Friday, 8 July 2011

ಸಾಮಾಜಿಕ ತಾಣಗಳ ಬೆನ್ನೇರಿ

ಇತಿಚೆಗೆ ಒಂದು ಕಿರು ಸಂದೇಶ ಬಂತು... ಜಗತಿನ ಅತಿ ದೊಡ್ಡ ವಲಸೆ ಆರ್ಕುಟ್ ನಿಂದ ಫೇಸ್-ಬುಕ್ ಗೆ ಆದ ವಲಸೆ.. ಹೌದು ಈ social network ನಮ್ಮನು ಬಂಧಿಸಿದ ಬಂಧ ಅಂತಹದು. ಆತ್ಮೀಯವಾಗಿ ಇದ್ದವರು, ಇಲ್ಲದವರು ಎಲ್ಲರು ಒಂದು ಥರ ಜತೆಯಲ್ಲಿಯೇ ಇರೋ ಸಿಸ್ಟಮ್..

ಗೆಳೆಯರ ಒಂದು ಫ್ರೆಂಡ್ ರಿಕ್ವೆಸ್ಟ್ ಒಂದ್ ಥರ ಥ್ರಿಲ್.. ಕೆಲವೊಂದು ಮುಖಗಳು ಮರೆತು ಹೋಗಿದೆ ಎಂದೆನಿಸುವಾಗ ಪ್ರತ್ಯಕ್ಷರಾಗಿರುತ್ತಾರೆ.. ಕೆಲವೊಮ್ಮೆ ಗೆಳೆಯರ ಬಗೆ ತಿಳಿದಾಗ ಖುಷಿಯಾದರೆ.. ಮತ್ತೆ ಕೆಲವೊಮ್ಮೆ ನೋವಾಗುತ್ತದೆ !!!(ಗೆಳೆಯ ಎಷ್ಟೇ ಕ್ಲೋಸ್ ಆಗಿದ್ರು ನಮಗಿಂತ ಮಾರ್ಕ್ ಜಾಸ್ತಿ ತೆಗೆದಾಗ ನೋವಾಗುತ್ತದೆ..!!! 3idiots) ಇನ್ನು ಅವರ ಫೋಟೋಗಳು upload ಮಾಡಿದಾಗ ವಿಚಿತ್ರ ಸನಿವೇಶ.. ಮೊನ್ನೆ ಗೆಳತಿಯೊಬ್ಬಳು ತನ್ನ ಮಗುವಿನ ಫೋಟೋ ಅಪ್ಲೋಡ್ ಮಾಡಿದಾಗ ಫ್ರೆಂಡ್ಸ್ ಸರ್ಕಲ್ ನಲ್ಲಿ ಹರಿದಾಡಿದ ಎಸ್.ಎಂ.ಎಸ್. ಹೀಗಿತು.. ''Hey ....is havin kid, she uploaded photos in fb..''

ಕೆಲವೊಂದು ಸಲ ಗೆಳೆಯರ ಮದುವೆ ಸಹ ಅಚ್ಚರಿ ಮುಡಿಸುತ್ತೆ.. ಕೆಲವೊಮ್ಮೆ ಮದುವೆಗೆ invit ಮಾಡುವುದು social network ಮುಖಾಂತರವೇ.. ಮಾತ್ರವಲ್ಲದೆ ಮದುವೆಗೆ ಯಾರೆಲ್ಲ attend ಆಗ್ತಾರೆ ಅನ್ನುವುದು ಸಹ ಗೊತ್ತಾಗುತೆ..

Work place ನಲ್ಲಿ ಸಹ social network ನದ್ದೆ ಹಾವಳಿ.. Recent ಆಗಿ ನ್ಯೂಸ್ ಪೇಪರ್ ನಲ್ಲಿ ಓದಿದ ನೆನಪು.. ಅರ್ದಕ್ಕಿಂತ ಹೆಚ್ಹು ಜನ work time ನಲ್ಲಿ social network ನಲ್ಲಿ ಕಾಲ ಕಳೆಯುತಾರೆ... ಕೆಲವರ ಪ್ರಕಾರ ಇದು ಟೈಮ್ ವೇಸ್ಟ್, ಆದರೆ ಇನು ಕೆಲವರ ಪ್ರಕಾರ ಕಾರ್ಯಕ್ಷಮತೆ ಹೆಚುತದೆ..

ಈ socail network ನಿಂದಾಗಿ ಕೆಲವಾರು movement ಗಳಿಗೆ ಶಕ್ತಿ ತಂದು ಕೊಟ್ಟಿದೆ.. ಟುನಿಶಿಯಾ ದ ಭ್ರಷ್ಟ ಪ್ರೆಸಿಡೆಂಟ್ ನ್ನು ದೇಶ ಬಿಟ್ಟು ಓಡಿಸಿದ್ದು, ಈಜಿಪ್ಟ್ ನ ತಹ್ರೀರೆ ಸ್ಕ್ವಾರ್ ನಲ್ಲಿ ಜನ ಜಮಾಯಿಸಿ ಅಲ್ಲಿಯ ಅಧ್ಯಕ್ಷರನ್ನು ಕುರ್ಚಿಯಿಂದ ಕೆಳಗೆ ಇಳಿಸಿ ಜೈಲಲ್ಲಿ ಕೂರಿಸಿದು ಮತ್ತು ಅಣ್ಣ ಹಜಾರೆಯವರ movement famous ಆಗಿರಿವುದು ಎಲ್ಲವೂ ಈ social network ನ ಮಹಿಮೆ.

ಇನ್ನು ಕೆಲವೊಮ್ಮೆ ಈ ತರ social network ನಿಂದಾಗಿ ಅಮೆರಿಕ ದಂತಹ ದೇಶವೇ ಮುಜುಗರ ಪಡಬೆಕಾಗುತದೆ.. Guantanamo ಜೈಲಲ್ಲಿ ಇರಾಕ್ ಕೈದಿಗಳನ್ನು ಅಮೆರಿಕನ್ ಸೈನ್ಯ ಹೇಗೆ ನಡೆಸಿಕೊಂಡಿದೆ ಎನ್ನುವುದು ಜಗಜ್ಜಾಹೀರಾದದ್ದು fb ಯಿಂದ.. ಸೈನಿಕನೊಬ್ಬ ತನ್ನ ಗೆಳೆಯರ ಜತೆ ಫೋಟೋ ತೆಗೆದು fb ಯಲ್ಲಿ ಅಪ್ಲೋಡ್ ಮಾಡಿಬಿಟ್ಟ. ಅದರ background ನಲ್ಲಿ ಅಮಾನುಷ ಸ್ಥಿತಿಯಲ್ಲಿದ್ದ ಇರಾಕಿ ಕೈದಿಯ ಫೋಟೋ ಸಹ ಬಂದಿತು.. ಇದು ಅಮೆರಿಕಾವನು ತಲೆ ತಗ್ಗಿಸುವ ಹಾಗೆ ಮಾಡಿತು..

ಇನ್ನು ಕೆಲವು politician ನವರು ತಮ್ಮ ಸ್ಥಾನಕ್ಕೂ ಕುತ್ತು ತಂದುಕೊಂಡಿದ್ದಾರೆ.. ವಿಮಾನದಲ್ಲಿರುವ economy ಕ್ಲಾಸ್ ಅನ್ನು ದನದ ದೊಡ್ಡಿ ಅಂತ tweet ಮಾಡಿ ದೊಡ್ಡ ಅವಾಂತರ ಆಗಿ ಹೋಗಿತು.. ಕೆಲವೊಂದು ನಟಿ ಮಣಿಗಳು ಬ್ಯುಸಿ ಯ ಬದಲು engaged ಅಂತ status update ಮಾಡಿ ಇರಿಸುಮುರಿಸಾದ ಪ್ರಸಂಗವು ಆಗಿತು..

ಒಟ್ಟಿನಲ್ಲಿ ಈ social network ನಮ್ಮ ಆತ್ಮೀಯ ಗೆಳೆಯನಾಗಿ ಬಿಟ್ಟಿದೆ ಏಕೆಂದರೆ ಇದು ಗೆಳೆಯರ ದೊಡ್ಡ ಸಮುಹವನ್ನೇ ತೆರೆದಿಡುತ್ತದೆ .

..