನ್ನೋ ಹಾಡು ನನ್ನನು ಯಾರು ಬೇಕಾದರೂ ಒರಟ ಅನ್ನಿ, ಆದರೆ ನಾನೂ ಒಬ್ಬ ಪ್ರೇಮಿ ಅಂತ ನಿವೇದಿಸುತ್ತದೆ.

ಹೀಗೆ ರಫಿ ಶಮ್ಮಿ, ಗುರುದತ್ , ರಿಷಿ, ದೇವಾನಂದ್, ಅಮಿತಾಬ್ ಹೀಗೆ ಮೇರು ನಟರಿಗೆ ಹಾಡಿನಲ್ಲಿ ದ್ವನಿಯಾಗಿದ್ದ. humko tumse hogaya hai pyaar ಅನ್ನೋ ಹಾಡು ರಫಿ, ಕಿಶೋರ್, ಮುಕೇಶ್ ಮತ್ತು ಲತಾ ಮಂಗೆಷ್ಕರ್ ಎಲ್ಲರು ಒಟ್ಟಿಗೆ ಸೇರಿ ಹಾಡಿದ್ದು, ಇದೊಂದು ಶ್ರೇಷ್ಠ ಜುಗಲ್ಬಂದಿ ಅನ್ನಬಹುದೇನೋ! ಒಂದು ತಲೆಮಾರಿನ ಶ್ರೇಷ್ಠ ಗಾಯಕ ಮತ್ತೊಂದು ತಲೆಮಾರನ್ನು ತಲುಪಿ, ಅವರ ಮನಸ್ಸಿನಲ್ಲಿ ಅಚಳಿಯದೆ ಉಳಿದರೆ ಗಾಯಕನಿಗೆ ಅದಕ್ಕಿಂತ ದೊಡ್ಡ ಪ್ರಶಸ್ತಿ ಏನಿದೆ? ಒಟ್ಟಿನಲ್ಲಿ ರಫಿ ಎಲ್ಲರ ಮನಸಿನಲ್ಲಿ ಅವನ ಹಾಡಿನಂತೆ ಚಿರಾಯು ಆಗಿದ್ದಾನೆ..! ಅದಿನ್ನು ಎಷ್ಟು ಕಾಲ ಕಳೆದರು...!

Monday, 19 December 2011

ಗೆಳೆಯನೊಬ್ಬನ ಕಥೆ..!

ಶರದೃತುವಿನ ರಾತ್ರಿ.. ಆಕಾಶ ಶುಭ್ರವಾಗಿ ಕಾಣುತಿತ್ತು.. ಬೆಳದಿಂಗಳು ಇಡೀ ಪರಿಸರವನ್ನು ಬೆಳಗಿತ್ತು.. ಬೆಳಕಿನಲ್ಲಿ ಮಂಜು ತಣ್ಣನೆ ಹರಡಿತ್ತು. ಚುಮು ಚುಮು ಚಳಿ ಆಗಷ್ಟೇ ಆರಂಭವಾಗಿತ್ತು. ನಾನು ಮತ್ತು ಗೆಳೆಯ ಕಾಲೇಜಿನ stone ಬೆಂಚಲ್ಲಿ ಅಂಗಾತ ಮಲಗಿ ಆಕಾಶವನ್ನೇ ತದೇಕಚಿತ್ತದಿಂದ ನೋಡಿ ಅನಂದಿಸುತಿದ್ದೆವು. ನಮ್ಮದೇ ಪ್ರಪಂಚದಲ್ಲಿ ಮುಳುಗಿ ಹೋಗಿದ್ದೆವು. ಆಗ ನಮ್ಮ ಸುತ್ತಲೂ ಇದ್ದ ಬೇರೆ ಗೆಳೆಯರು ನಮನ್ನು 'ಮೆಂಟಲ್' ಅಂತ ತಮಾಷೆ ಮಾಡುತ್ತಾ ಇದ್ದರು.. ಅಷ್ಟಕ್ಕೂ ಮಧ್ಯ ರಾತ್ರಿಯಲ್ಲಿ ಕಾಲೇಜಿನ ಕ್ಯಾಂಪಸ್ ನಲ್ಲಿರಲು ಕಾರಣವೇನಪ್ಪ ಅಂದ್ರೆ ನಮ್ಮ ಪ್ರೊಫೆಸರ ಒಬ್ಬರಿಗೆ ಯಾವುದೋ ಪ್ರಶಸ್ತಿ ಬಂದು, ಅವತ್ತು ರಾತ್ರಿ ಕಾಲೇಜು ಗ್ರೌಂಡಿನಲ್ಲಿ ಪಾರ್ಟಿ ಇಟ್ಟಿದ್ದರು. ಅವರ ಆತ್ಮೀಯ ವಿದ್ಯಾರ್ಥಿಗಳಾದ ನಮ್ಮನ್ನು ಅಂದರೆ ಹತ್ತು ಜನರನ್ನು ಆಹ್ವಾನಿಸಿದಕ್ಕೆ ನಾವು ಹೋಗಿದ್ದು.. ಪಾರ್ಟಿಯಲ್ಲಿ ನಾವು ನಮ್ಮ ಪ್ರೊಫೆ ಸರಿಗೆ ಬೇಕಾದ ಹೆಲ್ಪ್ ಮಾಡಿ ಊಟ ಮಾಡುವಾಗ ಬರೋಬ್ಬರಿ ಹನ್ನೊಂದು ಗಂಟೆ.. ನಮ್ಮೆಲ್ಲರ ಮನೆ ಸ್ವಲ್ಪ ರಿಮೋಟ್ ಏರಿಯ ಆದುದರಿಂದ ರಾತ್ರಿ ಅಲ್ಲೇ ಕಾಲೇಜಿನಲ್ಲಿ ಉಳ್ಕೊಂಡೆವು. ಅಲ್ಲಿ ಎಲ್ಲರೂ ಹೋದ ನಂತರ, ಗೆಳೆಯರು ಸ್ವಲ್ಪ 'ಪಾರ್ಟಿ' ಅನ್ನು ಮಾಡಿದ್ರು!

ಆಕಾಶವನ್ನೇ ದಿಟ್ಟಿಸುತಿದ್ದ ಗೆಳೆಯ, ಸಡನ್ನಾಗಿ ಸುತ್ತಲೂ ಯಾರು ಇಲ್ಲದ್ದನ್ನು ನೋಡಿ 'ಹೇಯ್ ಅವರೆಲ್ಲರೆಲ್ಲಿದ್ದಾರೆ?' ಅಂತ ಅವರನ್ನು ಹುಡುಕಲು ಹೊರಟ. ಅವನನ್ನೂ ನಾನು ಹಿಂಬಾಲಿಸಿದೆ.. ಹೀಗೆ ಕ್ಯಾಂಪಸ್ ರಸ್ತೆ ಹೋಗಿ ಅಡ್ಡ ರಸ್ತೆಗೆ ಕೂಡುವಲ್ಲಿ ಅಂದರೆ ಗೇಟ್ ಹತ್ರ ನಿಂತು ಎರಡು ಬದಿ ನೋಡಿದಾಗ ದೂರದಲ್ಲಿ ladies ಹಾಸ್ಟೆಲ್ ಹತ್ರ, ಗೆಳೆಯರ ಗುಂಪೇ ರಸ್ತೆಯಲ್ಲಿ ಏನೋ ಬರೆಯುತಿದ್ದರು. ನಾನು ಗೆಳೆಯನ ಜತೆ ಮಾತಾಡುತ್ತ ಕಾಲೇಜಿನ ಗೇಟ್ ಹಾಕಿ ಅವರ ಕಡೆ ನಡೆದೆವು.. ಅಷ್ಟರಲ್ಲಿ ಎದುರಿನಿಂದ ಒಂದು ಜೀಪ್ ಬಂತು.. ಎಲ್ಲರೂ ಓಡಿ ಅಂತ ಕಿರುಚುತ್ತಾ ನಮ್ಮ ಕಡೆ ಓಡಿ ಬಂದರು.. ಅವರ್ಯಾಕೆ ಓಡುತಿದ್ದಾರೆ ಅಂತ ನಮಗೆ ತಿಳಿಯದು. ಆದರೂ ನಾವು ಹಿಂತಿರುಗಿ ಅವರ ಹಿಂದೆ ಕಾಲೇಜಿನತ್ತ ಓಡಿದೆವು.. ಗೇಟ್ ಮುಚ್ಹಿದುದರಿಂದ ನಮ್ಮಲ್ಲೊಬ್ಬ ಗೇಟ್ ಅನ್ನು ಹತ್ತಲು ಪ್ರಾರಂಬಿಸಿದ್ದ.. ಅವನು ಗೇಟ್ ಮೇಲೆ ಹತ್ತಿದಾಗ ನಾನಲ್ಲಿ ಮುಟ್ಟಿ, ಗೇಟ್ ಅನ್ನು ತೆರೆದೆ.. ಅವ ಗೇಟ್ ಲ್ಲೇ ಬಾಕಿ..! ಅವನು ಅಲ್ಲಿಂದ jump ಮಾಡಿ ನಮ್ಮನ್ನು ಅನುಸರಿಸಿದ.. ಅವತ್ತಿನ ಓಟ ನಾವೆಲ್ಲಾದರು athletic ಮೀಟ್ ಅಲ್ಲಿ odiddare ಹೊಸ ರೆಕಾರ್ಡ್ ಆಗುತಿತ್ತೇನೋ? ಏಕೆಂದರೆ ನಮ್ಮ ಹಿಂದೆ follow ಮಾಡ್ತಾ ಇದ್ದದು ಪೋಲಿಸ್ ಜೀಪ್..! ಇನ್ನೇನು ಜೀಪ್ ಹತ್ತಿರ ಮುಟ್ಟುತೆ ಅನ್ನುವಾಗ ನಾವು ಕ್ಯಾಂಟೀನ್ ಹತ್ರ ಮುಟ್ಟಿದ್ದೆವು. ಸಡನ್ನಾಗಿ ಬಲ ಬದಿಗೆ ತಿರುಗಿ, ಪಕ್ಕದ ತೋಟಕ್ಕೆ jump ಮಾಡಿ, open air stage ಹಿಂಬದಿಯಿಂದಾಗಿ ಬಂದು ನಿಂತೆವು.. ಆಗ ಪೋಲಿಸ್ ಜೀಪ್ ಕ್ಯಾಂಪಸ ಇಡೀ ತಿರುಗಿ ವಾಪಸ್ ಹೋಯಿತು.. ಅಬ್ಬ ಅಂತ ತಿರುಗಿ ನೋಡ್ತೇವೆ ಓಡುವಾಗ 5-6 ಜನ ಇದ್ದ ನಾವು ಈಗ ಇದ್ದದ್ದು ಮೂರೂ ಜನ.. ಹಾಗಾದರೆ ಹತ್ತರಲ್ಲಿ ಇನ್ನುಳಿದವರೆಲ್ಲಿ?

ಹಾಗೆ ನಾನು ಗೆಳೆಯರ ಜತೆಗುಡಿ ಅವರನ್ನು ಹುಡುಕಲು ಹೊರಟೆವು.. ಅಲ್ಲೊಂದು ಬಾವಿ ಇತ್ತು. ಅದರ ಸ್ಟೆಪ್ ಹತ್ತಿ ಮೇಲೆ ಗ್ರೌಂಡ್ ಕಡೆ ಹೋಗಬೇಕು.. ಹಾಗೆ ಹತ್ತಿ ಮೇಲೆ ಹೋಗಿ ಹಿಂತಿರುಗಿ ನೋಡಿದಾಗ, ನಮೊಂದಿಗಿದ್ದ 'ಹರಿ' ಕಾಣುತ್ತಿಲ್ಲ.. ಅವ ಕಾಲು ಜಾರಿ ಸ್ಟೆಪಿಂದ ಕೆಳಗೆ ಬಿದ್ದಿದ್ದ.. snake n ladder ಆಟದ ಹಾಗೆ.! ಅಲ್ಲಿಂದ್ ಗ್ರೌಂಡಿಗೆ ಬಂದಾಗ ನಮ್ಮನ್ನು ಹುಡುಕುತ್ತಾ ಇಬ್ಬರು ಬರುತ್ತಿದ್ದರು. ಅಲ್ಲಿಂದ್ ಒಟ್ಟಿಗೆ ನಾವೆಲ್ಲರೂ ಕ್ಯಾಂಪಸ್ ಕಡೆಗೆ ಹೋದೆವು.. ಆಗ ಗೊತ್ತಾಗಿದ್ದು ನಮ್ಮಲ್ಲಿ ಒಬ್ಬರನ್ನೂ, ಇಬ್ಬರನ್ನೂ ಪೊಲೀಸರು ಹಿಡಿದಿದ್ದಾರೆ ಅಂತ.. ಅವರ್ಯಾರಪ್ಪ ಅಂತ ನಮ್ಮಷ್ಟಕ್ಕೆ ಊಹಿಸಲು ಪ್ರಾರಂಬಿಸಿದೆವು.. ಅದು 'ಸುಬ್ಬು' ಹಾಗಿರಬಹುದೆಂದು ನಮ್ಮೆಲ್ಲರ ಊಹೆ ಆಗಿತ್ತು. ಏಕೆಂದರೆ ಓಡುವಾಗ ನಮ್ಮಲ್ಲಿದ್ದ ಐದು ಜನ ಕೆಲವರನ್ನು ನೋಡಿದ್ದಾರೆ.. ಸುಬ್ಬು ಮಾತ್ರ ಕಾಣಲಿಲ್ಲ.. ಹಾಗೆ pu ಕಾಲೇಜಿನ ಕ್ಯಾಂಪಸ್ ಮುಟ್ಟಿದಾಗ,ಅಲ್ಲೇ ಗೇಟ್ ಹೊರಗಡೆ ಕೆಲವು ಜನ ನಿಂತಿದ್ದರು.. ಆಹ್! ಅದರಲ್ಲಿ ಸುಬ್ಬು ಇದ್ದಾನೆ.. ಅವ ಪೋಲಿಸ್ ಜೀಪ್ ಬರುತಿದ್ದ ಕಡೆಗೆ ಓಡಿ ಬಚಾವಾಗಿದ್ದ! ಅಲ್ಲಿ ಮುಟ್ಟಿದಾಗ ನನ್ನನ್ನು ನೋಡಿದ ಅವರು 'ಒಹ್ ನೀನು ಇಲ್ಲಿದ್ದೀಯ?' ಅಂತ ಉದ್ಗರಿಸಿದರು. ಅವರ ಅಂದಾಜು ಪೊಲೀಸರು ನನ್ನನು ಹಿಡಿದಿದ್ದರೆಂದು.!

ಎಲ್ಲರೂ ಇದ್ದರೆಂದ ಮೇಲೆ ಪೋಲಿಸ್ ಹಿಡಿದದ್ದು ಯಾರನ್ನು? ಅನ್ನುವುದು ಕಗ್ಗಂಟಾಗಿತ್ತು. ತಲೆ ಎನಿಸಿದಾಗ ಒಬ್ಬ ಮಿಸ್ಸಿಂಗ್..! ಕೊನೆಗೂ ಒಬ್ಬನಿಗೆ ಗೊತ್ತಾಯಿತು ಅವ 'ಕುಮಾರ್' ಅಂತ..

ಎಲ್ಲರೂ ಕುಡಿದಿರುವ ಕಾರಣ ಪೋಲಿಸ್ ಸ್ಟೇಷನ್ ಗೆ ಹೋಗಲು ಹೆದರಿಕೆ.. ಅವರೆಲ್ಲರೂ ಸೇರಿ ಕುಡಿಯದೆ ಇದ್ದ ನನ್ನನು ಸ್ಟೇಷನ್ ಗೆ ಹೋಗಲು ಹೇಳಿದಾಗ, 'ಛೆ! ನಾನ್ಯಾಕೆ ಕುಡಿಯಲಿಲ್ಲ' ಅಂತ ಅನ್ನಿಸಿತು..! ಮತ್ತೆ ಏನಾದರಾಗಲಿ ಅಂತ ನಮ್ಮ ಪ್ರೊಫೆಸರ್ ಗೆ ಕಾಲ್ ಮಾಡಿ ಹೇಳಿದ್ವಿ.. ಅಲ್ಲಿಗೆ ಕಾರ್ಯ ಇತ್ಯರ್ಥವಾಯಿತು.

ಈಗ ನಮ್ಮ ಮುಂದೆ ಇದ್ದ ಪ್ರಶ್ನೆ ನಮ್ಮೊಟ್ಟಿಗೆ ಇದ್ದ ಗೆಳೆಯರು ಯಾಕೆ ಹಾಸ್ಟೆಲ್ ಹತ್ರ ಹೋದದ್ದು? ಅಂತ..

ಕಾರಣ ಇಷ್ಟೇ ನಮ್ಮಲ್ಲೊಬ್ಬ ನಾಲ್ಕುವರೆ ಫೀಟ್ ನವನೊಬ್ಬನಿದ್ದ. ಅವನಿಗೆ ಒಂದು ಹಾಸ್ಟೆಲ್ ಹುಡುಗಿಯೊಟ್ಟಿಗೆ ಲವ್ ಇತ್ತು.. ಇವರಿಬ್ಬರು ಮೊಬೈಲ್ ನಲ್ಲಿ ಮಾತಾಡ್ತಾ ಇದ್ರು. ಅವಳು ಹಾಸ್ಟೆಲ್ ಹೊರಗೆ ಬರಲು ಹೇಳಿದಾಗ, ಇವನು ಹೋಗಿದ್ದ. ಅವನೊಂದಿಗೆ ಗೆಳೆಯರ ಬಳಗವೇ ಹೋಗಿದ್ದು.. ಆಗ ನೈಟ್ ಬೀಟ್ ಪೋಲೀಸರ ಆಗಮನ.. ಮತ್ತೆ ಇದೆಲ್ಲ ಅವಾಂತರ..

ಒಮ್ಮೊಮ್ಮೆ ಘಟನೆ ನೆನಪಿಸುವಾಗ ನಗುವಿನೊಂದಿಗೆ ಮೈ ಜುಮ್ಮೆನಿಸುತ್ತದೆ..! ಅಷ್ಟಕ್ಕೂ ನಾವೆಲ್ಲರೂ innocent ಅನ್ನುವುದು ಹೌದಾದರೂ, ಅವತ್ತು ಏರಿಯ ದಲ್ಲಿ ಏನಾದರು crime ನಡೆದಿದ್ದರೆ..?! ಅಬ್ಬಬ್ಬ ಊಹಿಸಲು ಸಾಧ್ಯವಿಲ್ಲ!!!

Monday, 12 December 2011

ಮರಳಿ ಬಾರದ ಬಾಲ್ಯದ ಕಡೆಗೆ...


"Ye daulat bhi le lo, ye shoharat bhi le lo, bhale chheen lo mujse meri jawani, magar mujhko lautaa do bachpan ka saavan, woh kaagaz ki kashti, woh baarish ka paani.."
ನನ್ನ ಆಸ್ತಿ,ಅಂತಸ್ತು ಮತ್ತೆ ನನ್ನ ಯೌವ್ವನವನ್ನೇ ಬೇಕಿದ್ದರೆ ತೆಗೆದುಕೋ.. ಆದರೆ ನನ್ನ ಬಾಲ್ಯವನ್ನು ನನಗೆ ಮರಳಿಸು.
ಇದು ಜಗಜಿತ್ ಹಾಡಿದ ಒಂದು gazal ತುಣುಕು. ನಾವು ನಮ್ಮ ಬಾಲ್ಯ ವನ್ನು ನೆನಪಿಸುವಾಗಲೆಲ್ಲ ಹಾಡು ನಮ್ಮ ಆಸೆಯಾಗಿ ಬಿಡುತ್ತೆ. ಬಾಲ್ಯದ ದಿನಗಳು ಮತ್ತೆ ಮರಳಿ ಬರಲಾರವು..
ಮಳೆಗಾಲದ ಕಾಗದದ ದೋಣಿ. ಅದು ಹರಿದು ಹೋಗುತಿರುವ ನೀರಿನಲ್ಲಿ ಬಿಟ್ಟಾಗ ರಾಕೆಟ್ ಉಡ್ದಯಿಸಿದಷ್ಟು ಮನದಲ್ಲಿ ಸಂತೋಷ.. ಅದು ಕೊನೆ ತಲುಪುವ ತನಕ ಅದರ ಹಿಂದೆಯೇ ಓಟ. ಅದೆಲ್ಲಾದರೂ ನೀರಲ್ಲಿ ಮುಳುಗಿತೋ ಏನೋ ಒಂತರ ಬೇಜಾರು..ಮಳೆಯಲ್ಲಿ ನೆನೆದು ಹಾಕಿದ ಬಟ್ಟೆಯೆಲ್ಲ ಒದ್ದೆ.. ಮನೆಗೆ ಬಂದಾಗ ಬೈಗುಳವೋ ಬೈಗುಳ! ಅಷ್ಟೇ ನಮ್ಮ ಜಗತ್ತು! ಪುಟ್ಟ ಪ್ರಪಂಚ ಆದರೆ ಆಗಾಧ ಹುಮ್ಮಸ್ಸು.
ಮತ್ತೆ ಮುಂದಿನ ಆಟದತ್ತ ಚಿತ್ತ.ಅದೇನು ಮನೆ,ಮದುವೆ, ಶಾಲೆ,ಕಲ್ಲಾಟ, ಗೋಲಿ, ಲಗೋರಿ ಹೀಗೆ ಸಾಗುತ್ತದೆ ಆಟದ ಲಿಸ್ಟ್.. ಶಾಲೆಯಾಟವಾದರಂತೂ, ಇದ್ದಬಿದ್ದ ಗೋಡೆಗಳೆಲ್ಲ ಮಕ್ಕಳಾಗಿ,ನಾವೇ ಟೀಚರಾಗಿ, ಹೊಡೆಯುವುದೇ ಹೊಡೆಯುವುದು. ನಿಜವಾಗಿ ನಮ್ಮ ಮನಸಲ್ಲಿ ಆಗೆನಿತ್ತೋ ಏನೋ ಯಾರಿಗೆ ಗೊತ್ತು. ಇನ್ನು ಶಾಲೆಯಲ್ಲಿ ಕೊಡುವ homework ಒಂದೇ ನಮಗೆ ಶತ್ರು.. ಅದು ಮಾತ್ರ ನಮ್ಮ ಆಟದ ಸಮಯವನ್ನು ತಿನ್ನುತಿತ್ತು.. ಮತ್ತೆ ಬುಗುರಿಯ ಮರದ ಕೆಳಗೆ ಬುಗುರಿ ಹುಡುಕುವುದು.. ಹುಣಸೆ ಹುಳಿ, ನೇರಳೆ ಹೀಗೆ ಒಂದನ್ನು ಬಿಟ್ಟದಿಲ್ಲ. ಮಾವಿನ ಮರ ಹತ್ತಿ ಮಾವು ಕೊಯ್ದು, ಮನೆಯಿಂದ ಕದ್ದು ತಂದ ಉಪ್ಪು ಮತ್ತು ಕಾರ ಹುಡಿ ಹಾಕಿ ಚಪ್ಪರಿಸುವುದು. ಹುಡುಗಿಯರು ಯಾರಾದರು ಬಂದರೆ ಅವರನ್ನು ಅಲ್ಲಿಂದ ಓಡಿಸುವುದು.. ಅವರು ಮಾವು ಸಿಗದ ಸಿಟ್ಟಲ್ಲಿ,ಅಲ್ಲಿಂದ ನೇರ ನಮ್ಮ ಮನೆಗೆ ಹೋಗಿ ಚಾಡಿ ಹೇಳುವುದು.. ಆಗಲೇ ನಮಗೆ ಬೆತ್ತ ರೆಡಿ.. ಒಮ್ಮೊಮ್ಮೆ ನಾವಿದ್ದ spote ಗೆ ಬಂದರಂತೂ ನಮ್ಮ ಗತಿ ಅಯ್ಯಯೋ..!

ಶನಿವಾರ ಆದಿತ್ಯವಾರ ಬಂದರಂತೂ ಖುಷಿಯೋ ಖುಷಿ! ಮೂರೂ ಅಥವಾ ಎರಡು ಫಿಲಂ ಅಂತು ನೋಡಬಹುದು. ಅದು black n white ಇರಲಿ ಕಲರ್ ಇರಲಿ,ಹೀರೋ ಯಾರೇ ಇರಲಿ ಎಲ್ಲವು ಇಷ್ಟ. ಕನ್ನಡ, ಹಿಂದಿ, ಬೆಂಗಾಲಿ ಯಾವ ಭಾಷೆಯಾದರೂ ನಮಗೆ ತಲೆಬಿಸಿಯಿಲ್ಲ. ಫಿಲ್ಮಿನ ಮಧ್ಯ ಬರುವ ಅಡ್ವರ್ಟೈಸ ಮೆಂಟನ್ನೂ ನೋಡುವುದೇನೆ.. ಅದಲ್ಲದೆ ಚಾನೆಲ್ ಚೇಂಜ್ ಮಾಡುವ ಅಂದರೆ ಬೇರೆ ಚಾನಲ್ ಆಗ ಇರಬೇಕಲ್ಲ. ಅದಿನ್ನು ರಾಮಾಯಣ, ಟಿಪ್ಪು ಸುಲ್ತಾನ್, ಅಲಿಫ್ ಲೈಲ ಅದೆಲ್ಲವೂ ನೋಡದಿದ್ದರೆ ಮಾರನೇ ದಿನ ಗೆಳೆಯರ ಜತೆ ಸ್ಟೋರಿ ಕೇಳಬೇಕು ಅಷ್ಟೇ. ಮತ್ತೆ ರೇಡಿಯೋ ದಲ್ಲಾದರೆ ಹಳೆ ಹಾಡುಗಳು. ಅದೆಷ್ಟು ಸಲವಾದರೂ ಸರಿಯೇ.. ಮುಕೇಶ್, ರಫಿ, ಕಿಶೋರ್ ಕುಮಾರ್ ಹೀಗೆ ಯಾರು ಹಾಡಿದರು ನಮಗಿಲ್ಲ ಚಿಂತೆ. ಕೇಳುವುದಷ್ಟೇ ನಮ್ಮ ಕೆಲಸ.ಹೀಗೆ ನಮ್ಮ ಬಾಲ್ಯದ ನೆನಪುಗಳು ಆಗಾಗ ಬ್ಯುಸಿಯಾಗಿರುವ ಜೀವನದ ಮಧ್ಯ ಬಂದು ಖುಷಿ ಕೊಡುತ್ತೆ,ಕವಿ ಹೇಳಿದ ಹಾಗೆ 'aaja bachpan ek baar phir. Dede apne nirmal shanti' ಅಂತ ಒಮ್ಮೆಯಾದರೂ ಮರಳಿ ಬರಬಾರದೇ ಅಂತ ಅನ್ನಿಸುತ್ತದೆ. ಆದರೆ ಅದು ಇನ್ನು ಆಗಾಗ ಮರುಕಳಿಸುವ ಮಧುರ ನೆನಪು ಮಾತ್ರ. Baar baar aati hai mujko madhur yaad bachpan meri! ಅನ್ನುವ ಕವಿ ವಾಣಿ ಹಾಗೆ..!!!

Tuesday, 6 December 2011

ಪುಟ್ಟ ಗುಬ್ಬಚಿಯ ದುರಂತ ಕತೆ..

ಆಕೆಯ ಹೆಸರು svetlana.. ಅವಳು ಒಂದು ದೊಡ್ಡ ಮರದ ಅಡಿಯಲ್ಲಿ ಹುಟ್ಟಿದ ಸಸಿಯಂತೆ.. ದೊಡ್ಡ ಮರ ತನ್ನ ರೆಂಬೆ ಕೊಂಬೆಗಳನ್ನು ಆಗಸದಗಲ ಹರಡಿ ಅದರಡಿಯಿರುವ ಗಿಡಕ್ಕೆ ಬಿಸಿಲಿನಿಂದ ವಂಚಿತಗೊಳಿಸುತ್ತದೆ.. ಅಂದರೆ ಅದು ಗಿಡಕ್ಕೆ ಒಂದು ಥರ ಹಿಂಸೆಯಾಗಿಬಿಡುತ್ತದೆ.. ಅದೇ ಥರ ಇವಳು..ಒಂದು ಕಾಲದಲ್ಲಿ ಪ್ರಪಂಚದ ಎರಡು ದೈತ್ಯ ಶಕ್ತಿಯಲ್ಲಿ ಒಂದಾಗಿದ್ದ ರಷಿಯಾದ ಅನಭಿಷಕ್ತ ದೊರೆ, ಸರ್ವಾಧಿಕಾರಿ ಸ್ಟಾಲಿನ್ ನ ಏಕ ಮಾತ್ರ ಪುತ್ರಿ..

ಸ್ಟಾಲಿನ್ ನ ಎರಡನೇ ಹೆಂಡತಿಯ ಮಗಳಾದ ಈಕೆ, ಅವನೇ ಹೇಳಿದಂತೆ ಅವಳು ಅವನ 'ಪುಟ್ಟ ಗುಬ್ಬಚಿ' ಮತ್ತು 'ಲಿಟಲ್ ಪ್ರಿನ್ಸೆಸ್ಸ್..' ಆದರೆ ಅವಳ ಬದುಕಿನಲ್ಲಿ ಅವಳೆಂದು ರಾಣಿಯಾಗಿ ಬಾಳಲೇ ಇಲ್ಲ..

ಒಮ್ಮೊಮ್ಮೆ ಜೀವನ ಅನ್ನುವುದು ಚಂಡಮಾರುತಕ್ಕೆ ಸಿಕ್ಕಿದ ದೋಣಿಯಂತಾಗುತ್ತದೆ ನಿಜ. ಆದರೆ ಇವಳ ಬದುಕು ಅದಕ್ಕಿಂತ ಶೋಚನಿಯ. ಆರು ವರ್ಷ ತುಂಬುವಾಗಲೇ ಅವಳ ತಾಯಿ ಆತ್ಮಹತ್ಯ ಮಾಡುತ್ತಾಳೆ.ಅದರಿಂದಾಗಿ ಅವಳು ತಂದೆಯ ಪ್ರೀತಿಯ ಸಂಕೋಲೆಯಲ್ಲಿ ಬೆಳೆಯುತ್ತಾಳೆ.. ತಾನು ಇಷ್ಟಪಟ್ಟದ್ದು ತನ್ನ ತಂದೆಗೆ ಇಷ್ಟವಾಗದೆ ಅವಳು ಒಂಥರಾ ತ್ರಿಶಂಕು ಸ್ವರ್ಗದಲ್ಲಿದ್ದಳು.ಬಯಸಿದ್ದು ಸಾಹಿತ್ಯ ಓದಲು, ತಂದೆಯ ಹಟಕ್ಕೆ ಸೋತು history ಓದಿದಳು.

ಮಹಾಯುದ್ದ ಸಂದರ್ಭ ಅವಳ ಸಹೋದರನನ್ನು ಜರ್ಮನ್ನರು ಒತ್ತೆಯಾಳಾಗಿಟ್ಟು, ರಷ್ಯ ದಲ್ಲಿ ಕೈದಿಯಾಗಿದ್ದ ಜನರಲ್ ನನ್ನು ಬಿಡಲು ಒತ್ತಾಯಿಸಿದಾಗ ಸ್ಟಾಲಿನ್ ಒಪ್ಪಲಿಲ್ಲವಾದ್ದರಿಂದ ಅವರು ಕೊಂದು ಬಿಟ್ಟರು.

ಮತ್ತೆ ಒಬ್ಬ film maker ನನ್ನು ಇಷ್ಟಪಟ್ಟಳಾದರು ತಂದೆ ಅವನನ್ನು ಜೈಲಿನಲ್ಲಿ ಕೊಳೆಯಿಸಿದ. ಮತ್ತೊಬ್ಬನನ್ನು ಪ್ರೀತಿಸಿದಾಗ ತಂದೆಯಿಂದ ಕೆನ್ನೆಗೆ ಹೊಡೆಸಿಕೊಂಡಳಾದರೂ, ಈ ಸಲ ತನ್ನ ಪ್ರೀತಿಯನ್ನು ಜಯಿಸಿ, ಮದುವೆಯಾಗಿ ಒಂದು ಮಗುವನ್ನು(iosif) ಪಡೆದು, ಮತ್ತೆ divorce ಕೊಟ್ಟಳಾದರೂ ಅವನ ಗೆಳೆತಿಯಾಗಿಯೇ ಇದ್ದಳು..

ಸ್ವಲ್ಪ ಕಾಲದ ನಂತರ ತಂದೆಯ ಬಲಗೈ ಬಂಟನ ಮಗನನ್ನೇ ಇಷ್ಟಪಟ್ಟಳು, ತಂದೆ ಈ ಸಲ ಮಾತ್ರ ಖುಷಿಯಾಗಿ ಒಪ್ಪಿಗೆ ಕೊಟ್ಟ.. ಒಂದು ಮಗುವಾದ ನಂತರ ಅವನಿಂದಲೂ ಬೇರೆಯಾದಳು..

ನಡುವೆ ಅವಳ ತಂದೆ ಸತ್ತ.. ಅಲ್ಲಿಯವರೆಗೆ ಬಾಣಲೆಯಲ್ಲಿದ್ದ ಅವಳಿಗೆ ಬೆಂಕಿಯಲ್ಲಿ ಬಿದ್ದ ಅನುಭವ.. ಸರ್ಕಾರದ ಗೂಢಚಾರಿಗಳು ಸದಾ ಅವಳ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತಿದ್ದರು.. ಹೀಗೆ ಮರುಭೂಮಿಯಂತೆ ಬರಡಾದ ಬದುಕಿಗೆ ದೇವೇಂದ್ರ ಅನ್ನೋ ಭಾರತೀಯ ಕಮ್ಯುನಿಸ್ಟ್ ಎಂಟ್ರಿ ಕೊಟ್ಟ.. ಆದರೇನಂತೆ ಸರ್ಕಾರ ಅವರಿಬ್ಬರನ್ನು ಜತೆಯಾಗಲು ಬಿಡಬೇಕಲ್ಲವೇ..? ಅದೇ ವ್ಯಥೆಯಲ್ಲಿ ಅನಾರೋಗ್ಯ ಪೀಡಿತನಾಗಿ ಅವನು ಅಲ್ಲೇ ತನ್ನ ಅಂತಿಮ ಉಸಿರೆಳೆದ. ಅವನ ಅಸ್ಠಿಯನ್ನು ತರುವ ನೆಪದಲ್ಲಿ ಅವಳು ಭಾರತಕ್ಕೆ ಬಂದಳು.ರಶಿಯನ್ government ನಿಂದ ತಪ್ಪಿಸಲು ಇದೇ ಸುಸಂದರ್ಭ ಅಂತ ಅಮೇರಿಕ ಕಡೆಗೆ ಹೊರಟಳು..

ಹೀಗೆ ಕಮ್ಯುನಿಸ್ಟ್ ನಾದ ಸ್ಟಾಲಿನ್ ಪುತ್ರಿ ಮಾತ್ರ ಮಾನಸಿಕ ನೆಮ್ಮದಿಗಾಗಿ ಹಪಹಪಿಸುತಿದ್ದಳು.. Hinduisam, christinisam ಅಂತ ಧರ್ಮದ ಹಿಂದೆ ಹೋದರು ಅಲ್ಲೂ ನೆಲೆಯೂರಲೇ ಇಲ್ಲ .ಇಂಡಿಯ, ಯುರೋಪ್, ಅಮೇರಿಕ ಅಂತ ಅಲೆದಳು. ಆರ್ಥಿಕ ಮುಗ್ಗಟ್ಟಿನಿಂದಾಗಿ ಬಸವಳಿದಳು. ತಂದೆಯನ್ನೇ ದ್ವೇಷಿಸಿದಳು.. ಅದರ ಬಗ್ಗೆ ಪುಸ್ತಕ ಬರೆದು ಸ್ವಲ್ಪ ಮಟ್ಟಿಗೆ ಚೇತರಿಸಿದಳು.. ಬದುಕಿನುದ್ದಕ್ಕೂ ಹಲವು ಬಾರಿ ತನ್ನ ಹೆಸರನ್ನು ಬದಲಾಯಿಸಿದಳು.. ಏಕೆಂದರೆ ತಂದೆಯ ಜತೆ ಗುರುತಿಸಲು ಅವಳಿಗೆ ಇಷ್ಟವಿರಲಿಲ್ಲ.. ಮತ್ತೆ ಅಮೇರಿಕಾದಲ್ಲಿ ಮತ್ತೊಬ್ಬನನ್ನು ಮದುವೆಯಾಗಿ Ms lana peter ಅಂತ ಬದಲಾಗಿ ಸಂಸಾರ ಸಾಗಿಸುತಿದ್ದಳು..ಅಂತಿಮ ದಿನಗಳಲ್ಲಿ ಅಜ್ಞಾತಳಾಗಿಯೇ ಜೀವನ ಸವೆಸಿದ ಅವಳು ಬದುಕಿನದುದ್ದಕ್ಕು ಅಸ್ತಿತ್ವಕ್ಕಾಗಿ ಹೆಣಗಾಡಿದಳು. ಕೊನೆಯಲ್ಲಿ ಕ್ಯಾನ್ಸರ ನೊಂದಿಗೆ ಹೋರಾಡಲಾಗದೆ , ತನ್ನ 82 ನೆ ವರ್ಷದಲ್ಲಿ, ನವಂಬರ್ 20 ರಂದು ಲೋಕದಿಂದ ನಿರ್ಗಮಿಸಿದಳು ..

ಅಂತೂ ತಂದೆ ಎಷ್ಟೇ ದೊಡ್ಡ ಅಧಿಕಾರದಲ್ಲಿದ್ದರೂ ಮಗಳ ಜೀವನ ನರಕ ಸದೃಶ ವಾಗಿತ್ತು. . ಇದು ವಿಧಿಯಾಟವೋ, ಸ್ಟಾಲಿನ್ ಬದುಕಿನ ಬೆನ್ನುಡಿಯೋ?

Monday, 28 November 2011

ತಣ್ನೀರುಬಾವಿಯಲ್ಲಿ ಒಂದು ಸಂಜೆ...


ಸೂರ್ಯಾಸ್ತಮಾನಕ್ಕೆ ಕೆಲವೇ ಕ್ಷಣಗಳಿದೆಯೆನ್ನುವಾಗ, ಇನಿಯನ ಬರುವಿಕೆಯಿಂದಾಗಿ ನಲ್ಲೆಯ ಮುಖ ನಸುಗೆಂಪು ಆಗುವ ಹಾಗೆ ಸಮುದ್ರವಿಡೀ ಹೊಂಬಣ್ಣಕ್ಕೆ ತಿರುಗಿತ್ತು.. ಮತ್ತೆ ಶಾಂತವಾಗಿರದೆ, ಅಗಲುವಿಕೆಯ ನಂತರದ ಕಾತರದಿಂದ ಪ್ರಿಯತಮೆ ತನ್ನೆರಡು ಕೈಗಳನ್ನು ಪ್ರೇಮಿಯತ್ತ ತೋರಿಸಿ ಆಲಿಂಗನಕ್ಕೆ ಕರೆಯುವಂತೆ ಸೂರ್ಯನತ್ತ ಅಲೆಗಳನ್ನು ಎಬ್ಬಿಸಿ ಆರ್ಭಟಿಸುತಿತ್ತು.. ಸೂರ್ಯನು ಪ್ರಿಯತಮೆಯ ಕರೆಗೆ ಓಗೊಟ್ಟ ಪ್ರೇಮಿಯಂತೆ ಬೇಗನೆ ಸಮುದ್ರದೆಡೆಗೆ ಜಾರುತಿದ್ದ.

ಅದನ್ನೇ ನೋಡುತ್ತಾ ಅದೆಷ್ಟೋ ಮಂದಿ ಮರಳ ದಂಡೆಯಲ್ಲಿ ಕೂತು ತಮ್ಮ ಏಕಾಂಗಿತನವನ್ನು ಕಳೆಯುತಿದ್ದರು.. ತುಟಿಪಿಟಿಕೆನ್ನದೆ, ಎವೆಯಿಕ್ಕದೆ ತದೇಕಚಿತ್ತದಿಂದ ಈ ಅಪೂರ್ವ ಕ್ಷಣವನ್ನು ಆಸ್ವಾದಿಸುತ್ತಿದ್ದರು. ಅಲ್ಲಲ್ಲಿ ಚದುರಿ ಹೋದಂತೆ ಹಲವಾರು ಪ್ರೇಮಿಗಳು ತಮ್ಮ ಪ್ರಿಯತಮೆಯ ಸುತ್ತ ತಮ್ಮ ತೋಳುಗಳನ್ನು ಬಳಸಿ ಅದೇನೋ ಪಿಸುಗುಟ್ಟುತಿದ್ದಾರೆ.. ಕೆಲವಾರು ಹೆಂಗಸರು ಅಂದ ಚೆಂದದ ಬಟ್ಟೆಗಳನ್ನು ತೊಟ್ಟು ತಮ್ಮ ಒರಗೆಯವರೋಟ್ಟಿಗೆ, ಗೆಳತಿಯರೊಟ್ಟಿಗೆ ಸಮುದ್ರದ ಆರ್ಭಟಕ್ಕೆ ಪ್ರತಿಸ್ಪರ್ಧಿ ಎನ್ನುವಂತೆ ಮಾತಿನಲ್ಲಿ ತಲ್ಲೀನರಾದ್ದರೆ, ಅವರ ಮಕ್ಕಳೋ ಮನೆಯಿಂದ ಹೊತ್ತು ತಂದ ಆಟಿಕೆಗಳನ್ನು ಕೂಡಿ ಹಾಕಿ ಆಟವಾಡುತಿದ್ದರೆ, ಮತ್ತೆ ಕೆಲವರು ತಮ್ಮ ಗಾಳಿಪಟವನ್ನು ಮೇಲೆ ಆಗಸಕ್ಕೆ ಹಾರಿಸುವ ಪ್ರಯತ್ನದಲ್ಲಿದ್ದಾರೆ.. ಒಬ್ಬ ಹುಡುಗನ ಗಾಳಿಪಟ ಮಾತ್ರ ಮೇಲೆ ಹಕ್ಕಿಗಳ ಮಧ್ಯೆ ಸ್ಠಾನ ಗಿಟ್ಟಿಸಿಕೊಂಡು ಹಾರುತ್ತಿತ್ತು, ಅವ ಅದನ್ನು ಸಂತೋಷದಿಂದ ನೋಡಿ ಹಿರಿಹಿರಿ ಹಿಗ್ಗುತಿದ್ದರೆ, ಅಲ್ಲೇ ಇದ್ದ ಇತರ ಮಕ್ಕಳು ತಾವು ಅವನೆತ್ತರಕ್ಕೆ ಹಾರಿಸಬೇಕೆಂದು ಹಟದಲ್ಲಿ ಬಿದ್ದಿದ್ದರು.


ಕೆಲವರು ಗಂಡಸರಂತೂ ಅದ್ಯಾವುದರ ಪರಿವೆಯಿಲ್ಲದೆ, ಯಾವುದೋ ಪಾರ್ಟಿ ಗೆ ಬಂದವರಂತೆ ತಮ್ಮ ಕೆಲಸ, ಬ್ಯುಸಿನೆಸ್, share ಮಾರ್ಕೆಟ್, ಪೊಲಿಟಿಕ್ಸ್ ಹೀಗೆ ತಮ್ಮದೇ ಗಾಂಭೀರ್ಯದಲ್ಲಿ ತಮ್ಮ ಸಹವರ್ತಿಗಳೊಡನೆ ಮಾತನಾಡುತ್ತ ಇದ್ದಾರೆ..

ಇತ್ತ ಅದೇ ಊರಿನಲ್ಲಿನ ಜನರು 'ಕಡಲು' ನಮಗೆ ಸಾಮಾನ್ಯ ಎಂಬ ಮನಸ್ಠಿತಿಯೊಂದಿಗೆ ಅಲ್ಲೇ ದೂರದಲ್ಲಿ ತಮ್ಮ ಕೆಲಸದೊಂದಿಗೆ ಓಡಾಡುತಿದ್ದಾರೆ..

ಹಾಗೆ ಇದೆಲ್ಲವನ್ನು ಅಕ್ಷಿ ಪಟಲದಲ್ಲಿ ತುಂಬಿಕೊಂಡು ನಾನು ಮತ್ತು ಗೆಳೆಯ ಮುಂದೆ ಹೋಗುತಿರಬೇಕಾದರೆ ಅಲ್ಲೇ ದೂರದಲ್ಲಿ ಮರಳ ರಾಶಿ ಕಂಡು ಕುತೂಹಲಗೊಂಡು ಅದರತ್ತ ಹೋದೆವು.. ಅಲ್ಲಿ ಅಗಾಧ ಮರಳರಾಶಿಯ ಮಧ್ಯ ದೊಡ್ಡ ಹೊಂಡ ತೆಗೆದಿತ್ತು.. ಅದೊರಳಗೆ ಒಂದು ಹಿಟಾಚಿ ಮತ್ತೊಂದು boat ಇತ್ತು.. ಅಲ್ಲಿಯ ಮರಳು ಎಲ್ಲಿ ಹೋಗಿದೆಯೆಂದು ಚಿಂತಿಸುವಾಗ, ಮೂರೂ ಜನ ನಮ್ಮನ್ನು ಯಾವುದೋ ಊರಿನ ಜಮೀನ್ದಾರರು ಅನ್ನುವಂತೆ ನೋಡುತಿದ್ದರು.. ಅವರಲ್ಲಿ ಈ ಬಗೆ ಕೇಳಿದಾಗ 'ಗೊತ್ತಿಲ್ಲ' ಅನ್ನೋ ಸಿದ್ದ ಉತ್ತರ ಬಂತು. 'ನೀವು ಎಲ್ಲಿಯವರಪ್ಪ' ಅಂತ ಕೇಳಿದಾಗ.. ತಮ್ಮ ಹೊಟ್ಟೆಪಾಡಿಗಾಗಿ ದೂರದ ಜಾರ್ಖಂಡ ನಿಂದ ಇಲ್ಲಿಗೆ ಬಂದು ಇದೇ ಮರಳ ಗುಂಡಿಯಲ್ಲಿ ಕಾರ್ಮಿಕ ಆಗಿ ದುಡಿಯುತಿದ್ದಾರೆ. ಅದರಲ್ಲೊಬ್ಬ ಹೇಳಿದ ಇಲ್ಲಿಂದ ಮರಳನ್ನು ಸಮುದ್ರಡೆಗೆ ಕೊಂಡೊಯ್ಯುತ್ತಾರೆಂದ. ಅಲ್ಲೇ ದೂರದಲ್ಲಿ, ಸಮುದ್ರದಲ್ಲಿ ಅದೇನೋ ಪೋರ್ಟ್ ಗೆ ಸಂಬಂದಿಸಿದ ಕೆಲಸ ನಡೆಯುತಿದೆ.. ಇನ್ನು ಈ ಕಡೆ ಬರಲು ಅಸಾಧ್ಯವೋ ಏನೋ ಎಂದು ಯೋಚಿಸುತ್ತ ಅಲ್ಲಿಂದ ಕಾಲ್ತೆಗೆದೆವು.. ಅತ್ತ ಸೂರ್ಯ ತನ್ನ ಪ್ರಿಯತಮೆಯಲ್ಲಿ ಅನುರಕ್ತನಾಗಿ, ಇಬ್ಬರು ಗಾಢಾಲಿಂಗನದಲ್ಲಿದ್ದಂತೆ ತೋರಿತು..

ಅವರಿಗ್ಯಾಕೆ ತೊಂದರೆ ಕೊಡುವುದೆಂದು ಅಲ್ಲಿಂದ ಹಿಂದಿರುಗಿ ಬರುವಾಗ, ಮರಳಲ್ಲಿ ಜತೆ ಜತೆ ಯಾಗಿ ಕುಳಿತಿದ್ದ ಪ್ರೇಮಿಗಳು ಸಮಾಧಿ ಸ್ತಿತಿ ಅಂದ್ರೆ ಸೂರ್ಯ- ಸಮುದ್ರದ ಸ್ತಿತಿಯಲ್ಲಿದ್ದರು.. ಹೆಂಗಸರು ತಮ್ಮ ಗಂಡಂದಿರ ಹಿಂದೆ ಹೊರಡಲನುವಾಗುತಿದ್ದರು. ಹುಡುಗನೊಬ್ಬ ಮೇಲೆ ಹಾರಿಸುತಿದ್ದ ಗಾಳಿಪಟ ತನ್ನ ದಾರದೊಂದಿಗಿನ ಸಂಬಂದ ಕಡಿದು, ತನಗೂ ಅವನಿಗೂ ಪರಿಚಯವೇ ಇಲ್ಲದ ಹಾಗೆ ಗಾಳಿಯಲ್ಲಿ ತೇಲಿ ಹೋಗುತ್ತಾ ಇದ್ದ ದೃಶ್ಯವನ್ನು ಬೇಸರದಿಂದ ನೋಡುತ್ತಾ ಇದ್ದ. ಇದನ್ನು ನೋಡಿದ ಇತರ ಮಕ್ಕಳು ತಮ್ಮ ಹಾರಿಸಲಾಗದೆ ಇದ್ದ ಗಾಳಿಪಟವನ್ನು ಇನ್ನಷ್ಟು ಬಿಗಿಯಾಗಿ ಹಿಡಿದು ಕೊಂಡು ತಮ್ಮ ಕಾರಿನತ್ತ ಹೋಗುವಾಗ ಅವರ ಮುಖದಲ್ಲಿ ನೆಮ್ಮದಿಯ ನಿಟ್ಟುಸಿರು ಕಾಣುತಿತ್ತು.. ಇದೆಲ್ಲವನ್ನು ನೋಡುತ್ತಾ ನಾನು ಮತ್ತು ಗೆಳೆಯ ಅಲ್ಲಿಂದ ಹೊರಡಲನುವಾದೆವು..

ಅಲ್ಲೇ ಪೂರ್ವದಲ್ಲಿ, ಸ್ವಲ್ಪ ದೂರದಲ್ಲಿ ಫಲ್ಗುಣಿ ನದಿ ಪ್ರಶಾಂತವಾಗಿ ಕಡಲಿನೆಡೆಗೆ ಹರಿಯುತಿತ್ತು. ತಂಗಾಳಿ ಇನ್ನಷ್ಟು ಜೋರಾಗಿ ಬೀಸುತಿತ್ತು .. ಅದನ್ನು ದೂರದ ಊರಿಂದೆಲ್ಲಿಂದಲೋ ಬಂದ ಒಂದಷ್ಟು ಜನ ನೋಡುತ್ತಾ ನಿಂತಿದ್ದನು ನೋಡಿ ಗೆಳೆಯ ನನ್ನಲ್ಲಿ '' ಇವರು ತಮ್ಮ ಊರಿಗೆ ಹೋಗಿ ಈ ನದಿಯನ್ನೇ ಸಮುದ್ರ ಎಂದು ಬಣ್ಣಿಸದಿದ್ದರೆ ಸಾಕು ಅಂತ'' ಹೇಳಿ ಗೇರ್ ಬದಲಾಯಿಸಿದ..

Tuesday, 22 November 2011

ಗೋಡೆಯಾಚೆಗಿನ ನೋಟ

ಒಂದು ಕ್ರಿಯೆಗೆ ಅದರದೇ ಆದ ನೇರ ಅಥವಾ ವಿರುದ್ದವಾದ ಪ್ರತಿಕ್ರಿಯೆ ಇರುತ್ತದೆ. ಇದು ನ್ಯೂಟನ ಸಿದ್ದಾಂತ... ಈ ಸಿದ್ದಾಂತವನ್ನು ಹುಸಿ ಮಾಡಿದವನಿದ್ದರೆ ಅದು ರಾಹುಲ್ ದ್ರಾವಿಡ್ ಮಾತ್ರ ಅಂತ ಅನಿಸುತ್ತದೆ. ಅಕ್ತರ್, ಲೀ ಯಂತ ಘಟಾನುಘಟಿ ಗಳು ಗಳು ಮೈದಾನದ ಒಂದಂಚಿನಿಂದ ಏದುಸಿರು ಬಿಡುತ್ತಾ ಬಂದು ಚೆಂಡನ್ನು ಎಸೆದಾಗ, ಅದರ ವೇಗ ಗಂಟೆಗೆ ಸುಮಾರು 125 ರಿಂದ 145 ರಷ್ಟು ಇರುತ್ತದೆ.. ಆದರೆ ಅದನ್ನು ಕಲಾತ್ಮಕ ಶೈಲಿಯಲ್ಲಿ ಅಲ್ಲೇ ನಿಲ್ಲಿಸುವ ತಾಕತ್ತು ದ್ರಾವಿಡ್ ಗಲ್ಲದೆ ಇನ್ನ್ಯಾರಿಗೆ ಸಾದ್ಯ? ಪಾಪ! ಆ ಬೌಲರಿಗೆ ಇದೊಂತರ ಅವಮಾನ ಮಾಡಿದ ಹಾಗೆ!

ಬ್ಯಾಟಿಂಗ್ ಶೈಲಿ ನಿಧಾನವಾದರೂ ಸುಂದರವಾಗಿರುತ್ತದೆ.. ಕೆಲವೊಮ್ಮೆ ಬೋರಾಗಿ ಒಮ್ಮೆ ಔಟಾಗಬಾರದೆ ಅಂತ ಅನಿಸುವುದುಂಟು! ಎದುರಾಳಿಗಳ ಪ್ರಖರ ದಾಳಿಗೆ high profile ಬ್ಯಾಟ್ಸಮನ್ ಗಳು ಸಾಲಾಗಿ ಪೆವಿಲಿಯನ್ ನತ್ತ ಮುಖ ಮಾಡಿದಾಗ, ಒಂದು ಕಡೆ ದ್ರಾವಿಡ್ ಮಹಾ ಗೋಡೆಯಂತೆ ನಿಂತು partnership ಬಿಲ್ಡ್ ಅಪ್ ಮಾಡುವಾಗ ಅವನಿಗೆ ಪರ್ಯಾಯವೇ ಇಲ್ಲ ಅಂತ ಅನಿಸುತ್ತದೆ.. ಹಾಗೆ ಆಡಿ ಅದೆಷ್ಟೋ ಸಲ ಭಾರತವನ್ನು ಸೋಲಿನಿಂದ ಪಾರು ಮಾಡಿದ್ದಾನೆ! ಅವನ ಆಟದ ಅಂಕಿ ಅಂಶ ನೋಡಿದರೆ ಹೆಚ್ಹಿನವು ಭಾರತವನ್ನು ಹೀನಾಯ ಸೋಲಿನಿಂದ ತಪ್ಪಿಸಿದಂತವು.. ಯಾವತ್ತು ತಾನು ಸ್ವಾರ್ಥಕ್ಕೆ ಆಡದೆ, ತಂಡಕ್ಕಾಗಿಯೇ ಆಡಿದ ದ್ರಾವಿಡ್ ಅನಿವಾರ್ಯ ಸಂದರ್ಭದಲ್ಲಿ ವಿಕೆಟ್ ಕೀಪಿಂಗ್ ಸಹ ಮಾಡಿದ್ದರಲ್ಲದೆ ಒಟ್ಟಾರೆ 200 ಕ್ಕಿಂತ ಅಧಿಕ ಕ್ಯಾಚ್ ಹಿಡಿದ ದಾಖಲೆಯನ್ನು ತನ್ನದಾಗಿಸಿದ್ದಾರೆ. ಸಚಿನ್ ನಷ್ಟು ಶತಕ ಹೊಡೆಯದಿದ್ದರೂ ODI ಮತ್ತು ಟೆಸ್ಟ್ ಎರಡರಲ್ಲೂ 10 ಸಾವಿರ ರನ್ ಮಾಡಿದ ಸಾಧನೆಯನ್ನು ತನ್ನ ಮುಡಿಗೇರಿಸಿ ಕೊಂಡಿದ್ದಾನೆ!

ತನ್ನ ಹದಿನೈದು ವರ್ಷದ ಕ್ರೀಡಾ ಜೀವನದಲ್ಲಿ ಕ್ರಿಟಿಕ್ಸ್ ದ್ರಾವಿಡ್ ನನ್ನೂ ಬಿಟ್ಟಿಲ್ಲ.. ಹಲವು ಸಲ ಬ್ಯಾಟಿಂಗ್ ಶೈಲಿಯ ಬಗೆ ಮಾಜಿ ಆಟಗಾರರಿಂದ ಟೀಕೆಯ ಸರಮಾಲೆಯನ್ನೇ ಅನುಭವಿಸಿದ್ದಿದೆ.. ಅವನ ಸಾಧನೆಯೆದುರು ಅದೆಲ್ಲವೂ ಗೌಣವಾಗಿದೆ. ಆದರೆ ಎರಡು ಸಲ ದ್ರಾವಿಡ್ ನಡೆ ತೀವ್ರ ಚರ್ಚೆಗೊಳಪಟ್ಟಿದೆ.. ಒಂದು ಸಚಿನ್ 196 ರನ್ ಮಡಿ ಕ್ರಿಸ್ ನಲ್ಲಿದ್ದಾಗ ಡಿಕ್ಲೇರ್ ಮಾಡಿದ್ದೂ, ಮತ್ತೊಂದು ಆಕಸ್ಮಿಕವಾಗಿ ಬಾಲ್ ಗೆ chewing gum ತಾಗಿ ವಿರೂಪಗೊಳಿಸಿದ ಆರೋಪ..

ಹೀಗೆ ODI ಟೆಸ್ಟ್ ಎರಡರಲ್ಲೂ ಉತ್ತಮ ಸಾಧನೆ ಮಾಡಿದ ದ್ರಾವಿಡ್ ಇತ್ತೀಚಿಗೆ ಆಡಿದ ಏಕೈಕ T20 ಯಲ್ಲಿ 3 ಸಿಕ್ಸರ್ ಬಾರಿಸಿ ಎಲ್ಲರ ಹುಬ್ಬು ಮೇಲೇರುವಂತೆ ಮಾಡಿದ..

ಸಚಿನ್ ಸೆಹ್ವಾಗ್ ನಂತಹ ಬ್ಯಾಟ್ಸಮನ್ ಆಡುವಾಗ ಇನ್ನೊಂದು ಬದಿಯಲ್ಲಿ ವಿಕೆಟ್ ಕಾಪಿಡುತ್ತಿದ್ದದು ದ್ರಾವಿಡ್. ಹೀಗೆಯೇ 80 ಸಲ 100 ಕ್ಕಿಂತ ಅಧಿಕ partnership ನಲ್ಲಿ ಭಾಗಿಯಾದ ದ್ರಾವಿಡ್, ಸಚಿನ್ ನೊಂದಿಗೆ 18 ಸಲ ಈ ಸಾಧನೆ ಮಾಡಿದ್ದಾನೆ.

ಹೀಗೆ 'slow n steady' ದ್ರಾವಿಡ್ ಮಾಡಿದ ಸಾಧನೆಗಳು ಕ್ರಿಕೆಟ್ ಲೋಕದಲ್ಲಿ ಗಮನಾರ್ಹವಾದರೂ , ಸಚಿನ್ ಯುಗದಲ್ಲಿ ಎಲೆಮರೆಯ ಕಾಯಿಯಾಗಿ ಹೋಗಿದ್ದಾನೇನೋ ಅಂತ ಅನಿಸುತ್ತದೆ!

Monday, 14 November 2011

ಕನಸಿನಲ್ಲಿ ಐಶ್ ಬೇಬಿ...!

ಐಶ್ವರ್ಯ ರೈ ಅಂದ ತಕ್ಷಣ ನೆನಪಾಗುವುದು hum dil de chuke sanam ನ ನಂದಿನಿ, ದೇವದಾಸ್ ನ ಪಾರು..! ಅಂತು hum dil de chuke sanam ನಲ್ಲಿ ಸಲ್ಮಾನ್ ಮೆಣಸು ತಿನ್ನುವಾಗ ಗಟಗಟನೆ ನೀರು ಕುಡಿಯುವ ಅವಳು ಚಿತ್ರದುದ್ದಕ್ಕೂ ಸಲ್ಮಾನ್ ನ ಪ್ರೀತಿಗಾಗಿ ಹಪಹಪಿಸುತ್ತಾಳೆ.. ಅಂತೂ ಅವಳು ಸಲ್ಮಾನ್ ನನ್ನು ಮಾತ್ರವಲ್ಲ ತುಂಬಾ ಜನರ ನಿದ್ದೆಗೆಡಿಸಿದವಳು.. ಆ ಇಡೀ ಫಿಲಂ ನಲ್ಲಿ ಅವಳ ನಟನೆ ಮತ್ತು ಸೌಂದರ್ಯದ ನಡುವೆ ಸ್ಪರ್ದೆ ಇದ್ದಂತಿತ್ತು.. ಕೊನೆಗೂ ಅವಳ ಸೌಂದರ್ಯವೇ ನಮಗೆ ಇಷ್ಟವಾಗುವುದು.. 'ಪ್ರೀತಿಸಿದವನೊಬ್ಬ, ಮದುವೆಯಾಗುವವನು ಮತ್ತೊಬ್ಬ..' ಇ ದು ಅವಳ ನಿಜ ಜೀವನದ ಕಥೆ ಮಾತ್ರವಲ್ಲ,ಅವಳ ಹಲವು ಚಿತ್ರದ ಕತೆಯು ಹೌದು.. Hum dil de chuke sanam ನ ಕತೆಯು ಹೌದು.. ಅಂತೂ ಹಿಂದಿ ಚಿತ್ರರಂಗ ಈ ಚಿತ್ರದ ಮೂಲಕ ಅವಳನ್ನು ಗುರುತಿಸಿತಲ್ಲದೆ, film fare award ಸಹ ಬಂತು.. ಇನ್ನೊಂದು intresting ವಿಷಯ ಅಂದರೆ ಅವಳಿಗೆ ಎರಡು film fare award ಬಂದಿರುವುದು ಸಹ ಒಬ್ಬನೇ direction ನ ಫಿಲಂ( ಇನ್ನೊಂದು ದೇವದಾಸ್- ಸಂಜಯ್ ಲೀಲಾ ಬನ್ಸಾಲಿ).

ಸೌಂದರ್ಯ ಮಾತ್ರ film ಇಂಡಸ್ಟ್ರಿ ನಲ್ಲಿ ಮಾನದಂಡ ಆಗಿದಿದ್ದರೆ ಅವಳು ಯಾವತ್ತೋ ಹಿಟ್ ಆಗಬೇಕಿತ್ತು. ಆದರೆ ಅವಳು film ಇಂಡಸ್ಟ್ರಿ ಎಂಟ್ರಿ ಕೊಡುವಾಗ ಕಾಜಲ್, ಜೂಹಿ, ಮಾಧುರಿ ಯಂತಹ ಘಟಾನು ಘಟಿಗಳ ಎದುರಿಗೆ ಮಿಂಚಲು ನಾಲ್ಕೈದು ವರ್ಷ ಕಾಯ ಬೇಕಾಯಿತು.. ಮತ್ತೆ ಹಲವು film ನಲ್ಲಿ ನಟಿಸಿದರೂ film ಗಿಂತ ಗಾಸಿಪ್ ನಲ್ಲಿ ಹೆಚ್ಚು ಪ್ರಸಿದ್ದಳಾದದ್ದು.. ಅದರಲ್ಲಿ ಮುಖ್ಯವಾಗಿ ಸಲ್ಮಾನ್ 'ಪ್ರೇಮ ವಿವಾದ'. ಅಲ್ಲಿಂದ ಬ್ರೇಕ್ ತಗೊಂಡು ವಿವೇಕ್ ನೊಟ್ಟಿಗೆ ಹೋದರೂ, ಅಲ್ಲಿಯೂ ನೆಲೆ ಕಾಣದೆ ಅಭಿಷೇಕ್ ನ ತೆಕ್ಕೆಗೆ ಬಿದ್ದಳು.. ಆಗ ಹಲವಾರು ಜನ ಹೇಳಿದ್ದಿದೆ ಇವಳದು ಚಂಚಲ ಮನಸು ಅಂತ.. ಎಷ್ಟಾದರೂ ಅವಳು! ಅಭಿಷೇಕ್ ನನ್ನು ಮದುವೆಯಾಗಿ ತಮ್ಮ ಸ್ಟಾರ್ value ಅನ್ನು ಇಬ್ಬರೂ ಹೆಚ್ಹಿಸಿದರು.. ಎಷ್ಟೆಂದರೂ ಸೆಲೆಬ್ರೆಟಿಗಳು ಏನು ಮಾಡಿದರು ಅದಕ್ಕೊಂದು ಉದ್ದೇಶ ಇರುತ್ತೆ!

ಮೊದಲೇ north ನವರು ಸೌತ್ ಇಂಡಿಯನ್ ಹಿರೊಯಿನ ಬಗೆ 'ಚಾಲಾಕಿ', 'ಬುದ್ದಿವಂತರು' ಅನ್ನೋ ಆರೋಪ ಇದೆ. ಏಕೆಂದರೆ ಅವರು ನಾರ್ತ್ ಹೀರೋ ಗಳ ಮನ ಗೆಲ್ಲುತ್ತಾರೆ ಅಂತ.. ಈ ಹಿಂದೆ ರೇಖಾ, ಹೇಮಮಾಲಿನಿ, ಶ್ರೀದೇವಿ! ಈ ಸಾಲಿಗೆ ಐಶ್ ಸಹ ಸೇರಿದಳು..

ಹೀಗೆ ಮಂಗಳೂರಿನ ಹುಡುಗಿ ಬಾಲಿವುಡ್ ನಲ್ಲಿ ಮೆರೆದು hollywood ಗು ಕಾಲಿಟ್ಟು, ಮತ್ತೆ ಬಚ್ಹನ್ ಫ್ಯಾಮಿಲಿ ಸೊಸೆಯಾಗಿ ಮಗುವಿಗಾಗಿ ಎದುರು ನೋಡುತ್ತಿದ್ದಾಳೆ.. ಇಲ್ಲಿಯವರೆಗೂ ಸ್ಟಾರ್ value ಕಡಿಮೆಯಾಗದಿದ್ದರೂ, ತಾಯಿಯಾದ ನಂತರ ಕಾಜಲ್, ಮಾಧುರಿಯವರ ಸಾಲಿಗೆ ಸೇರುತ್ತಾಳೋ ಇಲ್ಲವೋ ಅಂತ ಕಾದು ನೋಡಬೇಕಿದೆ..!

Monday, 31 October 2011

ಸುಮ್ನೆ ಸೀತಣ್ಣ ಕಡೆ ಒಂದು ರೌಂಡ್!

ಸಂಜೆ ಯಾರಾದರೂ "ಸೀತಣ್ಣ ಕಡೆ ಹೋಗುತ್ತೇವೆ, ಬರುವವರು ಬನ್ನಿ" ಅಂದ ಕೂಡಲೇ ನಾವು ಪ್ಯಾಕ್ ಅಪ್ ಮಾಡಿ ರೆಡಿ! ಅಂತು M.Sc ದಿವಸಗಳಲ್ಲಿ ನಮಗೆ ಇಷ್ಟವಾದ ಸ್ಥಳ ಅದೊಂದೇ ಹಾಗಿತ್ತೋ ಏನೋ ಎಂಬಂತೆ! ಸೀತಣ್ಣ ಅಂದರೆ ಅಲೋಸಿಯಸ್ ಕಾಲೇಜಿನ ಎದುರಿಗೆ, ಮಸೀದಿಯ ಪಕ್ಕ ನಿಂತಿದ್ದ ಎರಡು ಮೊಬೈಲ್ ಕ್ಯಾಂಟೀನ್ ಗಳಲ್ಲಿ ಒಂದು, ಮತ್ತೊಂದು ದಾಮಣ್ಣ.. ವಿಶೇಷ ಅಂದರೆ ನಾವು ಹೇಳುವುದು ಸೀತಣ್ಣ ಅಂತ ಆದರು ಹೋಗ್ತಾ ಇದ್ದದು ದಾಮಣ್ಣನ ಕ್ಯಾಟೀನ ಗೆ!

ನಮ್ಮ ವಾನರ ಸೈನ್ಯ ಅಲ್ಲಿಗೆ ಹೋಗುವಾಗಲೇ ಅಲ್ಲಿಯ ಹುಡುಗರು ಹರಡಿ ಹಂಚಿ ಹೋಗಿದ್ದ ಸ್ಟೂಲ್ ಗಳನ್ನೂ ತಂದು ವೃತ್ತಾಕಾರವಾಗಿ ಜೋಡಿಸಿಡುತಿದ್ದರು. ನಾವೆಲ್ಲರೂ ಅದರಲ್ಲಿ ಕೂತು ಮಾತನಾಡಲು ಪ್ರಾರಂಬಿಸುತಿದ್ದೆವು! Round table conference ಹಾಗೆ!ಮುವತ್ತಕೆ ಇಪ್ಪತೈದು ಜನರೂ ಅಲ್ಲಿ ಇರುತಿದ್ದೆವು.. ನಮಗೆ ದಿನದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಅಂದ್ರೆ ಅಲ್ಲಿಯೇನೆ! ಯಾರು ಯಾವಾಗ ಬೇಕಾದರೂ ಬರಬಹುದು ಮತ್ತು ಹೋಗಬಹುದು,

ಅಲ್ಲಿಯೇ ಮಾತುಗಳಿಗೆ ಟಾಪಿಕ್ ಬೇಕೆಂದೇನು ಇಲ್ಲ.. ಯಾರಾದರು ಪೀಠಿಕೆ ಹಾಕಿ ಆರಂಭಿಸುತ್ತಾರೆ.. ಆರಂಭಿಸಿದವರು ಅಲ್ಲಿದ್ದಾರೋ ಇಲ್ಲವೋ ಮಾತುಗಳ ನಾಗಲೋಟವಂತು ಎಲ್ಲೆಲ್ಲೋ ಸಾಗುತಿತ್ತು! ಒಮ್ಮೊಮ್ಮೆ ಕ್ಲಾಸಿನ ಬಗೆಯಾದರೆ, ಇನ್ನೊಮ್ಮೆ ಫಿಲ್ಮಿನ ಬಗೆ, ಮತ್ತೊಮ್ಮೆ ಕ್ರಿಕೆಟ್.. ಇನ್ನು ಕೆಲವೊಮ್ಮೆ ಸೀನಿಯರ್ಸ್, ಜೂನಿಯರ್ಸ್ ಬಗ್ಗೆ.. ಹೀಗೆ ಗಾಸಿಪ್, ಕಾಮಿಡಿ, jelousy, attitude ಎಲ್ಲವೂ ಬಂದು ಹೋಗುತಿತ್ತು.!

ಇನ್ನು ಅಲ್ಲಿಯ ತಿಂಡಿ ಚರ್ಮುರಿ, ಮಸಾಲ ಪುರಿ, ಸೇವ್, ಬೇಲ್ ಹೀಗೆ ಸಾಗುತ್ತದೆ ಮತ್ತು ಜ್ಯೂಸ್ ಅಂದ್ರೆ ಕಬ್ಬಿನದ್ದು! ಅಲ್ಲಿ ಮೊಟ್ಟೆಯನ್ನು ಹದಿನಾರು ಪೀಸ್ ಮಾಡಿ ಅದನ್ನು ಈರುಳ್ಳಿ ಮತ್ತು ಮೆಣಸಿನ ಪುಡಿಯೊಟ್ಟಿಗೆ ತಿನ್ನುವಾಗಿನ ಒಂದು ಸಂತೋಷ ಬೇರೆಲ್ಲೂ ಸಿಗಲಿಕಿಲ್ಲವೇನೋ! ಬಹುಶ ಮೊಟ್ಟೆಯನ್ನು ಅಷ್ಟು ಸಣ್ಣ ಪೀಸ್ ಮಾಡಬಹುದೆಂದು ನಮಗೆ ಅಲ್ಲಿಯೇ ಗೊತ್ತಾಗಿದೇನೋ! ಮತ್ತೆ ಕೆಲವರಿಗಂತೂ ಕಡ್ಲೆ ಜಾಸ್ತಿ ಹಾಕಿದ ಚರ್ಮುರಿ, ಮತ್ತೆ ಕೆಲವರಿಗೆ ಬೇಲಪುರಿ ಇನ್ನು ಕೆಲವರಿಗೆ ಮಸಾಲೆ ಪುರಿ ನನ್ನಂತವರಿಗೆ BC-boiled egg mixed with charmuri ಯೇ ಸರ್ವ ಶ್ರೇಷ್ಠ.. ಹೀಗೆ ಸಾಗುತ್ತದೆ ತಿಂಡಿಯಲ್ಲಿನ ವೈವಿಧ್ಯತೆ! ಯಾರು ಏನೇ ಆರ್ಡರ್ ಮಾಡಿದರು ಎಲ್ಲರಿಗು ಟೇಸ್ಟ್ ಮಾಡೋ ಅವಕಾಶ ನಮ್ಮಲ್ಲಿತ್ತು! ಕೆಲವರಂತೂ ಮಾವಿನ ಕಾಯಿಗೆ ಕಾರ ಮತ್ತು ಉಪ್ಪನ್ನು ಹಾಕಿದ ಪಚೋಡಿಯನ್ನು ತಿನ್ನುವಾಗ ಮುಖವನ್ನು ಹಿಂಡಿ ಹಿಪ್ಪೆಯಾಗುವಂತೆ ಮಾಡುತಿದ್ದರು..

ಅಲ್ಲಿ hygienic ಅಲ್ಲದಿದ್ದರೂ ನಮ್ಮ ಹೊಟ್ಟೆ upset ಆಗುತಿರಲಿಲ್ಲ.. ಕೆಲವರು stomach upset ಆದರು ಅಲ್ಲಿಯ ತಿಂಡಿಯನ್ನು, Juice Junction ನ mango juice ನ್ನು ಮೆಲ್ಲುತಿದ್ದದ್ದಲ್ಲದೆ '' ಲೇ ಸಕತ್ ಟೆಸ್ಟ್ ಕಣೋ'' ಅಂತ ಬಾಯಿ ಚಪ್ಪರಿಸುತಿದ್ದರು! ಅಷ್ಟೂ ನಮ್ ಸಿಸ್ಟಮ್ ಅಲ್ಲಿಯ ಫುಡಿಗೆ ಅಡ್ಜಸ್ಟ್ ಆಗಿತ್ತು! ಈಗ ಸ್ವಲ್ಪ ಫುಡ್ ಚೇಂಜ್ ಆದರು ಹೊಟ್ಟೆ ಕೈ ಕೊಡುತ್ತದೆ

ಹೀಗೆ ತಿನ್ನುತ್ತಾ ತಮಾಷೆಯಾಡುತ್ತಾ ಕಾಲ ಕಳೆಯುತಿದ್ದ 'ಸೀತಣ್ಣ' ಹತ್ತಿರದಿಂದ ಹಾದು ಹೋಗುವಾಗ ಬರೀ ನೆನಪುಗಳು ಕಾಡುತ್ತದೆ.. ಸೀತಣ್ಣ ಮತ್ತು ದಾಮಣ್ಣ ಹೊಸ ವಿಧ್ಯಾರ್ಥಿಗಳೊಂದಿಗೆ ಸುತ್ತುವರೆದು ನಾನೇನು ಬದಲಾಗಿಲ್ಲ ಅನ್ನುತಿದೆಯೇನೋ! ಆದರೆ ಗೆಳೆಯರಿಲ್ಲದೆ ಅಲ್ಲಿಗೆ ಹೋಗುವುದಾದರೂ ಹೇಗೆ!?.. ಮತ್ತೆ ನಾವು ಕಾಲಕ್ಕೆ ಹಾತೊರೆಯುತ್ತೇವೆ. ಅವು ಇನ್ನು ಸವಿ ನೆನಪುಗಳಷ್ಟೆ!!!