Saturday, 20 August 2011

ಸ್ವಾತಂತ್ರ್ಯದ ಕುರಿತು ಒಂದಷ್ಟು

ಸ್ವಾತಂತ್ರ್ಯ ದಿನ ಅನ್ನೋದೇ ಒಂದು ವಿಶೇಷ . ನಾವು ಪ್ರೈಮರಿ ಸ್ಕೂಲಲ್ಲಿ ಇರುವಾಗ ಯುನಿಫಾರ್ಮ್ ಹಾಕಿ ಗೆಳೆಯರ ಜತೆಗೂಡಿ ಶಾಲೆಗೇ ಹೋದರೆ, ಮೊದಲ ಕೆಲಸ ಫ್ಲಾಗ್ ಒಳಗೆ ಹಾಕಲು ಹೂವುಗಳನ್ನೂ ತಂದು ಟೀಚರ್ ಹತ್ರ ಕೊಡುವುದು, ನಂತರ ನಮ್ಮನೆಲ್ಲ ಅವರು ಸಾಲಾಗಿ ನಿಲ್ಲಿಸುತಿದ್ದರು . ಒಂಬತುವರೆಯ ಬಸ್ ಬಂದರೆ ದ್ವಜರೂಹನ್ (ಟೀಚೆರ್ಸ್ ನವರು ಬರುತಿದ್ದದು ಅದೇ ಬಸ್ಸಲ್ಲಿ).. ಅದರೊಟ್ಟಿಗೆ ಹಲವರ ಭಾಷಣ. ಅವರೇನು ಹೇಳುತಿದ್ದರೆಂದು ಅರ್ಥವಾಗುತಿಲ್ಲದ್ದರೂ ,ಪ್ರತಿ ವರ್ಷವೂ ಅದೇ ಭಾಷಣ ಅಂಥ ತಿಳಿಯುತ್ತಿತ್ತು . ಹಾಗೆ ನಮ್ಮನು ೪೫ ನಿಮಿಷಕ್ಕೂ ಅಧಿಕ ಬಿಸಿಲಲ್ಲಿ ನಿಲ್ಲಿಸಿ ಅವರು ನೆರಳಲ್ಲಿ ನಿಂತು ಭಾಷಣ ಮಾಡುತಿದ್ದರು(ಮಳೆ ಬಂದರೆ ಕುಶಿಯೋ ಕುಶಿ). ಅದೆಲ್ಲ ಅದ ನಂತರದಲ್ಲಿ, ನಾವು ನಿಂತಲ್ಲಿಗೆ ಬಂದು ಒಂದೋ ಎರಡೋ ಚಾಕಲೇಟು ಕೊಡುತಿದ್ದರು. ಜನಗನದೊಂದಿಗೆ ಅವತಿನ ಕಾರ್ಯಕ್ರಮ ಮುಕ್ತಾಯ.ಇದರ ನಂತರ ನಮಗೆ ಸಂಪೂರ್ಣ ಸ್ವಾತಂತ್ರ್ಯ. ಯುನಿಫಾರ್ಮ್ ಬದಲಿಸಿ ಗ್ರೌಂಡ್ ಕಡೆ ನಮ್ಮ ಪಯಣ.

ಇನ್ನು ಹೈಸ್ಕೂಲ್ ಸ್ವಾತಂತ್ರ್ಯೋತ್ಸವಕ್ಕೆ ಘನತೆ , ಗಾಂಭಿರ್ಯತೆ ಸ್ವಲ್ಪ ಜಾಸ್ತಿ-ಯುನಿಫಾರ್ಮ್ ಹುಡುಗರಿಗೆ ಪ್ಯಾಂಟ್ ಗೆ ಬಡ್ತಿ ಆಗಿರುವುದು. ಮತ್ತು ಸಿಹಿ ತಿಂಡಿ ಲಡ್ಡು ಕೊಡುವುದು . ಆದರೆ ಪ್ರೈಮರಿಯಲ್ಲಿದ್ದ ಸ್ವಾತಂತ್ರ್ಯ(ಆಡುವ ) ಇಲ್ಲಿ ಮೊಟಕುಗೋಳ್ಳುತಿದ್ದವು. ಏಕೆಂದರೆ ದ್ವಜರೋಹನ ಅದ ನಂತರ ಸ್ಟೇಜ್ ಪ್ರೊಗ್ರಾಮ್ -ಡಾನ್ಸ್, ಸ್ಪರ್ಧೆ ಇರುತಿದ್ದವು . ಯಾರೋ ಬರೆದು ಕೊಟ್ಟ ಪ್ರಭಂದಗಳನ್ನೂ, ಭಾಷಣಗಳನ್ನು ಉದ್ದುದವಾಗಿ ಬಿಗಿದು ಪ್ರಶಸ್ತಿಯತ್ತ ದಾಪುಗಲಿಡುತಿದ್ದೆವು . ನಾವು ಏನು ಹೇಳುತಿದ್ದೆವೋ, ಕೇಳುತಿದ್ದೆವೋ ನಮಗೇ ಅರ್ಥ ಅಗುತಿರಲಿಲ್ಲ. ಅಂತೂ ಪ್ರೈಮರಿಯಲ್ಲಿ ಒಂದು ಗಂಟೆಯಲ್ಲಿ ಮುಗಿಯುತಿದ್ದ ಸ್ವಾತಂತ್ರ್ಯೋತ್ಸವ ಇಲ್ಲಿ ಮಧ್ಯಾಹ್ನ ದವರೆಗೂ ಇರುತಿತ್ತು . ಮತ್ತೆ ಜೆ.ಸಿ , ಲಯನ್ಸ್ ಕ್ಲಬ್ ಮತ್ತು ಇನ್ನಿತರ ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಹೆಸರು ಕೊಟ್ಟಿದ್ದರೆ ಅಲ್ಲಿಯೂ ಭಾಷಣ ಡಾನ್ಸ್, ಸ್ಕಿಟ್ , ಮತ್ತು ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಿಕ್ಕಿದರೆ ಪ್ರೈಸ್ ಇಲ್ಲದಿದ್ದರೆ ಸ್ವೀಟ್ ಮಾತ್ರ ತಗೊಂಡು ಮನೆ ಕಡೆ ಮುಂದಿನ ಪಯಣ.ಇಡಿ ದಿನದ ರಿಪೋರ್ಟನ್ನು ಮನೆಯಲ್ಲಿ ಹೇಳಬೇಕಾಗಿತ್ತು .

ಕಾಲೇಜ್ ಮೆಟ್ಟಿಲು ಹತ್ತಿದ ನಂತರ ಸ್ವಾತಂತ್ರ್ಯೋತ್ಸವ ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ಯವರಿಗೆ ಮಾತ್ರ ಅನ್ನುವುದು ಅಲಿಖಿತ ನಿಯಮ.ಒಂದು ಕಡೆ ಎನ್ ಸಿ ಸಿ ಯವರ ಬೂಟಿನ ಶಬ್ದ ಕ್ಯಾಂಪಸ್ಸಲ್ಲಿ ಕೇಳಿದರೆ ಇನ್ನೊಂದು ಕಡೆ ಎನ್ ಎಸ್ ಎಸ್ ನವರ ಸ್ಟೇಜ್ ಪ್ರೋಗ್ರಾಮ್ . ಹಾಸ್ಟೆಲ್ ಜನ ಇಲ್ಲದೆ ಬಣ ಗುಟುತ್ತಿರುತದೆ. ರಜೆ ಸಿಕ್ಕಿದ ಕೂಡಲೇ ಮನಗೆ ಓಡುವ ಮಂದಿಯೇ ಜಾಸ್ತಿ..

ಪಿ ಜಿ ಮಾಡುವಾಗ ಯಾವುದರ ಪರಿವೆಯೇ ಇರಲ್ಲ. ಅಷ್ಟು ಬ್ಯುಸಿ. ಕೆಲವೊಮ್ಮೆ ಫ್ರೀ ಇದ್ದರೆ ಸರ್ಕಾರಿ ಪ್ರಾಯೋಜಿತ ಸ್ವಾತಂತ್ರ್ಯೋತ್ಸವ ನೋಡಲು ಹೋದರೆ ಬರಿ ಬೋರು. ಅದು ಅವರ ಪ್ರಚಾರ ಕಾರ್ಯಕ್ರಮದ ತರ ಇರುತೆ. ಒಂದಷ್ಟು ಆಶ್ವಾಸನೆ ಮತ್ತಷ್ಟು ತಮ್ಮ ಸರ್ಕಾರದ ಸಾಧನೆಗಳ ಪಟ್ಟಿ ಹೀಗೆ, ನಮ್ಮ ಕಿವಿಗೆ ಕಹಿಯಾಗುವ ಭಾಷಣ. ಪೋಲಿಸ್ ನವರ ಪಥ ಸಂಚಲನವಂತು ನಗು ಬರುವ ಥರ ಇರುತೆ. ಕೆಲವರ ಹೊಟ್ಟೆ ಅವರಿಗಿಂತ ಮೊದಲು ಹೋಗುತಿರುತದೆ, ಮತ್ತೆ ಕೆಲವರು ಬಲವಿಲ್ಲದವರ ಹಾಗೆ ನದೆಯುತಿರುತಾರೆ.

ಕಾಲೇಜ್ ಬಿಟ್ಟ ನಂತರ ಸಾತಂತ್ರ್ಯ ದಿನ ಅನ್ನುವುದು ಚಾತಕ ಪಕ್ಷಿ ಯಂತೆ ಕಾಯುವ ದಿನ. ಅದು ಶುಕ್ರವಾರ ಅಥವಾ ಸೋಮವಾರ ಬಂದರೆ ಆನಂದಕ್ಕೆ ಪಾರವೇ ಇಲ್ಲ. ಏಕೆಂದರೆ ದೀರ್ಘ ಕಾಲ ರಜೆಯನ್ನು ಮಜಾ ಮಾಡಬಹುದೆನ್ನುವ ಸಂತೋಷ. ಬೆಳಿಗ್ಗೆ ಟಿವಿ ಯಲ್ಲಿ independence day ಪ್ರೊಗ್ರಾಮ್ ಅನ್ನು ನೋಡಿ, ನಂತರ ಫ್ರೆಂಡ್ಸ್ ಜೊತೆ ಸಿನಿಮಾ,ಹೋಟೆಲ್ ಪಾರ್ಕ್ ಹೀಗೆ ಕಾಲ ಕಳೆಯುವುದು ಅವತಿನ ದಿನಚರಿ.
ಒಮ್ಮೊಮ್ಮೆ ಸ್ವಾತಂತ್ರ್ಯ ಅನ್ನುದು ಕೇವಲ ಆಚರಣೆಗೆ ಸಿಮಿತ ವಾಗಿದೆ ಅನಿಸುತದೆ. ಒಂದು ಕಡೆ ನಾವು ಸ್ವಾತಂತ್ರ್ಯದಿಂದ ಸಂತುಷ್ಟರಗಿದ್ದೇವೆ, ಪರಿಪೂರ್ಣ ರಾಗಿದ್ದೇವೆ ಅಂದು ಕೊಳ್ಳುತಿರುವಾಗಲೇ ಅದೆಷ್ಟೋ ಮಂದಿ ಸ್ವಾತಂತ್ರ್ಯ ರಹಿತ ಬದುಕು ಸಾಗಿಸುತಿದ್ದಾರೆ . ಒಂದು ಕಡೆ ಹೊಟ್ಟೆ ಉಬ್ಬುವಷ್ಟು ತಿನ್ನುವ ಮಂದಿ ಯಿದ್ದರೆ ಇನ್ನೊಂದು ಕಡೆ ಹೊಟ್ಟೆಗಿಲ್ಲದೆ ಪರದಾಡುತಿರುವವರ ದಾರುಣ ಸ್ಥಿತಿ(ಭಾರತದಲ್ಲಿ ಬಡವರದ್ದು ಮತು ಶ್ರೀಮಂತರ ಎರಡು ಪ್ರತ್ಯೇಕ ದೇಶ ಇದೆಯೇ ? ಅನ್ನೋದು ಇತ್ತೀಚೆಗೆ ಸುಪ್ರಿಂ ಕೋರ್ಟ್ ಕೇಳಿದ ಪ್ರಶ್ನೆ).ಅಂದರೆ ಸ್ವಾತಂತ್ರ್ಯ ಅನ್ನೋದು ದುರುಪಯೋಗವಾಗುತಿದೆ ಅಂಥ ಅನ್ನಿಸುತದೆ ಅಲ್ಲವೇ?

ಮೊನ್ನೆ ತಾನೆ ಎನ್ ಆರ್ ಐಯ್ ಒಬ್ಬರು ನನಲ್ಲಿ ಮಾತಾಡ್ತ ಹೇಳಿದರು “ನಾನು ಹಲವಾರು ದೇಶಗಳನ್ನು ನೋಡಿದ್ದೇನೆ ಆದರೆ ಅಲ್ಲಿ ಹೋದಾಗಲೆಲ್ಲ ಇಂಡಿಯಾ ದ ಮಹತ್ವ ಅರಿವಾಗುವುದು” ಅನ್ನುವುದು. ಹೌದು ಸ್ವಾತಂತ್ರ್ಯಅನ್ನುವುದು ಅತ್ಯುನ್ನತ ವಾದದ್ದು, ಅದನ್ನು ರಕ್ಷಿಸುವುದು ನಮೆಲ್ಲರ ಕರ್ತವ್ಯ ಅಲ್ಲವೇ