Monday, 13 February 2012

ಪ್ರೀತಿ ಇಲ್ಲದ ಮೇಲೆ...!

ಪ್ರೀತಿ ಅನ್ನುವುದು ಒಂದು ವಿಶಿಷ್ಟವಾದ ವಸ್ತು. ಇದು ವರ್ಷದ ಮುನ್ನೂರೈವತ್ತೈದು ದಿವಸಾನು ಇರಲೇಬೇಕಾದದ್ದು. ಅದಿಲ್ಲದೇ ಹೋದರೆ ಯಾವೊಬ್ಬನೇ ವ್ಯಕ್ತಿ ಬದುಕಲು ಸಾಧ್ಯವಿಲ್ಲ.

ಅಂದ ಹಾಗೆ ಪ್ರೀತಿಗೆ ಹಲವು ಮುಖ ಇದೆ. ಅದರಲ್ಲಿ ತಾಯಿಯ ಪ್ರೀತಿ ವಾತ್ಸಲ್ಯದಿಂದ ಕೂಡಿದರೆ, ಸಹೋದರಿಯ ಪ್ರೀತಿ ವಿಶ್ವಾಸದಿಂದ ಕೂಡಿರುತ್ತೆ. ತಂದೆಯ ಪ್ರೀತಿ ಭರವಸೆಯ ಮೇಲೆ ನಿಂತಿರುತ್ತದೆ. ಹೀಗೆ ಹಲವು ರೀತಿ. ಗೆಳೆಯ/ಗೆಳತಿಯ ಪ್ರೀತಿ ಮಾತ್ರ ನಮ್ಮಲ್ಲಿ ಆತ್ಮವಿಶ್ವಾಸ, ನೆಮ್ಮದಿ ಎಲ್ಲವನ್ನೂ ಕೊಡುತದೆ!

ಕೆಲವೊಮ್ಮೆ ನಾವು ಭ್ರಾಮಕ ಜಗತ್ತಿನಲ್ಲಿ ನಿಷ್ಕಲ್ಮಶ ಪ್ರೀತಿಯನ್ನು ತಪ್ಪಾಗಿ ಅರ್ಥೈಸುವುದುಂಟು.. ಹುಡುಗಿಯೊಬ್ಬಳು ಹುಡುಗನೊಂದಿಗೆ ನಕ್ಕು, ಮಾತಾಡಿದರೆ ಕೆಲವೊಮ್ಮೆ ಅವ ಗ್ರಹಿಸುವುದೇ ಬೇರೆ, ಇನ್ನು ಅವ ಹಾಗೆ ತಿಳಿಯದಿದ್ದರೂ, ಬೇರೆಯವರು ಬಣ್ಣಕಟ್ಟಿ ಇಲ್ಲದ್ದನ್ನೆಲ್ಲ ಪ್ರಚಾರ ಮಾಡುತ್ತಾರೆ. ಮತ್ತೆ ಕೆಲವರಿಗೆ attraction, infatuation ನನ್ನೇ ಪ್ರೀತಿ ಎಂದು ಗ್ರಹಿಸಿಬಿಡುತ್ತಾರೆ.
ಒಟ್ಟಿನಲ್ಲಿ ಪ್ರೀತಿ ಅನ್ನುವುದು ಅನೂಹ್ಯವಾದ ಒಂದು ಭಾವನೆ. ಅದು
ಎರಡು ಹೃದಯಗಳ ಮಧ್ಯ ಗಾಡವಾಗಿ ಬಂಧಿಸಲ್ಪಡುವಂತದ್ದು. ಅದು ಕೆಲವೊಮ್ಮೆ ಪ್ರೇಮವಾಗಿ ಮಾರ್ಪಾಡಾಗುತ್ತದೆ. ಆದರೆ ಪ್ರೀತಿಯೊಂದು ಸದಾ ಬೆನ್ನಿಗಿದ್ದರೆ ನಮಗೆ ಯಾವುದೇ ಮಾನಸಿಕ ಕ್ಲೇಶ ಇರಲು ಸಾಧ್ಯವಿಲ್ಲ.. ಪ್ರೀತಿಯು ಕೈ ತಪ್ಪಿದಾಗ ಅದೆಷ್ಟೋ ಜನ ಜೀವನವನ್ನೇ ಕೊನೆಯಾಗಿಸಿದ್ದುಂಟು. ಮತ್ತೆ ಕೆಲವಾರು ಜನರು ಪ್ರೇಮ ಕೈತಪ್ಪಿದ ದುಃಖವನ್ನು ಮರೆಯಲು positive ಆಗಿ ಕೆಲಸ ಮಾಡಿ, ಅದರಲ್ಲಿ ಯಶಸ್ಸು ಕಂಡವರಿದ್ದಾರೆ. ರಾಜಕಪೂರ್ ನ mera naam joker, ಪುಟ್ಟಣ್ಣ ಕಣಗಾಲ್ ನವರ ಮಾನಸ ಸರೋವರ ಸಿನಿಮಾ ಇದಕ್ಕೆ ತಕ್ಕ ಉದಾಹರಣೆ.

ಸಲ್ಮಾನ್, ರೇಖಾ ಹೀಗೆ ಬರೆದರೆ ಮುಗಿಯದಷ್ಟು ಜನ ಪ್ರೇಮವನ್ನು ಉಳಿಸಿಕೊಳ್ಳಲಾಗದವರಿದ್ದಾರೆ. ಮತ್ತೆ ಕೆಲವರು ಪ್ರೇಮ ವನ್ನು ನಿವೇದಿಸಿ ಕೊಳ್ಳಲಾಗದೆ ಕವಿ ಕೀಟ್ಸ ನಂತೆ ಸತ್ತವರಿದ್ದಾರೆ.. ಅದೆಲ್ಲಕಿಂತ ಹೆಚ್ಹಾಗಿ ಕಾಡುವ ಒಂದು ಕತೆ ಅಮೃತಾ ಪ್ರೀತಂ ನದ್ದು ಪಂಜಾಬಿನ ಕವಯತ್ರಿ ತನ್ನ ಪ್ರೇಮಿಯನ್ನು ಅರಸುತ್ತಾ ಮುಂಬೈ ತಲುಪಿ ಅವನಲ್ಲಿ ಪ್ರೇಮ ನಿವೇದಿಸಿದಾಗ, ಅದನ್ನು ಆತ ತಿರಸ್ಕರಿಸುತ್ತಾನೆ. ಬಾಲ್ಯದಿಂದಲೂ ಅವನ ಕವನ ಗಳನ್ನು ಓದಿ ಮನಸೋತು, ಕವಿಯಲ್ಲೇ ಅನುರಕ್ತಳಾದ ಈಕೆ, ಬಂದ ದಾರಿಗೆ ಸುಂಕವಿಲ್ಲವೆಂದು ಬಗೆದು ಹಿಂತಿರುಗಿದಳು. ಆತ ಬೇರ್ಯಾರು ಅಲ್ಲ. ಕಭಿ ಕಭಿಯಂತ ಹಾಡು ಬರೆದ ಖ್ಯಾತ ಕವಿ ಸಾಹಿರ್ ಲೂಧಿಯಾನ್ವೀ. ಇವಳು ಅದೇ ನೋವಿನಲ್ಲಿ ಹಿಂತಿರುಗಿದಾಗ ಸಿಕ್ಕಿದ್ದು ಅವಳನ್ನೇ ಪ್ರೀತಿಸುತಿದ್ದ ಕಲಾಕಾರ ಇಮ್ರೋಜ್.!! ಪ್ರೀತಿ ಅನ್ನುವುದು ಹಾಗೆ ನಾವಂದು ಕೊಂಡಂತೆ ಇರಲ್ಲ.

ಶುದ್ದ ಪ್ರೀತಿ ಅನ್ನುವುದು 'ಮಾರ್ಕೆಟ್' ಪ್ರಪಂಚದ ಬುಸ್ಸಿನೆಸ್ಸ್ ಅಲ್ಲ. ಸಂತ ವೆಲೆಂಟೈನನ ನಿಜವಾದ ಧ್ಯೇಯಕ್ಕೆ ಅಪಚಾರ ಎಸಗುವಂತದಲ್ಲ. ಷೇಕ್ಸಪಿಯರ್ ಹೇಳಿದ ಹಾಗೆ ಅದು ಕಾಲಕ್ಕೆ ತಕ್ಕಂತೆ ಬದಲಾಗದೆ ಶಾಶ್ವತ ವಾಗಿರುವಂತದ್ದು(fixed mark). 'Love is not time's fool'.

ನಾವಾದರೋ, 'ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲ್ಲಿ' ಎನ್ನುವ ಕವಿವಾಣಿ ಯಂತೆ ' ನಮ್ಮೊಳಗೇ ಇರುವ ಪ್ರೀತಿ ಸ್ನೇಹಗಳನ್ನು ಗುರುತಿಸಲಾರೆವು '. ಹೀಗೆ ಪ್ರೀತಿ ಅನ್ನುವುದು ಮರುಭೂಮಿಯಲ್ಲಿನ ಓಯಸಿಸ್ ನಂತೆ!

'ಪ್ರಿತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ?,ಮೋಡ ಕಟ್ಟಿತು ಹೇಗೆ? ಹನಿಯೊಡೆದು ಮಳೆಯ ಸುರಿಸಿತು ಹೇಗೆ?'

ಪ್ರೀತಿಯಿಲ್ಲದ ಮೇಲೆ ಬ್ಲಾಗನ್ನು ಬರೆಯುವುದು ಹೇಗೆ, ಮತ್ತೆ ನೀವು ಓದುವುದು ಹೇಗೆ!?

ಅಂದ ಹಾಗೆ ಮತ್ತೊಬ್ಬ ಕವಿ 'ಪ್ರೀತಿಯಿಲ್ಲದ ಮೇಲೆ ನಾವೇನು ಮಾಡಲಾರೆವು, ದ್ವೇಷವನ್ನೂ ಸಹ' ಅಂದಿದ್ದಾನೆ.

Monday, 6 February 2012

ಕಾವೇರಿಯ ನಾಡಲ್ಲಿ...


ಒಂದು ಕಾಲದಲ್ಲಿ ಅದು ನನ್ನ ಬೇಸಗೆಯ ಊರಾಗಿತ್ತು.. ಅದು ನಾನು ಇಷ್ಟಪಡುವ ಎರಡನೆಯ ಊರು. ಅಲ್ಲಿಯ ಚಳಿಗೆತತ್ತರಿಸಿದ್ದೇನೆ! ಕಾಫಿಯ ಕಂಪಿಗೆ ಮನಸೋತಿದ್ದೇನೆ! ಅಲ್ಲಲ್ಲಿ ಹರಿಯುವ ನೀರಿನ ಝರಿಗಳನ್ನು ಕಂಡುಬೆರಗುಗೊಂಡಿದ್ದೇನೆ! ಹೀಗೆ ನನಗು ಈ ಕಿತ್ತಳೆ ನಾಡಿನ ಸಂಬಂದ ಈಗಲೂ ಮುಂದುವರಿದಿದೆ. ಪುಷ್ಪಗಿರಿ ಬೆಟ್ಟದತುದಿಯಲ್ಲಿರುವ ಮರಗಳ ರಾಶಿ, ಮುಂಗಾರಿನ ಮಳೆಗೆ ಹೇಗೆ ಕಂಗೊಳಿಸುತ್ತದೆಂದರೆ ಸ್ವತಹ ಯೋಗರಾಜ್ ಭಟ್ಅದೇ ಹೆಸರಿನ ಫಿಲಂ ತೆಗೆದಿದ್ದಾರೆ.. ಹೀಗೆ ಪ್ರಕೃತಿಯ ಮಡಿಲಲ್ಲಿನ ಸೌಂದರ್ಯಕ್ಕೆ ಮಾರು ಹೋಗದವರುಯಾರಿದ್ದಾರೆ.?

ಕೊಡಗು ಅಂದಾಗ ಅಬ್ಬಿಯ ಭೋರ್ಗರೆತ ಕಣ್ಣಿನ ಮುಂದೆ ಬಂದು ನಿಲ್ಲುವುದು ಸಹಜ. ಅದೆಷ್ಟು ಬಾರಿ ಹೋದರೂ, ಆಜಲಪಾತ ನಮಗೆ ಬೋರೆನಿಸುವುದೇ ಇಲ್ಲ. ಮಾತ್ರವಲ್ಲ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ. ಒಮ್ಮೆ ನಾನು ನನ್ನಗೆಳೆಯರೊಟ್ಟಿಗೆ ಮಡಿಕೇರಿಯಿಂದ ನಡಕೊಂಡೆ 9 km ಹೋಗಿ ಅಲ್ಲಿಯ ಗುಡ್ಡ ಹತ್ತಿ, ನೀರಿನಲ್ಲಿ ಈಜಾಡಿ, ನಲಿದು ಪುನಃನಡಕೊಂಡೆ ಹಿಂತಿರುಗಿ ಬಂದಿದ್ದೆವು. ಆ ದಾರಿಯಾಗಿ ಹೋಗುವಾಗ ಮತ್ತು ಬರುವಾ ವಿಧ ವಿಧದ ಮರಗಳು, ಅದರಬಣ್ಣ ಬಣ್ಣದ ಹೂವುಗಳು, ಆ ಹೂವುಗಳತ್ತ ಆಕರ್ಷಣೆಗೊಂಡು ಮುತ್ತಿಕುವ ತರ ತರದ ಪತಂಗಗಳು, ಮತ್ತೆನೊಣಗಳನ್ನು ಬೆನ್ನಟ್ಟಿ ತಿನ್ನುವ ವಿಧ ವಿಧದ ಹಕ್ಕಿಗಳು ಈಗಲೂ ಸ್ಮೃತಿ ಪಟದಲ್ಲಿ ಹಚ್ಹ ಹಸಿರಾಗಿದೆ.

ಮತ್ತೊಮ್ಮೆ ಹೋದಾಗ ನವೋದಯ high school ವಿದ್ಯಾರ್ಥಿ ನೀರಿನಲ್ಲಿ ಬಿದ್ದು ನೀರು ಪಾಲಾಗಿದ್ದ. ಒಂದು ಕಡೆಅಬ್ಬಿಯನ್ನು ನೋಡಲಾಗದ ಬೇಸರ, ಮತ್ತೊಂದು ಕಡೆ ಅರಳಬೇಕಾದ ಮೊಗ್ಗು ನೀರಲ್ಲಿ ಮುರುಟಿ ಹೋಯಿತಲ್ಲಅನ್ನೋ ನೋವು..

ಮತ್ತೆ ಮಡಿಕೇರಿಯ ರಾಜ ಸೀಟಿನ ಸೂರ್ಯಾಸ್ತಮಾನ ನೋಡದೆ ಹಿಂತಿರುಗಿ ಬರುವುದಾದರೂ ಹೇಗೆ..?! ಗುಡ್ಡಗಳನಡುವೆ ಜಾರಿ ಹೋಗುವ ಸೂರ್ಯನನ್ನು, ಹುಲ್ಲಿನ ರಾಶಿಯ ಮೇಲೆ ಕೂತು ನೋಡುವುದೇ ಒಂಥ ಕುಷಿ. ಬಹುಶಅದಕ್ಕಾಗಿಯೇ, ರಾಜ ರಾಣಿಯರು ಸಹ ಇದೇ ಜಾಗದಲ್ಲಿ ಕೂತು ಸಂಜೆಯ ಸವಿಯನ್ನು ಸವಿದಿರಬಹುದು.. ಆದರೆಅಲ್ಲಿಯೆ ಹೊರಗೆ ಸಿಗುವ ಉಪ್ಪು ನೀರಲ್ಲಿ ಹಾಕಿದ ನೆಲ್ಲಿಯ ಸವಿಯನ್ನು ಅವರು ಸವಿದಿರಲಿಕ್ಕಿಲ್ಲ. ಆ ನಿಟ್ಟಿನಲ್ಲಿ ನಾವುಪುಣ್ಯವಂತರು.

ಇನ್ನು ಕಾಫಿ ತೋಟದ ಮಧ್ಯ ಕಂಗೊಳಿಸುವ ಸೋಮವಾರಪೇಟೆ ಮಡಿಕೇರಿಯ ಉತ್ತರಕ್ಕೆ ಇದೇ. ಅದರ ಹೆಸರೇ ಹೇಳುವ ಹಾಗೆ ಸೋಮವಾರ ಸಂತೆ ನಡೆಯುವ ಊರು. ಅವತ್ತು ಊರು ತುಂಬ ಜನರೇ ಜನರು. ವಿವಿಧ ವಸ್ತುಗಳನ್ನು ಕೊಳ್ಳಲು ಬರುವ ಕೂಲಿ ಕಾರ್ಮಿಕರು ಒಂದೆಡೆಯಾದರೆ, ತಮ್ಮದೇ ಗತ್ತಿನಲ್ಲಿ ಬಂದು ತಮಗೆ ಬೇಕಾದದ್ದನ್ನು ತಗೊಂಡು ಜೀಪಲ್ಲಿ ಹಾಕೊಂಡು ಹೋಗುವ ಎಸ್ಟೇಟ್ owner ನವರು ಮತ್ತೊಂದೆಡೆ.ಹೀಗೆ 6 ದಿವಸ ಮಲಗಿ ಕೊಂಡು ಇರುವ ಊರು ಅವತ್ತು ತುಂಬಿ ತುಳುಕುತಿರುತದೆ. ಒಂದು ಟೇಬಲ್ಲಿನಲ್ಲಿ 4 ಜನರು ಕುಳಿತು ತಿನ್ನುವ ಮಲಯಾಳಿಗರ, ಉಡುಪಿ ಭಟ್ಟರ ಹೋಟೆಲ್ ನಲ್ಲಿ ಅವತ್ತು 6 ಜನ ಕೂತು ತಿನ್ನುತ್ತಾರೆ.

Summer vacation ಮಾತ್ರ ಈ ಊರಿನಲ್ಲಿ ಖುಷಿಯೋ ಖುಷಿ! ಊರಿನ ಬಿಸಿಲಿನ ಝಲಕ ಇಲ್ಲ. ಎಲ್ಲೋ ದೂರದಬೆಂಗಳೂರಿನಲ್ಲೋ , ಮೈಸೂರಲ್ಲೋ ಅಥವಾ ಮಂಗಳೂರಲ್ಲೋ ಕಲಿಯುತಿರುವ ಅಲ್ಲಿಯ ಮಕ್ಕಳು ತಮ್ಮೂರಿಗೆಬಂದು, ಅವರ ಸಂಬಂದಿಕರ ಮದುವೆ ಮತ್ತಿತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಪೂರ್ಣ ಖುಷಿ ಪಡುತ್ತಾರೆ.

ಒಟ್ಟಿನಲ್ಲಿ ಹಲವು ನೆನಪುಗಳನ್ನು ತೆರೆದಿಡುವ ಈ ಊರು ಡಿಸೆಂಬರ್-ಜನವರಿಯಲ್ಲಿ ಚಳಿಯ ಉಗ್ರ ರೂಪವನ್ನು ತೋರಿಸುತ್ತದೆ. ಅದೆಷ್ಟು ಚಳಿ ಅಂದರೆ, ಬೆಳಗಿನ ಕಾಫಿಗೆ ಹುಡಿಯೋ, ಸಕ್ಕರೆಯೋ ಹಾಕುವ ಅವಶ್ಯಕತೆಯಿಲ್ಲ. ಸ್ಪೂನಲ್ಲಿ ತೆಗೆಯುವಾಗಲೇ ಕೈ ನಡುಗಿ ತಾನಾಗಿಯೇ ಬೀಳುತ್ತದೆ.. ತೆಂಗಿನೆಣ್ಣೆ ಗಟ್ಟಿಯಾಗಿ ಮೇಣದ ತರಕಾಣುತಿರುತ್ತದೆ.

ಹಾಗೆ ಕುಶಾಲನಗರದ ಆನೆಯ ಸಫಾರಿ, ಮತ್ತೆ ಕಾವೇರಿ ನದಿಯ ತವರೂರು ತಲಕಾವೇರಿ!

ಎಲ್ಲವು ಹೋದಷ್ಟು ಬಾರಿ ಹೊಸ ಉಲ್ಲಾಸ ಮೂಡಿಸುತ್ತದೆ..


Tuesday, 31 January 2012

ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೆ...

ಮುಂಜಾನೆಯ ಮಸೀದಿಯ ಆದಾನ್ (ಬಾಂಗ್) ಕರೆಗೆ ಎಚ್ಹೆತ್ತ ಪುಟ್ಟ ಮಗು ಆ ಶಬ್ದ ಬಂದ ಕಡೆಗೆ ನೋಡಿದಾಗಮಸೀದಿಯ ಮಿನಾರದ ಕಡೆಯಿಂದ ಆ ಶಬ್ದ ಕೇಳಿಸುತಿದೆ.. ದೇವಸ್ಮರಣೆಯ ಪದಗಳು! ಅಲ್ಲೇ ಸುತ್ತ ಮುತ್ತ ಬೆಳಗಿನಮುಸುಕು ಬೆಳಕಿನಲ್ಲಿ, ಚಿಲಿಪಿಲಿಗುಟ್ಟುತಿರುವ ಹಕ್ಕಿಗಳೇ ಆ ದೇವಸ್ಮರಣೆ ಮಾಡುತಿರಬೇಕೆಂದು ತಿಳಿಯುವ ಮುಗ್ದಮಗು, ಆ ಹಕ್ಕಿಯನ್ನು ಕರೆದು '',ಹೇಯ್ ದೇವ ಸ್ಮರಣೆಯಲ್ಲಿರುವ ಗಿಳಿಯೇ ನೀ ಸ್ವಲ್ಪ ನಿಲ್ಲು!! ಮಿನಾರದಎತ್ತರದಲ್ಲೀದ್ದೀಯಲ್ಲ, ಆಕಾಶದ ಆ ಕಡೆ ಇರುವ ಸ್ವರ್ಗ ದಲ್ಲಿನ ಅದ್ಭುತಗಳು ನಿನಗೆ ಕಾಣಿಸುತಿದೆಯ? ಎಂದುಕೇಳುತ್ತದೆ..


ಈ ಮಗುವಿಗೆ ಸ್ವರ್ಗದ ಬಗೆ ಕುತೂಹಲ ಯಾಕಿರಬಹುದು ಅಂತ ಯೋಚಿಸುವಾಗಲೇ, ಆ ಮಗು ಗಿಳಿಯೋಟ್ಟಿಗೆಇನ್ನೊಂದು ಪ್ರಶ್ನೆ ಕೇಳುತ್ತದೆ. ಆ ಸ್ವರ್ಗದಲ್ಲಿ ಯಾರೆಲ್ಲ ಇದ್ದಾರೆ ಅಂತ ಸ್ವಲ್ಪ ನೋಡುತ್ತೀಯ? ನನ್ನತಂದೆಯನ್ನೆಲ್ಲಾದರು ಕಾಣುತ್ತೀದ್ದೀಯ? ಹಾಗಾದರೆ ಅವರ ಹತ್ತಿ ನನ್ನ ತಾಯಿ ಇರಬೇಕಲ್ಲ? ನನ್ನ ಅಕ್ಕ ಹೇಳಿದ್ದಾರೆಅವೆರೆಲ್ಲ ಅಲ್ಲೇ ಇದ್ದಾರೆ ಅಂತ, ಮದರಸದ ಗುರುಗಳೂ ಅದನ್ನೇ ಹೇಳಿದ್ದಾರೆ ಅಂತ ಆ ಮಗು ಗಿಳಿಯಲ್ಲಿಹೇಳಿಕೊಳ್ಳುತ್ತದೆ.. ಮತ್ತೆ ಹೇಳುತ್ತೆ, ಎಲ್ಲಿದೆ ಆ ಸ್ವರ್ಗ? ನನಗೂ ನನ್ನ ತಂದೆ ತಾಯಿರುವ ಸ್ವರ್ಗ ಕ್ಕೆ ಹೋಗಬೇಕು.

ಇದು ನಾನು ಸಣ್ಣ ಇರುವಾಗ ಕೇಳಿದ ಒಂದು ಮಲಯಾಳಂ ಹಾಡಿನ ಭಾವಾರ್ಥ. ತಬ್ಬಲಿ ಮಗುವಿನ ಮೂಕ ವೇದನೆಯನ್ನು ಕವಿಯು ಹಾಡಿನ ಮುಖಾಂತರ ಹೇಳಿದ್ದಾರೆ. ಇಲ್ಲಿ ಸ್ವತಃ ಕವಿ, ಮಗುವಾಗಿ ವಿವಿಧ ರೂಪಕಗಳನ್ನು ಬಳಸಿಪರಿಣಾಮಕಾರಿಯಾಗಿ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.. ಅನಾಥ ಪ್ರಜ್ಞೆಯ ಅಗಾಧತೆ ಈ ಸಣ್ಣ ಹಾಡಿನಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಅದೇನೇ ಇರಲಿ ನನ್ನ ಚಿಕ್ಕಪ್ಪನ ಮಗಳು ಅಂದರೆ ನನ್ನ ಸೋದರಿಯ ಗಂಡ ಮೊನ್ನೆ ಅಕಾಲ ಮೃತ್ಯುವಿಗೆ ತುತ್ತಾದಾಗ, ಆ ಪುಟ್ಟ ಮಕ್ಕಳು ಅದೇನನ್ನು ತಿಳಿಯದೆ, 'ನನ್ನ ತಂದೆಯನ್ನು ಎಲ್ಲಿ ಕರ್ಕೊಂಡು ಹೋದದ್ದು' ಅಂತ ಕೇಳಿದ ಮುಗ್ದಪ್ರಶ್ನೆಗೆ ನಮ್ಮಲ್ಲಿ ಕಣ್ನೀರಲ್ಲದೆ ಬೇರೆ ಉತ್ತರವಿರಲಿಲ್ಲ.

ಎಲ್ಲವೂ ವಿಧಿಯಾಟ!

Monday, 23 January 2012

ಪುಟ್ಟ ಗೆಳತಿಯ ಕುರಿತು...

ನಾನು ಕಾಲೇಜಿನಲ್ಲಿ ಸ್ವಯಂ ಘೋಷಿತ ಕವಿ ಯಾಗಿದ್ದೆ. ಅದಕ್ಕೆ ತಕ್ಕಂತೆ ಕೆಲವಾರು ಲೈನ್ ಗಳನ್ನೂ ಬರೆದು ಕವಿತೆ ಅಂತ ಕವಿಗೋಷ್ಠಿಯಲ್ಲಿ ಓದ್ತಾ ಇದ್ದೆ. ಯಾರಿಗೆ ಗೊತ್ತು ಅದು ಪದ್ಯಯೋ(poem), ಅಥವಾ ಗಧ್ಯವೋ(prose) ಅಂತ. ಹೀಗೆ ನಾವು ಗೀಚಿದ್ದನ್ನು ಓದುವಾಗ ಕೇಳಲು ಜನ ಬೇಕಲ್ವಾ,ಅದಕ್ಕಾಗಿ auditorium ಹೊರಗೆ ನಿಂತು ಗೆಳೆಯರನ್ನು ಕರೆಯುತಿದ್ದೆವು. ಒಂದು ಸಲ ಹೀಗೆ ಹೊರಗೆ ನಿಂತು ಕರೆಯುವಾಗ pu student ಹೋಗ್ತಾ ಇದ್ರೂ. ಅವರನ್ನು ಕರೆದಾಗ, ಪಾಪ! ನನ್ನ ಮುಲಾಜಿಗೆ ಬಿದ್ದು ಇಬ್ಬರು ಹುಡುಗಿಯರು ಬಂದ್ರು. ಅದರಲ್ಲಿ ಒಬ್ಬಳಂತೂ ಇನ್ನು primary ಸ್ಕೂಲ್ ನವರ ಹಾಗೆ ಕಂಡ್ರೆ, ಮತ್ತೊಬ್ಬಳು high ಸ್ಕೂಲ್ ಗೆ ಹೋಗುವವರ ಹಾಗೆ ಕಾಣುತಿದ್ದಳು.

ಇರಲಿ, ಫುಲ್ ಕ್ಲೋಸ್ ಅಪ್ ಸ್ಮೈಲ್ ನೊಂದಿಗೆ ಎಂಟ್ರಿ ಕೊಟ್ರು.. ಹಾಗೆ ಕರೆದು ಸ್ವಲ್ಪ ಜನ ಆದಾಗ, ಪ್ರೊಗ್ರಾಮ್ ಸ್ಟಾರ್ಟ್ ಆಯಿತು. ಪ್ರೊಗ್ರಾಮ್ ಮುಗಿಯುವಾಗ ಅರ್ಧಕ್ಕಿಂತ ಜಾಸ್ತಿ ಜನ ಖಾಲಿಯಾಗಿದ್ದರೂ, ಪುಟ್ಟ ಪುಟಾಣಿಗಳು ಮಾತ್ರ ಹೋಗಿರಲಿಲ್ಲ. ಮತ್ತೆ refreshment ಗೆ ಅವರನ್ನು ಕರೆದ್ವಿ.. ಆನಂತರ ಅವರು ನಮ್ಮ ಯಾವುದೇ function ಗೆ permnent member ಆಗಿ ಬಿಟ್ಟರು. ,ಅಂದ ಹಾಗೆ ನಾನಂದು ಕೊಂಡದ್ದು, ಇಬ್ಬರು ಹಾಸ್ಟೆಲ್ ಹುಡುಗಿಯರು ಅಲ್ಲಿ ಬೋರಾಗುವುದಕ್ಕೆ ಇಲ್ಲಿ ಬರ್ತಾ ಇದ್ರೂ ಅಂತ.!

ಹೀಗೆ ಇರುವಾಗ ಒಂದು ಸಲ, ನನ್ನ ಹುಟ್ಟಿದ ಹಬ್ಬಕ್ಕೆ wish ಮಾಡಲು ಒಂದು ಕಾಲ್ ಬಂತು.. ಕಡೆ ಹುಡುಗಿಯ ಶಬ್ದ! ಅವಳು ಅದ್ಯಾವುದೋ? ಹೆಸರು ಹೇಳಿದಳು. ಯಾರಪ್ಪ ಅಂತ ನೆನಪಿಸಿದರೂ ತಲೆಗೆ ಹೊಳೆಯಲೇ ಇಲ್ಲ.. ಆದರೂ ಅವಳಲ್ಲಿ ಗೊತ್ತಿದ್ದವರ ಹಾಗೆ ನಟಿಸಿದ್ದೆ..

ಕೆಲವು ದಿವಸ ಬಿಟ್ಟು ಇಬ್ಬರು ಹುಡುಗಿಯರಲ್ಲಿ ಒಬ್ಬಳು ಸಿಕ್ಕಿದಾಗ, ಮಾತಾಡ್ತಾ ಗೊತ್ತಾಯಿತು ಇವಳೇ wish ಮಾಡಿದ ಹುಡುಗಿ. ಆಗಲೂ ಅವಳ ಹೆಸರು ಗೊತ್ತೇ ಇರಲಿಲ್ಲ..! ಮತ್ತೆ ಹೆಸರು ಮರೆತು ಹೋಗಲು ಇಲ್ಲ..! ಹೀಗೆ ನಮ್ಮ ಗೆಳೆತನ ಆರಂಭ.. ಈಗ ಅವಳನ್ನು ನೋಡದೆ ತುಂಬಾ ವರ್ಷಗಳಾದರೂ ಅವಳ ಹೆಸರು ನೆನಪಿಗೆ ಬಂದ ಕೂಡಲೇ, ಅದೇ ಪುಟ್ಟ ಮುಗ್ದ ಮುಖ ನೆನಪಾಗುವುದು. ನನ್ನ ಆಗಿನ ಗೆಳೆಯರನೇಕರು ಈಗ ಎಲ್ಲಿದ್ದಾರೋ ಗೊತ್ತಿಲ್ಲ. ಆದರೆ ನನ್ನ ಸಹಪಾಟಿಯಲ್ಲದ, ನನಗಿಂತ ಚಿಕ್ಕವಳಾದ ಅವಳು , ಈಗಲೂ ನನ್ನ ತಂಗಿಯಂತೆ ಸದಾ ಕಾಲೆಳೆಯುತ್ತ ಮಾತಾಡುತ್ತ ಇರುತ್ತಾಳೆ..

ಮೊನ್ನೆ ಒಮ್ಮೆ ಅವಳು ಹೇಳಿದಳು ಅವಳಿಗೆ ಒಂದು ಪ್ರೊಪೋಸಲ್ ಬಂದಿದೆ ಅಂತ. ಇಬ್ಬರ ತಂದೆ ತಾಯಿಗೆ ಒಪ್ಪಿಗೆಯಾಗಿದೆಯಂತೆ. ಅದಕ್ಕೆ ನಾ ಕೇಳಿದೆ ನಿನಗೆ ಹೇಗೆ ಅನಿಸುತದೆ? ಅಂತ. ಅವಳು ನಾಚಿಕೆಯಲ್ಲಿ ''ಅವನಿಗೆ ನಾ ಇಷ್ಟವಾಗಿದೇನೆ, ಹಾಗೆ ನನಗೂ..!'

ಹೀಗೆ ಅವಳ ಹುಡುಗನ ಬಗೆ ನನ್ನಲ್ಲಿ ಹೇಳುತ್ತಾ ಇರುವಾಗ, ಅರೆ! ಇವನ ಹೆಸರು ಎಲ್ಲೋ ಕೇಳಿದ್ದೇನೆ ಅಲ್ವ ಅಂತ ಅನಿಸಿತು. ಮತ್ತೆ ನೆನಪಿಸುವಾಗ ನನ್ನ M.Sc ಗೆಳೆಯರ ಸಹಪಾಠಿಯಾಗಿದ್ದ , ಮಾತ್ರವಲ್ಲ ಪರಿಚಯವಿರುವ ವ್ಯಕ್ತಿಯಾಗಿದ್ದ ! ಒಟ್ಟಿನಲ್ಲಿ ಅವರಿಬ್ಬರೂ ಪರಸ್ಪರ ಹೇಳಿ ಮಾಡಿಸಿದ ಜೋಡಿಯ ಹಾಗೆ ಇದ್ದಾರೆ .

ಅವರ ಮುಂದಿನ ಬಾಳು ಇನ್ನಷ್ಟು ಸುಖಕರವಾಗಿರಲೆಂದು ಹಾರೈಸುತ್ತಾ...